Sun Halo: ಸೂರ್ಯನ ಸುತ್ತ ಉಂಗುರ ಸಂಭವಿಸೋದೇಕೆ? ಅಪರೂಪದ ವಿದ್ಯಮಾನದ ಬಗ್ಗೆ ಇಲ್ಲಿದೆ ವಿವರ..

Published : Sep 01, 2023, 02:55 PM IST
Sun Halo: ಸೂರ್ಯನ ಸುತ್ತ ಉಂಗುರ ಸಂಭವಿಸೋದೇಕೆ? ಅಪರೂಪದ ವಿದ್ಯಮಾನದ ಬಗ್ಗೆ ಇಲ್ಲಿದೆ ವಿವರ..

ಸಾರಾಂಶ

ಮುಂದಿನ 24 ಗಂಟೆಗಳಲ್ಲಿ ಮಳೆ ಬೀಳುತ್ತದೆ ಎಂದು ಹೇಳಲು ಆಪ್ಟಿಕಲ್ ವಿದ್ಯಮಾನಗಳಾದ ಹ್ಯಾಲೋಸ್‌ ಅನ್ನು ಹವಾಮಾನ ಸಿದ್ಧಾಂತದ ಭಾಗವಾಗಿ ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ. 

ದೆಹಲಿ (ಸೆಪ್ಟೆಂಬರ್ 1, 2023): ಬೆಂಗಳೂರಲ್ಲಿ 2 ವರ್ಷದ ಹಿಂದೆ  ಸೂರ್ಯನ ಸುತ್ತ ಸನ್ ಹ್ಯಾಲೋ ಅಥವಾ ಮಳೆಬಿಲ್ಲಿನ ಬಣ್ಣದ ಉಂಗುರ ಸಂಭವಿಸಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಜನರು ಈ ಬಗ್ಗೆ ಫೋಟೋಗಳು, ಕ್ಯಾಪ್ಷನ್‌ಗಳನ್ನು ಹಂಚಿಕೊಂಡಿದ್ರು. ಹಾಗೆ, ಈ ವರ್ಷ ಅಂದರೆ 2023ರ ಏಪ್ರಿಲ್‌ನಲ್ಲಿ ಪ್ರಯಾಗ್‌ರಾಜ್‌ನಲ್ಲೂ ಈ ಅಪರೂಪದ ವಿದ್ಯಮಾನ ಸಾಕ್ಷಿಯಾಗಿತ್ತು. ಸೂರ್ಯನ ಸುತ್ತಲಿನ ಮಳೆಬಿಲ್ಲಿನ ಬಣ್ಣದ ಪ್ರಭಾವಲಯದಿಂದ ಜನರು ವಿಸ್ಮಯಗೊಂಡರು.

ಇನ್ನು, ಸನ್‌ ಹ್ಯಾಲೋ ಅಂದ್ರೇನು? ಈ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನು ಓದಿ: Chandrayaan - 3: ವಿಕ್ರಮ್ ಲ್ಯಾಂಡರ್‌ ಇಳಿಸಲು ಅಸ್ಸಾಂನ ಈ ಯುವ ವಿಜ್ಞಾನಿಗಳ ಪಾತ್ರವೇನು ನೋಡಿ..!

ಸನ್‌ ಹ್ಯಾಲೋ ಅಥವಾ ಸೂರ್ಯನ ಪ್ರಭಾ ವಲಯ ಅಂದ್ರೇನು?
ಸೂರ್ಯನ ಪ್ರಭಾ ವಲಯವನ್ನು '22 ಡಿಗ್ರಿ ಪ್ರಭಾ ವಲಯ' ಎಂದೂ ಕರೆಯುತ್ತಾರೆ, ಇದು ವಾತಾವರಣದಲ್ಲಿ ಸಸ್ಪೆಂಡ್‌ ಆಗುವ ಲಕ್ಷಾಂತರ ಹೆಕ್ಸಾಗನಲ್‌ ಐಸ್ ಸ್ಫಟಿಕಗಳಲ್ಲಿ ಸೂರ್ಯನ ಬೆಳಕು ವಕ್ರೀಭವನಗೊಳ್ಳುವುದರಿಂದ ಸಂಭವಿಸುವ ಆಪ್ಟಿಕಲ್ ವಿದ್ಯಮಾನವಾಗಿದೆ. ಇದು ಸೂರ್ಯ ಅಥವಾ ಚಂದ್ರನ ಸುತ್ತ ಸುಮಾರು 22 ಡಿಗ್ರಿ ತ್ರಿಜ್ಯದೊಂದಿಗೆ ಉಂಗುರದ ರೂಪ ಕಾಣಿಸುತ್ತದೆ.

ಹ್ಯಾಲೋಸ್‌ ಎಲ್ಲಿ ರೂಪುಗೊಳ್ಳುತ್ತದೆ?
ವೃತ್ತಾಕಾರದ ಹ್ಯಾಲೋಸ್‌ ನಿರ್ದಿಷ್ಟವಾಗಿ ಸಿರಸ್ ಮೋಡಗಳಿಂದ ಉತ್ಪತ್ತಿಯಾಗುತ್ತದೆ. ಅವುಗಳು ತೆಳುವಾದ, ಬೇರ್ಪಟ್ಟ, ಕೂದಲಿನಂತಹ ಮೋಡಗಳಾಗಿವೆ. ಈ ಮೋಡಗಳು ವಾತಾವರಣದಲ್ಲಿ 20,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ರೂಪುಗೊಳ್ಳುತ್ತವೆ.

ಇದನ್ನೂ ಓದಿ: Chandrayaan-3 ಯಶಸ್ಸಿನ ಬಳಿಕ ಕೇರಳದ ಭದ್ರಕಾಳಿ ದೇಗುಲದಲ್ಲಿ ಇಸ್ರೋ ಅಧ್ಯಕ್ಷರ ಪ್ರಾರ್ಥನೆ: ಸೂರ್ಯ ಶಿಕಾರಿಗೆ ರೆಡಿ!

ಸೂರ್ಯನ ಪ್ರಭಾ ವಲಯ ಕಾಣಿಸಿಕೊಳ್ಳಲು ಕಾರಣವೇನು?
UK ಮೂಲದ ಅಟ್ಮಾಸ್ಫಿಯರಿಕ್ ಆಪ್ಟಿಕ್ಸ್, ಜ್ಞಾನ-ಹಂಚಿಕೆಯ ವೆಬ್‌ಸೈಟ್‌ನ ಪ್ರಕಾರ, ಬೆಳಕು ಹಿಮದ ಹರಳುಗಳಿಂದ ಪ್ರತಿಫಲಿಸಿದಾಗ ಮತ್ತು ವಕ್ರೀಭವನಗೊಂಡಾಗ ಹಾಗೂ ಪ್ರಸರಣದಿಂದಾಗಿ ಬಣ್ಣಗಳಾಗಿ ವಿಭಜಿಸಿದಾಗ ಹ್ಯಾಲೋ ವಿದ್ಯಮಾನಗಳು ಸಂಭವಿಸುತ್ತವೆ. ಸ್ಫಟಿಕಗಳು ಪ್ರಿಸ್ಮ್‌ ಮತ್ತು ಕನ್ನಡಿಗಳಂತೆ ವರ್ತಿಸುತ್ತವೆ, ಅವುಗಳ ಮುಖಗಳ ನಡುವೆ ಬೆಳಕನ್ನು ವಕ್ರೀಭವನಗೊಳಿಸುತ್ತವೆ ಮತ್ತು ಪ್ರತಿಫಲಿಸುತ್ತವೆ. ಇದು ನಿರ್ದಿಷ್ಟ ದಿಕ್ಕುಗಳಲ್ಲಿ ಬೆಳಕಿನ ಶಾಫ್ಟ್‌ಗಳನ್ನು ಕಳುಹಿಸುತ್ತವೆ ಎಂದು ಅದು ವಿವರಿಸಿದೆ. 

ಆಪ್ಟಿಕಲ್ ವಿದ್ಯಮಾನಗಳಾದ ಹ್ಯಾಲೋಸ್‌ ಅನ್ನು ಹವಾಮಾನ ಸಿದ್ಧಾಂತದ ಭಾಗವಾಗಿ ಬಳಸಲಾಗುತ್ತಿತ್ತು, ಇದು ಹವಾಮಾನಶಾಸ್ತ್ರವನ್ನು ಅಭಿವೃದ್ಧಿಪಡಿಸುವ ಮೊದಲು ಹವಾಮಾನ ಮುನ್ಸೂಚನೆಯ ಪ್ರಾಯೋಗಿಕ ಸಾಧನವಾಗಿತ್ತು. ಮುಂದಿನ 24 ಗಂಟೆಗಳಲ್ಲಿ ಮಳೆ ಬೀಳುತ್ತದೆ ಎಂದು ಹೇಳಲು ಇದನ್ನು ಬಳಸಲಾಗುತ್ತದೆ ಎಂದೂ ತಿಳಿದುಬಂದಿದೆ.

ಇದನ್ನು ಓದಿ: ಯಾರಪ್ಪಾ ಇವ್ನು ಪುಂಗಿದಾಸ! ನಾನೇ CHANDRAYAAN 3 ಲ್ಯಾಂಡರ್‌ ಡಿಸೈನರ್; ನಾಸಾ ಜತೆಗೂ ಕೆಲಸ ಮಾಡ್ತೀನಿ ಎಂದ ಭೂಪ

ಇದನ್ನು ಹೇಗೆ ವೀಕ್ಷಿಸಬಹುದು?
ಕಾಮನಬಿಲ್ಲಿನಂತೆಯೇ, ಲಂಬ ಕೋನದಿಂದ ನೋಡಿದಾಗ ಒಂದು ಹ್ಯಾಲೋ ಗೋಚರಿಸುತ್ತದೆ. ಕೆಲವೊಮ್ಮೆ ಕೇವಲ ಬಿಳಿಯಾಗಿ ಇದು ಕಂಡುಬರುತ್ತದೆ. ಆಗಾಗ್ಗೆ ವರ್ಣಪಟಲದ ಬಣ್ಣಗಳು ಸಹ ಸ್ಪಷ್ಟವಾಗಿ ಕಂಡುಬರುತ್ತವೆ. ಅವುಗಳು ಲಕ್ಷಾಂತರ ಸ್ಫಟಿಕಗಳ ಸಾಮೂಹಿಕ ಹೊಳಪುಗಳಾಗಿವೆ.

ಇದನ್ನೂ ಓದಿ: Chandrayaan: ಮೂರು ಮುಖ್ಯ ಉದ್ದೇಶಗಳಲ್ಲಿ 2 ಪೂರ್ಣ; ಇನ್ನೊಂದು ಪ್ರಗತಿಯಲ್ಲಿದೆ: ಇಸ್ರೋ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ