ಬಿಜೆಪಿ ಮುಖಂಡ ಸೇರಿ 15 ಜನರಿಗೆ ವಂಚನೆ: 14 ಲಕ್ಷ ಪಂಗನಾಮ

By Gowthami K  |  First Published Jan 14, 2025, 11:31 PM IST

ಗಂಗಾವತಿಯಲ್ಲಿ ಬಿಜೆಪಿ ಮುಖಂಡ ಸೇರಿ 15 ಜನರಿಗೆ 14,64,900 ರೂ. ವಂಚಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕನಕಗಿರಿಯ ಸಾಗರ್ ಮತ್ತು ಪತ್ನಿ ಪವಿತ್ರ ಎಂಬುವರು ವಿವಿಧ ಯೋಜನೆಗಳ ಹೆಸರಿನಲ್ಲಿ ಹಣ ಪಡೆದು ವಂಚಿಸಿದ್ದಾರೆ.


ಗಂಗಾವತಿ (ಜ.14): ನಗರದ ಬಿಜೆಪಿ ಮುಖಂಡ ಸೇರಿದಂತೆ 15 ಜನರಿಗೆ 14, 64, 900 ರು ಅಧಿಕ ಹಣ ಪಂಗನಾಮ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಬಿಜೆಪಿ ಮುಖಂಡ ಸಂತೋಷ ಕೆಲೋಜಿ ಸೇರಿದಂತೆ 15 ಜನರಿಗೆ ಕನಕಗಿರಿ ನಗರದ ಸಾಗರ ಮತ್ತು ಈತನ ಪತ್ನಿ ಪವಿತ್ರ ಎನ್ನುವರು ವಿವಿಧ ಯೋಜನೆಗಳಿಗೆ ಪ್ರೋತ್ಸಾಹ ಧನ ನೀಡುವದಾಗಿ ಹೇಳಿ ಒಟ್ಟು 14 ಲಕ್ಷ 64 ಸಾವಿರ 900 ರು ವಂಚಿಸಿದ್ದಾರೆ.

5ನೇ ತರಗತಿ ಬಾಲಕನಿಂದ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ!

Tap to resize

Latest Videos

ಏನಿದು ವಂಚನೆಃ ಕೊಪ್ಪಳದಲ್ಲಿ ಸಂಕಲ್ಪ ಎನ್.ಜಿ.ಓ ಇದ್ದು ಕನಕಗಿರಿ ಮೂಲದ ಸಾಗರ್ ಮಲ್ಕೇಶಿ ಕೋಟಿ ಎನ್ನುವರು ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಎನ್.ಜಿ.ಓ ದಲ್ಲಿ ಸಿ.ಎಸ್.ಆರ್ ಪಂಡ್ ಬಂದಿದೆ. ಈ ಅನುದಾನದಲ್ಲಿ ಹಿಟ್ಟಿನ ಗಿರಣಿ, ಝರಾಕ್ಸ್ ಮಷಿನ್, ಕುರಿ ಸಾಕಾಣಿಕೆ ಇತರೆ ಸ್ವ-ಉದ್ಯೋಗ ಮಾಡುವಂತವರಿಗೆ ಸಹಾಯ ಧನ ನೀಡುವದಾಗಿ ಹೇಳಿ ನಿಮ್ಮ ಬಿಜೆಪಿ ಕಾರ್ಯಕರ್ತರಿಂದ ಯೋಜನೆಯ ಶೇ.10 ರಷ್ಟು ಹಣ ಫೋನ್ ಪೇ ಮಾಡಿ ಎಂದು ನಂಬಿಸಿದ್ದಾನೆ.

ಸಂಕ್ರಾಂತಿ ಹಬ್ಬಕ್ಕೆ ಮಗಳ ಮನೆಗೆ ಬಂದ ಅತ್ತೆಯನ್ನೇ ಹತ್ಯೆಗೈದ ಅಳಿಯ!

ಕಾರ್ಯಕರ್ತರ ಆಧಾರ ಕಾರ್ಡ ಮತ್ತು ಫೋಟುವನ್ನು ಕಳುಹಿಸಿದರೆ ಎರಡು ಮೂರು ದಿನಗಳಲ್ಲಿ ಯೋಜನೆಯ ಒಟ್ಟು ಹಣ ಪಾವತಿಸುವದಾಗಿ ಹೇಳಿದ್ದಾರೆ. ಸಾಗರ್ ಅವರ ಮಾತು ಕೇಳಿದ ಸಂತೋಷ ಕೆಲೋಜಿ ಸೇರಿದಂತ 15 ಜನರು ಸಾಗರ್ ಮತ್ತು ಈತನ ಪತ್ನಿ ಮೊಬೈಲ್‌ ಗೆ ಯೋಜನೆಯ ಶೇ.10 ರಷ್ಟು ಹಣ ಪಾವತಿಸಿದ್ದಾರೆ. ಯೋಜನೆಯ ಹಣ ನೀಡದ ಕಾರಣ ಅನುಮಾನಗೊಂಡು ಗಂಗಾವತಿ ನಗರ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಂಗ ವಶಕ್ಕೆ ಒಪ್ಪಿಸಿದ್ದು, ಈತನ ಪತ್ನಿ ಪವಿತ್ರಳ ವಿರುದ್ಧ ಪ್ರಕರಣ ದಾಖಲುಗೊಂಡಿದೆ ಎಂದು ಪಿಐ ಪ್ರಕಾಶ ಮಾಳೆ ತಿಳಿಸಿದ್ದಾರೆ.

click me!