ಕಳೆದ ಅಕ್ಟೋಬರ್ 25 ರಂದು ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಬಂದಿದ್ದ ನಾಲ್ವರು ಗಗನಯಾತ್ರಿಗಳು ತುರ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಈ ಬಗ್ಗೆ ಯಾವುದೇ ರೀತಿಯ ಮಾಹಿತಿ ಹಂಚಿಕೊಳ್ಳಲು ನಾಸಾ ಸಿದ್ದವಾಗಿಲ್ಲ.
ನವದೆಹಲಿ (ನ.13): ಕಳೆದ ಅಕ್ಟೋಬರ್ 25 ರಂದು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ರೂ ಗಗನನೌಕೆ ಮೂಲಕ ಭೂಮಿಗೆ ವಾಪಾಸಾಗಿದ್ದ ನಾಲ್ವರು ಗಗನಯಾತ್ರಿಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರ ಬಗ್ಗೆ ನಾಸಾ ಈಗಲೂ ಮೌನ ತಾಳಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ನಾಸಾ, 'ನಿರೀಕ್ಷೆಯೇ ಮಾಡದ ಸಮಸ್ಯೆಗಳು' ಎದುರಾದ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದಿದೆ. ಆದರೆ, ಅವರಿಗೆ ಆಗಿದ್ದ ಸಮಸ್ಯೆ ಏನು ಅನ್ನೋದನ್ನ ವಿವರಿಸಿಲ್ಲ. ಅಕ್ಟೋಬರ್ 25 ರಂದು ಆಸ್ಪತ್ರೆಗೆ ದಾಖಲಾಗಿದ್ದ ಗಗನಯಾತ್ರಿಗಳು ಅಕ್ಟೋಬರ್ 26 ರಂದು ಡಿಸ್ಚಾರ್ಜ್ ಆಗಿದ್ದರು. ಅಕ್ಟೋಬರ್ 25 ರಂದು ಭೂಮಿಗೆ ಗಗನನೌಕೆ ಮೂಲಕ ನಾಲ್ವರು ಗಗನಯಾತ್ರಿಗಳು ವಾಪಸಾಗಿದ್ದರು. ಅಚ್ಚರಿ ಎನ್ನುವಂತೆ ಅವರನ್ನು ದಿಢೀರ್ ಆಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವಿಚಾರದ ವಿವರಗಳ ಬಗ್ಗೆ ನಾಸಾ ಮಾತ್ರ ಈಗಲೂ ಕೂಡ ಮೌನ ವಹಿಸಿದೆ.
ಗಗನಯಾತ್ರಿಗಳ ಪೈಕಿ ಒಬ್ಬ ವ್ಯಕ್ತಿಯನ್ನು ಒಂದಿಡೀ ದಿನ ಅಬ್ಸರ್ವೇಷನ್‌ನಲ್ಲಿ ಇಡಲಾಗಿತ್ತು. ಇದರ ಬೆನ್ನಲ್ಲಿಯೇ ಭೂಮಿಗೆ ವಾಪಾಸಾಗುವಾಗ ಇವರಿಗೆ ನಿಜವಾಗಲೂ ಆಗಿದ್ದೇನು ಅನ್ನೋದು ಮಾತ್ರ ಪ್ರಶ್ನಾರ್ಥಕವಾಗಿ ಉಳಿದುಕೊಂಡಿದೆ.
ನಾಸಾದ ಲೈವ್ ಬ್ರೀಫಿಂಗ್ ವೇಳೆ ಈ ಘಟನೆಯ ಬಗ್ಗೆ ಎದುರಾದ ಎಲ್ಲಾ ಪ್ರಶ್ನೆಗಳನ್ನು ನಾಸಾ ನಿರ್ಲಕ್ಷ್ಯ ಮಾಡಿದೆ. ಗಗನಯಾತ್ರಿ ಮೈಕೆಲ್ ಬಾರ್ರಟ್ ಗಗನನೌಕೆಯಲ್ಲಿ ನಾವು ತಿಳಿಯದ ಏನೋ ಒಂದು ವಿಚಾರವಾಗಿದೆ. ಏನಾಗಿರಬಹುದು ಎನ್ನುವ ಬಗ್ಗೆ ಎಲ್ಲಾ ರೀತಿಯ ಸುದ್ದಿಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಗಗನಯಾತ್ರಿಗಳ ಆಸ್ಪತ್ರೆಗೆ ದಾಖಲು ಮೆಡಿಕಲ್ ಇವೆಂಟ್ ಎಂದಿರುವ ಬಾರ್ರಟ್, ಸಮಯ ಬಂದಾಗ ಇದರ ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು ಎಂದಿದ್ದಾರೆ. ಅವರ ಈ ಮಾತು ಘಟನೆಯ ಬಗ್ಗೆ ಇನ್ನಷ್ಟು ಕುತೂಹಲ ಏರಲು ಕಾರಣವಾಗಿದೆ.
ಹದಗೆಟ್ಟ ಆರೋಗ್ಯದ ಬಗ್ಗೆ ಬಾಹ್ಯಾಕಾಶ ನಿಲ್ದಾಣದಿಂದಲೇ ಮಾತನಾಡಿದ ಸುನೀತಾ ವಿಲಿಯಮ್ಸ್
ಕೆಲವೊಂದು ಮೂಲಗಳ ಪ್ರಕಾರ ಗಗನಯಾತ್ರಿಗಳ ರಕ್ತದೊತ್ತಡ ಸಮಸ್ಯೆ ತಂದೊಡ್ಡಿತ್ತು ಎನ್ನಲಾಗಿದೆ. ದೀರ್ಘ ಅವಧಿಯ ಕಾಲ ಬಾಹ್ಯಾಕಾಶದಲ್ಲಿದ್ದು ಭೂಮಿಯ ಗುರುತ್ವಾಕರ್ಷಣೆಗೆ ಮರಳುವ ವೇಳೆ ಗಗನಯಾತ್ರಿಗಳ ಪೈಕಿ ಒಬ್ಬರಲ್ಲಿ ರಕ್ತದೊತ್ತಡ ಸಮಸ್ಯೆ ಕಾಣಿಸಿದೆ ಎಂದು ವರದಿಯಾಗಿದೆ. ಬಾಹ್ಯಾಕಾಶದಿಂದ ಭೂಮಿಗೆ ಮರಳುವ ವೇಳೆ ಗಗನಯಾತ್ರಿಗಳಿಗೆ ಈ ಸಮಸ್ಯೆಗಳು ಸಾಮಾನ್ಯವಾಗಿ ಎದುರಾಗುತ್ತದೆ. ಭೂಮಿಯ ಗುರುತ್ವಾಕರ್ಷಣೆಗೆ ಸಿಕ್ಕ ಬಳಿಕ ರಕ್ತದೊತ್ತಡ ಇಳಿಕೆ ಆಗುತ್ತದೆ. ಇದರಿಂದಾಗಿ ಅವರಲ್ಲಿ ಸುಸ್ತಾಗುವುದು, ತಲೆತಿರುಗುವಂಥ ಪರಿಸ್ಥಿತಿಗಳು ಎದುರಾಗುತ್ತದೆ.
ಸುನೀತಾ ವಿಲಿಯಮ್ಸ್ ಹೊಸ ಫೋಟೋ ಕಂಡು ನಾಸಾ ದಿಗ್ಭ್ರಮೆ, ಸಣಕಲು ಕಡ್ಡಿಯಾದ ಗಗನಯಾತ್ರಿ!
ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ 235 ದಿನಗಳ ಕಾಲ ವಾಸವಿದ್ದರು. ಬೋಯಿಂಗ್ ಸ್ಟಾರ್‌ಲೈನರ್ ಸಮಸ್ಯೆ ಹಾಗೂ ಮಿಲ್ಟನ್ ಹುರಿಕೇನ್ ಕಾರಣದಿಂದಾಗಿ ಇವರು ಭೂಮಿಗೆ ವಾಪಾಸಾಗುವುದು ತಡವಾಗಿತ್ತು. ಇದರಿಂದ ಮೈಕ್ರೋಗ್ರ್ಯಾವಿಟಿಯಲ್ಲಿಯೇ ದೀರ್ಘಕಾಲ ಉಳಿದಿದ್ದರು.