ಎರಡು ವರ್ಷಗಳ ಕಾಲ ಅನೈತಿಕ ಸಂಬಂಧ ಹೊಂದಿದ್ದ ಗಂಡನಿಗೆ ಪತ್ನಿ ವಿಚಿತ್ರ ಶಿಕ್ಷೆ ನೀಡಿದ್ದಾಳೆ. ಅದೇನು ಮುಂದೆ ಓದಿ..
ಗಂಡ ಹೆಂಡತಿ ಸಂಬಂಧದಲ್ಲಿ ಪರಸ್ಪರ ನಂಬಿಕೆ ಹಾಗೂ ಪ್ರೀತಿ ವಿಶ್ವಾಸ ಬಹಳ ಮುಖ್ಯ ಆದರೆ ಇತ್ತೀಚೆಗೆ ಅನೈತಿಕ ಸಂಬಂಧಗಳು ಸಾಮಾನ್ಯ ಎನಿಸಿವೆ. ಕೆಲವರು ಮದುವೆಯ ಮೊದಲು ನಂತರವೂ ಈ ಅನೈತಿಕ ಸಂಬಂಧವನ್ನು ಮುಂದುವರಿಸುತ್ತಾರೆ. ಕೆಲವರು ಪತಿ ಅಥವಾ ಪತ್ನಿಯ ಅನೈತಿಕ ಸಂಬಂಧದಿಂದ ನೊಂದು ದೂರ ಹೋಗಿ ಪ್ರತ್ಯೇಕವಾಗಿ ಬದುಕಲು ಆರಂಭಿಸಿದರೆ ಮತ್ತೆ ಕೆಲವರು, ಗಂಡ ಹೆಂಡತಿ ಇಬ್ಬರು ಪ್ರತ್ಯೇಕವಾದ ಆಫೇರ್‌ಗಳನ್ನು ಇಷ್ಟುಕೊಂಡು ಸಮಾಜದ ಕಣ್ಣಿಗೆ ಮಾತ್ರ ಗಂಡ ಹೆಂಡತಿಯಂತೆ ತೋರಿಕೆ ಜೀವನ ಮಾಡುತ್ತಾ ಒಂದೇ ಸೂರಿನ ಕೆಳಗೆ ಪೋಷಕರು ಬಂಧುಗಳ ಮುಂದೆ ನಾಟಕ ಮಾಡ್ತಾ ಬದುಕುತ್ತಾರೆ. ಇದು ನಗರ ಪ್ರದೇಶಗಳಲ್ಲಿ ಸಾಮಾನ್ಯ ಎನಿಸಿರುವ ಟ್ರೆಂಡ್ ಆಗಿದೆ.(ಎಲ್ಲರೂ ಹೀಗಿಲ್ಲ, ಆದರೆ ಹೀಗೋ ಇದೆ) ಆದರೆ ಎಲ್ಲರಿಗೂ ಪತ್ನಿಯ ಅಥವಾ ಪತಿಯ ಈ ಅನೈತಿಕ ಸಂಬಂಧವನ್ನು ಸಹಿಸಲಾಗದು ಹೀಗಿರುವಾಗ ಮಹಿಳೆಯೊಬ್ಬಳು ಬೇರೊಬ್ಬಕೆಯ ಜೊತೆ ಆಫೇರ್ ಇಟ್ಟುಕೊಂಡಿದ್ದ ಗಂಡನಿಗೆ ಎಂಥಾ ಶಿಕ್ಷೆ ಕೊಟ್ಟಿದ್ದಾಳೆ ನೋಡಿ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ವರ್ಷದಿಂದ ಬೇರೊಬ್ಬಕೆಯ ಜೊತೆ ಆಫೇರ್ ಇಟ್ಟುಕೊಂಡು ತನ್ನೊಂದಿಗೆ ದಾಂಪತ್ಯ ದ್ರೋಹವೆಸಗಿದ ಗಂಡನಿಗೆ 'ಎರಡು ವರ್ಷ ಅನೈತಿಕ ಸಂಬಂಧದಲ್ಲಿ ಇದ್ದೆ ಅದು ಹೇಗೆ ಅಂತ ಕೇಳಿ' ಎಂದು ಬರೆದಿರುವಂತಹ ಸೈನ್ ಬೋರ್ಡನ್ನು ಆತನ ಹಿಂದೆ ಹಾಗೂ ಮುಂದೆ ತೂಗು ಹಾಕಿದ್ದಾಳೆ. ಬರೀ ಇಷ್ಟೇ ಅಲ್ಲ ಈ ಸೈನ್ ಬೋರ್ಡ್‌ಗಳನ್ನು ಆತನ ಕತ್ತಿಗೆ ನೇತು ಹಾಕಿಸಿಕೊಂಡೆ ಆಕೆ ಆತನನ್ನು ಶಾಪಿಂಗ್ ಮಾಲೊಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿದ್ದ ಎಲ್ಲರ ಗಮನ ಸೆಳೆಯಲು ಪ್ರಯತ್ನಿಸಿದ್ದಾಳೆ.
ಅಂದಹಾಗೆ ಈ ಘಟನೆ ನಡೆದಿರುವುದು ವಿದೇಶವೊಂದರ ಮಾಲ್‌ನಲ್ಲಿ ವಾಲ್ಟ್ ವಿಟ್‌ಮನ್ ಹೆಸರಿನ ಮಾಲೊಂದಕ್ಕೆ ಗಂಡನನ್ನು ಕರೆದೊಯ್ದ ಮಹಿಳೆ ಅಲ್ಲಿ ಚಪ್ಪಾಳೆ ತಟ್ಟುವ ಮೂಲಕ ಜನರ ಗಮನ ಸೆಳೆದು ತನ್ನ ಗಂಡನತ್ತ ನೋಡಲು ಹೇಳಿದ್ದಾಳೆ. ಅಲ್ಲದೇ ತನ್ನ ಗಂಡ ತಾನು ಎರಡನೇ ಮಗುವಿನ ಗರ್ಭಾವಸ್ಥೆಯಲ್ಲಿದ್ದಾಗ ತನಗೆ ಮೋಸ ಮಾಡಿ ಮತ್ತೊಬ್ಬ ಮಹಿಳೆ ಜೊತೆ ಎರಡು ವರ್ಷಗಳ ಕಾಲ ಅನೈತಿಕ ಸಂಬಂಧದಲ್ಲಿದ್ದಳು ಎಂದು ದೂರಿದ್ದಾಳೆ. ಅಲ್ಲದೇ ಆತನನ್ನು ಮೋಸಗಾರ ಮೋಸಗಾರ ಎಂದು ಕರೆಯುತ್ತಾ ಅಲ್ಲಿ ಸಾಗುತ್ತಿದ್ದ ಜನರ ಗಮನ ಸೆಳೆಯಲು ಯತ್ನಿಸಿದ್ದಾರೆ.
ಈ ವೀಡಿಯೋವನ್ನು 5 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಅನೇಕರು ವಿವಿಧ ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಮಹಿಳೆಯ ಪತಿಯನ್ನು ಬೆಂಬಲಿಸಿದ್ದರೆ, ಮತ್ತೆ ಕೆಲವರು ಆತ ಮೋಸ ಮಾಡಿರುವುದು ನಿಜ ಆದರೆ ಹೀಗೆ ಸಾರ್ವಜನಿಕವಾಗಿ ಅವಮಾನ ಮಾಡುವುದರಿಂದ ನಿಮ್ಮ ದಾಂಪತ್ಯ ಜೀವನ ಹೀಗೆಯೇ ಮುಂದುವರೆಯುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಮತ್ತೆ ಕೆಲವರು ಈ ಮಹಿಳೆ ಅಳುತ್ತಾ ಕೂರದೇ ಒಳ್ಳೆ ಕೆಲಸ ಮಾಡಿದ್ದಾಳೆ ಎಂದು ಶ್ಲಾಘಿಸಿದ್ದಾರೆ. ಸಾಮಾನ್ಯಾಗಿ ದಾಂಪತ್ಯದಲ್ಲಿ ಮೋಸವಾಗಿದೆ ಎಂಬುದು ತಿಳಿದಾಗ ಬಹುತೇಕರು ಅಳುತ್ತಾ ಕೂರುತ್ತಾರೆ ಖಿನ್ನತೆಗೆ ಜಾರುತ್ತಾರೆ. ಆದರೆ ಈಕೆ ಹಾಗೇನು ಮಾಡದೇ ಧೈರ್ಯವಾಗಿ ಗಂಡನಿಗೆ ಬುದ್ದಿ ಕಲಿಸಿದ್ದಾಳೆ ಎಂದು ಹೇಳುತ್ತಿದ್ದಾರೆ. ಈ ಮಹಿಳೆಯ ಕೃತ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?
Her husband had a 2-year affair with another woman while his wife was pregnant, so she took him to Walt Whitman Mall this morning to do this 😭 pic.twitter.com/7GtdOYJ0uE
— FearBuck (@FearedBuck)
ಇದನ್ನೂ ಓದಿ: ಗಂಡನಿಲ್ಲದ ಆಂಟಿಯ ಸಂಬಂಧಕ್ಕೆ ಸ್ನೇಹಿತನನ್ನೇ ಪರಲೋಕ ಸೇರಿಸಿದ ಫ್ರೆಂಡ್!
ಇದನ್ನೂ ಓದಿ: ಗರ್ಲ್‌ಫ್ರೆಂಡ್ ಮದ್ವೆಯಾಗಲು ಬದುಕಿರುವ ಪತ್ನಿಗೆ ಶ್ರಾದ್ಧ ಮಾಡಿ ಪಿಂಡ ಬಿಟ್ಟ ಗಂಡ!