ಹೊರ ರಾಜ್ಯದಿಂದ ಬರೋರಿಗೆ ಹೊಸ ರೂಲ್ಸ್, ಕಂದಮ್ಮನ ಜೊತೆ ಪುನೀತ್ ಡ್ಯಾನ್ಸ್; ಜೂ.28ರ ಟಾಪ್ 10 ಸುದ್ದಿ!

By Suvarna NewsFirst Published Jun 28, 2020, 4:58 PM IST
Highlights

ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ನಿಯಮ ಬಿಗಿಯಾಗುತ್ತಿದೆ. ಹೊರ ರಾಜ್ಯದಿಂದ ಬರುವವರಿಗೆ ಹೊಸ ನಿಯಮ ಜಾರಿಯಾಗಿದೆ.  ಕದ್ದು ಮುಚ್ಚಿ ಅದ್ಧೂರಿ ಮದುವೆ ಮಾಡಿದ ಕುಂಟಂಬಕ್ಕೆ ಇದೀಗ ಕೊರೋನಾ ವೈರಸ್ ಸೈಲೆಂಟ್ ಆಗಿ ಎಂಟ್ರಿಕೊಟ್ಟಿದೆ. ಬೆಂಗಳೂರಿನಲ್ಲಿ ಕೊರೋನಾ ಸ್ಫೋಟಗೊಂಡಿರುವ ಕಾರಣ ಜನ ಊರಿನತ್ತ ಮುಖಮಾಡುತ್ತಿದ್ದಾರೆ. ಕಂದಮ್ಮನ ಜೊತೆ ಪುನೀತ್ ರಾಜ್‌ಕುಮಾರ್ ಡ್ಯಾನ್ಸ್, ಎಟಿಂ ಹಣ ಪಡೆಯಲು ಹೊಸ ನಿಯಮ ಸೇರಿದಂತೆ ಜೂನ್ 28ರ ಟಾಪ್ 10 ಸುದ್ದಿ ಇಲ್ಲಿವೆ.

ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರೋರಿಗೆ ರೂಲ್ಸ್ ಬದಲಿಸಿದ ಸರ್ಕಾರ

ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ಮಾರ್ಗಸೂಚಿಯಲ್ಲಿ ರಾಜ್ಯ ಸರ್ಕಾರ ಮತ್ತೆ ಬದಲಾವಣೆಯನ್ನು ಮಾಡಿದೆ.

ಮದುವೆಗೆ 50ಕ್ಕೂ ಅಧಿಕ ಜನರ ಸೇರಿಸಿದ ಕುಟುಂಬಕ್ಕೆ ಯಾವ ಸ್ಥಿತಿ ಬಂತು ನೋಡಿ!

ಮದುವೆಗೆ  50  ಜನರನ್ನು ಮಾತ್ರ ಆಹ್ವಾನಿಸಿ, ಮಾಸ್ಕ್ ಬಳಕೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪದೇ ಪದೇ ಹೇಳುತ್ತಿದ್ದರೂ ಅದನ್ನು ಮುರಿದ ಕುಟುಂಬವೊಂದು ಈಗ ದೊಡ್ಡ ಮೊತ್ತದ ದಂಡ ತುಂಬಬೇಕಾಗಿ ಬಂದಿದೆ

ಗಡಿಯಲ್ಲಿ ಮತ್ತೆ ಚೀನಾ ಕ್ಯಾತೆ, ಬುಲ್ಡೋಜರ್‌ಗ ಓಡಾಟ!

ಚೀನಾ ತನ್ನ ಹುಟ್ಟು ಗುಣವನ್ನು ಕೆಟ್ಟರೂ ಬಿಡುತ್ತಿಲ್ಲ. ಭಾರತದ ಗಡಿಯಲ್ಲಿ ಚೀನಾ ತನ್ನ ಪುಂಡಾಟ ಮುಂದುವರೆಸಿದೆ. ಒಂದೆಡೆ ಇಲ್ಲಿ ಫೈಟರ್ ಜೆಟ್ ಹೆಲಿಕಾಪ್ಟರ್‌ಗಳು ಹಾರಾಡುತ್ತಿದ್ದರೆ, ಮತ್ತೊಂದೆಡೆ ಸುಖೋಯ್ 30 ಸೇರಿ ಬಾಂಬರ್‌ಗಳ ನಿಯೋಜನೆ ಮಾಡಿದ್ದು, ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡುವ ಸಾಧ್ಯತೆಗಳಿವೆ. 

ಕೊರೋನಾ ಸ್ಫೋಟಕ್ಕೆ ಬೆಚ್ಚಿಬಿದ್ದ ಬೆಂಗಳೂರಿಗರು: ವೈರಸ್‌ ಭಯಕ್ಕೆ ಊರು ಬಿಡ್ತಿದ್ದಾರೆ ಜನ.....

ಕೊರೋನಾ ಅಟ್ಟಹಾಸಕ್ಕೆ ನಗರದ ಜನ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳಿಂದಾಗಿ ಅನ್ಯ ಜಿಲ್ಲೆಗಳ ಜನ ಬೆಂಗಳೂರು ನಗರವನ್ನ ತೊರೆಯುತ್ತಿದ್ದಾರೆ. ಗುಂಪು ಗುಂಪಾಗಿ ತಮ್ಮ ಊರುಗಳತ್ತ ಜನರು ಮುಖ ಮಾಡುತ್ತಿದ್ದಾರೆ.

IPL ನಲ್ಲಿ ಸಿಗದ ಅವಕಾಶ; ವಿದೇಶದತ್ತ ಮುಖ ಮಾಡಿದ ಸ್ಟಾರ್ ಸ್ಪಿನ್ನರ್..!

ಐಪಿ​ಎಲ್‌ನಲ್ಲಿ ಆಡಲು ಅನ​ರ್ಹ​ರಾದ ಮುಂಬೈ ಮೂಲದ 48 ವರ್ಷದ ಲೆಗ್‌ ಸ್ಪಿನ್ನರ್‌ ಪ್ರವೀಣ್‌ ತಾಂಬೆ, ಕೆರಿ​ಬಿ​ಯನ್‌ ಪ್ರೀಮಿ​ಯರ್‌ ಲೀಗ್‌ (ಸಿ​ಪಿ​ಎಲ್‌) ಟಿ20 ಟೂರ್ನಿ​ಯಲ್ಲಿ ಆಡುವ ಅವ​ಕಾಶ ಪಡೆ​ದಿ​ದ್ದಾರೆ. ವಿದೇಶಿ ಲೀಗ್‌ನಲ್ಲಿ ಆಡಿದ ಭಾರತದ ಆಟಗಾರರಿಗೆ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಅವಕಾಶ ನೀಡುವುದಿಲ್ಲ. ಹೀಗಿದ್ದೂ ಆಟಗಾರರ ಹರಾಜಿನಲ್ಲಿ ತಾಂಬೆಯನ್ನು 20 ಲಕ್ಷ ರುಪಾಯಿ ಮೂಲ ಬೆಲೆಗೆ ಕೋಲ್ಕತ್ ನೈಟ್ ರೈಡರ್ಸ್ ತಂಡ ಖರೀದಿಸಿತ್ತು. ಆದರೆ ಆ ಬಳಿಕ ಬಿಸಿಸಿಐ ತಾಂಬೆ ಹರಾಜನ್ನು ರದ್ದು ಮಾಡಿತ್ತು.

ಪುಟ್ಟ ಕಂದಮ್ಮನ ಜತೆ 'ಬುಟ್ಟ ಬೊಮ್ಮ' ಹಾಡಿಗೆ ಹೆಜ್ಜೆ ಹಾಕಿದ ಪುನೀತ್‌ ವಿಡಿಯೋ ವೈರಲ್!...

ಪವರ್‌ ಸ್ಟಾರ್ ಕ್ರೇಜಿ ಲಿಟಲ್ ಫ್ಯಾನ್‌ ಜೊತೆ ಅಲ್ಲು ಅರ್ಜುನ್‌ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್, ಹೇಗಿದೆ ನೀವೂ ನೋಡಿದ್ರಾ? 

SBI ಗ್ರಾಹಕರೇ ಗಮನಿಸಿ, ಜುಲೈ 1 ರಿಂದ ATM ಹಣ ಪಡೆಯುವ ನಿಯಮ ಬದಲು! 

ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಬ್ಯಾಂಕ್‌ಗಳು ಹೊಸ ನಿಯಮ ಜಾರಿಗೆ ತಂದಿತ್ತು. ಸಾಲ ಮರುಪಾವತಿ ಮುಂದೂಡಿಕೆ, ಎಟಿಎಂ ಹಣ ಪಡೆಯುವ ನೀತಿ ಬದಲು ಸೇರಿದಂತೆ ಹಲವು ನಿಯಮ ಬದಲಿಸಿತ್ತು. ಇದೀಗ SBI ಬ್ಯಾಂಕ್, ಜುಲೈ 1 ರಿಂದ ಮತ್ತೆ ನಿಯಮ ಬದಲಿಸುತ್ತಿದೆ. ಎಟಿಎಂನಿಂದ ಹಣ ಪಡೆಯುವ ರೂಲ್ಸ್ ಬದಲಾಗುತ್ತಿದೆ.

ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಮುನ್ನ ತಿಳಿದುಕೊಳ್ಳಿ ಹೊಸ ನಿಯಮ

ಬಹುತೇಕರಿಗೆ ತಲೆ ನೋವು ತರಿಸುವ ಕೆಲಸ ಆದಾಯ ತೆರಿಗೆ ಪಾವತಿ. ಶ್ರೀಮಂತರಿಗೆ ಕೋಟಿ ಕೋಟಿ ರೂಪಾಯಿ ತೆರಿಗೆ ಪಾವತಿಸುವ ಚಿಂತೆಯಾದರೆ, ಮಧ್ಯಮ ವರ್ಗಕ್ಕೆ ತೆರಿಗೆ ಉಳಿಸಿಕೊಳ್ಳುವ ಚಿಂತೆ. 2019-20ರ ಸಾಲಿನ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಫಿಲ್ ಮಾಡಲು ಹೊರಟವರು ಹೊಸ ವಿಧಾನ, ಹೊಸ ನಿಯಮಗಳನ್ನು ಗಮಿಸಲೇಬೇಕು. 

ಮುಳುಗುತ್ತಿರುವ ಬೋಟ್ ರಕ್ಷಿಸಲು ಕೆರೆಗೆ ಜೀಪ್, ಪಿಕ್ಅಪ್ ಇಳಿಸಿ ಕೈಸುಟ್ಟುಕೊಂಡ ಮಾಲೀಕ!

ಅದೃಷ್ಟ ಕೈಕೊಟ್ಟರೆ ಕ್ಷಣಮಾತ್ರದಲ್ಲಿ ಎಲ್ಲವೂ ನಷ್ಟವಾಗಲಿದೆ. ಆದರೆ ಕೆಲವರು ಸಮಯ ಪ್ರಜ್ಞೆ, ಪರಿಶ್ರಮ, ಇತರರ ಸಹಾಯದಿಂದ ಅಪಾಯವನ್ನು ತಪ್ಪಿಸುತ್ತಾರೆ. ಇಲ್ಲೊಬ್ಬ ಮಾಲೀಕ ನಿಮಿಷದ ಅಂತರದಲ್ಲಿ 2.26 ಕೋಟಿ ರೂಪಾಯಿ ಜೊತೆಗೆ ತನ್ನರೆಡು ವಾಹನನ್ನು ಕಳೆದುಕೊಂಡಿದ್ದಾನೆ. ಮುಳುಗುತ್ತಿರುವ ಬೋಟ್ ರಕ್ಷಿಸಲು ಮಾಡಿದ ಎಡವಟ್ಟು ಐಡಿಯಾವೇ ಮಳುವಾಯಿತು.

ಬೆಂಗಳೂರು; 'ಬಿಲ್ ಪೇ ಮಾಡಿ' ವ್ಯಕ್ತಿ ನಿಧನವಾಗಿ 3 ದಿನವಾದರೂ ಶವ ಹಸ್ತಾಂತರಿಸದ ಆಸ್ಪತ್ರೆ!.

ಕೊರೋನಾ ಹೆಸರಲ್ಲಿ ಸುಲಿಗೆ ಶುರುವಾಗಿದೆ. ಮೃತದೇಹ ಇಟ್ಟುಕೊಂಡು ವ್ಯವಹಾರ ನಡೆಯುತ್ತಿದೆ. ಸಾವಿಗಿಂತ ಆಸ್ಪತ್ರೆಗೆ ಹಣವೇ ಮುಖ್ಯವಾಗಿದೆ.

click me!