15ರೂ ನೀರಿನ ಬಾಟಲಿ 20 ರೂಗೆ ಮಾರಾಟ, ವೆಂಡರ್‌ಗೆ 1 ಲಕ್ಷ ರೂ ದಂಡ ವಿಧಿಸಿದ ರೈಲ್ವೇ!

Published : Nov 24, 2024, 03:32 PM ISTUpdated : Nov 24, 2024, 03:50 PM IST
15ರೂ ನೀರಿನ ಬಾಟಲಿ 20 ರೂಗೆ ಮಾರಾಟ, ವೆಂಡರ್‌ಗೆ 1 ಲಕ್ಷ ರೂ ದಂಡ ವಿಧಿಸಿದ ರೈಲ್ವೇ!

ಸಾರಾಂಶ

15 ರೂಪಾಯಿ ನೀರಿನ ಬಾಟಲಿಯನ್ನು 20 ರೂಪಾಯಿಗೆ ಮಾರಾಟ ಮಾಡುತ್ತಿದ್ದ ವೆಂಡರ್‌ಗೆ ಭಾರತೀಯ ರೈಲ್ವೇ ಬರೋಬ್ಬರಿ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ರೈಲಿನೊಳಗೆ ಮಾರಾಟ ಮಾಡುವ ವಸ್ತುಗಳ ಬೆಲೆ, ಗುಣಮಟ್ಟ ಸೇರಿದಂತೆ ಇತರ ದೂರುಗಳನ್ನು ದಾಖಲಿಸಿ ಪರಿಹಾರ ಪಡೆಯುವುದು ಹೇಗೆ?

ನವದೆಹಲಿ(ನ.24)  ನೀವು ರೈಲು ಪ್ರಯಾಣ ಮಾಡುವಾಗ ರೈಲಿನೊಳಗೆ ಮಾರಾಟ ಮಾಡುತ್ತಾ ಬರವು ಉತ್ಪನ್ನಗಳಿಗೆ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆ ನೀಡಿ ಖರೀದಿಸಿದ್ದೀರಾ? ರೈಲಿನಲ್ಲಿ ಯಾವುದೇ ಉತ್ಪನ್ನಕ್ಕೂ ಎಂಆರ್‌ಪಿ ಬೆಲೆಗಿಂತ ಹೆಚ್ಚು ಪಡೆಯುವಂತಿಲ್ಲ. ಹೀಗೆ ಮಾಡಿದರೆ ಮಾರಾಟ ಮಾಡುವ ವೆಂಡರ್ ಮೇಲೆ ದುಬಾರಿ ದಂಡ ವಿಧಿಸಲಾಗುತ್ತದೆ. ಇದೀಗ ಇಂತದ್ದೆ ಘಟನೆ ನಡೆದಿದೆ. ಪೂಜಾ ಎಸ್‌ಎಫ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕನೊಬ್ಬ ರೈಲು ನೀರು ಬಾಟಲಿಯನ್ನು ಖರೀದಿಸಿದ್ದಾನೆ. 15 ರೂಪಾಯಿ ಬಾಟಲಿಯನ್ನು 20 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಪ್ರಶ್ನಿಸಿದರೆ ಇಷ್ಟೇ ಬೇಕಾದರೆ ತಗೊಳಿ ಎಂದು ಮುಂದಕ್ಕೆ ಸಾಗಿದ್ದಾನೆ. ಆದರೆ ಪ್ರಯಾಣಿಕ ವಿಡಿಯೋ ಮೂಲಕ ಮಾಹಿತಿ ನೀಡಿ ಭಾರತೀಯ ರೈಲ್ವೆಗೆ ದೂರು ದಾಖಲಿಸಿದ್ದಾನೆ. ಪರಿಣಾಮ ಭಾರತೀಯ ರೈಲ್ವೇ ವೆಂಡರ್‌ಗೆ ಬರೋಬ್ಬರಿ 1 ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ.

ಮಿನಿಸ್ಟ್ರಿ ಆಫ್ ರೈಲ್ವೇಸ್ ಈ ವಿಡಿಯೋವನ್ನು ಹಂಚಿಕೊಂಡು ಮಾಹಿತಿ ನೀಡಿದೆ.  ಪ್ರಯಾಣಿಕನೊಬ್ಬ ರೈಲಿನಲ್ಲಿ ನೀರಿನ ಬಾಟಲಿ ಖರೀದಿಸಿದ್ದಾನೆ. ರೈಲು ನೀರಿನ ಬಾಟಲಿ ಬೆಲೆ 15 ರೂಪಾಯಿ. ಆದರೆ 20 ರೂಪಾಯಿಗೆ ವೆಂಡರ್ ಮಾರಾಟ ಮಾಡಿದ್ದಾನೆ. ವಿಡಿಯೋ ಮಾಡುತ್ತಿದ್ದ ಪ್ರಯಾಣಿಕ, ನಾನು 15 ರೂಪಾಯಿ ನೀರಿನ ಬಾಟಲಿಯನ್ನು 20 ರೂಪಾಯಿಗೆ ಖರೀದಿಸಿದ್ದೇನೆ ಎಂದಿದ್ದಾನೆ. ಇಷ್ಟೇ ಅಲ್ಲ ಈ ಕುರಿತು ದೂರು ನೀಡುವುದಾಗಿ ಎಚ್ಚರಿಸಿದ್ದಾನೆ. ಆದರೆ ಮಾರಾಟಗಾರ ಈ ಮಾತನ್ನು ಲೆಕ್ಕಿಸದೆ ಮುಂದೆ ಸಾಗಿದ್ದಾನೆ.

ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಟಿಕೆಟ್ ಖರೀದಿ ಇನ್ನು ಸುಲಭ, ನೀವಿದ್ದಲ್ಲೇ ಸಿಗುತ್ತೆ ಟೆಕೆಟ್!

ಪ್ರಯಾಣಿಕ ಭಾರತೀಯ ರೈಲ್ವೇಯ ಸಹಾಯವಾಣಿ 139 ನಂಬರ್‌ಗೆ ಕರೆ ಮಾಡಿ ದೂರು ನೀಡಿದ್ದಾನೆ.  ಕೋಚ್ ನಂಬರ್, ರೈಲಿನ ವಿವರ, ಪ್ರಯಾಣಿಕರ ವಿವರಗಳನ್ನು ದೂರಿನ ವೇಳೆ ನೀಡಿದ್ದಾನೆ. ಕೆಲವೇ ಕ್ಷಣದಲ್ಲಿ ಪ್ರಯಾಣಿಕನ ದೂರು ದಾಖಲಾಗಿದೆ. ದೂರು ದಾಖಲಾದ  ಬಳಿಕ ನೀರಿನ ಬಾಟಲಿ ಮಾರಾಟದ ವೆಂಡರ್ ಪಡೆದವರನ್ನು ರೈಲ್ವೇ ಇಲಾಖೆ ಸಂಪರ್ಕಿಸಿದೆ. ಇವೆಲ್ಲವೂ ಕೆಲವೇ ಕ್ಷಣಗಳಲ್ಲಿ ನಡೆದು ಹೋಗಿದೆ.

ದೂರು ನೀಡಿದ ಪ್ರಯಾಣಿಕನ ಪ್ರಯಾಣ ಮುಂದುವರಿದಿತ್ತು. ಕೆಲ ಹೊತ್ತಲ್ಲೇ ವೆಂಡರ್ ಆಗಮಿಸಿ ದೂರು ನೀಡಿದ ಪ್ರಯಾಣಿಕನಿಗೆ 5 ರೂಪಾಯಿ ಹಿಂದಿರುಗಿಸಿದ್ದಾನೆ. ನೀರಿನ ಬಾಟಲಿಗೆ ಹೆಚ್ಚುವರಿಯಾಗಿ ಪಡೆದ ಹಣ ಹಿಂದಿರುಗಿಸುವುದಾಗಿ ಹೇಳಿದ್ದಾನೆ. ಈ ರೈಲಿನಲ್ಲಿ ಹೆಚ್ಚುವರಿಯಾಗಿ 5 ರೂಪಾಯಿ ಪಡೆದ ಎಲ್ಲಾ ಪ್ರಯಾಣಿಕರಿಗೆ 5 ರೂಪಾಯಿ ಹಿಂದಿರುಗಿಸುವಂತೆ ಸೂಚಿಸಿದ್ದಾನೆ. ಇದರಂತೆ ವೆಂಡರ್ ಎಲ್ಲರಿಗೂ 5 ರೂಪಾಯಿ ವಾಪಸ್ ನೀಡಿದ್ದಾನೆ. ರೈಲ್ವೇ ಇಲಾಖೆ ಕ್ರಮ ಇಷ್ಟಕ್ಕೆ ಮುಗಿದಿಲ್ಲ. ವೆಂಡರ್‌ಗೆ ಬರೋಬ್ಬರಿ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

 

 

ಈ ಕುರಿತು ಪ್ರಯಾಣಿಕನ ವಿಡಿಯೋ, ರೈಲ್ವೇ ಇಲಾಖೆಯ ಕ್ರಮದ ಕುರಿತು ಮಿನಿಸ್ಟ್ರಿ ಆಫ್ ರೈಲ್ವೇಸ್ ವಿಡಿಯೋ ಹಂಚಿಕೊಂಡಿದೆ. ರೈಲಿನಲ್ಲಿ ಹೆಚ್ಚುವರಿ ಹಣ ಪಡೆಯುತ್ತಿರುವ ಕುರಿತು ಬಂದ ದೂರಿಗೆ ತಕ್ಷಣ ಕ್ರಮಕೈಗೊಳ್ಳಲಾಗಿದೆ. ವೆಂಡರ್‌ಗೆ 1 ಲಕ್ಷ ರೂಪಾಯಿ ಫೈನ್ ಹಾಕಲಾಗಿದೆ. ಜೊತೆಗೆ ಪ್ರಯಾಣಿಕರಿಂದ ಹೆಚ್ಚುವರಿಯಾಗಿ ಪಡೆದ 5 ರೂಪಾಯಿ ಮೊತ್ತವನ್ನು ಮರಳಿಸಲಾಗಿದೆ ಎಂದು ಟ್ವೀಟ್ ಮಾಡಿದೆ.

ಭಾರತೀಯ ರೈಲ್ವೇ ಪ್ರಯಾಣಿಕರ ಯಾವುದೇ ದೂರು ದುಮ್ಮಾನಗಳಿಗೆ ತಕ್ಷಣ ಸ್ಪಂದಿಸುತ್ತದೆ. ರೈಲು ಪ್ರಯಾಣದ ವೇಳೆ ಸುಲಭವಾಗಿ ರೈಲ್ವೇ ಸಹಾಯವಾಣಿಗೆ ದೂರು ನೀಡಿದರೆ ಮುಂದಿನ ನಿಲ್ದಾಣ ತಲುವುದೊರೊಳಗೆ ಕ್ರಮ ಕೈಗೊಳ್ಳಲಾಗುತ್ತದೆ. ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆ ಇಲಾಖೆ ಹೆಚ್ಚಿನ ಗಮನಹರಿಸಿದೆ. ಇದಕ್ಕಾಗಿ ಹಲವು ಸಹಾಯಾಣಿಗಳನ್ನು,ದೂರು ವಿಭಾಗಗಳನ್ನು ತೆರೆದಿದೆ. ಈ ಮೂಲಕ ಪ್ರಯಾಣಿಕರು ದೂರು ನೀಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು. 

ಒಂದೇ ಸ್ಥಳ, ಒಂದೇ ಪ್ಲಾಟ್‌ಫಾರ್ಮ್ ಆದರೆ ಎರಡು ರೈಲು ನಿಲ್ದಾಣ, ಈ ಸ್ಪೆಷಲ್ ಸ್ಟೇಶನ್ ಎಲ್ಲಿದೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್