ಹೆದ್ದಾರಿಗಳ ಬಳಿ ಟ್ರಾಮಾ ಕೇರ್‌ ಕೇಂದ್ರ ಸ್ಥಾಪಿಸಿ: ಭಾಸ್ಕರ್‌ ರಾವ್‌

By Kannadaprabha NewsFirst Published May 3, 2024, 6:23 AM IST
Highlights

ಅತ್ಯುತ್ತಮ ಹೆದ್ದಾರಿಗಳ ಜೊತೆಗೆ ಅತ್ಯುತ್ತಮ ಟ್ರಾಮಾ ಕೇರ್ ಕೇಂದ್ರಗಳು ಅಗತ್ಯವಿದೆ ಎಂದು ಬಿಜೆಪಿ ಮುಖಂಡ ಹಾಗೂ ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಹೇಳಿದ್ದಾರೆ. 

ಬೆಂಗಳೂರು (ಮೇ.03): ಅತ್ಯುತ್ತಮ ಹೆದ್ದಾರಿಗಳ ಜೊತೆಗೆ ಅತ್ಯುತ್ತಮ ಟ್ರಾಮಾ ಕೇರ್ ಕೇಂದ್ರಗಳು ಅಗತ್ಯವಿದೆ ಎಂದು ಬಿಜೆಪಿ ಮುಖಂಡ ಹಾಗೂ ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಹೇಳಿದ್ದಾರೆ. ಕಳೆದು ತಿಂಗಳು ಸಂಭವಿಸಿದ ತಮ್ಮ ವಾಹನದ ರಸ್ತೆ ಅಪಘಾತದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. ಇದೇ ವೇಳೆ ಅಪಘಾತ ಘಟನೆ ಕುರಿತು ತನಿಖೆಗೆ ಪರಿಗಣಿಸಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಒತ್ತಾಯಿಸಿದ್ದಾರೆ.

ಏ.23 ರಂದು ಆಂಧ್ರಪ್ರದೇಶದ ಅನಂತಪುರ ಮತ್ತು ಕದ್ರಿ ನಡುವಿನ ಟೊಯೋಟಾ ಇನ್ನೋವಾ ಹೈಬ್ರಿಡ್ ಹೈಕ್ರಾಸ್‌ನಲ್ಲಿ ಚಾಲನೆ ಮಾಡುವಾಗ ಗಂಭೀರವಾದ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ನಿರ್ಮಾಣ ಮತ್ತು ಯಾವುದೇ ಎಚ್ಚರಿಕೆಯಿಲ್ಲದೆ ಲೇನ್‌ಗಳ ಮಿಶ್ರಣದಿಂದಾಗಿ, ಟಿಪ್ಪರ್‌ಗೆ ಮುಖಾಮುಖಿ ಡಿಕ್ಕಿಯಾಗುವುದನ್ನು ತಪ್ಪಿಸಿ, ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಗುದ್ದಲಾಗಿದೆ. ನಮ್ಮ ವಾಹನವು ಮೂರು ಬಾರಿ ಉರುಳಿದ್ದು, ವಾಹನದಲ್ಲಿದ್ದವರು ಜೀವಂತವಾಗಿದ್ದಾರೆ ಎಂದಿದ್ದಾರೆ.

ರಾಹುಲ್‌ ಗಾಂಧಿ ಪಿಎಂ ಆಗಲೆಂದು ಪಾಕಿಸ್ತಾನ ಬಯಕೆ: ಪ್ರಧಾನಿ ಮೋದಿ

ನನ್ನ ವಾಹನದಲ್ಲಿದ್ದ ವೆಂಕಿ ತೀವ್ರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿದ್ದಾರೆ. ನನಗೆ ಪಕ್ಕೆಲುಬುಗಳು ಮುರಿತವಾಗಿವೆ. ಕಿರಣ್‌ ಮತ್ತು ಬಾಬು ಸುರಕ್ಷಿತವಾಗಿದ್ದಾರೆ. ಸೀಟ್‌ ಬೆಲ್ಟ್‌ ಮತ್ತು ಏರ್‌ಬ್ಯಾಗ್‌ಗಳು ನಮ್ಮನ್ನು ಉಳಿಸಿದವು. ಘಟನೆ ನಡೆದ ಕೂಡಲೇ ಬಾತ್ಪಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಿರ್ಜನ ಪ್ರದೇಶದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳ ಕಾರ್ಯದ ದಕ್ಷತೆಯನ್ನು ಮೆಚ್ಚಲೇಬೇಕು. ಇಂತಹ ಕೇಂದ್ರಗಳನ್ನು ಸ್ಥಾಪಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಕಾರ್ಯ ಶ್ಲಾಘನೀಯ. ಕೆಲವು ಒಳ್ಳೆಯ ನಾಯಕರು ಅತ್ಯುತ್ತಮ ಕೆಲಸ ಮಾಡುವವರಿದ್ದಾರೆ ಎಂದು ಹೇಳಿದ್ದಾರೆ.

click me!