ನ್ಯಾಯವಲ್ಲ ಮದ್ವೆಗಾಗಿ ಮತಾಂತರ, ರಾತ್ರಿ ಬ್ಲೂ ಮೂನ್ ಗೋಚರ; ಅ.31ರ ಟಾಪ್ 10 ನ್ಯೂಸ್!

By Suvarna News  |  First Published Oct 31, 2020, 4:39 PM IST

ಕೇವಲ ಮದುವೆಗಾಗಿ ಆಗುವ ಮತಾಂತರ ಒಪ್ಪಲು ಸಾಧ್ಯವಿಲ್ಲ ಎಂದು  ಅಲಹಾಬಾದ್ ಹೈಕೋರ್ಟ್ ಮತ್ವದ ಆದೇಶ ನೀಡಿದೆ. ಪುಲ್ವಾಮಾ ದಾಳಿಯಲ್ಲಿ ರಾಜಕೀಯ ಹುಡುಕಿದವರಿಗೆ ಇದೀಗ ಸತ್ಯ ಅರಿವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದು ಚುನಾವಣಾ ಅಖಾಡದಿಂದೆ ಸರಿದಿದ್ದಾರೆ.  ಇಂದು ರಾತ್ರಿ ಹುಣ್ಣಿಮೆ ಚಂದ್ರ ಗೋಚರ, ಪ್ರತಿ 3 ನಿಮಿಷಕ್ಕೊಂದು ಬಲೆನೋ ಕಾರು ಮಾರಾಟ ಸೇರಿದಂತೆ ಅಕ್ಟೋಬರ್ 31ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 


ಮದುವೆಗಾಗಿ ಮತಾಂತರ ಒಪ್ಪಲು ಸಾಧ್ಯವಿಲ್ಲ; ಮಹತ್ವದ ಆದೇಶ ನೀಡಿದ ಹೈಕೋರ್ಟ್!...

Latest Videos

undefined

ದೇಶದಲ್ಲೀಗ ಮತಾಂತರ, ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದೆ ಅನ್ನೋ ಕೂಗೂ ಕೇಳಿ ಬರುತ್ತಿದೆ. ಇತ್ತೀಚೆಗೆ ಮುಸ್ಲೀಂ ಧರ್ಮಕ್ಕೆ ಮತಾಂತರವಾಗುವಂತೆ ಹಾಗೂ ವಿವಾಹವಾಗುವಂತೆ ಒತ್ತಾಯಿಸಿ ವಿದ್ಯಾರ್ಥಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಂದ ಪ್ರಕರಣ ಇನ್ನು ಮಾಸಿಲ್ಲ. ಇದರ ಬೆನ್ನಲ್ಲೇ ಅಲಹಾಬಾದ್ ಹೈಕೋರ್ಟ್ ಮತ್ವದ ಆದೇಶ ನೀಡಿದೆ.

ಪುಲ್ವಾಮಾದಲ್ಲಿ ರಾಜಕೀಯ ಹುಡುಕಿದರು, ಮೌನವಾಗಿ ಸಹಿಸಿಕೊಂಡೆ: ಭಾವುಕರಾದ ಮೋದಿ...

ಪುಲ್ವಾಮಾ ದಾಳಿ ಕುರಿತು ಸತ್ಯ ಹೊರಬಿದ್ದಿದೆ. ಪಾಕಿಸ್ತಾನವೇ ದಾಳಿ ಮಾಡಿಸಿದೆ ಅನ್ನೋದನ್ನು ಪಾಕ್ ಸಂಸತ್ತಿನಲ್ಲಿ ಸಚಿವರೇ ಪುಲ್ವಾಮಾ ದಾಳಿಯನ್ನು ಒಪ್ಪಿಕೊಂಡಿದ್ದಾರೆ.  ಪಾಕಿಸ್ತಾನ ಸತ್ಯ ಹೊರಹಾಕುತ್ತಿದ್ದಂತೆ, ಇತ್ತ ಪ್ರಧಾನಿ ಮೋದಿ ಹಲವು ವರ್ಷಗಳ ಟೀಕೆಗೆ ಉತ್ತರ ನೀಡಿದ್ದಾರೆ. 

ಕರ್ನಾಟಕ ಉತ್ತಮ ಆಳ್ವಿಕೆಯನಂ.4 ರಾಜ್ಯ, ಕೇರಳ ನಂ.1!...

ದಕ್ಷಿಣ ಭಾರತೀಯ ದೇಶದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದು, ಅತೀ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ ಕಡೆಯ ಸ್ಥಾನದಲ್ಲಿದೆ. ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ ಕೇರಳ.

ಗುಜರಾತಿನಲ್ಲಿ ಪ್ರಧಾನಿ ಮೋದಿ ಉದ್ಘಾಟನಾ ಪರ್ವ...

ತವರು ರಾಜ್ಯ ಗುಜರಾತ್‌ನಲ್ಲಿ 2 ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಏಕತಾ ಪ್ರತಿಮೆ ಸನಿಹದ 4 ಪ್ರವಾಸಿ ತಾಣಗಳನ್ನು ಉದ್ಘಾಟಿಸಿದರು.

ಈ ಐಪಿ​ಎಲ್‌ನಲ್ಲಿ 600 ರನ್ ಬಾರಿಸಿ ದಾಖಲೆ ಬರೆದ ಕೆ ಎಲ್ ರಾಹುಲ್..!...

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಕೆ ಎಲ್ ರಾಹುಲ್ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ. 

ದಪ್ಪ ಹೊಟ್ಟೆ, ಸ್ಟ್ರೆಚ್ ಮಾರ್ಕ್‌ ಎಲ್ಲವನ್ನೂ ಒಪ್ಪಿಕೊಳ್ಳುವೆ; ದರ್ಶನ್ ನಟಿ ಕನಿಕಾ!...

ಚಿತ್ರರಂಗದಿಂದ ದೂರ ಉಳಿದರೂ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಕನಿಹಾ ಮೊದಲ ಬಾರಿಗೆ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.

ನಾಮಪತ್ರ ವಾಪಸ್ ಪಡೆದು ಚುನಾವಣಾ ಅಖಾಡದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ...

ಬಿಜೆಪಿ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದು ಚುನಾವಣಾ ಅಖಾಡದಿಂದೆ ಸರಿದಿದ್ದಾರೆ. ಇದರಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಅ.31ರ ರಾತ್ರಿ ಅಪರೂಪದ ಬ್ಲೂ ಮೂನ್‌: ತಿಂಗಳಲ್ಲಿ 2 ಹುಣ್ಣಿಮೆ...

ಖಗೌಳ ಕೌತುಕಕ್ಕೆ ಸಾಕ್ಷಿಯಾಗಲಿದೆ ಅಕ್ಬೋಬರ್ 31ರ ರಾತ್ರಿ. ಒಂದೇ ತಿಂಗಳಿನಲ್ಲಿ 2 ಬಾರಿ ಹುಣ್ಣಿಮೆ ಚಂದ್ರ ಗೋಚರ. ಸುಮಾರು 2.5 ವರ್ಷಕ್ಕೊಮ್ಮೆ ಜರುಗುವ ಅಪರೂಪದ ವಿದ್ಯಾಮಾನ.

ಇಂದಿರಾ ಗಾಂಧಿಯವರ 36ನೇ ಪುಣ್ಯಸ್ಮರಣೆ: ಅಜ್ಜಿ ನೆನೆದು ರಾಹುಲ್ ಅಂತರಾಳದ ಮಾತು...

ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರ 36ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಹಲವಾರು ಗಣ್ಯರು ನಮನ ಸಲ್ಲಿಸಿದ್ದಾರೆ. ಇನ್ನು ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಧಿ ವಾದ್ರಾ ಸೇರಿದಂತೆ ಹಲವರು ದೆಹಲಿಯ ಶಕ್ತಿ ಸ್ಥಳದಲ್ಲಿರುವ ಇಂದಿರಾ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದರು. ಇನ್ನು ರಾಹುಲ್ ಗಾಂಧಿ ಅಜ್ಜಿಯನ್ನು ನೆನೆದು ತಮ್ಮ ಅಂತರಾಳದ ಮಾತನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.

ಪ್ರತಿ 3 ನಿಮಿಷಕ್ಕೊಂದು ಮಾರುತಿ ಸುಜುಕಿ ಬಲೆನೋ ಹ್ಯಾಚ್‌ಬ್ಯಾಕ್ ಕಾರು ಮಾರಾಟ!...

ಸೆಡಾನ್ ಬಲೆನೋ ಅಷ್ಟೇನೂ ಗ್ರಾಹಕರನ್ನು ಸೆಳೆಯದಿದ್ದ ಅದೇ ಬಲೆನೋ ಪ್ರಿಮೀಯಮ್ ಹ್ಯಾಚ್‌ಬ್ಯಾಕ್ ಕಾರ್ ಆಗಿ ಇದೀಗ ಹೊಸ ವಿಕ್ರಮ ಸಾಧಿಸಿದೆ. ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

click me!