ರಾಣಾ ಮೇಲೆ ಕ್ರಿಮಿನಲ್ ಕೇಸ್, ಬಲ್ಲಾಳದೇವನ ಕಿರಿಕ್....ಬಂಧನದ ಭೀತಿ

Jan 14, 2025, 6:42 PM IST

ಟಾಲಿವುಡ್​ನ ಫೇಮಸ್ ಸಿನಿಮಾ ಫ್ಯಾಮಿಲಿ ದಗ್ಗುಬಾಟಿ ಕುಟುಂಬ ವಿವಾದದಲ್ಲಿ ಸಿಲುಕಿಕೊಂಡಿದೆ. ದಗ್ಗುಬಾಟಿ ಫ್ಯಾಮಿಲಿಯ ರಾಣಾ, ವೆಂಕಟೇಶ್, ಸುರೇಶ್ ಬಾಬು ಮತ್ತು ಅಭಿರಾಮ್ ಮೇಲೆ ಎಫ್.ಐ.ಆರ್ ದಾಖಲಾಗಿದ್ದು, ಅರೆಸ್ಟ್ ಆಗೋ ಭೀತಿ ಕಾಡ್ತಾ ಇದೆ.ಟಾಲಿವುಡ್​ನ ಸೀನಿಯರ್ ಌಕ್ಟರ್ ವೆಂಕಟೇಶ್, ಬಾಹುಬಲಿಯ ಬಲ್ಲಾಳ ದೇವ ರಾಣಾ ದಗ್ಗುಬಾಟಿ, ನಿರ್ಮಾಪಕ ಸುರೇಶ್ ಬಾಬು ಮತ್ತು ಅಭಿರಾಮ್ ದಗ್ಗುಬಾಟಿ ಮೇಲೆ ಕಳ್ಳತನ, ಗೂಂಡಾ ವರ್ತನೆ ಮತ್ತು ಅಕ್ರಮವಾಗಿ ಕಟ್ಟಡ ನೆಲಸಮ ಮಾಡಿದ ಆರೋಪ ಹೊರಿಸಲಾಗಿದೆ. ಈ ನಾಲ್ವರ ವಿರುದ್ಧ ಫಿಲಂ ನಗರ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ. ಅಕ್ರಮವಾಗಿ ಬೇರೊಂದು ಪ್ರಾಪರ್ಟಿಗೆ ನುಗ್ಗಿದ್ದಲ್ಲದೆ ಅದನ್ನು ನೆಲಸಮಗೊಳಿಸಿದ ಆರೋಪವನ್ನ ಇವರುಗಳ ಮೇಲೆ ಹೊರಿಸಲಾಗಿದೆ. ನಂದ ಕುಮಾರ್ ಎಂಬುವರು ಇವರುಗಳ ಮೇಲೆ ದೂರು ನೀಡಿದ್ದಾರೆ.

ಜಾರಿ ಬಿದ್ದ ಜಾಣೆ, ಡೈರೆಕ್ಟರ್ಸ್ ಕ್ಷಮೆ ಕೇಳಿದ್ದೇಕೆ ರಶ್ಮಿಕಾ; ಕಾಲಿಗೆ ಪೆಟ್ಟು ಮಾಡ್ಕೊಂಡ ಕೊಡವತಿ