ಚಿತ್ರರಂಗದಲ್ಲಿ ಒಂದು ಜೋಕ್ ಗುಟ್ಟಾಗಿ ಚಾಲ್ತಿಯಲ್ಲಿದೆ. ಯಾವುದು ಆ ಜೋಕ್? ರಿಲೀಸ್ ಸಿನಿಮಾಗಲ್ಲಿ ಗೆದ್ದಿದ್ದು ಎಷ್ಟು?
ಚಿತ್ರರಂಗದಲ್ಲಿ ಒಂದು ಜೋಕ್ ಗುಟ್ಟಾಗಿ ಚಾಲ್ತಿಯಲ್ಲಿದೆ:
ಚಿತ್ರೋದ್ಯಮವನ್ನು ಹೊಡೆದು ಮಲಗಿಸಿದ್ದು ಕೊರೋನಾ ಅಲ್ಲ, ಕೆ ಅಕ್ಷರದಿಂದ ಆರಂಭವಾಗುವ ನಾಲ್ಕು ಸಿನಿಮಾಗಳು! ಇವುಗಳ ಪೈಕಿ ಮೂರು ಗೆದ್ದು ಗಾಯ ಮಾಡಿದರೆ, ಒಂದು ಸೋತು ಘಾಸಿ ಮಾಡಿತು.
undefined
ಇದು ಪೂರ್ತಿ ನಿಜವಲ್ಲದೇ ಹೋದರೂ ಪೂರ್ತಿ ಸುಳ್ಳಲ್ಲ. ಎಲ್ಲಾ ಚಿತ್ರರಂಗಗಳಂತೆ ಕನ್ನಡ ಚಿತ್ರರಂಗವೂ ಐದು ವರುಷಕ್ಕೊಂದು ಮಾದರಿಯನ್ನು ಸೃಷ್ಟಿಸಿಕೊಳ್ಳುತ್ತದೆ. ಆ ಮಾದರಿ ಚಿತ್ರದತ್ತ ಸಾಗಲು ಹವಣಿಸುತ್ತದೆ. ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಇದು ಅನೇಕ ಸಲ ಮರುಕಳಿಸಿದೆ. ನನ್ನ ಪ್ರೀತಿಯ ಹುಡುಗಿ ಚಿತ್ರದಿಂದ ಹಿಡಿದು ಮುಂಗಾರು ಮಳೆಯ ತನಕವೂ ಈ ತಾತ್ವಿಕತೆ ಕೆಲಸ ಮಾಡಿದೆ.
ನಂತರದ ದಿನಗಳಲ್ಲಿ ಈ ಮಾದರಿ ಬದಲಾಗುತ್ತಾ ಹೋಯಿತು. ಕನ್ನಡ ಚಿತ್ರರಂಗ ತನ್ನ ತದ್ರೂಪವನ್ನು ತೆಲುಗು ಚಿತ್ರಗಳಲ್ಲಿ ಕಾಣತೊಡಗಿತು. ಅದೇ ಹೊತ್ತಿಗೆ ಬಂದ ಬಾಹುಬಲಿಯ ದಂಡಯಾತ್ರೆ ಇಡೀ ದೇಶವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಕನ್ನಡದ ಚಿತ್ರಗಳೂ ದೇಶಾದ್ಯಂತ ಹಬ್ಬಿದವು. ಕ್ರಮೇಣ ದೇಶಾದ್ಯಂತ ಹಬ್ಬುವುದನ್ನೇ ಉದ್ದೇಶವಾಗಿಟ್ಟುಕೊಂಡು ಹಲವು ಸಿನಿಮಾಗಳು ಅಶ್ವಮೇಧಯಾಗಕ್ಕೆ ಸಜ್ಜಾಗಿ ನಿಂತವು.
ಅತ್ತೆ-ಸೊಸೆ ಜಗಳ ಮಾಡ್ಬೇಕು ಇಲ್ಲ ಅಂದ್ರೆ ಮಜಾ ಇಲ್ಲ; ಆಲಿಯಾ ಭಟ್ ಮಾತಿಗೆ ನೆಟ್ಟಿಗರ ಕೊಂಕು
ಅಲ್ಲಿಗೆ ಸೌಂಡ್ ಮಾಡುವ ಸಿನಿಮಾಗಳಿಗೆ ಮಾತ್ರ ಪ್ರೇಕ್ಷಕ ಬರುತ್ತಾನೆ ಎಂದು ನಂಬಲಾಯಿತು. ಹೀಗಾಗಿ ಸದಭಿರುಚಿಯ, ಸಣ್ಣ ಬಜೆಟ್ಟಿನ, ಹೊಸತನದ ಸಿನಿಮಾ ಮಾಡಿದವರು ಕೂಡ ಸೌಂಡ್ ಮಾಡಲು ಶುರುಮಾಡಬೇಕಾಯಿತು. ಇದು ಎಷ್ಟರ ಮಟ್ಟಿಗೆ ಮುಂದುವರಿಯಿತು ಅಂದರೆ ಪ್ರೇಕ್ಷಕನಿಗೆ ಬರೀ ಶಬ್ದ ಮಾತ್ರ ಕೇಳತೊಡಗಿತು.
***
ಇಂಥ ವಿಚಿತ್ರವಾದ ಸಂದಿಗ್ಧ ಎದುರಿಸುತ್ತಿರುವ ಚಿತ್ರರಂಗದ ಕಳೆದ ವರುಷದ ಸಾಧನೆಯನ್ನು ವಿಶ್ಲೇಷಣೆ ಮಾಡುವುದು ಕಷ್ಟ. ಎಲ್ಲವೂ ಅನುಕೂಲಕರ ಆಗಿರುವ ಮಾರುಕಟ್ಟೆಯಲ್ಲಿ ವ್ಯಾಪಾರದಲ್ಲಿ ತೊಡಗುವುದು ಸುಲಭ. ಇವತ್ತು ಥೇಟರುಗಳಿವೆ, ಸಿನಿಮಾಗಳಿಲ್ಲ. ಸಿನಿಮಾಗಳಿವೆ, ಪ್ರೇಕ್ಷಕರಿಲ್ಲ. ಓಟಿಟಿಗಳಿವೆ, ಕನ್ನಡ ಸಿನಿಮಾ ಕೊಳ್ಳುವುದಿಲ್ಲ. ಅದ್ಭುತ ತಂತ್ರಜ್ಞರಿದ್ದಾರೆ, ಸಿನಿಮಾ ಮಾಡುವುದು ಹೇಗೆಂದು ಗೊತ್ತಿದೆ. ಅಪ್ರತಿಮ ನಟರಿದ್ದಾರೆ, ಅದ್ಭುತವಾಗಿ ನಟಿಸುತ್ತಾರೆ, ಅಪಾರ ಶ್ರೀಮಂತರಿದ್ದಾರೆ, ಕೇಳಿದಷ್ಟು ಹಣ ಹೂಡುತ್ತಾರೆ. ಆದರೆ ಇವರೊಬ್ಬರಿಗೂ ಪ್ರೇಕ್ಷಕರನ್ನು ಕರೆತರುವುದು ಹೇಗೆಂದು ಗೊತ್ತಿಲ್ಲ. ನಿರ್ದೇಶಕ ನಂಬುವುದು ನಟನನ್ನು, ನಿರ್ಮಾಪಕ ನಂಬುವುದು ನಿರ್ದೇಶಕ ಮತ್ತು ನಟನನ್ನು. ನಟ ನಂಬುವುದು ಅದೃಷ್ಟವನ್ನು!
ಈ ಅದೃಷ್ಟ ಕೈ ಕೊಟ್ಟ ವರ್ಷ 2023. ಕುಳಿತು ಲೆಕ್ಕ ಹಾಕಿದಾಗ 2023ರಲ್ಲಿ 213 ಸಿನಿಮಾಗಳು ತೆರೆಕಂಡಿವೆ ಎಂಬುದು ಗೊತ್ತಾಯಿತು. ಇವುಗಳಲ್ಲಿ ಒಂದೆರಡು ಲೆಕ್ಕ ಆಚೀಚೆ ಇರಬಹುದು. ಒಂದೇ ಶೋ ಕಂಡ, ಎರಡನೇ ದಿನ ಎತ್ತಂಗಡಿ ಕಂಡ, ಮೂರನೇ ದಿನ ನಾಪತ್ತೆಯಾದ, ಒಂದೇ ಒಂದು ಚಿತ್ರಮಂದಿರದಲ್ಲಿ ನಾಮ್‌ಕೇವಾಸ್ತೇ ತೆರೆಕಂಡ ಸಿನಿಮಾಗಳೂ ಇವುಗಳಲ್ಲಿ ಸೇರಿವೆ.
ತೆಲುಗು ಬರಲ್ಲ ಅಂತ ಅತ್ತೆ-ಮಾವ ಒತ್ತಾಯ ಹಾಕಿಲ್ಲ: ಉಪಾಸನಾ ಕೊನಿಡೆಲಾ
ದೀಪಾವಳಿ ವಿಶೇಷಾಂಕಗಳಲ್ಲಿ ಜ್ಯೋತಿಷಿಗಳು ಹೇಳುವ ವರ್ಷಫಲದ ಧಾಟಿಯಲ್ಲಿ ಹೇಳುವುದಾದರೆ, ಮೊದಲನೇ ತಿಂಗಳು ಯಾವ ರಾಶಿಯವರಿಗೂ ಅಷ್ಟೇನೂ ಅನುಕೂಲಕರ ಅಲ್ಲ. ಹಾಕಿದ ದುಡ್ಡು ಕೈ ಬಿಟ್ಟದ್ದೇ ಬಂತು. ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಗೌರವದ ರೂಪದಲ್ಲಾಗಲೀ ಧನದ ರೂಪದಲ್ಲಾಗಲೀ ಬರಲಿಲ್ಲ.
ಫೆಬ್ರವರಿ ತಿಂಗಳಲ್ಲಿ ಹೊಂದಿಸಿ ಬರೆಯಲು ಯತ್ನಿಸಿದರೂ ಫಲಪ್ರದವಾಗಲಿಲ್ಲ. ಜನ್ಮರಾಶಿಯಲ್ಲಿ ಪರಭಾಷಾ ಗ್ರಹಗಳು ಕೂತಿದ್ದರಿಂದ ಇಲ್ಲಿಗೆ ಬರಬೇಕಾದದ್ದು ಅಲ್ಲಿಗೇ ಹೋಯಿತು. ಆದರೆ ಎರಡೇ ತಿಂಗಳಲ್ಲಿ 45 ಸಿನಿಮಾಗಳು ತೆರೆಕಂಡು ಅತಿವೃಷ್ಟಿಯಾಯಿತು. ಮಾರ್ಚ್ ತಿಂಗಳು ಚಿತ್ರರಂಗವನ್ನೇ ಕಬ್ಜಾ ಮಾಡಿಕೊಂಡಿತು. ಏಪ್ರಿಲ್ ತಿಂಗಳಲ್ಲಿ ಶಿವಾಜಿ ಸುರತ್ಕಲ್ ಗೆಲುವಿನ ನಿಟ್ಟುಸಿರು ಬಿಟ್ಟಿತು. ಮೇ ತಿಂಗಳ ಹೊತ್ತಿಗೆ ಸೂರ್ಯ ನೆತ್ತಿಯ ಮೇಲೆ ಬಂದಿದ್ದರಿಂದ ಡೇರ್ ಡೆವಿಲ್ ಮುಸ್ತಾಫನಿಗೆ ಒಂಚೂರು ಬಿಸಿಲು ಬಿತ್ತು. ಜೂನ್ ತಿಂಗಳಲ್ಲಿ ಪಿಂಕಿ ಎಲ್ಲಿ ಹೆಸರು ಮಾಡಿತು. ಜುಲೈಯಲ್ಲಿ ಹಾಸ್ಟೆಲ್ ಹುಡುಗರು ರಾರಾಜಿಸಿದರು. ಆಚಾರ್ ಆ್ಯಂಡ್ ಕೋ ವ್ಯಾಪಾರ ಕಂಡಿತು. ಕೌಸಲ್ಯ ಸುಪ್ರಜಾ ರಾಮದ ಸುಪ್ರಭಾತ ಕೆಲವರನ್ನು ಎಬ್ಬಿಸಿತು. ನಂತರ ಕ್ಷೇತ್ರಪತಿ ಕ್ಷೇತ್ರ ರಕ್ಷಣೆಗೆ ಸಿದ್ಧನಾದ.
ಟೋಬಿ ಜೋಬು ತುಂಬಿಸಿಕೊಳ್ಳಲಿಲ್ಲ. ಸಪ್ತಸಾಗರದಾಚೆ ಎಲ್ಲೋ ಮೊದಲ ಭಾಗ ಸಾಧಾರಣ, ಎರಡನೆಯ ಬದಿ ಅತ್ಯುತ್ತಮ ಅಂತ ಪ್ರೇಕ್ಷಕರು ಮಾತಾಡಿಕೊಂಡರು. ಟಗರು ಪಲ್ಯ ಗೆಲುವಿನ ರುಚಿ ಕಂಡಿತು. ಸ್ವಾತಿ ಮುತ್ತಿನ ಮಳೆ ನಾಕು ಹನಿ ಸುರಿಸಿತು. ಗರಡಿ ಗಡಿದಾಟುವ ಸೂಚನೆ ತೋರಿತು. ಘೋಸ್ಟ್ ಆ್ಯವರೇಜ್ ಗೆಲುವು ಅನ್ನಿಸಿಕೊಂಡಿತು.
213ರಲ್ಲಿ ಹೊಸಬರದ್ದೇ 175, ಸ್ಟಾರ್ ಸಿನಿಮಾ ಕಡಿಮೆ
ಬಿಡುಗಡೆಯಾದ 213 ಚಿತ್ರಗಳ ಪೈಕಿ 175 ಹೊಸಬರ ಚಿತ್ರಗಳು. ಸ್ಟಾರ್‌ಗಳ ಸಿನಿಮಾ ಬಹಳ ಕಡಿಮೆ. ಯಶ್, ಕಿಚ್ಚ ಸುದೀಪ್, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ದುನಿಯಾ ವಿಜಯ್ ಸಿನಿಮಾ ಬರಲಿಲ್ಲ. ಉಪೇಂದ್ರ 1, ರಕ್ಷಿತ್ ಶೆಟ್ಟಿ 2, ಗಣೇಶ್ 1, ಧನಂಜಯ್ 1 ಸಿನಿಮಾದಲ್ಲಿ ವರ್ಷ ಮುಗಿಸಿದರು. ‘ಕಾಟೇರ’ ಸೇರಿದರೆ ದರ್ಶನ್ ಲೆಕ್ಕಕ್ಕೆ 2 ಸಿನಿಮಾ.
ಕನ್ನಡ ಡಬ್ಬಿಂಗ್‌ನಿಂದ ಪರಭಾಷೆ ಸಿನಿಮಾಗಳ ಅಂದಾಜು ಗಳಿಕೆ
ಈ ವರ್ಷ ಪರಭಾಷೆ ಸಿನಿಮಾಗಳ ಅಬ್ಬರ ಜೋರಾಗಿಯೇ ಇತ್ತು. ಮೂಲ ಭಾಷೆಯಲ್ಲಿ ಉತ್ತಮ ಗಳಿಕೆ ಕಂಡ ಸಿನಿಮಾಗಳು ಕನ್ನಡ ಡಬ್ಬಿಂಗ್‌ನಲ್ಲಿಯೂ ಗಮನಾರ್ಹ ಗಳಿಕೆ ಮಾಡಿದವು. ಅಂದಾಜು ಒಟ್ಟು ರೂ.15 ಕೋಟಿ ವ್ಯವಹಾರ ಮಾಡಿದೆ ಎಂದು ಲೆಕ್ಕ ಹೇಳುತ್ತವೆ. ಅಂದಾಜು ವಹಿವಾಟು ಲೆಕ್ಕ ಹೀಗಿದೆ-
1. ಪೊನ್ನಿಯಿನ್ ಸೆಲ್ವನ್ 2 - ರೂ.60 ಲಕ್ಷ
2. ಲಿಯೋ - ರೂ.1.25 ಲಕ್ಷ
3. ಜೈಲರ್ - ರೂ.6 ಕೋಟಿ
4. ಅನಿಮಲ್ - ರೂ.50 ಲಕ್ಷ
5. ಆದಿಪುರುಷ - ರೂ. 2.5 ಕೋಟಿ
6. ಸಲಾರ್ - ರೂ. 5 ಕೋಟಿ
ರೂ.400+ ಕೋಟಿಯ ಚಿತ್ರರಂಗ
ಈ ವರ್ಷ ಬಿಡುಗಡೆಯಾಗಿದ್ದು 215 ಸಿನಿಮಾಗಳು. ಅದರಲ್ಲಿ ಗೆದ್ದಿದೆ ಅಥವಾ ಹಣ ಗಳಿಸಿದೆ ಎಂದು ಹೇಳಬಹುದಾದ ಸಿನಿಮಾಗಳ ಸಂಖ್ಯೆ ಸುಮಾರು 10ರಿಂದ 15. ಮೂಲಗಳ ಪ್ರಕಾರ ಈ ವರ್ಷದ ಅಂದಾಜು ಹೂಡಿಕೆ ರೂ.400ರಿಂದ 500 ಕೋಟಿ. ಅದರಲ್ಲಿ ದೊಡ್ಡ ಬಜೆಟ್ ಅನ್ನಿಸಿಕೊಂಡಿದ್ದು ‘ಕಬ್ಜ’. ‘ಸಪ್ತ ಸಾಗರದಾಚೆ ಎಲ್ಲೋ’ ಎರಡೂ ಭಾಗಕ್ಕೆ ಅಂದಾಜು 10 ರಿಂದ 15 ಕೋಟಿ ಬಜೆಟ್ ಆಗಿರಬಹುದು. ಉಳಿದಂತೆ ದೊಡ್ಡ ಬಜೆಟ್ ಸಿನಿಮಾ ಬಹಳ ಕಡಿಮೆ. ಹಾಗಾಗಿ ಈ ವರ್ಷದ ಬಜೆಟ್‌ನಲ್ಲಿ ಅರ್ಧಕ್ಕರ್ಧ ವಾಪಸ್ ಬಂದಿರುವುದೂ ಅನುಮಾನವೇ.
ಎಷ್ಟು ಕಳಪೆ ಕೊಟ್ಟರೂ ತಲೆ ಕೆಡಿಸಿಕೊಳ್ಳಬೇಡ: ಸಂಗೀತಾ ಪ್ರಶ್ನೆಗಳಿಗೆ ಅತ್ತಿಗೆ ಖಡಕ್ ಉತ್ತರ, ವಿನಯ್ ಮೌನ!
ವಿರಾಟಪುರ ವಿರಾಗಿಯ ಮಾದರಿ
ಈ ವರ್ಷ ತನ್ನ ವಿಶಿಷ್ಟ ಮಾರ್ಕೆಟಿಂಗ್‌ನಿಂದ ಗೆದ್ದಿದ್ದು ಬಿ.ಎಸ್. ಲಿಂಗದೇವರು ನಿರ್ದೇಶನದ ‘ವಿರಾಟಪುರದ ವಿರಾಗಿ’ ಸಿನಿಮಾ. ಹಾನಗಲ್ ಕುಮಾರ ಸ್ವಾಮೀಜಿಗಳ ಜೀವನ ಆಧರಿತ ಸಿನಿಮಾದ 75000 ಟಿಕೆಟ್‌ಗಳು ಬಿಡುಗಡೆ ಮುನ್ನವೇ ಮಾರಾಟವಾಗಿತ್ತು. ಈ ಸಿನಿಮಾ 160 ಹೌಸ್‌ಫುಲ್ ಪ್ರೀಮಿಯರ್ ಪ್ರದರ್ಶನ ಕಂಡಿತ್ತು. ಸಿನಿಮಾ ಬಿಡುಗಡೆಗೆ ಮೊದಲು ಆರು ಜಿಲ್ಲೆಗಳಿಂದ ಹೊರಟ ರಥ ಯಾತ್ರೆ ಗದಗದಲ್ಲಿ ಸಮಾರೋಪ ಕಂಡಿತ್ತು. ಆ ಮೂಲಕ ವಿಶಿಷ್ಟ ಪ್ರಚಾರ ನಡೆಸಿತ್ತು ಲಿಂಗದೇವರು ತಂಡ. ಅದರಿಂದ ಎಲ್ಲಾ ಕಡೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಮತ್ತು ಉತ್ತಮ ಗಳಿಕೆ ಮಾಡಿತು.