ಆರೋಪಿ ಬಳಿ ಗನ್, ಸಾಕ್ಷಿಗಳಿಗೆ ಪ್ರಾಣಭೀತಿ; ದರ್ಶನ್​ಗೆ ನೊಟೀಸ್ ನೀಡಿದ ಆಡಳಿತ ವಿಭಾಗದ ಡಿಸಿಪಿ

ಆರೋಪಿ ಬಳಿ ಗನ್, ಸಾಕ್ಷಿಗಳಿಗೆ ಪ್ರಾಣಭೀತಿ; ದರ್ಶನ್​ಗೆ ನೊಟೀಸ್ ನೀಡಿದ ಆಡಳಿತ ವಿಭಾಗದ ಡಿಸಿಪಿ

Published : Jan 14, 2025, 05:11 PM IST

ದರ್ಶನ್​ಗೆ ಜಾಮೀನು ಸಿಕ್ಕಿದ್ದರೂ, ಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದೆ. ಈಗ ಪೊಲೀಸ್ ಇಲಾಖೆ ಅವರ ಗನ್ ಲೈಸೆನ್ಸ್ ರದ್ದುಗೊಳಿಸುವ ಸಾಧ್ಯತೆಯಿದೆ.

ದರ್ಶನ್​ಗೆ ಬೇಲ್ ಏನೋ ಸಿಕ್ಕಿದೆ. ಆದ್ರೆ ಕಾನೂನು ಕಂಟಕ ಇನ್ನೂ ಮುಗಿದಿಲ್ಲ. ಜಾಮೀನು ಕೊಟ್ಟರೂ ಕೋರ್ಟ್ ಹಲವು ಷರತ್ತುಗಳನ್ನ ಹಾಕಿದೆ. ಏನೇ ಮಾಡಬೇಕಂದ್ರೂ ದರ್ಶನ್ ಕೋರ್ಟ್ ಅನುಮತಿ ಪಡೆದೇ ಮಾಡಬೇಕಿದೆ. ಸದ್ಯ ದರ್ಶನ್ ಗೆ ಮತ್ತೊಂದು ಕಂಟಕ ಎದುರಾಗಿದ್ದು, ಗನ್ ಲೈಸೆನ್ಸ್  ರದ್ದು ಮಾಡೋದಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.ದರ್ಶನ್ ಗನ್ ಲೈಸೆನ್ಸ್ ಹೊಂದಿದ್ದು ತನ್ನ ಸ್ವರಕ್ಷಣೆಗೆ ಅಂತ ಎರಡು ಗನ್​ಗಳನ್ನ ಇಟ್ಟುಕೊಂಡಿದ್ದಾರೆ. ಆದ್ರೆ ಈಗ ದರ್ಶನ್ ಕೊಲೆ ಕೇಸ್​ನಲ್ಲಿ ಆರೋಪಿಯಾಗಿದ್ದಾರೆ. ಹೀಗೆ ಕೊಲೆ ಆರೋಪಿ ಬಳಿ ಗನ್ ಇದ್ರೆ ಸಾಕ್ಷಿಗಳಿಗೆ ಬೆದರಿಸೋ ಸಾಧ್ಯತೆ ಇರುತ್ತೆ. ಅಂತೆಯೇ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹು ದರ್ಶನ್​ಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ನೊಟೀಸ್​ಗೆ ದರ್ಶನ್ ನೀಡುವ ಉತ್ತರವನ್ನ ನೋಡಿಕೊಂಡು ಪೊಲೀಸ್ ಇಲಾಖೆ ಮುಂದಿನ ತೀರ್ಮಾನಕ್ಕೆ ಬರಲಿದೆ. ಅಲ್ಲಿಗೆ ಬಹುತೇಕ ದರ್ಶನ್ ಗನ್ ಲೈಲೆನ್ಸ್ ರದ್ದು ಆಗಲಿದೆ.

ಜಾರಿ ಬಿದ್ದ ಜಾಣೆ, ಡೈರೆಕ್ಟರ್ಸ್ ಕ್ಷಮೆ ಕೇಳಿದ್ದೇಕೆ ರಶ್ಮಿಕಾ; ಕಾಲಿಗೆ ಪೆಟ್ಟು ಮಾಡ್ಕೊಂಡ ಕೊಡವತಿ

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more