'ಭೈರತಿ ರಣಗಲ್' ರುಕ್ಮಿಣಿ ವಸಂತ್‌ಗೆ 3 ಸಲ ಮೋಸ; ನ್ಯಾಯ ಬೇಕು ಅಂತಿದ್ದಾರೆ ಅಭಿಮಾನಿಗಳು!

By Vaishnavi Chandrashekar  |  First Published Nov 20, 2024, 12:39 PM IST

ಯಾವ ಚಿತ್ರದಲ್ಲೂ ರುಕ್ಮಿಣಿ ಹೀರೋಗೆ ಕೈಗೆ ಸಿಗುತ್ತಿಲ್ಲ...ಬ್ರೇಕಪ್ ಆಗುತ್ತೆ ಇಲ್ಲ ಬಿಟ್ಟು ಹೋಗುತ್ತಾರೆ ಇಲ್ಲ ಅಂದ್ರೆ ಬಿಟ್ಟು ಕೊಡುತ್ತಾರೆ.........


ಕನ್ನಡದ ಹುಡುಗಿ ಕಂಗಾಲಾಗಿದೆ. ಸ್ಟಾರ್ ಸಿನಿಮಾಗೆ ನಾಯಕಿಯಾದರೂ ಕೇಕೆ ಹಾಕದಂತಾಗಿದೆ. ಪ್ರತಿಭೆ ಇದೆ ಜನ ಮೆಚ್ಚಿದ್ದಾರೆ ಅವಕಾಶವೂ ಸಿಗುತ್ತಿವೆ. ಆದರೂ ಸಂಕಟ ಕಮ್ಮಿಯಾಗುತ್ತಿಲ್ಲ...ಯಾರೀಕೆ ? ಕಣ್ಣೀರು ನಿಲ್ಲುತ್ತಿಲ್ಲವೇಕೆ ? ಒಂದು ಸೀರೆಯ ಕಥನ ಇಲ್ಲಿದೆ...

ರುಕ್ಮಿಣಿ ವಸಂತ ಕೆಲವು ವರ್ಷಗಳ ಹಿಂದೆ ಬಣ್ಣದ ಲೋಕಕ್ಕೆ ಕಾಲಿಟ್ಟ ಹುಡುಗಿ. ರಕ್ಷಿತ್ ಶೆಟ್ಟಿ ಹುಡುಕಾಡಿ ತಡಕಾಡಿ ಕರೆತಂದ ಬೆಡಗಿ. ಸಪ್ತಸಾಗರದಾಚೆ ಎಲ್ಲೋ ಸಿನಿಮಾ ನಾಯಕಿ. ಕನ್ನಡಿಗರು ನಮ್ಮ ಮಣ್ಣಿನ ಮುಖಕ್ಕೆ ತುಪ್ಪದಾರತಿ ಎತ್ತಿದರು. ಆ ಸಿನಿಮಾ ಸಪ್ತಸಾಗರ ದಾಟಿತೋ ಬಿಟ್ಟಿತೊ ಸಂಶೋಧನೆ ನಡೆಯುತ್ತಿದೆ. ಆದರೆ ಈಕೆ ಮಾತ್ರ ಗಡಿ ದಾಟಿ ಪರಭಾಷೆಯಲ್ಲೂ ಕಿರೀಟ ತೊಡಿಸಿಕೊಂಡಿದ್ದು ಸುಳ್ಳಲ್ಲ.

Tap to resize

Latest Videos

undefined

ಜಗಳದಲ್ಲಿ 'ಗುಗ್ಗು ನನ್ನ ಮಗ', 'ಸೆಡೆ' ಎಂದ ರಜತ್

'ಮನೆ ಮಗಳು ಪಕ್ಕದ ಮನೆ ಹುಡುಗಿ ಇದ್ದರೆ ಇಂಥ ಹುಡುಗಿ ಪ್ರೇಮಿಯಾಗಬೇಕು' ರುಕ್ಮಿಣಿ ಹೀಗೊಂದು ಸಂಚಲನ ಮೂಡಿಸಿದ್ದು ಸತ್ಯ. ಅಷ್ಟೊಂದು ತಾಕತ್ತು ಇವರಿಗಿದೆ ಆದರೆ ಆಮೇಲೆ ಸಿಕ್ಕಿದ್ದು ಬಘೀರ. ಹೊಂಬಾಳೆ ಹಾಗೂ ಶ್ರೀಮುರುಳಿಗಾಗಿ ಒಪ್ಪಿಕೊಂಡರು. ನಿರ್ದೇಶಕ ಡಾ.ಸೂರಿ ಅದ್ಯಾಕೊ ನಾಯಕಿಯನ್ನು ಮರೆತುಬಿಟ್ಟರು. ಬಘೀರ ಹಿಟ್ ಆಯ್ತು ರುಕ್ಮಿಣಿ ಕ್ಯಾರೆಕ್ಟರ್ ಮರೆತುಬಿಟ್ಟಿತು. ರುಕ್ಮಿಣಿ ಇನ್ ಟೆನ್‌ಶನ್. ಶಿವಣ್ಣನ ಜೊತೆ ಭೈರತಿ ರಣಗಲ್‌ಗೂ ಜಂಟಿಯಾದರು. ಇಲ್ಲೂ ಸೇಮ್ ಸೀನ್ ರಿಪೀಟ್ ಆಗಬೇಕಾ ? ಭೈರತಿ ಹಬ್ಬ ಮಾಡುತ್ತಿದೆ. ರುಕ್ಮಿಣಿ ಫ್ಯಾನ್ಸ್ ಮಾತ್ರ ಗೋಲಿ ಸೋಡಾ ಕುಡಿವಂತಾಗಿದೆ. ಕಾರಣ ಬಿಡಿಸಿ ಹೇಳಬೇಕಿಲ್ಲ. ಹೀಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಾತ್ರ ಈ ಪ್ರತಿಭಾವಂತ ಚೆಲುವೆ ಮಾಡಬೇಕಾ ಅಥವಾ ಒಳ್ಳೆ ಪಾತ್ರಕ್ಕೆ ಕಾಯಬೇಕಾ ? ಚರ್ಚೆ ತುದಿಯಲ್ಲಿ ರುಕ್ಮಿಣಿ ಒಂಟಿಯಾಗಿ ಕುಂತಿದ್ದಾರೆ. ಮುಂದೆಗೆ ಬದುಕು ? ರುಕ್ಮಿಣಿ ನಿರ್ಧರಿಸಬೇಕು.

-ಮಹೇಶ್ ದೇವಶೆಟ್ಟಿ, ಏಷ್ಯಾನೆಟ್ ಸುವರ್ಣ, ಬೆಂಗಳೂರು 

click me!