ಓಂ ಸಿನಿಮಾದಲ್ಲಿ ಯುವ, ವಿನಯ್ ರಾಜ್‌ಕುಮಾರ್ ನಟಿಸಿರೋದು ನಿಜನಾ? ಏನಿದರ ಹಿಂದಿನ ಕಥೆ?

By Bhavani Bhat  |  First Published Nov 19, 2024, 7:29 PM IST

ಶಿವಣ್ಣನ ಸೂಪರ್‌ ಡೂಪರ್‌ ಹಿಟ್‌ ಚಿತ್ರ ಓಂನಲ್ಲಿ ಈ ಜನರೇಶನ್‌ ನಟರಾದ ಯುವ ರಾಜ್‌ಕುಮಾರ್ ಹಾಗೂ ವಿನಯ್‌ ರಾಜ್‌ಕುಮಾರ್ ನಟಿಸಿರೋದು ನಿಮಗೊತ್ತಾ? ಯಾವ ಪಾತ್ರದಲ್ಲಿ ಅಂತ ಗೊತ್ತಾದ್ರೆ ಅಚ್ಚರಿಗೆ ಬೀಳ್ತೀರಿ.
 


ಕೆಲ ತಿಂಗಳ ಕೆಳಗೆ ವೀಕೆಂಡ್‌ನಲ್ಲಿ ಜೀ ಕನ್ನಡ ವೇದಿಕೆ ಮೇಲೆ 'ಓಂ' ಸಿನಿಮಾದ ರೀ ಕ್ರಿಯೇಶನ್‌ ನಡೆಯಿತು. ಇದು ಯಾಕೆ ಆ ಲೆವೆಲ್‌ಗೆ ಜನರ ಗಮನ ಸೆಳೆಯಿತು ಅಂದರೆ ಓಂ ಸಿನಿಮಾಕ್ಕೆ ಇದ್ದದ್ದು ಆ ಮಟ್ಟಿನ ಜನಪ್ರಿಯತೆ. ಇದನ್ನು ಜನರೇಶನ್‌ಗಳ ಜನ ಆರಾಧಿಸ್ತಾ ಬಂದರು. ಅದನ್ನು ತಮ್ಮ ಮುಂದಿನ ಜನರೇಶನ್‌ಗೂ ದಾಟಿಸಿದರು. 1995ರ ಮೇ 19ರಂದು ಈ ಚಿತ್ರ ರೀಲೀಸ್ ಆಯಿತು. ಈ ಸಿನಿಮಾ ಈವರೆಗೆ ಸಿನಿಮಾ 550ಕ್ಕೂ ಅಧಿಕ ಬಾರಿ ರೀ-ರಿಲೀಸ್ ಆಗಿದೆ ಅನ್ನೋದೆ ಇದಕ್ಕೆ ಯಾವ ಲೆವೆಲ್‌ನ ಜನಪ್ರಿಯತೆ ಅನ್ನೋದಕ್ಕೆ ಸಾಕ್ಷಿಯ ಹಾಗಿದೆ. ಈ ಚಿತ್ರ ಬಿಡುಗಡೆ ಆಗಿ 30 ವರ್ಷ ಪೂರ್ಣಗೊಳ್ಳುತ್ತಿದೆ. ಈ ಚಿತ್ರವನ್ನು ಈಗಲೂ ನೆನಪಿಸಿಕೊಳ್ಳುವ ಕೆಲಸ ಫ್ಯಾನ್ಸ್ ಮಾಡುತ್ತಾರೆ. ಜೀ ಕನ್ನಡ ವೇದಿಕೆ ಮೇಲೆ ಶಿವರಾಜ್​ಕುಮಾರ್ ಅವರು ‘ಓಂ’ ಚಿತ್ರವನ್ನು ರೀ ಕ್ರಿಯೇಟ್ ಮಾಡಿದಾಗ ಅದಕ್ಕೆ ಬಂದ ರೆಸ್ಪಾನ್ಸ್ ಅಷ್ಟಿಷ್ಟಲ್ಲ. ಸುಮಾರು ಹನ್ನೊಂದು ವಾರಗಳ ಹಿಂದಿನ ಈ ಪರ್ಫಾಮೆನ್ಸ್‌ ಅನ್ನು ಈಗಲೂ ಜನ ಮತ್ತೆ ಮತ್ತೆ ನೋಡೋದಿದೆ.  

ಅಂದಹಾಗೆ ‘ಒಂ’ ಚಿತ್ರವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದರು.ಇದರಲ್ಲಿ ಶಿವರಾಜ್​ಕುಮಾರ್ ಅವರು ಸತ್ಯ ಹೆಸರಿನ ಪಾತ್ರ ಮಾಡಿದರೆ, ಪ್ರೇಮಾ ಮಧು ಹೆಸರಿನ ಪಾತ್ರ ಮಾಡಿದ್ದರು. ಈ ಚಿತ್ರವನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದರು. 

Tap to resize

Latest Videos

undefined

ಮಧು ಬಳಿ ಬರುವ ಸತ್ಯ ಪ್ರೀತಿಸು ಎಂದು ಪೀಡಿಸುವ, ‘ನನಗೆ ನೀನು ಇಷ್ಟ ಇಲ್ಲ ಅಂದ್ರೂ ಯಾಕೆ ನನ್ನ ಪೀಡಿಸ್ತೀಯಾ’ ಎಂದು ಮಧು ಹೇಳುವ ಡೈಲಾಗ್ ಸಖತ್ ಫೇಮಸ್‌. ಇರಲಿ, ಈ ಸಿನಿಮಾದಲ್ಲಿ ಈಗ ನಾಯಕರಾಗಿ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ರಾಜ್‌ ಕುಟುಂಬದ ಯುವ ರಾಜ್‌ಕುಮಾರ್ ಹಾಗೂ ವಿನಯ್‌ ರಾಜ್‌ಕುಮಾರ್ ನಟಿಸಿದ್ದರು ಅನ್ನೋದು ನಿಮಗೊತ್ತಾ? ಈ ಸಿನಿಮಾವನ್ನು ಮತ್ತೊಮ್ಮೆ ನೋಡಿದರೆ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಂಡರು ಅನ್ನೋದನ್ನು ನೀವು ಪತ್ತೆ ಹಚ್ಚಬಹುದು. ಕ್ಲೈಮ್ಯಾಕ್ಸ್‌ ಸೀನ್‌ನಲ್ಲಿ ಕಾಣಿಸಿಕೊಳ್ಳೋ ಎರಡು ಮಕ್ಕಳು ವಿನಯ್‌ ಹಾಗೂ ಯುವ. ಆ ಕಾಲದಲ್ಲಿ ಇವರಿನ್ನೂ ಚಿಕ್ಕ ಹುಡುಗರು. ಈಗ ಸ್ಯಾಂಡಲ್‌ವುಡ್‌ನ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ನಟಿಸಿರುವುದು ಈ ಇಬ್ಬರು ಹೌದೋ ಅಲ್ಲವೋ ಎನ್ನುವ ಬಗ್ಗೆ ನೆಟ್ಟಿಗರಲ್ಲಿ ಅನುಮಾನ ಇದೆ. ಆದರೆ ಈ ಹಿಂದೆ ಶಿವಣ್ಣನೇ ಇದನ್ನು ಹೇಳಿರುವ ಕಾರಣ ಅವರೇ ಅಂತ ನಂಬಲೇ ಬೇಕು. ಅಷ್ಟೇ ಅಲ್ಲ, ಸೂಕ್ಷ್ಮವಾಗಿ ಗಮನಿಸಿದರೆ ಅವರೇ ಇವರು ಅನ್ನೋದು ಮುಖಲಕ್ಷಣ ನೋಡಿದ್ರೆ ಗೊತ್ತಾಗುತ್ತೆ. 

ರಮೇಶ್ ಅರವಿಂದ್ ಥರ ಸ್ಯಾಂಡಲ್‌ವುಡ್‌ನ ತ್ಯಾಗರಾಣಿ ಆಗ್ಬಿಟ್ರಾ ರುಕ್ಮಿಣಿ ವಸಂತ್! ಏನೀ ನೋವಿನ ಕಥೆ?
 

ಇವರಲ್ಲಿ ಯುವ ರಾಜ್‌ಕುಮಾರ್ ಸದ್ಯ ರೋಹಿತ್‌ ಪದಕಿ ನಿರ್ದೇಶನದ 'ಎಕ್ಕ' ಸಿನಿಮಾದಲ್ಲಿ ರಕ್ತಾರೋಷವಾಗಿ ಮಿಂಚಿದರೆ, ವಿನಯ್‌ ರಾಜ್‌ಕುಮಾರ್‌ 'ಸಿಟಿ ಲೈಟ್ಸ್‌' ಸಿನಿಮಾದ ನಾಯಕನಾಗಿದ್ದಾರೆ. ಇದರಲ್ಲಿ ದುನಿಯಾ ವಿಜಿ ಮಗಳು ಮೋನಿಷಾ ವಿಜಯಕುಮಾರ್‌ ನಾಯಕಿ. ಶಿವಣ್ಣ ಅವರಿಗೆ ಸದ್ಯ ಆರೋಗ್ಯ ಸಮಸ್ಯೆ ಕಾಡಿದೆ. ಅವರು ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ತೆರಳುತ್ತಿದ್ದಾರೆ. ಹೀಗಾಗಿ ಸದ್ಯ ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ. ಅವರು ವಾಪಾಸ್‌ ಬಂದಮೇಲೆ 'ಉತ್ತರಕಾಂಡ' ಸೇರಿದಂತೆ ಶಿವಣ್ಣ ನಟನೆಯ ಕೆಲವಷ್ಟು ಸಿನಿಮಾಗಳ ಚಟುವಟಿಕೆಗಳು ಗರಿಗೆದರಲಿವೆ. ಸೋ, ಶಿವಣ್ಣ ಅವರ ಆರೋಗ್ಯ ಶೀಘ್ರ ಸುಧಾರಿಸಲಿ. ಅವರು ಬಹು ಬೇಗ ಚಿಕಿತ್ಸೆ ಮುಗಿಸಿ ಬಂದು ಮತ್ತೆ ವಿವಿಧ ಸಿನಿಮಾಗಳಲ್ಲಿ ಬ್ಯುಸಿ ಆಗಲಿ ಅಂತ ಅವರ ಅಪಾರ ಫ್ಯಾನ್ ಬಳಗ ಹಾರೈಸುತ್ತಿದೆ. ಸದ್ಯ ಅವರ 'ಭೈರತಿ ರಣಗಲ್‌' ಸಿನಿಮಾ 'ಟಗರು' ಸಿನಿಮಾದ ಗಳಿಕೆ ದಾಖಲೆಗಳನ್ನೆಲ್ಲ ಮೀರಿ ಮುನ್ನುಗ್ಗುತ್ತಿರೋದು ಶಿವಣ್ಣ ಮೇಲೆ ನಿರೀಕ್ಷೆ ಹೆಚ್ಚಾಗಲು ಕಾರಣವಾಗಿದೆ.

ಮಗಳನ್ನು ಚಿತ್ರರಂಗಕ್ಕೆ ಕರ್ಕೊಂಡ್ ಬಂದೇ ಬಿಟ್ರು ನಟಿ ವಾಣಿ ಹರೀಶ್‌ಚಂದ್ರ; ಸ್ಟಾರ್‌ ನಟನ ಚಿತ್ರದಲ್ಲಿ ಕನ್ಫರ್ಮ್!
 

click me!