ಹಿಂದು ಧರ್ಮ ಪ್ರಚಾರ, ರಕ್ಷಣೆಗೆ ಶ್ರಮಿಸಿದ ಶಂಕರರು: ನಿತ್ಯಸ್ಥಾನಂದ ಸ್ವಾಮೀಜಿ

By Kannadaprabha News  |  First Published May 17, 2024, 11:22 PM IST

ಅದ್ವೈತ ಸಿದ್ಧಾಂತದ ಪ್ರತಿಪಾದಕರಾಗಿದ್ದ ಶಂಕರಾಚಾರ್ಯರು ಬಹುದೊಡ್ಡ ತತ್ವಜ್ಞಾನಿಯಾಗಿದ್ದು, ಭಾರತದಾದ್ಯಂತ ಸಂಚರಿಸಿ ಹಿಂದು ಧರ್ಮದ ಪ್ರಚಾರ ಹಾಗೂ ರಕ್ಷಣೆಗಾಗಿ ಅಪರಿಮಿತವಾಗಿ ಶ್ರಮಿಸಿದ್ದರು ಎಂದು ಶ್ರೀರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಸ್ಥಾನಂದ ಮಹಾರಾಜ್‌ ತಿಳಿಸಿದ್ದಾರೆ. 


ಬೆಂಗಳೂರು (ಮೇ.17): ಅದ್ವೈತ ಸಿದ್ಧಾಂತದ ಪ್ರತಿಪಾದಕರಾಗಿದ್ದ ಶಂಕರಾಚಾರ್ಯರು ಬಹುದೊಡ್ಡ ತತ್ವಜ್ಞಾನಿಯಾಗಿದ್ದು, ಭಾರತದಾದ್ಯಂತ ಸಂಚರಿಸಿ ಹಿಂದು ಧರ್ಮದ ಪ್ರಚಾರ ಹಾಗೂ ರಕ್ಷಣೆಗಾಗಿ ಅಪರಿಮಿತವಾಗಿ ಶ್ರಮಿಸಿದ್ದರು ಎಂದು ಶ್ರೀರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಸ್ಥಾನಂದ ಮಹಾರಾಜ್‌ ತಿಳಿಸಿದ್ದಾರೆ. ನಗರದ ಸುಚಿತ್ರ ಫಿಲ್ಮ್‌ ಸೊಸೈಟಿಯ ನಾಣಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯೋಧ್ಯ ಪ್ರಕಾಶನ ಪ್ರಕಟಿಸಿರುವ ಲೇಖಕ ಡಾ.ಗಣಪತಿ ಆರ್‌. ಭಟ್ ರಚನೆಯ ‘ಕನ್ನಡದಲ್ಲಿ ಶ್ರೀಶಂಕರ-ಶಾಂಕರ ತತ್ವಗಳ ಭಾವಾನುವಾದ’ ಸೇರಿದಂತೆ ವಿವಿಧ 15 ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಎರಡು ಸಂದರ್ಭದಲ್ಲಿ ಭಾರತವನ್ನು ರಕ್ಷಿಸಿದವರು ಬುದ್ಧ ಹಾಗೂ ಶಂಕರಾಚಾರ್ಯರು. ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಭಾರತದ ರಕ್ಷಣೆಗೆ ನೆರವಾಯಿತು ಎಂದು ಸ್ವತಃ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದರು. ಶಂಕರಾಚಾರ್ಯರು ತತ್ತ್ವಜ್ಞಾನಿಗಳಾಗಿದ್ದರು. ಆಧ್ಯಾತ್ಮ ಗುರು ಹಾಗೂ ಪರಮ ಭಕ್ತರಾಗಿದ್ದ ಅವರು, ಭಾರತದಾದ್ಯಂತ ಸಂಚರಿಸಿ ಹಿಂದು ಧರ್ಮ ಪ್ರಚಾರ ಹಾಗೂ ರಕ್ಷಣೆಗೆ ಅವಿರತ ಶ್ರಮ ವಹಿಸಿದ್ದರು ಎಂದು ಸ್ಮರಿಸಿಕೊಂಡರು. ವಿದ್ವಾಂಸ ಶತಾವಧಾನಿ ಆರ್.ಗಣೇಶ್ ಮಾತನಾಡಿ, ನಮ್ಮ ದೇಶ ಹಾಗೂ ತತ್ತ್ವ ಜ್ಞಾನಕ್ಕೆ ದೊಡ್ಡ ಕೊಡುಗೆ ನೀಡಿದದವರು ಬುದ್ಧ, ಬಸವಣ್ಣ, ರಾಮಾನುಜಾಚಾರ್ಯ ಮತ್ತು ಶಂಕರಚಾರ್ಯ. ಭಗವಾನ್ ಬುದ್ಧರನ್ನು ಶಂಕರಚಾರ್ಯರು ವಿರೋಧಿಸಿದ್ದರು. 

Tap to resize

Latest Videos

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ: ಬೊಮ್ಮಾಯಿ

ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಸ್ತೂಪ ನಾಶಪಡಿಸಿದ್ದರು ಎಂದು ಕೆಲವರು ಆರೋಪಿಸುತ್ತಾರೆ. ಅದಕ್ಕೆ ಯಾವುದೇ ದಾಖಲೆ ಲಭವಿಸಿಲ್ಲ. ಬೌದ್ಧ ಧರ್ಮ ಭಾರತದಲ್ಲಿ ನಶಿಸಿ ಹೋಗಲು ಶಂಕರರು ಅಥವಾ ಹಿಂದುಗಳು ಕಾರಣರಲ್ಲ. ಬದಲಾಗಿ ಮುಸಲ್ಮಾನರು ಎಂಬುದಾಗಿ ಕಮ್ಯುನಿಸ್ಟ್ ವಿದ್ವಾಂಸರೊಬ್ಬರು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ ಎಂದರು. ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಮಾತನಾಡಿ, ಬ್ರೀಟಿಷರು ನಮ್ಮನ್ನು ಆಳ್ವಿಕೆ ಮಾಡದಿದ್ದರೆ ಭಾರತ ನಾಗರೀಕ ದೇಶವಾಗುತ್ತಿರಲಿಲ್ಲ. ಭಾರತೀಯರಿಗೆ ನಾಗರಿಕತೆ ಕಲಿಸಿದವರೇ ಬ್ರಿಟಿಷರು ಇತಿಹಾಸದ ಪ್ರಜ್ಞೆ ಹಾಗೂ ಶಿಕ್ಷಣದ ಕುರಿತು ನಮ್ಮವರಿಗೆ ಅರಿವು ಇರಲಿಲ್ಲ. ವಿಜ್ಞಾನ-ತಂತ್ರಜ್ಞಾನ ತಿಳಿದಿರಲಿಲ್ಲ ಎಂದು ಜನರ ಮನಸ್ಸಿಗೆ ತುಂಬಿಸಲಾಗಿದೆ ಎಂದು ತಿಳಿಸಿದರು.

ಮಾಧ್ಯಮಕ್ಕೆ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿಯಿದೆ: ಕಲ್ಲಡ್ಕ ಪ್ರಭಾಕರ ಭಟ್

ಸದ್ಯ ಭಾರತದ ಕುರಿತು ನಕರಾತ್ಮಕ ಭಾವನೆ ತುಂಬಲು ವ್ಯವಸ್ಥಿತವಾದ ಚಿಂತನೆ ನಡೆಯುತ್ತಿದೆ. ಬ್ರಿಟಿಷರು ಬರುವ ಮುನ್ನವೇ ನಮ್ಮ ದೇಶ ಶ್ರೇಷ್ಠವಾಗಿತ್ತು. ಜ್ಞಾನ ಶಾಖೆಗಳಲ್ಲಿ ಅಪಾರ ಸಾಧನೆ ಮಾಡಿತ್ತು. ಅಯೋಧ್ಯಾ ಪ್ರಕಾಶನ ಭಾರತದ ಬಗ್ಗೆ ತಿಳಿದುಕೊಳ್ಳಬೇಕಾದ ಅಪೂರ್ವವಾದ ನಿಧಿಯನ್ನು ಈ ಪುಸ್ತಕಗಳ ಮೂಲಕ ಓದುಗರಿಗೆ ಪರಿಚಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಲೇಖಕರಾದ ಗಣಪತಿ ಆರ್‌. ಭಟ್‌, ಜಿ.ಬಿ.ಹರೀಶ್, ರೋಹಿತ್ ಚಕ್ರತೀರ್ಥ ಹಾಗೂ ಪತ್ರಕರ್ತ ದು.ಗು.ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.

click me!