ಕಾರ್ಯಕ್ರಮಕ್ಕೆ ಹೊಸ ರೂಲ್ಸ್ ಜಾರಿ, ರೆಬೆಲ್ ನಾಯಕರ ದಿಲ್ಲಿ ಸವಾರಿ; ಆ.10ರ ಟಾಪ್ 10 ಸುದ್ದಿ!

By Suvarna News  |  First Published Aug 10, 2021, 4:53 PM IST

ಬಸವರಾಜ್ ಬೊಮ್ಮಾಯಿ ಹೊಸ ರೂಲ್ಸ್ ಜಾರಿ ಮಾಡಿದ್ದಾರೆ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ ಎಲ್ಲವೂ ಬಂದ್ ಮಾಡಿದ್ದಾರೆ. ವಿಶ್ವಸಂಸ್ಥೆ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಸಭೆ ಅಧ್ಯಕ್ಷತೆಯನ್ನು ಜೈಶಂಕರ್ ವಹಿಸಲಿದ್ದಾರೆ. ಕಾಶ್ಮೀರದಲ್ಲಿರುವ ರಾಹುಲ್ ಗಾಂಧಿ ಮಂದಿರ ಮಸೀದಿ ಸುತ್ತಾಟ ಆರಂಭಿಸಿದ್ದಾರೆ. ಬಿಜೆಪಿ ಅಸಮಧಾನಿತ ನಾಯಕರು ದಿಲ್ಲಿಗೆ ಹಾರಿದ್ದಾರೆ. ಅನುಪಮ್ ಸಾವಿನ ಹಿಂದಿನ ನೋವಿನ ಕಹಾನಿ, ತಮಿಳು ಚಿತ್ರರಂಗಕ್ಕೆ ಹಾರಿದ ಆಶಿಕಾ ಸೇರಿದಂತೆ ಆಗಸ್ಟ್ 10ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ವಿಶ್ವಸಂಸ್ಥೆ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ ಜೈಶಂಕರ್!

Latest Videos

undefined

ಆಗಸ್ಟ್ ತಿಂಗಳಲ್ಲಿ ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಳಿಕ ಇದೀಗ ಭಾರತದ ವಿದೇಶಾಂಗ ಸಚಿವ ಜೈಶಂಕರ್ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ಹಾಗೂ ಶಾಂತಿಪಾಲನೆ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ.

ಅನಗತ್ಯ ಖರ್ಚಿಗೆ ಬೊಮ್ಮಾಯಿ ಬ್ರೇಕ್: ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ ಎಲ್ಲವೂ ಬಂದ್!

ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಅನಗತ್ಯ ಖರ್ಚು ಹೆಚ್ಚಾಗಿ ನಡೆಯುತ್ತದೆ. ಅದೆಷ್ಟೇ ಸರಳ ಕಾರ್ಯಕ್ರಮವಾದರೂ ಹೂವು, ಹಣ್ಣು ಹಂಪಲು, ತುರಾಯಿ ಎಂದು ಹಣ ವ್ಯಯಿಸಲಾಗುತ್ತದೆ. ಆದರೀಗ ಈ ವಿಧಿ ವಿಧಾನಗಳಿಗೆ ಬ್ರೇಕ್ ಹಾಕಿರುವ ಕರ್ನಾಟಕ ಸಿಎಂ ಬೊಮ್ಮಾಯಿ ಎಲ್ಲಾ ಖರ್ಚುಗಳಿಗೆ ತಡೆ ಹಾಕಿದ್ದಾರೆ.

ನಿಲ್ಲದ ಬಿಜೆಪಿ ಭಿನ್ನಮತ: ಸಂಪುಟ ಸಂಕಟ ಈಗ ದಿಲ್ಲಿಗೆ!

ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ಬಳಿಕ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಸಂಪೂರ್ಣ ಶಮನವಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಅದರ ಸ್ವರೂಪ ಬದಲಾಗಿ ಮತ್ತೆ ಮುಂದುವರೆದಿದೆ.

ದೇವಸ್ಥಾನದಿಂದ 'ತಿಲಕ'ವಿಟ್ಟು, ಮಸೀದಿಗೆ ತೆರಳಿದ ರಾಹುಲ್: ಫೋಟೋ ಹಂಚಿದ ಕಾಂಗ್ರೆಸ್!

ರಾಹುಲ್ ಗಾಂಧಿ ಎರಡು ದಿನಗಳ ಜಮ್ಮು ಮತ್ತು ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಹೀಗಿರುವಾಗ ಮಂಗಳವಾರ ಅವರು ಗಂದೇರ್‌ಬಾಲ್‌ನ ಖೀರ್ ಭವಾನಿ ದೇವಸ್ಥಾನಕ್ಕೆ ಭೇಟಿ ನಿಡಿದ್ದಾರೆ. ಬಳಿಕ ಅವರು ಇಲ್ಲಿನ ಪ್ರಸಿದ್ಧ ಹಜರತ್ಬಾಲ್ ಮಸೀದಿಗೆ ತೆರಳಿದ್ದಾರೆ. ಈ ನಡುವೆ ಅತ್ತ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಈ ಎರಡೂ ಕಡೆ ಭೇಟಿ ನಿಡಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ. ಇದಾದ ಬಳಿಕ ರಾಹುಲ್ ಗಾಂಧಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

ನೆರವಿನ ಭರವಸೆ ನೀಡಿದ್ದ ಆಮಿರ್ ಫೋನ್ ಎತ್ತಲಿಲ್ಲ; ನಟ ಅನುಪಮ್ ಸಾವಿನ ಹಿಂದಿನ ನೋವಿನ ಕಹಾನಿ!

ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್ ಶ್ಯಾಮ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. 63 ವರ್ಷದ ಶ್ಯಾಮ್ ನಿಧನದ ಹಿಂದೆ ನೋವಿನ ಕಹಾನಿ ಇದೆ. ಹಿರಿಯ ನಟನಿಗೆ ಕಾಡಿದ ಮಾನಸಿಕ ಕೊರಗು, ಗಾಳಿ ಸುದ್ದಿ ತಂದ ಆತಂಕ ಹಾಗೂ ಚಿಕಿತ್ಸೆಗೆ ಸೂಕ್ತ ನೆರವು ಸಿಗದೆ ನಟ ಅನುಪಮ್ ಶ್ಯಾಮ್ ನಿಧನರಾಗಿದ್ದಾರೆ ಎಂದು  ಸಹೋದರ ಅನುರಾಗ್ ಶ್ಯಾಮ್ ಹೇಳಿದ್ದಾರೆ. 

ಕಬಡ್ಡಿ ಆಟಗಾರ್ತಿಯಾಗಿ ತಮಿಳು ಚಿತ್ರರಂಗಕ್ಕೆ ಹಾರಿದ ಆಶಿಕಾ ರಂಗನಾಥ್!

ಸ್ಯಾಂಡಲ್‌ವುಡ್ ಬೇಡಿಕೆಯ ನಟಿ ಆಶಿಕಾ ರಂಗನಾಥ್ 'ಮದಗಜ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕಾಲಿವುಡ್‌ ಸಿನಿಮಾವೊಂದಕ್ಕೂ ಸಹಿ ಮಾಡಿದ್ದಾರೆ. ಅದುವೇ ಕಬ್ಬಡಿ ಆಟಗಾರ್ತಿಯಾಗಿ ಎನ್ನಲಾಗಿದೆ.

ಪೂರ್ವಾನ್ವಯ ತೆರಿಗೆ ರದ್ದತಿಗೆ ಅಸ್ತು: ವೊಡಾ, ಕೇರ್ನ್‌ಗೆ 8,100 ಕೋಟಿ ರು. ಲಾಭ!

ಕಂಪನಿಗಳ ಮೇಲೆ ಪೂರ್ವಾನ್ವಯ ತೆರಿಗೆ ಪದ್ಧತಿ ಕೊನೆಗೊಳಿಸುವ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ- 2021ಕ್ಕೆ ರಾಜ್ಯಸಭೆ ಸೋಮವಾರ ಅನುಮೋದನೆ ನೀಡಿದೆ.

ಚಿನ್ನ ಗೆದ್ದ ಚೋಪ್ರಾಗೆ ಕಾಶೀನಾಥ್‌ ಕೋಚ್‌ ಅಲ್ಲ: ಅಥ್ಲೆಟಿಕ್ಸ್‌ ಸಂಸ್ಥೆ

ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್‌ ಥ್ರೋನಲ್ಲಿ ಬಂಗಾರದ ಸಾಧನೆ ಮಾಡಿದ ನೀರಜ್‌ ಚೋಪ್ರಾ ಅವರಿಗೆ ಕಾಶೀನಾಥ್‌ ನಾಯ್‌್ಕ ಎಂಬ ಹೆಸರಿನ ಯಾವುದೇ ಕೋಚ್‌ ಅನ್ನು ನೇಮಕ ಮಾಡಿರಲಿಲ್ಲ. ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ 

ಅಭಿನವ್ ಹೆಜ್ಜೆ ಅನುಕರಿಸಿದ್ದೆ ಎಂದ ನೀರಜ್: ಬಿಂದ್ರಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫಿದಾ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಏಷಿಯಾನೆಟ್‌ಗೆ ಪ್ರತಿಕ್ರಿಯಿಸಿದ್ದ ನೀರಜ್ ಚೋಪ್ರಾ ಅಭಿನವ್ ಬಿಂದ್ರಾ ಕ್ಲಬ್‌ಗೆ ಸೇರುವ ಬಗ್ಗೆ ಮಾತನಾಡಿದ್ದರು. ಅಲ್ಲದೇ 'ಅಭಿನವ್ ಬಿಂದ್ರಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಮೊದಲ ಚಿನ್ನದ ಪದಕ ಗೆದ್ದ ಒಬ್ಬ ಕ್ರೀಡಾಪಟು, ಇಂದು ಅದೇ ಸಾಲಿಗೆ ಸೇರುತ್ತಿರುವುದು ಕನಸಿನಂತೆ ಭಾಸವಾಗುತ್ತಿದೆ.

click me!