ಇನ್ನು ವಿಮಾನದಲ್ಲೂ ಸಿಗಲಿದೆ ವೈಫೈ, ಇಸ್ರೋ ಉಪಗ್ರಹ ಉಡಾವಣೆ ಮಾಡಿದ ಸ್ಪೇಸ್ ಎಕ್ಸ್!

By Chethan Kumar  |  First Published Nov 19, 2024, 8:49 AM IST

ಚಂದ್ರಯಾನ ಸೇರಿದಂತೆ ಯಶಸ್ವಿ ಉಡಾವಣೆ ಮೂಲಕ ವಿಶ್ವಾದ್ಯಂತ ಸದ್ದು ಮಾಡಿರುವ ಇಸ್ರೋ ಇದೇ ಮೊದಲ ಬಾರಿಗೆ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್  ಮೂಲಕ ಉಪಗ್ರಹ ಉಡಾವಣೆ ಮಾಡಿದೆ. ಇಸ್ರೋ ಮಸ್ಕ್ ನೆರವು ಪಡೆದಿದ್ದು ಯಾಕೆ?
 


ನವದೆಹಲಿ(ನ.19) ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈಗಾಗಲೇ ವಿಶ್ವದಲ್ಲೇ ಮಹತ್ವದ ಸ್ಥಾನ ಪಡೆದಿದೆ. ಕಡಿಮೆ ಖರ್ಚಿನಲ್ಲಿ ಉಪಗ್ರಹ ಉಡಾವಣೆ, ಸ್ಯಾಟಲೈಟ್ ಕಮ್ಯೂನಿಕೇಶನ್ ಸೇರಿದಂತೆ ಹಲವು ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಿದೆ. ಈಗಾಗಲೇ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್1 ಉಪಗ್ರಹ ಉಡಾವಣೆ ಮಾಡಲಾಗಿದೆ. ಇನ್ನು ಬೇರೆ ದೇಶಗಳ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇದೇ ಮೊದಲ ಬಾರಿಗೆ ಇಸ್ರೋ ಉಪಗ್ರಹ ಉಡಾವಣೆಗೆ ಉದ್ಯಮಿ ಎಲಾನ್ ಮಸ್ಕ್ ನೆರವು ಪಡೆದಿದೆ. ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ , ಇಸ್ರೋದ GSAT-N2 ಸ್ಯಾಟಲೈಟ್ ಕಮ್ಯೂನಿಕೇಶನ್ ಉಪಗ್ರಹ ಉಡಾವಣೆ ಮಾಡಿದೆ.  

ಎಲಾನ್ ಮಸ್ಕ್ ಒಡೆತದನ ಸ್ಟಾರ್‌ಲಿಂಕ್ ಫಾಲ್ಕಾನ್ 9 ರಾಕೆಟ್ ಮೂಲಕ ಉಪಗ್ರಹ ಉಡಾವಣೆ  ಮಾಡಲಾಗಿದೆ. ಫ್ಲೋರಿಡಾದ ಕೆನವರಲ್ ಸ್ಪೇಸ್ ಫೋರ್ಸ್ ಸ್ಟೇಶನ್‌ನಿಂದ ಭಾರತದ ಉಪಗ್ರಹ ಉಡಾವಣೆ ಮಾಡಲಾಗಿದೆ. ಇದು ಇಸ್ರೋ ಹಾಗೂ ಸ್ಪೇಸ್ ಎಕ್ಸ್‌ನ ಮೊದಲ ಜಂಟಿ ಉಪಗ್ರಹ ಉಡಾವಣೆಯಾಗಿದೆ. 

Tap to resize

Latest Videos

undefined

ಮಾನವ ಸಹಿತ ಚಂದ್ರಯಾನಕ್ಕೆ 1.5 ಲಕ್ಷ ಕೋಟಿ: ಇಸ್ರೋ ಅಧ್ಯಕ್ಷ ಸೋಮನಾಥ

ಏನಿದು GSAT-N2 ಉಪಗ್ರಹಣ
GSAT-N2 ಉಪಗ್ರಹವನ್ನು ಇಸ್ರೋ ಸ್ಯಾಟಲೈಟ್ ಸೆಂಟರ್ ಹಾಗೂ  ಲಿಕ್ವಿಡ್ ಪ್ರಪಲ್ಶನ್ ಸಿಸ್ಟಮ್ ಸೆಂಟರ್ ಅಭಿವೃದ್ಧಿಪಡಿಸಿದೆ. ಇದು 48 Gbps ಡೇಟಾ ಟ್ರಾನ್ಸ್‌ಮಿಶನ್ ಸಾಮರ್ಥ್ಯ ಹೊಂದಿದೆ. ಇದು ಬ್ರಾಂಡ್‌ಬ್ಯಾಂಡ್ ಕನೆಕ್ಷನ್ ಮತ್ತಷ್ಟು ವಿಸ್ತರಿಸಲಿದೆ. ದೇಶಾದ್ಯಂತ ಇನ್ ಫ್ಲೈಟ್ ಇಂಟರ್ನೆಟ್ ಸೇವೆ ಒದಗಿಸಲಿದೆ. ಹೌದು, ವಿಮಾನದಲ್ಲಿ ಪ್ರಯಾಣಿಸುವಾಗ ವೈಫೈ ಸೇರಿದಂತೆ ಇಂಟರ್ನೆಟ್  ಸಂಪರ್ಕ ಸುಲಭವಾಗಿ ಸಿಗಲಿದೆ. ಸದ್ಯ ಉಡಾವಣೆ ಮಾಡಿರುವ ಉಪಗ್ರಹ 14 ವರ್ಷ ಕಾರ್ಯನಿರ್ವಹಿಸಲಿದೆ. ಉಹಗ್ರಹ ವಿವಿದ ಸ್ಪಾಟ್ ಬೀಮ್ ಬಳಕೆ ಮಾಡಿದೆ. ಇರಿಂದ ಬ್ರಾಂಡ್‌ಬ್ಯಾಂಡೇ ಸೇವೆಗಳು ಪರಿಣಾಮಕಾರಿಯಾಗಿ ಲಭಿಸಲಿದೆ ಎಂದು ಇಸ್ರೋ ಹೇಳಿದೆ.   

ಇತ್ತ ಇಸ್ರೋ ಈಗಾಲೇ ಅನಲಾಗ್ ಬಾಹ್ಯಾಕಾಶ ಕಾರ್ಯಾಚರಣೆ ಮಿಷನ್ ಆರಂಭಿಸಿದೆ. ಲಡಾಖ್‌ನ ಲೇಹ್‌ನಲ್ಲಿ ಈ ಕಾರ್ಯಾಚರಣೆ ಆರಂಭಗೊಂಡಿದೆ. ಇದಕ್ಕಾಗಿ ಹ್ಯಾಬ್‌-1 ಎಂಬ ಕಾಂಪ್ಯಾಕ್ಟ್‌  ಸಾಧನ ಇರಿಸಲಾಗಿದೆ. ಇದರ ಪ್ರಮುಖ ಉದ್ದೇಶ ಅಂತರಗ್ರಹಗಳಳ ಆವಾಸಸ್ಥಾನದಲ್ಲಿನ ಜೀವನವನ್ನು ಅಧ್ಯಯನ ಮಾಡಲಿದೆ. ಪ್ರಮುಖವಾಗಿ ಭವಿಷ್ಯದಲ್ಲಿ ಗಗನಯಾತ್ರಿಗಳು ಬಾಹ್ಯಕಾಶದಲ್ಲಿ ಅಧ್ಯಯನ, ಕಾರ್ಯಾಚರಣೆ ನಡೆಸುವಾಗ ಎದುರಿಸಬಹುದಾದ ಸವಾಲುಗಳನ್ನುಅರ್ಥಮಾಡಿಕೊಳ್ಳಲಿದೆ. ಜೊತೆಗೆ ಈ ಸವಾಲುಗಳಿಗೆ ಸಹಾಯ ಮಾಡಲಿದೆ. ಭೂಮಿಯ ಆಚೆಗಿರುವ ಸ್ಥಿತಿಗಳನ್ನು ಅಧ್ಯಯನ ಮಾಡಲಾಗುತ್ತದೆ.  

 

Liftoff of GSAT-N2! pic.twitter.com/4JqOrQINzE

— SpaceX (@SpaceX)

 

ವಿಶೇಷ ಅಂದರೆ ಈ ಮಿಷನ್ ಲಡಾಖ್‌ನಲ್ಲಿ ನಡೆಸಲಾಗುತ್ತಿದೆ. ಪ್ರಮುಖವಾಗಿ ಲಡಾಖ್ ಚಂದ್ರನ ಭೂದೃಶ್ಯಗಳನ್ನು ಹೋಲುವ ವಿಶಿಷ್ಟ ಭೌಗೋಳಿಕ ಗುಣಲಕ್ಷಣ ಹೊಂದಿರುವ ಕಾರಣ ಇಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಅಲ್ಲಿನ ಶೀತ, ಶುಷ್ಕ ಪರಿಸ್ಥಿತಿಗಳು ಮತ್ತು ಹೆಚ್ಚಿನ ಎತ್ತರವು ದೀರ್ಘಾವಧಿಯ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅಗತ್ಯವಾದ ತಂತ್ರಜ್ಞಾನ ಮತ್ತು ತಂತ್ರಗಳನ್ನು ಪರೀಕ್ಷಿಸಲು ಸೂಕ್ತ ವಾತಾವರಣವನ್ನು ಒದಗಿಸುತ್ತದೆ.
 

click me!