ಕಂಗನಾ 'ಎಮರ್ಜೆನ್ಸಿ'ಗೆ ಸಿಕ್ತು ಮುಕ್ತಿ; ದರ್ಶನ್ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರೀ-ರಿಲೀಸ್‌ಗೆ ಸಜ್ಜು!

By Vaishnavi Chandrashekar  |  First Published Nov 19, 2024, 3:55 PM IST

ಜನವರಿ 17ಕ್ಕೆ ವಿವಾದಿತ ‘ಎಮರ್ಜೆನ್ಸಿ’ ಸಿನಿಮಾ ತೆರೆಗೆ. ರಾಜ್ಯೋತ್ಸವ ತಿಂಗಳಲ್ಲಿ ರಾಯಣ್ಣನ ದರ್ಬಾರ್ ಮರುಪ್ರಾರಂಭ. 


ಕಂಗನಾ ‘ಎಮರ್ಜೆನ್ಸಿ’ಗೆ ಕೊನೆಗೂ ಸಿಕ್ತು ಮುಕ್ತಿ!

ಕಂಗನಾ ನಟನೆ-ನಿರ್ದೇಶನದ ‘ಎಮರ್ಜೆನ್ಸಿ’ ಸಿನಿಮಾ ಸೆನ್ಸಾರ್ ಪ್ರಾಬ್ಲಂನಿಂದ ಡಿಲೇ ಆಗಿದ್ದು ನಿಮಗೆ ಗೊತ್ತೇ ಇದೆ. ಬಿಜೆಪಿ ಸೇರಿ ಆಡಳಿತ ಪಕ್ಷದ ಎಂ.ಪಿ ಆಗಿದ್ರೂ ಕಂಗನಾ ಪಾಲಿಗೆ ತನ್ನದೇ ಸಿನಿಮಾನ ತೆರೆಗೆ ತರೋದಕ್ಕೆ ಆಗಿರಲಿಲ್ಲ. ಸೆನ್ಸಾರ್ ವಿರುದ್ದ ಕೋರ್ಟ್ ಮೆಟ್ಟಿಲು ಹತ್ತಿದ್ದ ಕಂಗನಾಗೆ ಅಲ್ಲೂ ಹಿನ್ನೆಡೆಯಾಗಿತ್ತು. ಸೋ ಕೊನೆಗೂ ಸೆನ್ಸಾರ್ ಸೂಚಿಸಿರೋ ಕಟ್ಸ್​​ಗೆಲ್ಲಾ ಒಪ್ಪಿಕೊಂಡು ಸಿನಿಮಾ ರಿಲೀಸ್ ಮಾಡೋಕೆ ಕಂಗನಾ ರೆಡಿಯಾಗಿದ್ದಾರೆ. ಇಂಧಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯ ಕಥೆ ಇರೋ ಎಮರ್ಜೆನ್ಸಿ ಸಿನಿಮಾ ಜನವರಿ 17ಕ್ಕೆ ತೆರೆಗೆ ಬರಲಿದೆ.

Tap to resize

Latest Videos

undefined

ಪಟ್ನಾದಲ್ಲಿ ಪುಷ್ಪ 2 ಟ್ರೈಲರ್​ ಲಾಂಚ್; ಶ್ರೀವಲ್ಲಿ ನೋಡಲು ಟವರ್ ಏರಿದ ಬಿಹಾರ್ ಬಾಯ್ಸ್!

ಈ ವಾರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ರೀ-ರಿಲೀಸ್ !

ದರ್ಶನ್ ನಟನೆಯ ನವಗ್ರಹ ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ ದಾಸನ ಮತ್ತೊಂದು ಸಿನಿಮಾ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಇದೇ ಶುಕ್ರವಾರ ರೀ-ರಿಲೀಸ್ ಆಗ್ತಾ ಇದೆ. ದರ್ಶನ್ ಸ್ವಾತಂತ್ರ ವೀರ ರಾಯಣ್ಣನ ಪಾತ್ರ ಮಾಡಿದ್ದ ಈ ಸಿನಿಮಾ 2012ರಲ್ಲಿ ತೆರೆಕಂಡು ಆ ವರ್ಷದ ಬಿಗ್ಗೆಸ್ಟ್ ಹಿಟ್ ಸಿನಿಮಾ ಅನ್ನಿಸಿಕೊಂಡಿತ್ತು. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬಂದಿದ್ದ ಈ ಸಿನಿಮಾದಲ್ಲಿ ಹಿರಿಯ ನಟಿ ಜಯಪ್ರಧಾ ಕಿತ್ತೂರು ಚೆನ್ನಮ್ಮನಾಗಿ ಮಿಂಚಿದ್ರೆ, ದರ್ಶನ್ ರಾಯಣ್ಣನಾಗಿ ಅಬ್ಬರಿಸಿದ್ದರು. ಇದೀಗ ಈ ಐತಿಹಾಸಿಕ ಚಿತ್ರ ನವೆಂಬರ್ 22ಕ್ಕೆ  ಮರುಬಿಡುಗಡೆ ಆಗ್ತಾ ಇದೆ. ಎಸ್.ಜಿ.ಕೆ. ಫಿಲಂಸ್ ಮೂಲಕ ಕೆ.ಬಸವರಾಜ್ ಈ ಸಿನಿಮಾ ಹೊಸ ತಂತ್ರಜ್ಞಾನದ ಸ್ಪರ್ಶ ನೀಡಿ ರಾಜ್ಯಾದ್ಯಂತ ರೀ-ರಿಲೀಸ್ ಮಾಡ್ತಾ ಇದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಾಲಾ ವಿಧ್ಯಾರ್ಥಿಗಳಿಗೆ ಚಿತ್ರಮಂದಿರ ಪ್ರವೇಶ ದರದಲ್ಲಿ ಶೇ.50ರಷ್ಟು ರಿಯಾಯತಿ ಕೂಡ ಘೋಷಿಸಿದ್ದಾರೆ. ಸೋ ಮತ್ತೊಮ್ಮೆ ರಾಯಣ್ಣನ ರಾಯಭಾರ ಬಿಗ್ ಸ್ಕ್ರೀನ್ ಮೇಲೆ ಶುರುವಾಗಲಿದೆ.

ಪವಿತ್ರಾ ಗೌಡ ಪುತ್ರಿಯ ಹೊಸ ಫೋಟೋಶೂಟ್ ವೈರಲ್

click me!