ಕ್ಯಾಂಡಿಡೇಟ್ಸ್‌ ಚೆಸ್‌: ಜಂಟಿ ನಂ.1 ಸ್ಥಾನ ಕಾಯ್ದುಕೊಂಡ ಡಿ ಗುಕೇಶ್‌

By Kannadaprabha NewsFirst Published Apr 17, 2024, 9:23 AM IST
Highlights

ಸೋಮವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ 10ನೇ ಸುತ್ತಿನ ಪಂದ್ಯದಲ್ಲಿ ಗುಕೇಶ್‌ ಅವರು ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. ಸದ್ಯ ಇಬ್ಬರೂ ತಲಾ 6 ಅಂಕಗಳನ್ನು ಹೊಂದಿದ್ದು, ಭಾರಿ ಪೈಪೋಟಿ ಏರ್ಪಟ್ಟಿದೆ. ಟೂರ್ನಿಯಲ್ಲಿ ಇನ್ನು 4 ಸುತ್ತಿನ ಪಂದ್ಯಗಳು ಬಾಕಿಯಿವೆ.

ಟೊರೊಂಟೊ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಸೋಮವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ 10ನೇ ಸುತ್ತಿನ ಪಂದ್ಯದಲ್ಲಿ ಗುಕೇಶ್‌ ಅವರು ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. ಸದ್ಯ ಇಬ್ಬರೂ ತಲಾ 6 ಅಂಕಗಳನ್ನು ಹೊಂದಿದ್ದು, ಭಾರಿ ಪೈಪೋಟಿ ಏರ್ಪಟ್ಟಿದೆ. ಟೂರ್ನಿಯಲ್ಲಿ ಇನ್ನು 4 ಸುತ್ತಿನ ಪಂದ್ಯಗಳು ಬಾಕಿಯಿವೆ.

ಇದೇ ವೇಳೆ ಆರ್‌.ಪ್ರಜ್ಞಾನಂದ ಹಾಗೂ ವಿದಿತ್‌ ಗುಜರಾತಿ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಪ್ರಜ್ಞಾನಂದ 5.5 ಅಂಕದೊಂದಿಗೆ ಜಂಟಿ 3ನೇ ಸ್ಥಾನದಲ್ಲಿದ್ದರೆ, 5 ಅಂಕದೊಂದಿಗೆ ವಿದಿತ್‌ 6ನೇ ಸ್ಥಾನದಲ್ಲೇ ಬಾಕಿಯಾಗಿದ್ದಾರೆ.

Latest Videos

IPL 2024 ಬಟ್ಲರ್‌ ಶತಕದ ಜೋಶ್‌ಗೆ ನಡುಗಿದ ಕೋಲ್ಕತಾ ನೈಟ್ ರೈಡರ್ಸ್‌!

ಇದೇ ವೇಳೆ ಮಹಿಳಾ ವಿಭಾಗದಲ್ಲಿ ಸತತ 4 ಸೋಲು ಕಂಡಿದ್ದ ಆರ್‌.ವೈಶಾಲಿ ಕೊನೆಗೂ ಗೆಲುವಿನ ಹಳಿಗೆ ಮರಳಿದ್ದಾರೆ. ಅವರು ಬಲ್ಗೇರಿಯಾದ ಸಲಿಮೊವಾ ವಿರುದ್ಧ ಗೆದ್ದರೆ, ಕೊನೆರು ಹಂಪಿ ಅವರು ಚೀನಾದ ಝೊಂಗ್ಯಿ ಟಾನ್‌ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. 4.5 ಅಂಕ ಹೊಂದಿರುವ ಕೊನೆರು 5ನೇ, 3.5 ಅಂಕ ಸಂಪಾದಿಸಿರುವ ವೈಶಾಲಿ 8ನೇ ಸ್ಥಾನಗಳಲ್ಲಿದ್ದಾರೆ.

ಗ್ರೀಸ್‌ನಲ್ಲಿ ಬೆಳಗಿದ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾ ಜ್ಯೋತಿ

ಒಲಿಂಪಿಯಾ(ಗ್ರೀಸ್): ಒಲಿಂಪಿಕ್ಸ್ ಉಗಮ ಸ್ಥಳವಾಗಿರುವ ದಕ್ಷಿಣ ಗ್ರೀಸ್‌ನ ಒಲಿಂಪಿಯಾದಲ್ಲಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನ ಕ್ರೀಡಾಜ್ಯೋತಿಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬೆಳಗಿಸಲಾಯಿತು. ಇದರೊಂದಿಗೆ ಬಹುನಿರೀಕ್ಷಿತ ಕ್ರೀಡಾಕೂಟಕ್ಕೆ ದಿನಗಣನೆ ಆರಂಭವಾಗಿದೆ. ಕ್ರೀಡಾ ಜ್ಯೋತಿ ಇನ್ನು ಕೆಲ ದಿನಗಳ ಕಾಲ ಗ್ರೀಸ್‌ನಲ್ಲಿರಲಿದ್ದು, ಬಳಿಕ ವಿಶ್ವದ ವಿವಿಧ ದೇಶಗಳಿಗೆ ಪ್ರಯಾಣಿಸಲಿದೆ. ಒಲಿಂಪಿಕ್ಸ್‌ ಜು.26ಕ್ಕೆ ಆರಂಭಗೊಳ್ಳಲಿದೆ.

ಯೂತ್‌ ಬಾಸ್ಕೆಟ್‌ಬಾಲ್‌: ರಾಜ್ಯ ವನಿತೆಯರಿಗೆ ಬೆಳ್ಳಿ

ಪುದುಚೇರಿ: ಇಲ್ಲಿ ನಡೆದ 38ನೇ ರಾಷ್ಟ್ರೀಯ ಯೂತ್‌ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮಹಿಳೆಯರ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಫೈನಲ್‌ನಲ್ಲಿ ರಾಜ್ಯ ತಂಡ ತಮಿಳುನಾಡು ವಿರುದ್ಧ 60-65 ಅಂಕಗಳಿಂದ ಸೋಲನುಭವಿಸಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ರಾಜ್ಯದ ಪರ ಖುಶಿ ನವೀನ್‌ 14, ನಿಲಾಯ ರೆಡ್ಡಿ 14, ಅದಿತಿ ಸುಬ್ರಮಣ್ಯನ್‌ 13 ಅಂಕ ಗಳಿಸಿದರು.

ಕ್ಯಾಂಡಿಡೇಟ್ಸ್‌ ಚೆಸ್‌: ವಿಶ್ವ ನಂ.3 ಹಿಕರು ವಿರುದ್ಧ ವಿದಿತ್‌ಗೆ ಸತತ 2ನೇ ಜಯ

ಕೊಡವ ಹಾಕಿ: ಕುಲ್ಲಚಂಡಕ್ಕೆ ಟೈ ಬ್ರೇಕರಲ್ಲಿ ರೋಚಕ ಜಯ

ನಾಪೋಕ್ಲು: ಕುಂಡ್ಯೋಳಂಡ ಕಪ್ ಹಾಕಿ ಉತ್ಸವದ ಮಂಗಳವಾರದ ಪಂದ್ಯಗಳಲ್ಲಿ ಬಿದ್ದಂಡ, ಚೋಯಮಾದಂಡ, ಕುಲ್ಲಚಂಡ, ಪಾಡೆಯಂಡ, ಮೇರಿಯಂಡ ಕರಿನೆರವಂಡ ತಂಡಗಳು ಗೆದ್ದು ಮುನ್ನಡೆ ಸಾಧಿಸಿದವು. ಮೇಕೆರಿರ ವಿರುದ್ಧ ಬಿದ್ದಂಡ, ಪಟ್ಟಡ ವಿರುದ್ಧ ಚೋಯಮಾಡಂಡ ಜಯಗಳಿಸಿದವು. ಕುಲ್ಲಚಂಡ ಮತ್ತು ಪುಟ್ಟಿಚಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು ನಂತರ ನಡೆದ ಟೈ ಬ್ರೇಕರ್‌ನಲ್ಲಿ ಕುಲ್ಲಚಂಡ 6-5ರಲ್ಲಿ ಗೆದ್ದಿತು. ಮಲ್ಲಂಗಡ ವಿರುದ್ಧ ಪಾಡೆಯಂಡ 5-1ರಲ್ಲಿ, ಕೋಟೆರ ವಿರುದ್ಧ ಮೇರಿಯಂಡ 2-1ರಲ್ಲಿ, ಮಲ್ಲಮಾಡ ವಿರುದ್ಧ ಕರಿನೆರವಂಡ 3-0 ಅಂತರದಲ್ಲಿ ಗೆಲುವು ಸಾಧಿಸಿತು. ಚಿಮ್ಮಣಮಾಡ ವಿರುದ್ಧ ಬೊವ್ವೇರಿಯಂಡ, ಕೊಂಗಂಡ ವಿರುದ್ಧ ನೆರವಂಡ, ಗಂದಂಗಡ ವಿರುದ್ಧ ಅಪ್ಪನೆರವಂಡ, ಮಂಡೀರ(ನೆಲಜಿ) ವಿರುದ್ಧ ಕಲಿಯಂಡ ಜಯಗಳಿಸಿದವು.
 

click me!