ಗವಿ ಗಂಗಾಧರೇಶ್ವರನಿಗೆ ಸಿಗಲಿಲ್ಲ ಸೂರ್ಯ ಅಭಿಷೇಕ, ಗಂಡಾಂತರ ಕುರಿತು ಅರ್ಚಕರು ಹೇಳಿದ್ದೇನು?

Jan 14, 2025, 11:18 PM IST

ಕರ್ನಾಟಕ ಸೇರಿದಂತೆ ಹಲವೆಡೆ ಮಕರ ಸಂಕ್ರಾತಿ ಆಚರಿಸಲಾಗಿದೆ. ಈ ಪೈಕಿ ಗವಿ ಗಂಗಾಧರೇಶ್ವರ ದೇವಸ್ಥಾನ ವಿಶೇಷ. ಮಕರ ಸಂಕ್ರಾತಿ ದಿನ ಸೂರ್ಯನ ಕಿರಣಗಳು ದೇವಸ್ಥಾನದ ಲಿಂಗ ಸ್ಪರ್ಶಿಸಲಿದೆ. ಆದರೆ ಈ ಬಾರಿ ಮೋಡ ಕವಿದ ಕಾರಣ ಸೂರ್ಯನ ಕಿರಣಗಳು ಸ್ಪರ್ಶಿಸಿಲ್ಲ. ಇದು ಗಂಡಾಂತರದ ಸೂಚನೆ ಎಂದು ಹೇಳಲಾಗುತ್ತಿದೆ. ಈ ಕುರಿತು ದೇವಸ್ಥಾನದ ಅರ್ಚಕರು ಪ್ರತಿಕ್ರಿಯಿಸಿದ್ದಾರೆ.