ಸಿನಿಮಾ ಒಪ್ಪಿಕೊಳ್ಳದ್ದಕ್ಕೆ ಕಾರಣ ಕೊಟ್ಟ ಬಿಗ್​ಬಾಸ್​ ನಮ್ರತಾ: ಇದನ್ನು ನಂಬಬೇಕಾ ಕೇಳಿದ ನೆಟ್ಟಿಗರು!

Published : Nov 19, 2024, 06:54 PM IST
ಸಿನಿಮಾ ಒಪ್ಪಿಕೊಳ್ಳದ್ದಕ್ಕೆ ಕಾರಣ ಕೊಟ್ಟ ಬಿಗ್​ಬಾಸ್​ ನಮ್ರತಾ: ಇದನ್ನು ನಂಬಬೇಕಾ ಕೇಳಿದ ನೆಟ್ಟಿಗರು!

ಸಾರಾಂಶ

ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ ಇದುವರೆಗೆ ಸಿನಿಮಾ ಯಾಕೆ ಮಾಡಿಲ್ಲ ಎಂದು ಕಾರಣ ಕೊಟ್ಟಿದ್ದಾರೆ. ಆದರೆ ಟ್ರೋಲಿಗರು ಬಿಡಬೇಕಲ್ಲಾ?  

ನಟಿ ನಮ್ರತಾ ಗೌಡ ಹೆಸರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. ಅದರಲ್ಲಿಯೂ ಬಿಗ್​ಬಾಸ್​ ವೀಕ್ಷಕರಿಗಂತೂ ತುಂಬಾ ಹತ್ತಿರವಾಗಿದ್ದಾರೆ ನಟಿ. ಬಾಲನಟಿಯಾಗಿ ಕನ್ನಡ ಸಿನಿಮಾಗಳಲ್ಲಿ ಎಂಟ್ರಿ ಕೊಟ್ಟಿದ್ದ ನಮ್ರತಾಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು,  ಸೀರಿಯಲ್​ಗಳು. ಅದರಲ್ಲಿಯೂ ನಾಗಿಣಿ ಸೀರಿಯಲ್​ ಅವರಿಗೆ ದೊಡ್ಡ ಖ್ಯಾತಿಯನ್ನೇ ಕೊಟ್ಟಿತು. ಅದಕ್ಕಿಂತ ಅವರ ಜೀವನದಲ್ಲಿ ದೊಡ್ಡ ಬ್ರೇಕ್​ ಸಿಕ್ಕಿದ್ದು,  ಬಿಗ್‌ ಬಾಸ್‌ ಕನ್ನಡ ಸೀಸನ್‌ 10. ಅಲ್ಲಿಂದ ಬಂದ ಮೇಲೆ ಒಂದಷ್ಟು ಷೋಗಳಲ್ಲಿ ಅವಕಾಶ ಸಿಕ್ಕಿತು. ಜೊತೆಗೆ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಿಶನ್ ಬಿಳಗಲಿ ಜೊತೆ ಅದ್ಭುತ ಡಾನ್ಸ್​ ಮಾಡುತ್ತಲೇ ಫೇಮಸ್​ ಆಗಿದ್ದಾರೆ.
 
ಆದರೆ, ಇದರ ಬೆನ್ನಲ್ಲೇ ನಟಿಯ ವಿರುದ್ಧ ಟ್ರೋಲಿಗರು ಸಕತ್​ ಕಮೆಂಟ್​ ಮಾಡುತ್ತಲೇ ಇದ್ದು, ಈ ಬಗ್ಗೆ ನಮ್ರತಾ ಕೂಡ ಸಾಕಷ್ಟು ನೊಂದುಕೊಂಡೇ ಉತ್ತರ ಕೊಟ್ಟಿದ್ದರು. ಅದರಲ್ಲಿಯೂ ಅವರ ಬಗ್ಗೆ ಮಾತನಾಡುವವರು ಹೇಳುವುದು ಏನೆಂದರೆ,  ಬಿಗ್ ಬಾಸ್ ಶೋ ನಂತರ ಸಿಕ್ಕಾಪಟ್ಟೆ ಅವಕಾಶ ಸಿಗತ್ತೆ ಅಂತ ನಮ್ರತಾ ಅಂದುಕೊಂಡಿದ್ರೂ, ಅದು ಆಗ್ತಿಲ್ಲ. ಹೀರೊಯಿನ್​ ಆಗುವೆ ಅಂದವರು  ಕಿಶನ್ ಬಿಳಗಲಿ ಜೊತೆ ಡ್ಯಾನ್ಸ್ ಮಾಡಿ ಸುಸ್ತಾಗ್ತಿದ್ದಾರೆ ಎನ್ನುತ್ತಿದ್ದಾರೆ. ಅವರ ವಿರುದ್ಧ ಇನ್ನಷ್ಟು ಕಮೆಂಟ್​ ಬರಲು ಕಾರಣ, ಅವರು  ಕೊಡಗಿನಲ್ಲಿ ಬಿಕಿನಿ ಡ್ರೆಸ್ ಹಾಕಿ ಅದನ್ನು ಬಾಲಿಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡದ್ದು. ಈಗಲೂ ಅದೇ ಪ್ರಶ್ನೆಯೊಂದು ಅವರಿಗೆ ಎದುರಾಗಿತ್ತು. ಸಿನಿಮಾದಲ್ಲಿ ನಟಿಸಲು ಯಾಕೆ ಒಪ್ಪಿಕೊಂಡಿಲ್ಲ ಎನ್ನುವ ಪ್ರಶ್ನೆ.

ಎಂಟು ಮದುವೆಯಾದ ಕಿರುತೆರೆ ಅಣ್ಣಯ್ಯ ನಟಿ ನಿಶಾ ರವಿಕೃಷ್ಣನ್​! ಈಕೆಯ ಸ್ಟೋರಿ ಕೇಳಿ...

ಆ ಪ್ರಶ್ನೆಗೆ ಉತ್ತರಿಸಿದ ನಮ್ರತಾ ಅವರು, ನಾನು ಬೇಕಂತಲೇ ಸಿನಿಮಾಕ್ಕೆ ಒಪ್ಪಿಕೊಳ್ತಿಲ್ಲ. ಯಾಕೆಂದ್ರೆ ನನಗೂ ಸಾಮಾನ್ಯ ಜನರ ಹಾಗೆ ತಿಂಗಳಿಗೆ ಬಾಡಿಗೆ ಕಟ್ಟಬೇಕು, ಇಐಎಂ ಕಟ್ಟಬೇಕು ಹೀಗೆ ತುಂಬಾ ಕಮಿಟ್​ಮೆಂಟ್ಸ್​ ಇವೆ. ಆದ್ದರಿಂದ ತಿಂಗಳಿಗೆ ಸಂಬಳದ ರೂಪದಲ್ಲಿ ಬರುತ್ತಿದ್ದರೆ ಚೆನ್ನಾಗಿರತ್ತೆ. ಅದು ಸೀರಿಯಲ್​ಗಳಿಂದ ಮಾತ್ರ ಸಾಧ್ಯ. ಧಾರಾವಾಹಿಗಳಲ್ಲಿ ತಿಂಗಳಿಗೆ ಪೇಮೆಂಟ್​ ಬರುತ್ತೆ. ಆದ್ದರಿಂದ ಸೀರಿಯಲ್​ ಸೇಫ್​ ಎಂದು ಹೇಳಿದ್ದಾರೆ. ಇದೇ ವೇಳೆ ಸಿನಿಮಾದಲ್ಲಿ ಹೇಗೆ ಪೇಮೆಂಟ್​ ಎಂದು ನನಗೆ ಗೊತ್ತಿಲ್ಲ. ಆದರೆ ಸೀರಿಯಲ್​ ಒಪ್ಪಿಕೊಂಡರೆ ತಿಂಗಳು ತಿಂಗಳು ದುಡ್ಡು ಬರುತ್ತದೆ. ಅದಕ್ಕಾಗಿ ಸಿನಿಮಾಕ್ಕೆ ಹೋಗಿಲ್ಲ ಎಂದು ಹೇಳಿದ್ದಾರೆ. 

ಧಾರಾವಾಹಿ ಎಂದರೆ ಗವರ್ನ್​ಮೆಂಟ್​ ಜಾಬ್​ ಥರ. ಎಷ್ಟು ದಿನ ಆ್ಯಕ್ಟ್​ ಮಾಡ್ತಿವೋ ಅಷ್ಟು ಸಂಬಳ ಪ್ರತಿ ತಿಂಗಳು ಕೊಡ್ತಾರೆ. ಇಷ್ಟು ವರ್ಷ ಅದೇ ಅಭ್ಯಾಸ ಆಗಿ ಹೋಗಿದೆ ನನಗೆ. ಯಾವ್ಯಾವಾಗಲೋ ಬರುವ ದುಡ್ಡಿಗಿಂದ ಪ್ರತಿತಿಂಗಳೂ ದುಡ್ಡು ಬೇಕು. ಇದರಿಂದ ನಾನು ಉಳಿತಾಯ ಕೂಡ ಪ್ರತಿ ತಿಂಗಳು ಮಾಡಲು ಸಾಧ್ಯವಾಗುತ್ತದೆ. ಸೀರಿಯಲ್​ ಸೇಫ್​ ಮಾತ್ರವಲ್ಲದೇ ನೇಮ್​, ಫೇಮ್​ ಎಲ್ಲಾ ಕೊಡುತ್ತದೆ ಎಂದಿದ್ದಾರೆ. ಆದರೆ ಇಲ್ಲಿಯೂ ನಟಿಯನ್ನು ಕಮೆಂಟಿಗರು ಬಿಟ್ಟಿಲ್ಲ. ಸಿನಿಮಾದಲ್ಲಿ ಹೇಗೆ ಎಂದು ಗೊತ್ತಿಲ್ಲ ಎಂದ ಮೇಲೆ ಅದರ ಬಗ್ಗೆ ಹೇಗೆ ಹೇಳುತ್ತೀರಿ ಎಂದು ನಟಿಯ ಕಾಲೆಳೆದಿರುವ ಕೆಲವು ನೆಟ್ಟಿಗರು, ಸಿನಿಮಾದಲ್ಲಿ ಛಾನ್ಸ್​ ಸಿಕ್ಕಿಲ್ಲ ಎಂದು ನೇರವಾಗಿ ಹೇಳಿ, ಇಷ್ಟೆಲ್ಲಾ ಸುತ್ತಿಬಳಸಿ ಹೇಳುವುದು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಬಿಗ್​ಬಾಸ್​​ಗೆ ಹೋಗುವವರು ಸಾಮಾನ್ಯವಾಗಿ ಎಲ್ಲರೂ ಹೊರಗೆ ಬಂದ ಮೇಲೆ ಸಿನಿಮಾದಲ್ಲಿ ಛಾನ್ಸ್ ಸಿಗುತ್ತೆ ಎನ್ನೋ ಆಸೆಯಲ್ಲೇ ಇರ್ತಾರೆ. ಕೆಲವರಿಗೆ ಅದು ಸಿಗುತ್ತೆ, ನಿಮ್ಗೆ ಸಿಕ್ಕಿಲ್ಲ ಅಷ್ಟೆ. ಇದೆಲ್ಲಾ ನೆಪಗಳು ಹೇಳಿದ್ರೆ ನಾವು ನಂಬಲ್ಲ ಬಿಡಿ ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ನಟಿ ಟ್ರೋಲಿಗರ ವಿರುದ್ಧ ಗರಂ ಆಗಿದ್ದರು. 

ಕಾಲೇಜ್​ ಫಂಕ್ಷನ್​ನಲ್ಲಿ ಟಾಪ್​ ತೆಗೆಯುತ್ತಾ ಡಾನ್ಸ್​ ಮಾಡಿದ ವಿದ್ಯಾರ್ಥಿನಿ! ವಿಡಿಯೋ ನೋಡಿ ನೆಟ್ಟಿಗರು ಗರಂ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ