ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಈ ವರ್ಷದ ಜುಲೈನಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದರು. ಕಿಯಾರಾ ಸದ್ಯ ಹೆರಿಗೆ ರಜೆಯಲ್ಲಿದ್ದು, ಅವರ ಮುಂಬರುವ ಯಾವುದೇ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.
ಕಿಯಾರಾ ಅಡ್ವಾಣಿ ಹೆರಿಗೆಯ ನಂತರ ತಮ್ಮ ಮೊದಲ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅವರು ಸಿದ್ಧಾರ್ಥ್ ಪಿ ಮಲ್ಹೋತ್ರಾ ಅವರ 'ಕಮಾಲ್ ಔರ್ ಮೀನಾ' ಚಿತ್ರದಲ್ಲಿ ಮೀನಾ ಕುಮಾರಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರದ ಶೂಟಿಂಗ್ 2026 ರಲ್ಲಿ ಪ್ರಾರಂಭವಾಗಲಿದೆ. ಬಾಲಿವುಡ್‌ನ ಜನಪ್ರಿಯ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಈ ವರ್ಷದ ಜುಲೈನಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದರು. ಕಿಯಾರಾ ಸದ್ಯ ಹೆರಿಗೆ ರಜೆಯಲ್ಲಿದ್ದು, ಅವರ ಮುಂಬರುವ ಯಾವುದೇ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.
ಮ್ಯಾಡಾಕ್ ಹಾರರ್ ಕಾಮಿಡಿ ಯೂನಿವರ್ಸ್‌ನ 'ಶಕ್ತಿ ಶಾಲಿನಿ' ಚಿತ್ರದಲ್ಲಿ ಅವರು ನಟಿಸಬೇಕಿತ್ತು, ಆದರೆ ಅವರ ಜಾಗಕ್ಕೆ ಅನೀತ್ ಪಡ್ಡಾ ಬಂದಿದ್ದಾರೆ ಎಂದು ವರದಿಯಾಗಿದೆ. 'ಡಾನ್ 3' ಚಿತ್ರದಲ್ಲೂ ಕಿಯಾರಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಘೋಷಿಸಲಾಗಿತ್ತು, ಆದರೆ ಅವರ ಜಾಗಕ್ಕೆ ಕೃತಿ ಸನೋನ್ ಬಂದಿದ್ದಾರೆ ಎಂಬ ಸುದ್ದಿ ಇದೆ. ಇದೀಗ ಕಿಯಾರಾಗೆ ಮತ್ತೊಂದು ಸಿನಿಮಾ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕಿಯಾರಾ ಅವರ ಮುಂಬರುವ ಚಿತ್ರದ ಶೂಟಿಂಗ್ ಯಾವಾಗ ಶುರು?: ಮಿಡ್-ಡೇ ವರದಿಯ ಪ್ರಕಾರ, ಕಿಯಾರಾ ಡೆಲಿವರಿ ನಂತರ ತಮ್ಮ ಮೊದಲ ಚಿತ್ರಕ್ಕೆ ಸಹಿ ಹಾಕಿದ್ದಾರೆ ಮತ್ತು ಸಿದ್ಧಾರ್ಥ್ ಪಿ ಮಲ್ಹೋತ್ರಾ ಅವರ 'ಕಮಾಲ್ ಔರ್ ಮೀನಾ' ಚಿತ್ರದಲ್ಲಿ ಮೀನಾ ಕುಮಾರಿ ಪಾತ್ರವನ್ನು ನಿರ್ವಹಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಮೂಲವೊಂದು, 'ತಿಂಗಳುಗಳಿಂದ ಮಾತುಕತೆ ನಡೆಯುತ್ತಿತ್ತು.
ಹಳೆಯ ಬಾಲಿವುಡ್‌ನ ಆಕರ್ಷಣೆ ಮತ್ತು ಮೀನಾ ಕುಮಾರಿ ಅವರ ಜೀವನಕ್ಕೆ ನ್ಯಾಯ ಒದಗಿಸುವ ಭಾವನಾತ್ಮಕ ಆಳ ಎರಡನ್ನೂ ಹೊಂದಿರುವ ಕಲಾವಿದೆಯನ್ನು ನಿರ್ದೇಶಕರು ಕಿಯಾರಾದಲ್ಲಿ ಕಂಡುಕೊಂಡಿದ್ದಾರೆ' ಎಂದು ಹೇಳಿದೆ. ವರದಿಗಳ ಪ್ರಕಾರ, 'ಕಮಾಲ್ ಔರ್ ಮೀನಾ' ಚಿತ್ರದ ಶೂಟಿಂಗ್ 2026ರ ಮೊದಲ 6 ತಿಂಗಳಲ್ಲಿ ಪ್ರಾರಂಭವಾಗಲಿದೆ. 'ಕಿಯಾರಾಗೆ ಉರ್ದುವಿನ ಮೂಲಭೂತ ಅಂಶಗಳನ್ನು ಕಲಿಯಬೇಕಾಗಿರುವುದರಿಂದ, ತಯಾರಿಗಾಗಿ ಸಾಕಷ್ಟು ಸಮಯ ಸಿಗುತ್ತದೆ' ಎಂದು ಇನ್ನೊಂದು ಮೂಲ ತಿಳಿಸಿದೆ. 'ಕಮಾಲ್ ಔರ್ ಮೀನಾ' ಚಿತ್ರವನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಘೋಷಿಸಲಾಗಿತ್ತು.
ಕಿಯಾರಾ ಅಡ್ವಾಣಿ ವರ್ಕ್‌ಫ್ರಂಟ್
ಕಿಯಾರಾ 2014 ರಲ್ಲಿ 'ಫಗ್ಲಿ' ಎಂಬ ಕಾಮಿಡಿ-ಡ್ರಾಮಾ ಸೋಶಿಯಲ್ ಥ್ರಿಲ್ಲರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ, ಅವರಿಗೆ ನಿಜವಾದ ಮನ್ನಣೆ ಸಿಕ್ಕಿದ್ದು ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ 'ಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' ಚಿತ್ರದಿಂದ. ಆ ನಂತರ ಅವರು ತಮ್ಮ ವೃತ್ತಿಜೀವನದಲ್ಲಿ ಹಿಂತಿರುಗಿ ನೋಡಲೇ ಇಲ್ಲ. ಕಿಯಾರಾ ಅವರ ಮುಂಬರುವ ಚಿತ್ರಗಳ ಬಗ್ಗೆ ಹೇಳುವುದಾದರೆ, 'ಕಮಾಲ್ ಔರ್ ಮೀನಾ' ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.
