ಬಾಹ್ಯಾಕಾಶ ನಿಲ್ದಾಣದಿಂದಲೇ ಸುನೀತಾ ವಿಲಿಯಮ್ಸ್ ತಮ್ಮ ಆರೋಗ್ಯದ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದ್ದಾರೆ. ತಮ್ಮ ದೈಹಿಕ ರೂಪದಲ್ಲಿನ ಬದಲಾವಣೆಗಳನ್ನು ವಿವರಿಸಿದ ಅವರು, ಕಠಿಣ ವ್ಯಾಯಾಮದಿಂದಾಗಿ ತಮ್ಮ ದೇಹದಲ್ಲಿ ಕೆಲವು ಬದಲಾವಣೆಗಳಾಗಿವೆ ಎಂದು ಹೇಳಿದ್ದಾರೆ.
ನವದೆಹಲಿ (ನ.13): ತಮ್ಮ ಆರೋಗ್ಯದ ಬಗ್ಗೆ ಎದ್ದಿರುವ ಊಹಾಪೋಹಗಳ ಬಗ್ಗೆ ಸ್ವತಃ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಿಂದಲೇ ಮಾತನಾಡಿದ್ದಾರೆ. ಅದಲ್ಲದೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉತ್ತಮ ಸ್ಥಿತಿಯಲ್ಲಿರುವುದಾಗಿ ಭೂಮಿಯ ಮೇಲಿರುವ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ. ವೀಡಿಯೊ ಸಂದರ್ಶನವೊಂದರಲ್ಲಿ, ಬಾಹ್ಯಾಕಾಶ ನಿಲ್ದಾಣದ ಕಮಾಂಡರ್, ಅಂತಾರಾಷ್ಟ್ರೀಯ ಮಾಧ್ಯಮಗಳು ಎತ್ತಿರುವ ಕಳವಳಗಳಿಗೆ ಪ್ರತಿಕ್ರಿಯೆ ನೀಡಿದರು. ಇತ್ತೀಚಿನ ಫೋಟೋಗಳ ಆಧಾರದ ಮೇಲೆ ಸುನೀತಾ ವಿಲಿಯಮ್ಸ್ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಈ ಮಾಧ್ಯಮಗಳು ವರದಿ ಮಾಡಿದ್ದವು. ಅದೇ ರೀತಿಯಲ್ಲಿ ಅವರ ಫೋಟೋ ಕೂಡ ಬಿತ್ತರವಾಗಿದ್ದವು. ನಾನು ಬಾಹ್ಯಾಕಾಶ ನಿಲ್ದಾಣಕ್ಕೆ ಬರುವಾಗ ಇದ್ದ ತೂಕವನ್ನೇ ಈಗಲೂ ಹೊಂದಿದ್ದೇನೆ ಎಂದು ಸುನೀತಾ ವಿಲಿಯಮ್ಸ್ ವಿಶ್ವಾಸದಿಂದಲೇ ಮಾತನಾಡಿದ್ದಾರೆ. ಆ ಮೂಲಕ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನೀತಾ ವಿಲಿಯಮ್ಸ್ ಸಾಕಷ್ಟು ತೂಕ ನಷ್ಟಕ್ಕೆ ಒಳಗಾಗಿದ್ದಾರೆ ಎನ್ನುವ ಮಾತನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.
ಸ್ನಾಯು ಮತ್ತು ಮೂಳೆ ಸಾಂದ್ರತೆಯ ಮೇಲೆ ಮೈಕ್ರೊಗ್ರಾವಿಟಿಯ ಪರಿಣಾಮಗಳನ್ನು ಎದುರಿಸಲು ಗಗನಯಾತ್ರಿಗಳು ಅನುಸರಿಸುವ ಕಠಿಣ ವ್ಯಾಯಾಮದ ಕಟ್ಟುಪಾಡುಗಳಿಂದಾಗಿ ತಮ್ಮ ದೈಹಿಕ ರೂಪ ಬದಲಾಗಿದೆ. ಈ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ದಿನನಿತ್ಯದ ವ್ಯಾಯಾಮದ ದಿನಚರಿಯನ್ನು ಕೂಡ ಅವರು ವಿವರಿಸಿದರು. ಬಾಹ್ಯಾಕಾಶ ನಿಲ್ದಾಣದಲ್ಲಿ ಬೈಕ್ ಸವಾರಿ, ಟ್ರೆಡ್‌ಮಿಲ್‌ನಲ್ಲಿ ಓಡುವುದು ಹಾಗೂ ವೇಟ್‌ಲಿಫ್ಟಿಂಗ್‌ಅನ್ನು ಮಾಡುತ್ತೇನೆ. ಈ ಚಟುವಟಿಕೆಗಳ ಕಾರಣದಿಂದಾಗಿ ನನ್ನ ದೇಹದಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗಿದೆ ಎಂದಿದ್ದಾರೆ.
"ನನ್ನ ತೊಡೆಗಳು ಸ್ವಲ್ಪ ದೊಡ್ಡದಾಗಿದೆ, ನನ್ನ ಪೃಷ್ಠವು ಸ್ವಲ್ಪ ದೊಡ್ಡದಾಗಿದೆ" ಎಂದು ಅವರು ಹೇಳಿದ್ದಾರೆ. ನಿರಂತರವಾಗಿ ವೇಟ್‌ಲಿಫ್ಟಿಂಗ್ ಮಾಡುತ್ತಿದ್ದ ಕಾರಣಕ್ಕೆ ಈ ಬದಲಾವಣೆ ಆಗಿದೆ ಎಂದಿದ್ದಾರೆ.
ಬಾಹ್ಯಾಕಾಶದಲ್ಲಿ ನಿಗದಿತ ಅವಧಿಗಿಂತ ಹೆಚ್ಚಿನ ಸಮಯದ ವಾಸ್ತವ್ಯ ಜೂನ್ 6 ರಿಂದ ಆರಂಭವಾಗಿತ್ತು. ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಕೇವಲ 10 ದಿನಗಳ ಮಿಷನ್‌ಗಾಗಿ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಿಂದ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಸ್ಟಾರ್‌ಲೈನರ್‌ನೊಂದಿಗಿನ ತಾಂತ್ರಿಕ ಸಮಸ್ಯೆಗಳಿಂದಾಗಿ, ಇಷ್ಟು ದಿನಗಳ ಕಾಲ ವಿಸ್ತರಣೆಯಾಗಿದೆ. 2025ರ ಫೆಬ್ರವರಿಯಲ್ಲಿ ಸ್ಪೇಸ್ ಎಕ್ಸ್‌ನ ಕ್ರ್ಯೂ-9 ಗಗನಯಾತ್ರಿಗಳೊಂದಿಗೆ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭೂಮಿಗೆ ವಾಪಸಾಗಲಿದ್ದಾರೆ.
undefined
ಸುನೀತಾ ವಿಲಿಯಮ್ಸ್ ಹೊಸ ಫೋಟೋ ಕಂಡು ನಾಸಾ ದಿಗ್ಭ್ರಮೆ, ಸಣಕಲು ಕಡ್ಡಿಯಾದ ಗಗನಯಾತ್ರಿ!
ವಿಲಿಯಮ್ಸ್ ಪ್ರಸ್ತುತ ISS ನಲ್ಲಿ ಎಕ್ಸ್‌ಪೆಡಿಶನ್ 72 ಅನ್ನು ಮುನ್ನಡೆಸುತ್ತಿದ್ದಾರೆ. ಇದು ಅಮೇರಿಕನ್ ಮತ್ತು ರಷ್ಯಾದ ಗಗನಯಾತ್ರಿಗಳನ್ನು ಒಳಗೊಂಡಿರುವ ವೈವಿಧ್ಯಮಯ ಸಿಬ್ಬಂದಿಯನ್ನು ಮುನ್ನಡೆಸುತ್ತದೆ. ನಾಸಾ ಅಧಿಕಾರಿಗಳು ವಿಲಿಯಮ್ಸ್ ಅವರ ಹೇಳಿಕೆಗಳನ್ನು ಬೆಂಬಲಿಸಿದ್ದಾರೆ, ISS ನಲ್ಲಿನ ಎಲ್ಲಾ ಏಜೆನ್ಸಿ ಗಗನಯಾತ್ರಿಗಳು ಆರೋಗ್ಯವಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಸುನೀತಾ ವಿಲಿಯಮ್ಸ್ ಇಲ್ಲದೆ ಭೂಮಿಗೆ ವಾಪಾಸಾಗಲಿದೆ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ, ಸೀಟ್ ಕಳಚಿದ ಗಗನಯಾತ್ರಿಗಳು!
ಈ ಘಟನೆಯು ದೀರ್ಘಾವಧಿಯ ಬಾಹ್ಯಾಕಾಶ ಹಾರಾಟದ ಸವಾಲುಗಳನ್ನು ಮತ್ತು ಗಗನಯಾತ್ರಿಗಳ ಆರೋಗ್ಯದ ಬಗ್ಗೆ ನಿಖರವಾದ ವರದಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಬಾಹ್ಯಾಕಾಶ ಕಾರ್ಯಾಚರಣೆಗಳು ದೀರ್ಘ ಮತ್ತು ಸಂಕೀರ್ಣತೆಯಲ್ಲಿ ವಿಸ್ತರಿಸುವುದರಿಂದ, ಗಗನಯಾತ್ರಿ ಯೋಗಕ್ಷೇಮವನ್ನು ನಿರ್ವಹಿಸುವುದು ನಾಸಾ ಮತ್ತು ಇತರ ಬಾಹ್ಯಾಕಾಶ ಸಂಸ್ಥೆಗಳಿಗೆ ಪ್ರಮುಖ ಆದ್ಯತೆಯಾಗಿದೆ.
Stranded NASA astronaut Sunita Williams speaks out about concerns over her weight loss in space https://t.co/RImRpGJ1Fn pic.twitter.com/IswxXBM1o3
— New York Post (@nypost)