Asianet Suvarna News

ಕೊರೋನಾ ಸ್ಫೋಟಕ್ಕೆ ಬೆಚ್ಚಿಬಿದ್ದ ಬೆಂಗಳೂರಿಗರು: ವೈರಸ್‌ ಭಯಕ್ಕೆ ಊರು ಬಿಡ್ತಿದ್ದಾರೆ ಜನ..!

Jun 28, 2020, 3:20 PM IST

ನೆಲಮಂಗಲ(ಜೂ.28): ಕೊರೋನಾ ಅಟ್ಟಹಾಸಕ್ಕೆ ನಗರದ ಜನ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳಿಂದಾಗಿ ಅನ್ಯ ಜಿಲ್ಲೆಗಳ ಜನ ಬೆಂಗಳೂರು ನಗರವನ್ನ ತೊರೆಯುತ್ತಿದ್ದಾರೆ. ಗುಂಪು ಗುಂಪಾಗಿ ತಮ್ಮ ಊರುಗಳತ್ತ ಜನರು ಮುಖ ಮಾಡುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಕೊರೊನಾದಿಂದ ಹೆಡ್‌ಕಾನ್ಸ್‌ಸ್ಟೇಬಲ್ ಸಾವು

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಕೇಸ್‌ಗಳು ಪತ್ತೆಯಾಗುತ್ತಿವೆ. ಇದರಿಂದ ನಗರದ ಜನತೆ ಕಂಗಾಲಾಗಿ ಹೋಗಿದ್ದಾರೆ. ಮನೆ ಬಿಟ್ಟು ಆಚೆ ಬರೋದಕ್ಕೂ ಜನರು ಹಿಂದೆ ಮುಂದೆ ನೋಡುತ್ತಿದ್ದಾರೆ. ಗಳೂರಿನಲ್ಲಿ ನೆಲೆಸಿದ್ದ ಅನ್ಯ ಜಿಲ್ಲೆಗಳ ಜನರು ತಮ್ಮ ಊರುಗಳನ್ನನ ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ ತೂಮಕೂರು ರಸ್ತೆಯಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ.