ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ರೆಸ್ಟೋರೆಂಟ್ ನಡೆಸ್ತಿದ್ದಾರೆ. ದೆಹಲಿ ಸೇರಿದಂತೆ ಹೈದ್ರಾಬಾದ್ ನಲ್ಲಿ ಕೂಡ ಹೋಟೆಲ್ ಇದೆ. ಅಲ್ಲಿ ಮಾರಾಟವಾಗುವ ಒಂದು ಪ್ಲೇಟ್ ಕಾರ್ನ್ ಭುಟ್ಟಾ ಬೆಲೆ ನೋಡಿ ವಿದ್ಯಾರ್ಥಿನಿ ದಂಗಾಗಿದ್ದಾಳೆ. ಅವಳ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬ್ಯಾಂಕ್ ಖಾತೆ (Bank account)ಯಲ್ಲಿ ಹೆಚ್ಚು ಹಣವಿದ್ರೆ ಮಾತ್ರ ಐಷಾರಾಮಿ ಹೋಟೆಲ್ (luxury hotel) ಗೆ ಕಾಲಿಡ್ಬೇಕು. ಅಲ್ಲಿ ಆಹಾರಕ್ಕಿಂತ ಐಷಾರಾಮಿ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಾಗಾಗಿಯೇ ಆಹಾರ ಬೆಲೆ ಡಬಲ್ ಆಗಿರುತ್ತೆ. ಈಗ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Team India player Virat Kohli) ರೆಸ್ಟೋರೆಂಟ್ ಸುದ್ದಿಗೆ ಬಂದಿದೆ. ಅಲ್ಲಿನ ಆಹಾರದ ಬೆಲೆ ಬಗ್ಗೆ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾಳೆ. ಇದು ವಿರಾಟ್ ಕೊಹ್ಲಿ ರೆಸ್ಟೋರೆಂಟ್ ಎನ್ನುವ ಕಾರಣಕ್ಕೆ ಮತ್ತಷ್ಟು ಚರ್ಚೆಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಗಂಭೀರ ಚರ್ಚೆಯಾಗ್ತಿದೆ.
ಹೈದರಾಬಾದ್‌ನಲ್ಲಿರುವ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ವಿದ್ಯಾರ್ಥಿನಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಒಡೆತನದ ಒನ್ 8 ಕಮ್ಯೂನ್ (One8 commune) ರೆಸ್ಟೋರೆಂಟ್ ಗೆ ವಿದ್ಯಾರ್ಥಿನಿ ತೆರಳಿದ್ದಾರೆ. ಅಲ್ಲಿ ಅವರು ಒಂದು ಪ್ಲೇಟ್ ಕಾರ್ನ್ ಭುಟ್ಟಾ (corn bhutta )ಆರ್ಡರ್ ಮಾಡಿದ್ದಾರೆ. ಆ ಕಾರ್ನ್ ಬೆಲೆ 525 ರೂಪಾಯಿ. ಆದ್ರೆ ಬಂದ ಆರ್ಡರ್ ನೋಡಿ ಅವರು ದಂಗಾಗಿದ್ದಾರೆ. 525 ರೂಪಾಯಿಗೆ ಪ್ಲೇಟ್ ತುಂಬಾ ಕಾರ್ನ್ ಬರುತ್ತೆ ಎಂದು ಅವರು ಭಾವಿಸಿದ್ದರು. ಆದ್ರೆ ಬಂದಿದ್ದು ಮಾತ್ರ ನಾಲ್ಕು ಪೀಸ್ ಎಂದು ಅವರು ಬರೆದಿದ್ದಾರೆ.
ವಿದೇಶದಲ್ಲಿ ಪತ್ನಿ ಜೊತೆ 14 ದಿನ ಮಾತ್ರ ಇರ್ಬಹುದು, ಟೀಂ ಇಂಡಿಯಾ ಆಟಗಾರರಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಬಿಸಿಸಿಐ
ಸ್ನೇಹಾ ಹೆಸರಿನ ಎಕ್ಸ್ ಖಾತೆಯಲ್ಲಿ ಕಾರ್ನ್ ಪ್ಲೇಟ್ ಜೊತೆಗಿರುವ ಫೋಟೋ ಹಂಚಿಕೊಳ್ಳಲಾಗಿದೆ. ಒನ್ 8 ಕಮ್ಯೂನ್ ನಲ್ಲಿ ಈ ಒಂದು ಪ್ಲೇಟ್ ಗೆ 525 ರೂಪಾಯಿ ಪೇ ಮಾಡಿದ್ದೇನೆ ಎಂದು ಬರೆದಿದ್ದಾರೆ. ಈ ಪೋಸ್ಟನ್ನು ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಅನೇಕರು ಸ್ನೇಹಾ ಟ್ರೋಲ್ ಮಾಡಿದ್ರೆ ಮತ್ತೆ ಕೆಲವರು ಹೊಟೇಲ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ಆಹಾರಕ್ಕೆ ನೀವು ಹಣ ಪಾವತಿ ಮಾಡಿಲ್ಲ. ಅಲ್ಲಿನ ಸೌಲಭ್ಯ, ವಾತಾವರಣಕ್ಕೆ ಹಣ ಪಾವತಿ ಮಾಡಿದ್ದೀರಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಅಲ್ಲಿನ ವಾತಾವರಣದಿಂದ ಆಹಾರದ ಬೆಲೆ ದುಬಾರಿಯಾಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಕಾರ್ನ್ ಒಂದು ಪ್ಲೇಟ್ ಗೆ ಎಷ್ಟು ಎಂದು ಮೆನ್ಯುವಿನಲ್ಲಿ ಇತ್ತು. ಅದು ದುಬಾರಿ ಎಂಬುದು ನಿಮಗೆ ತಿಳಿದಿತ್ತು. ಆದ್ರೂ ಏಕೆ ಅದನ್ನು ಆರ್ಡರ್ ಮಾಡಿದ್ರಿ ಎಂದು ಮತ್ತೊಬ್ಬರು ಬರೆದಿದ್ದಾರೆ. ಒಂದು ಪ್ಲೇಟ್ ಗೆ ಇಷ್ಟೊಂದು ಹಣ ಖರ್ಚು ಮಾಡಿದಾಗ ನಾಚಿಕೆಯಾಗುತ್ತದೆ. ಅದನ್ನು ಬೇರೆಯವರ ಮುಂದೆ ಹೇಳಿಕೊಳ್ಳಲೂ ಸಾಧ್ಯವಾಗೋದಿಲ್ಲ ಎಂದು ಬಳಕೆದಾರರು ಬರೆದಿದ್ದಾರೆ. ಹೊಟೇಲ್ ಗೆ ಹೋದಾಗ ಬೆಲೆ ನೋಡಿ ಆರ್ಡರ್ ಮಾಡಬೇಕು ಎಂದು ಸ್ನೇಹಾಗೆ ಕೆಲವರು ಸಲಹೆ ನೀಡಿದ್ದಾರೆ. ಕೊಹ್ಲಿ ನಿವೃತ್ತಿ ನಂತ್ರ ಹಣ ಮಾಡಲು ರೆಸ್ಟೋರೆಂಟ್ ಶುರು ಮಾಡಿದ್ದಾರೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಕೆಲಸದ ಸಮಯ ಅತೀ ಕಡಿಮೆ ಇರುವ ದೇಶ ಯಾವುದು?
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಕ್ರಿಕೆಟ್, ಜಾಹೀರಾತಿನ ಜೊತೆ ಅನೇಕ ಬ್ಯುಸಿನೆಸ್ ನಲ್ಲಿ ತಮ್ಮ ಹಣ ಹೂಡಿಕೆ ಮಾಡಿದ್ದಾರೆ. ಅದ್ರಲ್ಲಿ ರೆಸ್ಟೋರೆಂಟ್ ಚೈನ್ ಕೂಡ ಸೇರಿದೆ. ಒನ್ 8 ಕಮ್ಯೂನ್ ಅವರ ಪ್ರಸಿದ್ಧ ರೆಸ್ಟೋರೆಂಟ್. ದೆಹಲಿ ಮತ್ತು ಮುಂಬೈ ನಂತ್ರ ಹಿಂದಿನ ವರ್ಷ ಕೊಹ್ಲಿ ಹೈದ್ರಾಬಾದ್ ನಲ್ಲಿ ರೆಸ್ಟೋರೆಂಟ್ ಓಪನ್ ಮಾಡಿದ್ದರು. ಈ ಹೊಟೇಲ್ ಬಹಳ ಐಷಾರಾಮಿಯಾಗಿದೆ. ಇಂಟಿರೀಯರ್ ಗೆ ಕೊಹ್ಲಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ದೆಹಲಿಯಲ್ಲಿ ಎರಡು ರೆಸ್ಟೋರೆಂಟ್ ಇದ್ದು, ಗುರ್ಗ್ರಾಮ್ ನಲ್ಲಿ ಕೂಡ ಕೊಹ್ಲಿ ಒಂದು ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ.
paid rs.525 for this today at one8 commune 😭 pic.twitter.com/EpDaVEIzln
— Sneha (@itspsneha)