Asianet Suvarna News Asianet Suvarna News

ಗಡಿಯಲ್ಲಿ ಮತ್ತೆ ಚೀನಾ ಕ್ಯಾತೆ, ಬುಲ್ಡೋಜರ್‌ಗ ಓಡಾಟ!

Jun 28, 2020, 12:40 PM IST

ಲಡಾಖ್(ಜೂ.28) ಚೀನಾ ತನ್ನ ಹುಟ್ಟು ಗುಣವನ್ನು ಕೆಟ್ಟರೂ ಬಿಡುತ್ತಿಲ್ಲ. ಭಾರತದ ಗಡಿಯಲ್ಲಿ ಚೀನಾ ತನ್ನ ಪುಂಡಾಟ ಮುಂದುವರೆಸಿದೆ. ಒಂದೆಡೆ ಇಲ್ಲಿ ಫೈಟರ್ ಜೆಟ್ ಹೆಲಿಕಾಪ್ಟರ್‌ಗಳು ಹಾರಾಡುತ್ತಿದ್ದರೆ, ಮತ್ತೊಂದೆಡೆ ಸುಖೋಯ್ 30 ಸೇರಿ ಬಾಂಬರ್‌ಗಳ ನಿಯೋಜನೆ ಮಾಡಿದ್ದು, ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡುವ ಸಾಧ್ಯತೆಗಳಿವೆ. 

ಇತ್ತ ಚೀನಾಗೆ ಸೆಡ್ಡು ಹೊಡೆಯಲು ಆರತ ಕೂಡಾ ಮುಂದಾಗಿದೆ. ಕ್ಷಿಪಣಿ ನಾಶಕಗಳನ್ನು ಭಾರತ ಖರೀದಿಸಿದೆ. ಶೀಘ್ರವೇ ಭಾರತಕ್ಕೆ ಇದನ್ನು ಮಿತ್ರ ರಾಷ್ಟ್ರ ಪೂರೈಸಲಿದೆ. ಅದು ಭಾರತಕ್ಕೆ ತಲುಪುತ್ತಿದ್ದಂತೆಯೇ ಗಡಿಯಲ್ಲಿ ಅದನ್ನು ನಿಯೋಜಿಸಲಾಗುತ್ತದೆ. 

ಇಷ್ಟೇ ಅಲ್ಲದೇ ಚೀನಾದ ಸಾಲು ಸಾಲು ಬುಲ್ಡೋಜರ್ಗಳೂ ಗಡಿಯಲ್ಲಿ ಓಡಾಟ ನಡೆಸುತ್ತಿದೆ. ಈ ನಿಟ್ಟಿನಲ್ಲಿ‌ ಭಾರತೀಯ ಸೇನೆಯೂ ಗಡಿ ಬಳಿ ವೈಮಾನಿಕ ಗಸ್ತು ಹೆಚ್ಚಿಸಿದೆ. 

Video Top Stories