ಟಾಲಿವುಡ್‌ನಲ್ಲಿ ಸಂಕ್ರಾಂತಿ ರೇಸ್​; ಡಾಕು ಮಹರಾಜ್ ಹೊಡೆತಕ್ಕೆ ಡಲ್ ಆದ ಗೇಮ್ ಚೇಂಜರ್

Jan 14, 2025, 10:58 PM IST

ಸಂಕ್ರಾಂತಿಗೆ ತೆಲುಗು ಚಿತ್ರರಂಗ ಗರಿಗೆದರಿದೆ. ಮೂವರು ಸ್ಟಾರ್ ನಟರ ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆ ಆಗಿವೆ. ಜನವರಿ 10 ರಂದು ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಗಿತ್ತು. ಭಾನುವಾರ ನಂದಮೂರಿ ಬಾಲಕೃಷ್ಣ ನಟನೆಯ ‘ಢಾಕೂ ಮಹಾರಾಜ್’ ಸಿನಿಮಾ ತೆರೆಗೆ ಬಂದಿದೆ. ಸಂಕ್ರಾತಿ ದಿನ ವಿಕ್ಟರಿ ವೆಂಕಟೇಶ್ ನಟನೆಯ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ತೆರೆಗೆ ಬರಲಿದೆ. ಜನವರಿ 10ರಂದು ಬಿಡುಗಡೆ ಆಗಿದ್ದ ‘ಗೇಮ್ ಚೇಂಜರ್’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು, ಆದರೆ ಭಾನುವಾರ ಬಿಡುಗಡೆ ಆದ ‘ಢಾಕೂ ಮಹಾರಾಜ್’ ಸಿನಿಮಾದಿಂದಾಗಿ ‘ಗೇಮ್ ಚೇಂಜರ್’ ಹೊಡೆತ ತಿಂದಿದೆ. ಮೊದಲ ದಿನ ‘ಢಾಕೂ ಮಹಾರಾಜ್’ ಭರ್ಜರಿ ಕಲೆಕ್ಷನ್ ಮಾಡಿದೆ.
 
ಸ್ಯಾಂಡಲ್‌ವುಡ್‌ಗೆ ಹೊಸ ಹೊಸ ಹೀರೋಯಿನ್‌ಗಳ ಎಂಟ್ರಿ ಆಗ್ತಿದೆ. ಕನ್ನಡ ಚಿತ್ರರಂಗ ತಾರಾ ಕುಟುಂಬದ ಕುಡಿಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅಂತಹವರಲ್ಲಿ ಕೀರ್ತಿ ಕೃಷ್ಣ ಕೂಡ ಒಬ್ಬರು.  ಕೀರ್ತಿ ಕೃಷ್ಣ ನಟ ಶರಣ್ ಅವರ ಸೊಸೆ. ಅಂದರೆ, ಶರಣ್ ಹಾಗೂ ಹಿರಿಯ ನಟಿ ಶ್ರುತಿ ಅವರ ತಂಗಿ ಉಷಾ ಕೃಷ್ಣ ಅವರ ಪುತ್ರಿ. ಪಡ್ಡೆ ಹುಲಿ ಖ್ಯಾತಿ ಶ್ರೇಯಸ್ ಜೊತೆ 'ದಿಲ್‌ದಾರ್' ಚಿತ್ರದಲ್ಲಿ ಕೀರ್ತಿ ನಾಯಕಿಯಾಗಿ ನಟಿಸೋ ಮೂಲಕ ಇಂಡಸ್ಟ್ರಿಗೆ ಕಾಲಿಡ್ತಾ ಇದ್ದಾರೆ. ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾಗೂ ಇವರೇ ನಾಯಕಿಯಾಗಿ ಆಯ್ಕೆಯಾಗಿದ್ದು ಸ್ಯಾಂಡಲ್​ವುಡ್​​ನಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸೋ ಉತ್ಸಾಹದಲ್ಲಿದ್ದಾರೆ ಕೀರ್ತಿ ಕೃಷ್ಣ.