ವಿದೇಶದಲ್ಲಿ ಪತ್ನಿ ಜೊತೆ 14 ದಿನ ಮಾತ್ರ ಇರ್ಬಹುದು, ಟೀಂ ಇಂಡಿಯಾ ಆಟಗಾರರಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಬಿಸಿಸಿಐ

By Roopa Hegde  |  First Published Jan 14, 2025, 1:38 PM IST

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಸೋಲಿನ ನಂತ್ರ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆಟಗಾರರ ಕುಟುಂಬಸ್ಥರು ಹಾಗೂ ಪ್ರಯಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾರ್ಗಸೂಚಿ ಹೊರಡಿಸಿದೆ. 
 


ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy)ಯಲ್ಲಿ ಭಾರತ ತಂಡ (Team India) ಉತ್ತಮ ಪ್ರದರ್ಶನ ನೀಡಿಲ್ಲ. ಐದು ಪಂದ್ಯಗಳ ಟೆಸ್ಟ್ ಸರಣಿ (Test series)ಯಲ್ಲಿ ಆಸ್ಟ್ರೇಲಿಯಾ (Australia) ಭಾರತವನ್ನು 3-1 ಅಂತರದಿಂದ ಸೋಲಿಸಿದೆ. ಸರಣಿ ಸೋಲಿನ ನಂತರ,  ಬಿಸಿಸಿಐ (BCCI) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಟೀಂ ಇಂಡಿಯಾ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮಹತ್ವದ ನಿರ್ಧಾರಕ್ಕೆ ಬಂದಿದೆ. ಕೆಲವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ವರದಿಯೊಂದರ ಪ್ರಕಾರ,  ಬಿಸಿಸಿಐ ಹೊಸ ಮಾರ್ಗಸೂಚಿಯಲ್ಲಿ ಆಟಗಾರರ ಕುಟುಂಬಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿದೇಶಿ ಪ್ರವಾಸದ ವೇಳೆ ಕುಟುಂಬಸ್ಥರನ್ನು ಭೇಟಿಯಾಗುವ ಹಾಗೂ ಜೊತೆಗಿರುವ ಸಮಯವನ್ನು ಗಣನೀಯವಾಗಿ ಇಳಿಸಲಾಗಿದೆ. 

ಪ್ರವಾಸದ ಪೂರ್ತಿ ಆಟಗಾರರ ಪತ್ನಿ ಜೊತೆಗಿರುವಂತಿಲ್ಲ : ಟೀಂ ಇಂಡಿಯಾ ವಿದೇಶಿ ಪ್ರವಾಸಕ್ಕೆ ಹೊರಟ ಸಮಯದಲ್ಲಿ ಆಟಗಾರರ ಪತ್ನಿಯರು ಮತ್ತು ಮಕ್ಕಳು ಜೊತೆಗೆ ಹೋಗುವ ಅವಕಾಶವನ್ನು ಬಿಸಿಸಿಐ ನೀಡಿತ್ತು. ಆದ್ರೆ ಈಗ ಆ ಸಮಯವನ್ನು ಕಡಿಮೆ ಮಾಡಿದೆ. 45 ದಿನಗಳ ಪ್ರವಾಸದ ಸಮಯದಲ್ಲಿ, ಪತ್ನಿ ಅಥವಾ ಕುಟುಂಬ ಸದಸ್ಯರು ಗರಿಷ್ಠ 14 ದಿನಗಳ ಕಾಲ ಮಾತ್ರ ಆಟಗಾರರ ಜೊತೆ ತಂಗಬಹುದು.  ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರು ತಮ್ಮ ಕುಟುಂಬದ ಸದಸ್ಯರು ಸರಣಿ ಕೊನೆಯವರೆಗೂ ಇರಬೇಕೆಂದು ಬಯಸ್ತಾರೆ. ಆದ್ರೆ ಆಟಗಾರರು  ಆಟದ ಮೇಲೆ ಗರಿಷ್ಠ ಗಮನ ಹರಿಸುವುದನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ. ವಿದೇಶ ಪ್ರವಾಸಗಳ ಸಮಯದಲ್ಲಿ ಕುಟುಂಬ ಸದಸ್ಯರ ಉಪಸ್ಥಿತಿಯು ಆಟಗಾರರ ಗಮನವನ್ನು ಬೇರೆಡೆ ಸೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಅವರ ಆಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳು ನಂಬುತ್ತಾರೆ. 

Tap to resize

Latest Videos

Kho Kho World Cup: ಭಾರತದ ಭರ್ಜರಿ ಶುಭಾರಂಭ

ಒಟ್ಟಿಗೆ ಪ್ರಯಾಣ ಬೆಳೆಸಬೇಕು ಆಟಗಾರರು : ಬಿಸಿಸಿಐ ಆಟಗಾರರ ಪ್ರಯಾಣದ ವಿಷ್ಯದಲ್ಲೂ ಮಾರ್ಗಸೂಚಿ ಹೊರಡಿಸಿದೆ. ಆಟಗಾರರು ಪ್ರವಾಸದ ಉದ್ದಕ್ಕೂ ಒಟ್ಟಿಗೆ ಪ್ರಯಾಣಿಸುವುದು ಕಡ್ಡಾಯವಾಗಿದೆ. ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗುವ ಸಮಯದಲ್ಲಿ ಆಟಗಾರರು ಪ್ರತ್ಯೇಕವಾಗಿ ಪ್ರಯಾಣ ಬೆಳೆಸುತ್ತಿದ್ದರು. ತಮ್ಮ ಕುಟುಂಬದ ಜೊತೆ ಅವರು ಪ್ರಯಾಣ ಮಾಡಿದ್ದರು. ಆದ್ರೆ ಇನ್ಮು ಮುಂದಿನ ಪ್ರವಾಸದಲ್ಲಿ ಆಟಗಾರನಿಗೆ ವೈಯಕ್ತಿಕ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಅವರು ಇಡೀ ತಂಡದೊಂದಿಗೆ ಪ್ರಯಾಣಿಸಬೇಕಾಗುತ್ತದೆ.

ನಿಮಗೆ ಗೊತ್ತಾ? ಈ ಸಿನಿಮಾದಲ್ಲಿ ನಟಿಸಿದ್ದಾರೆ ಅನಿಲ್ ಕುಂಬ್ಳೆ, ಬ್ರೆಟ್‌ ಲೀ!

ಟೀಂ ಇಂಡಿಯಾ ಮುಂದಿನ ಪಂದ್ಯಾವಳಿ ವಿವರ : ಆಸ್ಟ್ರೇಲಿಯಾ ಪ್ರವಾಸ ಮುಗಿಸಿರುವ ಟೀಂ ಇಂಡಿಯಾ ಇದೇ ಜನವರಿ 22ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ -20 ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ಕೊಲ್ಕತ್ತಾದಲ್ಲಿ ನಡೆಯಲಿದೆ. ಈ ಸರಣಿ ನಂತ್ರ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ಮಧ್ಯೆ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಈಗಾಗಲೇ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ, ಏಕದಿನ ತಂಡವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಬಹುಶಃ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾವನ್ನು ಒಂದೇ ಬಾರಿ ಪ್ರಕಟಿಸುವ ಸಾಧ್ಯತೆ ಇದೆ.  

click me!