ಸತತ ಹುಡುಕಾಟದ ಬಳಿಕ 20 ಗಂಟೆಯ ಬಳಿಕ ಮಗುವನ್ನ ಪತ್ತೆ ಹಚ್ಚುವಲ್ಲಿ ಗಾಂಧಿಚೌಕ ಪೊಲೀಸರು ಯಶಸ್ವಿಯಾಗಿದ್ದಾರೆ. ಮಗುವನ್ನ ಪೊಲೀಸರು ಹಸ್ತಾಂತರಿಸುತ್ತಿದ್ದಂತೆ ತಾಯಿ ರಾಮೇಶ್ವರಿ ಮಗುವನ್ನ ಎತ್ತಿಕೊಂಡು ಮುದ್ದಾಡಿದ್ದಾಳೆ. ಅಲ್ಲದೆ ಗೋಳೋ ಎಂದು ಕಣ್ಣೀರಿಟ್ಟ ದೃಶ್ಯಗಳು ಕಂಡು ಬಂದ್ವು.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ನ.24): ನಗರದ ಜಿಲ್ಲಾಸ್ಪತ್ರೆಯಲ್ಲಿ ಮಗು ಕಿಡ್ನಾಪ್ ಪ್ರಕರಣ ಸುಖಾಂತ್ಯಗೊಂಡಿದೆ. ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಗಾಂಧಿಚೌಕ ಪೊಲೀಸರು ಕೊನೆಗೂ ಮಗು ಹಾಗೂ ಕಿಡ್ನಾಪ್ ಮಾಡಿದ್ದ ಖದೀಮನನ್ನ ಪತ್ತೆ ಮಾಡಿದ್ದಾರೆ. ಇತ್ತ ತನ್ನ ಮಗುವನ್ನ ಕಂಡ ತಾಯಿ ಓಡೋಡಿ ಬಂದು ಮಗುವನ್ನ ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾಳೆ.
ಜಿಲ್ಲಾಸ್ಪತ್ರೆಯಲ್ಲಿ ಮಗು ಕಿಡ್ನಾಪ್..!
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಗಲಕೋಟೆ ಮೂಲದ ರಾಮೇಶ್ವರಿ ಪವಾರ್ ಮಹಿಳೆಯ 1 ವರ್ಷದ ಸಂದೀಪ್ ಎಂಬ ಮಗುವನ್ನ ಅಪರಿಚಿತ ವ್ಯಕ್ತಿ ಕಿಡ್ನಾಪ್ ಮಾಡಿ ಪರಾರಿಯಾಗಿದ್ದ. ಇನ್ನು ಜಿಲ್ಲಾಸ್ಪತ್ರೆಯಿಂದ ಮಗು ಮಿಸ್ಸಿಂಗ್ ಎನ್ನುವ ಸುದ್ದಿ ಜಿಲ್ಲೆಯ ಜನರನ್ನ ಗಾಭರಿ ಹುಟ್ಟಿಸಿತ್ತು. ಈ ಕುರಿತು ಮಾಹಿತಿ ಪಡೆದ ಗಾಂಧಿ ಚೌಕ ಪೊಲೀಸ್ ಪ್ರದೀಪ್ ತಳಕೇರಿ ಹಾಗೂ ತಂಡ ಮಗು ಪತ್ತೆಗೆಂದು ಪೀಲ್ಡಿಗಿಳಿದಿದೆ. ಸತತ ಹುಡುಕಾಟದ ಬಳಿಕ 20 ಗಂಟೆಯ ಬಳಿಕ ಮಗುವನ್ನ ಪತ್ತೆ ಹಚ್ಚುವಲ್ಲಿ ಗಾಂಧಿಚೌಕ ಪೊಲೀಸರು ಯಶಸ್ವಿಯಾಗಿದ್ದಾರೆ. ಮಗುವನ್ನ ಪೊಲೀಸರು ಹಸ್ತಾಂತರಿಸುತ್ತಿದ್ದಂತೆ ತಾಯಿ ರಾಮೇಶ್ವರಿ ಮಗುವನ್ನ ಎತ್ತಿಕೊಂಡು ಮುದ್ದಾಡಿದ್ದಾಳೆ. ಅಲ್ಲದೆ ಗೋಳೋ ಎಂದು ಕಣ್ಣೀರಿಟ್ಟ ದೃಶ್ಯಗಳು ಕಂಡು ಬಂದ್ವು.
ಧಾರವಾಡ: ಕಿಡ್ನ್ಯಾಪ್ ಕೇಸ್‌ನಲ್ಲಿ ನಾಲ್ವರ ಬಂಧನ, ಮಕ್ಕಳ ಅಪಹರಣದಲ್ಲಿ ತಾಯಂದಿರೇ ಶಾಮೀಲು!
ಅಷ್ಟಕ್ಕು ಆಗಿದ್ದೇನು, ಯಾರು ಆ ಅಪರಿಚಿತ?
ಕಳೆದ ಮೂರು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆ ಮುಧೋಳ ನಿವಾಸಿಗಳಾದ ರಾಮೇಶ್ವರಿ ಪವಾರ್ ಎಂಬ ಹೆಣ್ಣು ಮಗಳು, ತನ್ನ ವೃದ್ದ ತಾಯಿ ಪದ್ಮಾಳನ್ನ ಜಿಲ್ಲಾಸ್ಪತ್ರೆಯಲ್ಲಿ ಅಡ್ಮೀಟ್ ಮಾಡಿದ್ದು. ವಿಜಯಪುರದ ನೆಂಟರ ಮನೆಗೆ ಬಂದ ವೇಳೆ ವೃದ್ದೆ ಪದ್ಮಾಳ ಆರೋಗ್ಯ ಹದಗೆಟ್ಟಿದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಹೀಗಾಗಿ ತಾಯಿಯ ಆರೈಕೆಗೆಂದು ರಾಮೇಶ್ವರ ತನ್ನ 1ವರ್ಷದ ಮಗು ಸಂದೀಪ್ ಜೊತೆಗೆ ಆಸ್ಪತ್ರೆಯಲ್ಲಿದ್ದಳು. ಇನ್ನೂ ಮಧ್ಯಾಹ್ನ ಜಿಲ್ಲಾಸ್ಪತ್ರೆ ವೈದ್ಯರು ಪದ್ಮಾಳ ಕಫ ಪರೀಕ್ಷೆ ಮಾಡಿಕೊಂಡು ಬರುವಂತೆ ರಾಮೇಶ್ವರಿ ಸೂಚಿಸಿದ್ದರು. ಹೀಗಾಗಿ ತಾಯಿಯ ಜೊತೆಗೆ ತನ್ನ 1 ವರ್ಷದ ಮಗುವನ್ನ ಆಸ್ಪತ್ರೆಯ ವಾರ್ಡ್ ನಲ್ಲಿ ಬಿಟ್ಟು ತೆರಳಿದ್ದಳು. ಈ ವೇಳೆ ಅದೆ ವಾರ್ಡ ಎದುರಿದ್ದ ಅಪರಿಚಿತ ಆಸಾಮಿಯೊಬ್ಬ ಮಗುವನ್ನ ಕಿಡ್ನಾಪ್ ಮಾಡಿ ಎತ್ತಿಕೊಂಡು ಪರಾರಿಯಾಗಿದ್ದ.
50ರ ಅಂಕಲ್‌ನ ಪ್ರೀತಿ ಫಜೀತಿ, ಡೇಟ್‌ಗೆ ಕರೆದೊಯ್ದು ಕಿಡ್ನಾಪ್ ಮಾಡಿ 3 ಲಕ್ಷ ರೂಗೆ ಬೇಡಿಕೆ ಇಟ್ಟ ಗೆಳತಿ!
ಗಾಂಧಿಚೌಕ ಪೊಲೀಸರಿಗೆ ಚಾಲೆಂಜ್ ಆಗಿದ್ದ ಕೇಸ್..!
ಇನ್ನೂ ಜಿಲ್ಲಾಸ್ಪತ್ರೆಯಲ್ಲಿದ್ದ ಮಗು ಕಿಡ್ನಾಪ್ ಅಂದಾಗ ಸಹಜವಾಗಿಯೇ ಪರಿಸ್ಥಿತಿ ಗರಂ ಆಗಿತ್ತು. ಇತ್ತ ಮಗು ಕಾಣೆಯಾಗಿದ್ದರಿಂದ ಮಗುವಿನ ತಾಯಿ ರಾಮೇಶ್ವರ ಕಂಗಾಲಾಗಿ ಕಣ್ಣೀರಿಡುತ್ತಿದ್ದಳು. ಈ ಬಗ್ಗೆ ಪ್ರಕರಣ ಕೈಗೆತ್ತಿಕೊಂಡ ಗಾಂಧಿಚೌಕ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಆಸ್ಪತ್ರೆಯಲ್ಲಿದ್ದ ಸಿಸಿಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸಿಇಎನ್ ಡಿವೈಎಸ್ಪಿ ಸುನೀಲ್ ಕಾಂಬಳೆ, ರಮೇಶ್ ಅವಜಿ ಕೈಜೋಡಿಸಿದ್ದಾರೆ. ಹಲವು ಆಂಗಲ್ ಗಳಲ್ಲಿ ಪ್ರಕರಣವನ್ನ ಬೇಧಿಸಲು ತಂಡಗಳ ರಚನೆಯಾಗಿತ್ತು. ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ್ದ ಪೊಲೀಸ್ ನಗರದ ಜಿಲ್ಲಾಸ್ಪತ್ರೆ ಸುತ್ತಲಿನ 100ಕ್ಕು ಅಧಿಕ ಸಿಸಿ ಕ್ಯಾಮರಾಗಳನ್ನ ಪರಿಶೀಲನೆ ಮಾಡಲಾಗಿತ್ತು. ಸತತ 20 ಗಂಟೆಗಳ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗು ಕಿಡ್ನಾಪ್ ಮಾಡಿದ್ದ ವ್ಯಕ್ತಿಯನ್ನ ಬಂಧಿಸಿ ಮಗುವನ್ನ ವಶಕ್ಕೆ ಪಡೆದು ತಾಯಿಗೆ ಒಪ್ಪಿಸಿದ್ದಾರೆ. ಆರೋಪಿ ಜಿಲ್ಲಾಸ್ಪತ್ರೆಯ ಬಳಿ ಸುಳಿದಾಡುವಾಗಲೆ ಸಿಕ್ಕಿಬಿದ್ದಿದ್ದಾನೆ ಎನ್ನೋದು ಅಚ್ಚರಿ ಮೂಡಿಸಿದೆ.
ತನ್ನ ಮಗುವಿನಂತೆ ಇದೆ ಎಂದು ಕಿಡ್ನಾಪ್ ಮಾಡಿದ..!
ಇನ್ನು ಕಿಡ್ನಾಪ್ ಮಾಡಿ ಸಿಕ್ಕಿಬಿದ್ದ ಆಸಾಮಿಯನ್ನ ದೇವರಹಿಪ್ಪಗಿ ಮೂಲದ ರವಿ ಹರಿಜನ್ ಎನ್ನಲಾಗಿದೆ. ಮಗುವನ್ನ ಕಿಡ್ನಾಪ್ ಮಾಡಿ ಕಲಬುರ್ಗಿವರೆಗೂ ಹೋಗಿ ಮತ್ತೆ ವಾಪಸ್ ಬಂದಿದ್ದಾನೆ ಎನ್ನಲಾಗಿದೆ. ಇತ್ತ ಪೊಲೀಸರ ವಿಚಾರಣೆಯಲ್ಲಿ ಅಚ್ಚರಿಯ ಸಂಗತಿ ಬಿಚ್ಚಿಟ್ಟಿದ್ದಾನೆ. ಕಳೆದ ಎರಡು ದಿನಗಳಿಂದ ವಾರ್ಡ್ ನಂಬರ್ 123ರ ಬಳಿಯೇ ಸುಳಿದಾಡುತ್ತಿದ್ದ ಎನ್ನಲಾಗಿದೆ. ಮನೆಯಲ್ಲಿ ಆಸ್ಪತ್ರೆಗೆ ತೋರಿಸಿಕೊಂಡು ಬಾ ಎಂದು ಕಳಿಸಿದ್ರೆ, ಇಲ್ಲಿ ಕುಡಿದ ಮತ್ತಿನಲ್ಲಿ ಹೊರಡಾಳುತ್ತಿದ್ದನಂತೆ. ಅಲ್ಲದೆ ಕೆಲವರು ಹೇಳುವಂತೆ ಈ ಮಗುವನ್ನ ನೋಡಿ ನನ್ನ ಮಗುವಿನಂತೆಯೇ ಇದೆ ಎಂದು ಕೆಲವರ ಬಳಿ ಮಾತನಾಡಿದ್ದ ಎನ್ನಲಾಗಿದೆ. ಇನ್ನು ಪೊಲೀಸ್ ವಿಚಾರಣೆಯಲ್ಲಿ ಮಗು ಅಳುತ್ತಾ ಇತ್ತು, ಸಂತೈಸಲು ತೆಗೆದುಕೊಂಡೆ, ಬಳಿಕ ನನಗೆ ಕರೆ ಬಂತು ಮಗುವನ್ನ ಎತ್ತಿಕೊಂಡು ಹೋದೆ. ಬೆಳಿಗ್ಗೆ ಮತ್ತೆ ಮಗುವನ್ನ ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದೇನೆ ಎಂದಿದ್ದಾನೆ. ಆದ್ರೆ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.