ಪ್ರಜ್ವಲ್ ರೇವಣ್ಣ ಎಂದು ಹೇಳಲಾಗುತ್ತಿರುವ ರಾಸಲೀಲೆ ಪ್ರಕರಣದ ಹಿಂದೆ ಕುಮಾರಸ್ವಾಮಿ ಇದ್ದಾರೆ ಎಂದು ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಮೇ.1): ಪ್ರಜ್ವಲ್ ರೇವಣ್ಣ ಎಂದು ಹೇಳಲಾಗುತ್ತಿರುವ ರಾಸಲೀಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಈ ಪ್ರಕರಣದ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಹೆಚ್‌ಡಿಕೆ ನೀಡಿರುವ ಹೇಳಿಕೆಗೆ ವಿರುದ್ಧವಾಗಿ ಮಾತನಾಡಿರುವ ಡಿಕೆ ಸುರೇಶ್ ಅವರು ಈ ಪ್ರಕರಣದ ಹಿಂದೆ ಕುಮಾರಸ್ವಾಮಿ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾನೂನಿನ ಕುಮಾರಸ್ವಾಮಿಗೆ ಡಿಕೆಶಿ ನೆನಪಿಸಿಕೊಳ್ಳದಿದ್ದರೆ ನಿದ್ದೆ ಊಟ ಸೇರಲ್ಲ. ನಮ್ಮ ಹತ್ರ ಮೊದಲೇ ಇದ್ದಿದ್ರೆ ಚುನಾವಣೆ ಮುಂಚೆ ಬಿಡ್ತಾ ಇದ್ವಿ. ಈ ಪ್ರಕರಣದಲ್ಲಿ ವ್ಯವಸ್ಥಿತವಾಗಿ ನುಣುಚಿಕೊಳ್ಳುವ ಪ್ರಯತ್ನ ಮಾಡ್ತಾ ಇದ್ದಾರೆ. ಹೆಣ್ಣುಮಕ್ಕಳ ಸಮಸ್ಯೆ ಮುಖ್ಯ, ಯಾರು ಬಿಡುಗಡೆ ಮಾಡಿದ್ರು ಅಂತ ಅಲ್ಲ. ಕುಮಾರಸ್ವಾಮಿ ದಿನಕ್ಕೊಂದು ಸ್ಟೇಟಮೆಂಟ್ ಕೊಡ್ತಾ ಇರ್ತಾರೆ. ಅವರು ಡಿಕೆಶಿ ಮೇಲೆ ಯಾವ ಆರೋಪ ಬಿಟ್ಟಿದ್ದಾರೆ. ಎಲ್ಲ ಆರೋಪ ಡಿಕೆಶಿ ಮೇಲೆ ಮಾಡ್ತಾರೆ. ಕುಮಾರಸ್ವಾಮಿ ಅವರ ಉಳಿಯುವಿಗೋಸ್ಕರ ಡಿಕೆಶಿ ಹೆಸರು ಬಳಸುತ್ತಿದ್ದಾರೆ. ಇದರ ಹಿಂದೆ ಕುಮಾರಸ್ವಾಮಿ ಕೈವಾಡ ಇದೆ. ಹಾಸನ ನಾಯಕರ ಕೈವಾಡ ಇದೆ. ಈ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇತ್ತು ಎಂದು ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಮುಂಚೆಯಿಂದ ಈ ಸುದ್ದಿ ಇತ್ತು. ವಿಡಿಯೋ ಬಿಡುಗಡೆ ಆಗಿರಲಿಲ್ಲ. ವಿಡಿಯೋ ಬಿಡುಗಡೆ ಆದಮೇಲೆ ಚರ್ಚೆ ಆಗುತ್ತಿದೆ. ಸುಮ್ಮನೆ ಪ್ರಜ್ವಲ್ ರೇವಣ್ಣ ಅಮಾನತ್ತು ಮಾಡಿದ್ದಾರೆ. ಅದು ಕುಟುಂಬದ ಪಾರ್ಟಿ, ಯಾವಾಗ ಬೇಕಾದ್ರು ಮತ್ತೆ ತೆಗೆದುಕೊಳ್ಳುತ್ತಾರೆ. ಬೇಡವಾದಾಗ ಪಾರ್ಟಿಯಿಂದ ಬಿಡ್ತಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಕಾನೂನಿನ ಚೌಕಟ್ಟಿನಲ್ಲಿ ಎಲ್ಲರ ಮೇಲೆ ಕ್ರಮ ಆಗಲಿ. ನೂಲಿನಂತೆ ಸೀರೆ ಅಂತಾರೆ. ಒಬ್ಬರದ್ದೆ ವಿಡಿಯೋ ಇಲ್ಲ ಇದು. ಹಾಸನದಲ್ಲಿ ಒಂದು ರೌಂಡ್ ಹೊಡೆಯಿರಿ. ಏನೆಲ್ಲ ಚರ್ಚೆಯಾಗುತ್ತಿದೆ ನಿಮಗೆ ಗೊತ್ತಾಗುತ್ತೆ. ಇದಕ್ಕೆ ವಿಶೇಷವಾಗಿ ಕಾನೂನು ಬರಬೇಕು. ಬ್ಲಾಕ್ ಮೇಲ್ ಮಾಡುವುದು, ವಿಡಿಯೋ ಬಿಡುಗಡೆ ಮಾಡುವುದು. ಇದಕ್ಕೆಲ್ಲ ವಿಶೇಷ ಕಾನೂನಿನ ಅವಶ್ಯಕತೆ ಇದೆ ಎಂದಿದ್ದಾರೆ.