ಮೋದಿ ಟ್ವಿಟರ್ ಖಾತೆಗೆ ಕನ್ನ, ಸಂಕಷ್ಟದಲ್ಲಿ ಸಂಜನಾ ರಾಖಿ ಕಟ್ಟಿದ ಅಣ್ಣ; ಸೆ.3ರ ಟಾಪ್ 10 ಸುದ್ದಿ!

By Suvarna NewsFirst Published Sep 3, 2020, 4:45 PM IST
Highlights

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಿಎಂ ಕೇರ್ಸ್‌ ಫಂಡ್‌ಗೆ 2.25 ಲಕ್ಷ ರೂ. ದಾನ ಮಾಡಿದ್ದಾರೆ. ಚೀನಾ ಗಡಿಯಲ್ಲಿ ಮತ್ತೆ ಯುದ್ಧ ಸ್ಥಿತಿ ನಿರ್ಮಾಣವಾಗಿದೆ. ‘ಫೈರಿಂಗ್‌ ರೇಂಜ್‌’ನಲ್ಲಿ ಯೋಧರ ಜಮಾವಣೆ ಮಾಡಲಾಗಿದೆ. ಸಿಎಸ್‌ಕೆ ಉಪನಾಯಕನ ಕುತೂಹಲಕ್ಕೆ ಉತ್ತರ ನೀಡಿದ ಫ್ರಾಂಚೈಸಿ. ಸಂಜನಾ ರಾಖಿ ಕಟ್ಟಿದ ಆಪ್ತನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್, ಮೋದಿ ಟ್ವಿಟರ್ ಖಾತೆ ಹ್ಯಾಕ್ ಸೇರಿದಂತೆ ಸೆಪ್ಟೆಂಬರ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ತಮ್ಮ ಉಳಿತಾಯದ 2.25 ಲಕ್ಷ ರೂ. ಪಿಎಂ ಕೇರ್ಸ್‌ ಫಂಡ್‌ಗೆ ದಾನ ಮಾಡಿದ ಮೋದಿ!...

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಿಎಂ ಕೇರ್ಸ್‌ ಫಂಡ್‌ಗೆ 2.25 ಲಕ್ಷ ರೂ. ದಾನ ಮಾಡಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 

ಚೀನಾ ಗಡಿಯಲ್ಲಿ ಮತ್ತೆ ಯುದ್ಧ ಸ್ಥಿತಿ: ‘ಫೈರಿಂಗ್‌ ರೇಂಜ್‌’ನಲ್ಲಿ ಯೋಧರ ಜಮಾವಣೆ!...

ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಬಣ್ಣದ ಮಾತುಗಳನ್ನು ಆಡಿ, ಭಾರತದ ಭೂಪ್ರದೇಶಗಳನ್ನು ವಶಪಡಿಸಿಕೊಳ್ಳಲು ಚೀನಾ ಎರಡು ಬಾರಿ ಯತ್ನಿಸಿದ ಬಳಿಕ ಗಡಿಯಲ್ಲಿ ಯುದ್ಧದ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ಹಾಗೂ ಚೀನಾ ಪಡೆಗಳು ‘ಪರಸ್ಪರ ಗುಂಡಿನ ಚಕಮಕಿ ನಡೆಸಬಹುದಾದಷ್ಟುಸಮೀಪದಲ್ಲಿ’ (ಫೈರಿಂಗ್‌ ರೇಂಜ್‌ನಲ್ಲಿ) ಎದುರು ಬದುರಾಗಿ ಜಮಾವಣೆಗೊಂಡಿವೆ ಎಂದು ವಿಶ್ವಾಸಾರ್ಹ ಮೂಲಗಳು ಹೇಳಿವೆ.

ಪ್ರಧಾನಿ ಮೋದಿ ವೈಯುಕ್ತಿಕ ಟ್ವಿಟರ್ ಖಾತೆ ಹ್ಯಾಕ್, ಬೇಕಾಬಿಟ್ಟಿ ಪೋಸ್ಟ್!...

ಪ್ರಧಾನಿ ನರೇಂದ್ರ ಮೋದಿಯವರ ವೈಯಯಕ್ತಿಕ ವೆಬ್ ಸೈಟ್ ಹಾಗೂ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉಪ ನಾಯಕ ಯಾರು..? ಕುತೂಹಲಕ್ಕೆ ತೆರೆ ಎಳೆದ ಸಿಎಸ್‌ಕೆ...

ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಸುರೇಶ್ ರೈನಾ ಹೊರಬಿದ್ದಿದ್ದರು. ಇದರ ಬೆನ್ನಲ್ಲೇ ಸಿಎಸ್‌ಕೆ ಅಭಿಮಾನಿಗಳಲ್ಲಿ ಸಿಎಸ್‌ಕೆ ತಂಡದ ಉಪನಾಯಕ ಯಾರು ಎನ್ನುವ ಕುತೂಹಲ ಜೋರಾಗಿದೆ. ಇದಕ್ಕೆ ಸಿಎಸ್‌ಕೆ ಚಾಣಾಕ್ಷ ಉತ್ತರವನ್ನೇ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

RTO ಕ್ಲರ್ಕ್ ಜೊತೆ ರಾಗಿಣಿ ಲಿವಿಂಗ್ ಇನ್‌ ರಿಲೇಷನ್‌ನ ರಹಸ್ಯ ಇದು!...

ಸಿಸಿಬಿ ಕಚೇರಿಯಲ್ಲಿ ರವಿಶಂಕರ್ ವಿಚಾರಣೆ ಬುಧವಾರದಿಂದಲೂ ನಡೆಯುತ್ತಿದೆ. ಆಪ್ತ ಗೆಳೆಯ ರವಿ ಶಂಕರ್ ಮಾಹಿತಿ ಮೇರೆಗೆ ರಾಗಿಣಿ ದ್ವಿವೇದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

'ನಾನು ರಾಕಿ ಕಟ್ಟಿದ ಅಣ್ಣ ರಾಹುಲ್, ಅವರ ಬಗ್ಗೆ ನನಗೆ ಆತಂಕವಾಗ್ತಿದೆ'...

ಡ್ರಗ್ಸ್ ಮಾಫಿಯಾ ವಿಚಾರ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಕೋಲಾಹಲ ಸೃಷ್ಟಿಸಿದೆ. ನಟಿ ರಾಗಿಣಿ ಬೆನ್ನಲ್ಲೇ, ಸಂಜನಾ ಆಪ್ತ ರಾಹುಲ್‌ನನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಈ ಸಂಂಧ ನಟಿ ಸಂಜನಾ ಪ್ರತಿಕ್ರಿಯಿಸಿದ್ದಾರೆ.

ಜಿಎಸ್‌ಟಿ ನಷ್ಟ ಭರ್ತಿಗೆ 11324 ಕೋಟಿ ರೂ ಸಾಲ.: ಕೇಂದ್ರದ ಒಂದನೇ ಆಯ್ಕೆ ಒಪ್ಪಿದ ರಾಜ್ಯ!...

ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಪರಿಹಾರದ ಕುರಿತು ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳ ಪೈಕಿ ರಾಜ್ಯಕ್ಕೆ ಹೆಚ್ಚು ಅನುಕೂಲವಾಗುವ ಮೊದಲನೇ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಪ್ರಕಾರ, 18,289 ಕೋಟಿ ಪರಿಹಾರ ಪಡೆಯಲು ತೀರ್ಮಾನಿಸಿದೆ.

ಅತ್ಯಂತ ಸುರಕ್ಷಿತ ನೆಕ್ಸಾನ್ XM (S) ವೇರಿಯೆಂಟ್ ಲಾಂಚ್ ಮಾಡಿದ ಟಾಟಾ ಮೋಟಾರ್ಸ್!...

ಟಾಟಾ ಮೋಟಾರ್ಸ ಕಾರುಗಳ ಪೈಕಿ ಗ್ರಾಹಕರ ನೆಚ್ಚಿನ ಕಾರಾಗಿರುವ ಟಾಟಾ ನೆಕ್ಸಾನ್ ಇದೀಗ ಮತ್ತೊಂದು ವೇರಿಯೆಂಟ್ ಬಿಡುಗಡೆಯಾಗಿದೆ.  ಟಾಟಾ ನೆಕ್ಸಾನ್ XM (S) ವೇರಿಯೆಂಟ್ ಕಾರು ಲಾಂಚ್ ಆಗಿದೆ. ಈ ಕಾರಿನ ವಿಶೇಷತೆ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

15ರೊಳಗೆ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ...

ಪ್ರೌಢ ಶಾಲಾ ಶಿಕ್ಷಕರಿಗೆ ಸೆ.9ರೊಳಗೆ ಚರ್ಚಿಸಿ 15ರೊಳಗೆ ಕೌನ್ಸೆಲಿಂಗ್‌ ನಡೆಸಿ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್....!...

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಇದರೊಂದಿಗೆ ಹಬ್ಬಿದ್ದ ಎಲ್ಲಾ ವದಂತಿಗಳಿಗೆ ಗೊಂದಲಗಳಿಗೆ ತೆರೆ.

click me!