LIVE NOW
Published : Nov 19, 2026, 07:12 AM ISTUpdated : Nov 19, 2026, 07:35 AM IST

Karnataka Latest News Live: ಏರ್‌ಪೋರ್ಟ್‌ಗೆ ಗೆದ್ದಲಹಳ್ಳಿಯಿಂದ ಹೊಸ ಮೇಲ್ಸೇತುವೆ; ಬೆಂಗಳೂರು ವ್ಯಾಪ್ತಿಗೆ 111 ಹಳ್ಳಿ

ಸಾರಾಂಶ

ಮಂಡ್ಯ: ನಾನು ರೈತರ ಸಾಲ ಮನ್ನಾ ಮಾಡಿದ್ದೇನೆ ಹೊರತು ಯಾವುದೇ ರೀತಿಯ ಲೂಟಿ ಮಾಡಲಿಲ್ಲ. ನನ್ನನ್ನು ಹಳ್ಳಿಗುಗ್ಗು ಎನ್ನುವವರಿಗೆ ಹಳ್ಳಿ ಜನರ ಕಷ್ಟ ಅರ್ಥವಾಗುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ₹25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಎಷ್ಟೋ ಶಾಲಾ, ಕಾಲೇಜುಗಳನ್ನು ತೆರೆದೆ. ಕೆಲವು ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 200ಕ್ಕೂ ಹೆಚ್ಚು ರೈತರು ಆತ್ಮ*ಹತ್ಯೆ ಮಾಡಿಕೊಂಡರು ಎಂದರು. 

ನನ್ನಲ್ಲಿ ವಿಶ್ವಾಸವಿಟ್ಟು ಬಹುಮತ ನೀಡಿ ಅಧಿಕಾರ ನೀಡಿದರೆ ಉತ್ತಮ ಜನಪರ ಆಡಳಿತ ನೀಡುವ ಆಸೆಯಿದೆ  ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇನೆ ಎಂದ ಅವರು, ರಾಜ್ಯ ಸರ್ಕಾರ ನಿಮ್ಮ ಹಣವನ್ನೇ ತಂದು ಗ್ಯಾರಂಟಿ ಯೋಜನೆಗಳೆಂದು ಕೊಡುತ್ತಿದೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

07:35 AM (IST) Nov 19

ಏರ್‌ಪೋರ್ಟ್‌ಗೆ ಗೆದ್ದಲಹಳ್ಳಿಯಿಂದ ಹೊಸ ಮೇಲ್ಸೇತುವೆ; ಬೆಂಗಳೂರು ವ್ಯಾಪ್ತಿಗೆ 111 ಹಳ್ಳಿ

ವಿಮಾನ ನಿಲ್ದಾಣದ ಸಂಚಾರ ದಟ್ಟಣೆ ಕಡಿಮೆ ಮಾಡಲು ಗೆದ್ದಲಹಳ್ಳಿಯಿಂದ ಹೊಸ ಮೇಲ್ಸೇತುವೆ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಜೊತೆಗೆ ನಗರದ 111 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಜಕ್ಕೂರು ಮೇಲ್ಸೇತುವೆಯನ್ನು ಉದ್ಘಾಟಿಸಲಾಗಿದೆ.
Read Full Story

07:33 AM (IST) Nov 19

ಮಂಗಳೂರು-ಬೆಂಗಳೂರು ರೈಲು ಸಂಪರ್ಕಕ್ಕೆ ಮತ್ತಷ್ಟು ಬಲ - ದ್ವಿಪಥ ಕಾಮಗಾರಿಗೆ ರೈಲ್ವೆ ಸಚಿವ ಸೂಚನೆ, ಸಂಸದರು ಹೇಳಿದ್ದೇನು?

Mangalore Bangalore railway doubling project ಮಂಗಳೂರು-ಬೆಂಗಳೂರು ರೈಲು ಮಾರ್ಗದ ದ್ವಿಪಥ ಕಾಮಗಾರಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಾಗಿ ಆದ್ಯತೆ ನೀಡಿದೆ. ಇದರಿಂದ ಸರಕು ಸಾಗಣೆ ಹಾಗೂ ಪ್ರಯಾಣಿಕರ ಸಂಚಾರಕ್ಕೆ ದೊಡ್ಡ ಉತ್ತೇಜನ ಸಿಗಲಿದ್ದು, ಕೇವಲ 4 ಗಂಟೆಗಳಲ್ಲಿ ಪ್ರಯಾಣ ಸಾಧ್ಯ.

Read Full Story

More Trending News