ಲಿಕ್ಕರ್‌ಗೂ ಬಂತು ಆನ್‌ಲೈನ್ ಬುಕಿಂಗ್, ಮೋದಿ ಜೊತೆ BSY ಮೀಟಿಂಗ್; ಮೇ.9ರ ಟಾಪ್ 10 ಸುದ್ದಿ!

By Suvarna News  |  First Published May 9, 2021, 6:05 PM IST

ಕೊರೋನಾ ಲಾಕ್‌ಡೌನ್ ಕಾರಣ ಇದೀಗ ಆನ್‌ಲೈನ್ ಮೂಲಕ ಮದ್ಯ ಮಾರಟಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಕೊರೋನಾ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ.  ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಆಯ್ಕೆಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ವೇಗಿ ತಂದೆ ಕೊರೋನಾಗೆ ಬಲಿ, ಬಿಗ್‌ಬಾಸ್ ಸ್ಪರ್ಧಿ ತಾಯಿಗೆ ನೆರವಾದ ಸುದೀಪ್ ಸೇರಿದಂತೆ ಮೇ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ವಿರೋಧದ ನಡುವೆ ಆನ್‌ಲೈನ್ ಬುಕಿಂಗ್, ಮನೆಬಾಗಿಲಿಗೆ ಮದ್ಯ ಸೇವೆ ಆರಂಭ!...

Latest Videos

undefined

ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಬಹುತೇರ ರಾಜ್ಯಗಳಲ್ಲಿ ಕಠಿಣ ನಿಮಯ ಜಾರಿಯಲ್ಲಿದೆ. ಹೀಗಾಗಿ ಅಗತ್ಯ ವಸ್ತು ಹಾಗೂ ತುರ್ತು ಸೇವೆಗೆ ಮಾತ್ರ ಅವಕಾಶವಿದೆ. ಇದರ ನಡುವೆ ಭಾರಿ ವಿರೋಧದ ನಡುವೆ ಸರ್ಕಾರ ಆನ್‌ಲೈನ್ ಮದ್ಯ ವಿತರಣೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಅಸ್ಸಾಂ ನೂತನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಆಯ್ಕೆ!...

ಅಸ್ಸಾಂನ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ವಾರ ಲಾಕ್‌ಡೌನ್: ಮೆಟ್ರೋಗೂ ಬ್ರೇಕ್!...

ದೆಹಲಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಮಿತಿ ಮೀರಿದೆ. ಕೊರೋನಾ ನಿಯಂಣತ್ರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಹರಸಾಹಸ ನಡೆಸುತ್ತಿದೆ. ಕಠಿಣ ಕ್ರಮಗಳನ್ನು ಜಾರಿಗೊಳಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಬೇರೆ ವಿಧಿ ಇಲ್ಲದೇ ಸಿಎಂ ಕೇಜ್ರೀವಾಲ್ ಲಾಕ್‌ಡೌನ್ ಘೋಷಿಸಿದ್ದರು. ಸದ್ಯ ಮೂರನೇ ಬಾರಿ ಲಾಕ್‌ಡೌನ್ ವಿಸ್ತರಿಸಲಾಗಿದ್ದು, ಮೇ. 17ರ ಬೆಳಗ್ಗೆ 5ಗಂಟೆವರೆಗೆ ದೆಹಲಿ ನಿವಾಸಿಗರು ರಸ್ತೆಯಲ್ಲಿ ಓಡಾಡುವಂತಿಲ್ಲ.

ಕೊರೋನಾ ನರ್ತನ: ಕರ್ನಾಟಕ ಸೇರಿ ನಾಲ್ಕು ಸಿಎಂಗಳ ಜೊತೆ ಮೋದಿ ಚರ್ಚೆ!...

ದೇಶಾದ್ಯಂತ ಕೊರೋನಾ ಹಾವಳಿ ಮಿತಿ ಮೀರಿದೆ. ಕರ್ನಾಟಕದಲ್ಲೂ ಪರಿಸ್ಥಿತಿ ಬಿಗಡಾಯಿಸಿದ್ದು, ಕೊರೋನಾ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಹೀಗಿರುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕ, ಪಂಜಾಬ್, ಬಿಹಾರ ಹಾಗೂ ಉತ್ತರಾಖಂಡ್ ಸಿಎಂಗಳ ಜೊತೆ ಚರ್ಚೆ ನಡೆಸಿ ರಾಜ್ಯದಲ್ಲಿರುವ ಪರಿಸ್ಥಿತಿ ಅವಲೋಕಿಸಿದ್ದಾರೆ.

ಸಹೋದರನ ಆತ್ಮಹತ್ಯೆ ದುಃಖ ಮಾಸುವ ಮುನ್ನ ತಂದೆ ಕೊರೋನಾಗೆ ಬಲಿ; ಕಣ್ಣೀರಿಟ್ಟ ಚೇತನ್ ಸಕಾರಿಯಾ!...

ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ಸ್ಥಗಿತಗೊಂಡಿದೆ. ಇತ್ತ ಐಪಿಎಲ್ ಆಟಗಾರರು ತಮ್ಮ ಮನೆಗೆ ತೆರಳಿ ಕ್ವಾರಂಟೈನ್ ಆಗಿದ್ದಾರೆ. ಆದರೆ ಮನಗೆ ವಾಪಸ್ ಬಂದ ರಾಜಸ್ಥಾನ ರಾಯಲ್ಸ್ ವೇಗಿ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ. ಕೊರೋನಾ ಸೋಂಕಿನಿಂದ ಆಸ್ಪತ್ರೆ ದಾಖಲಾಗಿದ್ದ ವೇಗಿ ತಂದೆ ನಿಧನರಾಗಿದ್ದಾರೆ.

ಹಣವಿಲ್ಲದೆ ಪರದಾಟ: ಬಿಗ್‌ಬಾಸ್‌ ಸ್ಪರ್ಧಿ ತಾಯಿಯ ಚಿಕಿತ್ಸೆಗೆ ಕಿಚ್ಚ ಸುದೀಪ ನೆರವು...

ಕನ್ನಡದ ಬಿಗ್‌ಬಾಸ್‌ ಸೀಸನ್ 6ರ ಸ್ಪರ್ಧಿಯ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವ ಮೂಲಕ ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ ಮಾನವೀಯತೆ ಮೆರೆದಿದ್ದಾರೆ. ಹೌದು, ಜಿಲ್ಲೆಯ ಕಿರುತೆರೆ ನಟಿ ಸೋನು ಪಾಟೀಲ್ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಸುದೀಪ ನೆರವು ನೀಡಿದ್ದಾರೆ.

ನಿಯಂತ್ರಣ ಕಳೆದುಕೊಂಡ ಚೀನಾದ ರಾಕೆಟ್, ಮಾಲ್ಡೀವ್ಸ್ ಪತನ!...

ಬಾಹ್ಯಾಕಾಶ ಮಾರ್ಗದಲ್ಲಿ ನಿಯಂತ್ರಣ ಕಳೆದುಕೊಂಡು ಭೂಮಂಡಲದ ವಾತಾವರಣಕ್ಕೆ ಮರಳಿ ಬಂದಿದ್ದ ಚೀನಾದ ಲಾಂಗ್ ಮಾರ್ಚ್-5B ರಾಕೆಟ್‌ನ ಬೃಹತ್ ಭಾಗ ಭಾನುವಾರ ಮಾಲ್ಡೀವ್ಸ್ ಬಳಿ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಬರೋಬ್ಬರಿ 18 ಟನ್ ತೂಕದ ರಾಕೆಟ್ ಭಾಗ ಭೂಮಿಯ ಯಾವ ಭಾಗದಲ್ಲಿ ಬೀಳಲಿದೆ ಎಂಬ ಅಂದಾಜು ಸಿಗದೆ ತೀವ್ರ ಆತಂಕ ಸೃಷ್ಟಿಸಿತ್ತು. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ರಾಕೆಟ್ ಪತನಗೊಳ್ಳುವ ಭೀತಿ ಎದುರಾಗಿತ್ತು.

ದೇಶದಲ್ಲಿ ಆಕ್ಸಿಜನ್ ಸಾಗಾಣೆಗೆ ಟೋಲ್ ಉಚಿತ; NHAI ಮಹತ್ವದ ನಿರ್ಧಾರ!...

ಆಕ್ಸಿಜನ್ ಸಮಸ್ಯೆ ನಿವಾರಣೆಗೆ ಟ್ಯಾಂಕರ್ ಮೂಲಕ ದೇಶದ ಮೂಲೆ ಮೂಲೆಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಹೀಗಿ ಆಕ್ಸಿಜನ್ ಹೊತ್ತು ಸಾಗುವ ಟ್ಯಾಂಕರ್‌ಗಳು ಹೆದ್ದಾರಿಗಳ್ಲಿ ಟೋಲ್ ಕಟ್ಟಬೇಕಿಲ್ಲ.

ರಾಮು ಅಗಲಿಕೆ ನಂತರ ಮಾಲಾಶ್ರೀ ಮೊದಲ ಪೋಸ್ಟ್..!...

ಸ್ಯಾಂಡಲ್‌ವುಡ್ ನಟಿ ಮಾಲಾಶ್ರೀ ಅವರು ಪತಿಯನ್ನು ಕಳೆದುಕೊಂಡ ನಂತರ ಮೊದಲಬಾರಿ ಸೋಷಿಯಲ್ ಮಿಡಿಯಾ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ನೋವಿನಲ್ಲಿ ಧೈರ್ಯ ತುಂಬಿದವರಿಗೆ ಧನ್ಯವಾದ ಹೇಳಿದ್ದಾರೆ.

ಕೇಂದ್ರದಿಂದ ವ್ಯಾಕ್ಸಿನ್ ಪೂರೈಕೆ, ರಾಜ್ಯದಲ್ಲಿ ಮೇ.10ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ...

ನಾಳೆ ಅಂದ್ರೆ ಮೇ 10ರಿಂದ 18ರಿಂದ 44 ವರ್ಷದವರಿಗೆ ವ್ಯಾಕ್ಸಿನ್ ನೀಡುವ ಬಗ್ಗೆ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಮಹತ್ವದ ಮಾಹಿತಿ ಕೊಟ್ಟಿದ್ದಾರೆ. 

click me!