ಡಾ.ರಾಜ್ ಅಗಲಿ ಇಂದಿಗೆ 15 ವರ್ಷ, RCBಗೆ ಮ್ಯೂಸಿಕ್ ಬ್ಯಾಂಡ್ ಸ್ಪರ್ಶ; ಏ.12ರ ಟಾಪ್ 10 ಸುದ್ದಿ!

By Suvarna NewsFirst Published Apr 12, 2021, 4:41 PM IST
Highlights

ವರನಟ ಡಾ.ರಾಜ್ ಅಗಲಿ ಇಂದಿಗೆ 15 ವರ್ಷ ಸಂದಿದ್ದು, ಕುಟುಂಬಸ್ಥರು, ಅಭಿಮಾನಿಗಳು ಸಮಾಧಿ ಬಳಿ ಪೂಜೆ ಸಲ್ಲಿಸಿದ್ದಾರೆ. ಬಂಗಾಳ ಹಿಂಸಾಚಾರಕ್ಕೆ ಭದ್ರತಾ ಪಡೆಗಳ ಮೇಲೆ ಹರಿಹಾಯ್ದ ಮಮತಾ ಬ್ಯಾನರ್ಜಿಗೆ CRPF ತಿರುಗೇಟು ನೀಡಿದೆ. ಬಂಧನ ವಾರೆಂಟ್ ಪಡೆದಿದ್ದ ನಟ ರಕ್ಷಿತ್ ಶೆಟ್ಟಿ ಕೋರ್ಟ್‌ಗೆ ಹಾಜರಾಗಿದ್ದಾರೆ. ಆರ್‌ಸಿಬಿ ಮ್ಯೂಸಿಕ್ ಬ್ಯಾಂಡ್ ಫೋಟೋ ವೈರಲ್, ನಿಖಿಲ್ ಕುಮಾರಸ್ವಾಮಿ ಮತ್ತೆ ಟ್ರೋಲ್ ಸೇರಿದಂತೆ ಏಪ್ರಿಲ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಮಮತಾ ಬ್ಯಾನರ್ಜಿ ಆರೋಪಕ್ಕೆ ಚುನಾವಣಾ ಆಯೋಗದ ಬಳಿಕ CRPF ತಿರುಗೇಟು!...

ಇಲ್ಲ ಸಲ್ಲದ ಆರೋಪ ಮಾಡಿ ಮುಖಭಂಗ ಅನುಭವಿಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ CRPF ಭದ್ರತಾ ಪಡೆ ತಿರುಗೇಟಿಗೆ ಸೈಲೆಂಟ್ ಆಗಿದ್ದಾರೆ. ಮತದಾನದ ವೇಳೆ ನಡೆದ ಹಿಂಸಾಚಾರ ಹಾಗೂ ಮಮತಾ ಆರೋಪಕ್ಕೆ  CRPF ತಕ್ಕ ಉತ್ತರ ನೀಡಿದೆ.

ಲಹರಿ ವರ್ಸಸ್ ಕಿರಿಕ್ ಪಾರ್ಟಿ,  ಕೋರ್ಟ್‌ಗೆ ಬಂದ ರಕ್ಷಿತ್‌ ಶೆಟ್ಟಿ...

ಕೋರ್ಟ್ ಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಜರ್/ ಕಿರಿಕ್ ಪಾರ್ಟಿ ಸಿನಿಮಾ ಹಾಡಿನ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ ಲಹರಿ ಸಂಸ್ಥೆ/ ಶಾಂತಿ ಕ್ರಾಂತಿ ಸಿನಿಮಾದ ಹಾಡನ್ನ ಬಳಸಿಕೊಂಡಿದ್ದಾರೆ ಅಂತ ಆರೋಪ ಮಾಡಿದ ಲಹರಿ ಆಡಿಯೋ ಸಂಸ್ಥೆ/ ಕಳೆದ ಕೆಲ ವರ್ಷಗಳಿಂದ ಕೋರ್ಟ್ ನಲ್ಲಿ ಕೇಸ್ ನ ವಿಚಾರಣೆ ನಡೆಯುತ್ತಿತ್ತು/ ವಿಚಾರಣಗೆ ಹಾಜಾರಾಗದ ಹಿನ್ನೆಲೆ ನಟ ರಕ್ಷಿತ್ ಶೆಟ್ಟಿ ಹಾಗೂ ತಂಡದವರಿಗೆ ವಾರೆಂಟ್ ನೀಡಲಾಗಿತ್ತು

ಜೀರೋ ಬ್ಯಾಲೆನ್ಸ್‌ ಅಕೌಂಟ್‌ನಿಂದ 5 ವರ್ಷದಲ್ಲಿ 300 ಕೋಟಿ ಗಳಿಸಿದ SBI!...

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇತರ ಕೆಲ ಬ್ಯಾಂಕ್‌ಗಳು ಜೀರೋ ಬ್ಯಾಲೆನ್ಸ್‌ ಅಕೌಂಟ್‌ನಿಂದ ಭಾರೀ ಲಾಭ ಗಳಿಸಿವೆ. ಐಐಟಿ ಬಾಂಬೆಯ ಒಂದು ಅಧ್ಯಯನದ ಅನ್ವಯ ಎಸ್‌ಬಿಐ ಜೀರೋ ಬ್ಯಾಲೆನ್ಸ್‌ ಅಕೌಂಟ್‌ನಿಂದ ಮುನ್ನೂರು ಕೋಟಿ ರೂಪಾಯಿ ಲಾಭ ಗಳಿಸಿದೆ. ಇದು 2015 ರಿಂದ 2020ರವರೆಗೆ, ಐದು ವರ್ಷದಲ್ಲಿ ಪಡೆದಿದ್ದಾಗಿದೆ. ಇನ್ನು ಬ್ಯಾಂಕ್‌ ಈ ಲಾಭ ಸರ್ವಿಸ್‌ ಚಾರ್ಜ್‌ನಿಂದ ಪಡೆದಿದೆ ಎಂದೂ ತಿಳಿದು ಬಂದಿದೆ.

ನಮ್ಮ ಲಸಿಕೆ ಅಷ್ಟು ಪರಿಣಾಮಕಾರಿಯಲ್ಲ: ಚೀನಾ ಅಧಿಕಾರಿ ಒಪ್ಪಿಗೆ!...

ಕೊರೋನಾ ವೈರಸ್‌ ನಿಗ್ರಹಕ್ಕೆ ಚೀನಾ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಅಷ್ಟೇನೂ ಪರಿಣಾಮಕಾರಿಯಲ್ಲ ಎಂಬ ಸಂಗತಿಯನ್ನು ಆ ದೇಶದ ಹಿರಿಯ ಅಧಿಕಾರಿಯೇ ಒಪ್ಪಿಕೊಂಡಿದ್ದಾರೆ. ಅಲ್ಲದೆ ಲಸಿಕೆಯ ಸಾಮರ್ಥ್ಯ ವೃದ್ಧಿಗಾಗಿ ತಾನು ಉತ್ಪಾದಿಸಿದ ಎರಡೂ ಲಸಿಕೆಗಳನ್ನು ಮಿಶ್ರಣ ಮಾಡುವ ಬಗ್ಗೆ ಚೀನಾ ಚಿಂತನೆ ನಡೆಸುತ್ತಿದೆ.

IPL 2021 ಆರ್‌ಸಿಬಿ ಮ್ಯೂಸಿಕ್‌ ಬ್ಯಾಂಡ್‌ ಫೋಟೋ ವೈರಲ್‌...

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರು ಮ್ಯೂಸಿಕ್‌ ಬ್ಯಾಂಡ್‌ ಹಿಡಿದುಕೊಂಡು ಫೋಟೋಶೂಟ್‌ ಮಾಡಿಸಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.

ವರನಟ ಡಾ.ರಾಜ್‌ ಅಗಲಿ ಇಂದಿಗೆ 15 ವರ್ಷ; ಕುಟುಂಬಸ್ಥರು, ಅಭಿಮಾನಿಗಳ ಸ್ಮರಣೆ...

ಅಣ್ಣಾವ್ರು ದೈಹಿಕವಾಗಿ ಅಗಲಿ ಇಂದಿಗೆ 15 ವರ್ಷಗಳು ಕಳೆದಿವೆ. ರಾಜ್‌ ಹಾಗೂ ಪಾರ್ವತಮ್ಮ ಸಮಾಧಿಗೆ ಕುಟುಂಬಸ್ಥರು ಈ ದಿನ ಪೂಜೆ ಸಲ್ಲಿಸಿದ್ದಾರೆ.

ಬ್ಯಾಂಕ್ ಆಫ್ ಬರೋಡಾದಲ್ಲಿ ನೇಮಕಾತಿ: ಅರ್ಜಿ ಹಾಕಿ...

ಬ್ಯಾಂಕ್ ಆಫ್ ಬರೋಡಾ 2021ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದ್ದು, ತನ್ನ ಅಧಿಕೃತ ವೆಬ್ ತಾಣದಲ್ಲಿ ಹುದ್ದೆಗಳಿಗೆ ಪ್ರಕಟಣೆ ಹೊರಡಿಸಿದೆ. 

ಕಚೇರಿಯೇ ರೆವೆನ್ಯೂ ಇನ್ಸ್ ಪೆಕ್ಟರ್ ಬೆಡ್ ರೂಂ.. ಮುಕ್ತ ಸರಸದ ವಿಡಿಯೋ ವೈರಲ್!...

ಕಂದಾಯ ಇಲಾಖೆಯ ಈ ಇನ್ಸ್ ಪೆಕ್ಟರ್ ತಮ್ಮ ಕಚೇರಿಯನ್ನೇ ಬೆಡ್ ರೂಂ ಮಾಡಿಕೊಂಡಿದ್ದರು. ಕಚೇರಿಯಲ್ಲೇ ಮಹಿಳೆಯೊಂದಿಗೆ ಸರಸ-ಸಲ್ಲಾಪ ನಡೆಸಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಿಖಿಲ್ ಕುಮಾರಸ್ವಾಮಿ ಕನ್ನಡ ಪೋಸ್ಟ್: ಕನ್ನಡ ಬರೆಯೋಕೆ ಬರಲ್ವಾ? ಟ್ರೋಲ್!...

ರೈಡರ್‌ ಸಿನಿಮಾ ಚಿತ್ರೀಕರಣಕ್ಕೆ ಲೇ ಲಡಾಕ್‌ಗೆ ಪ್ರಯಾಣಿಸಿರುವ ನಿಖಿಲ್ ಕುಮಾರಸ್ವಾಮಿ ಕನ್ನಡದಲ್ಲಿ ಬರೆದಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ...

ಕೊರೋನಾ ಹೆಚ್ಚಳ: ಹೊಟೆಲ್‌ಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸಲು ಆದೇಶ!...

ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಾಣಿಜ್ಯ ನಗರಿಯ ಆಸ್ಪತ್ರೆಗಳು ಭರ್ತಿಯಾಗಿವೆ. ಸೋಂಕಿತರ ಚಿಕಿತ್ಸೆಗೆ ಬೆಡ್‌ಗಳೇ ಸಿಗುತ್ತಿಲ್ಲ. ಆತಂಕ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಛಿತಿ ನಿಯಂತ್ರಣಕ್ಕೆ ಬಿಎಂಸಿ ಸ್ಟಾರ್ ಹೊಟೆಲ್‌ಗಳನ್ನು ಇದೀಗ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿದೆ.

click me!