ಲಾಕ್‌ಡೌನ್ ಆತಂಕಕ್ಕೆ BSY ಉತ್ತರ, ಮೆಟ್ರೋ ಇರಲ್ಲ ಒಂದು ವಾರ: ಮಾ.17ರ ಟಾಪ್ 10 ಸುದ್ದಿ!

By Suvarna NewsFirst Published Mar 17, 2021, 4:58 PM IST
Highlights

ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ಸಭೆಯಲ್ಲಿ ಪಾಲ್ಗೊಂಡ ಸಿಎಂ ಯಡಿಯೂರಪ್ಪ ಸುದ್ಧಿಗೋಷ್ಠಿಯಲ್ಲಿ ಹಲವು ಕುತೂಹಲಕ್ಕೆ ಉತ್ತರ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಮಾತ್ರವಲ್ಲ, ಐವರು ನಾಯಕರಿಗೆ ಸಿಡಿ ಗ್ಯಾಂಗ್ ಬ್ಲಾಕ್‌ಮೇಲ್ ಮಾಡಿದೆ. ಕೊಹ್ಸಿ ಸೈನ್ಯ ಮಾಡಿದ ತಪ್ಪು ಹೇಳಿದ ಗಂಭೀರ್, ಒಂದು ವಾರ ಮೆಟ್ರೋ ಸಂಚಾರ ಬಂದ್ ಸೇರಿದಂತೆ ಮಾರ್ಚ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ರಾಜ್ಯದಲ್ಲಿ ನೈಟ್‌ ಕರ್ಫ್ಯೂ, ಲಾಕ್‌ಡೌನ್ ಇಲ್ಲ: ಆದ್ರೆ ಕೇಂದ್ರದಿಂದ 3 ಪ್ರಮುಖ ಸಲಹೆ!...

ಸಕೊರೋನಾ ಪ್ರಕರಣಗಳು ಗಣನೀಯವಾಗಿ ಏರಿಕೆ| ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಿಎಂಗಳ ಜೊತೆ ಪಿಎಂ ಸಭೆ| ಸಭೆ ಬಳಿಕ ಬಿಎಸ್‌ವೈ ಸುದ್ದಿಗೋಷ್ಠಿ| ರಾಜ್ಯದಲ್ಲಿ ನೋ ನೈಟ್‌ ಕರ್ಫ್ಯೂ, ನೋ ಲಾಕ್‌ಡೌನ್ ಎಂದ ಸಿಎಂ

ಸಿಎಂ ಜೊತೆಗೆ ಮೋದಿ ಮೀಟಿಂಗ್: ಯೋಗಿ ಸೇರಿ ಮೂವರು ಮುಖ್ಯಮಂತ್ರಿ ಗೈರು!...

ದೇಶದ ಕೆಲ ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಪಿಎಂ ಮೋದಿ ಸಿಎಂಗಳ ಸಭೆ ಕರೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಈ ಸಭೆಯಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಿಲ್ಲ. ಇನ್ನು ಮಾಧ್ಯಮಗಳಿಗೂ ತಾವು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವುದರಿಂದ ಭಾಗಿಯಾಗುತ್ತಿಲ್ಲ ಎಂದಿದ್ದಾರೆ.

ಸಾಹುಕಾರ್ ಮಾತ್ರವಲ್ಲ, ಐವರು ಪ್ರಭಾವಿಗಳಿಗೆ ಸೀಡಿಶೂರರ ಬ್ಲಾಕ್ ಮೇಲ್..!...

ರಮೇಶ್ ಜಾರಕಿಹೊಳಿ ಸೀಡಿ ಷಡ್ಯಂತ್ರದ ಹಿಂದಿರುವ ಮಾಸ್ಟರ್ ಮೈಂಡ್‌ಗಳು ಒಬ್ಬರಲ್ಲ, ಇಬ್ಬರಲ್ಲ, ಐವರು ಪ್ರಭಾವಿಗಳಿಗೆ ಬ್ಲಾಕ್ ಮೇಲ್ ಮಾಡಿದ್ದಾರಂತೆ. ಪ್ರಭಾವಿಗಳಿಂದ ಲಕ್ಷ ಲಕ್ಷ ಪೀಕಿದ್ದಾರಂತೆ. 

ಟೀಂ ಇಂಡಿಯಾ ಮೇಲೆ ಕಿಡಿಕಾರಿದ ಗೌತಮ್ ಗಂಭೀರ್..!...

ಟೀಂ ಇಂಡಿಯಾ 3ನೇ ಟಿ20 ಪಂದ್ಯದಲ್ಲಿ ಮಾಡಿದ ಒಂದು ಎಡವಟ್ಟಿನ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್ ಕಿಡಿಕಾರಿದ್ದಾರೆ. 

ಜಾಹ್ನವಿಯನ್ನು ಆಲಿಯಾಗೆ ಹೋಲಿಸಿದ ಫ್ಯಾನ್ಸ್..! ಹೀಗಿತ್ತು ನಟಿಯ ರಿಯಾಕ್ಷನ್...

ನಟಿಯ ಅಭಿನಯ ನೋಡಿದ ಫ್ಯಾನ್ಸ್ ಅವರನ್ನು ಆಲಿಯಾ ಭಟ್‌ಗೆ ಹೋಲಿಸಿ ಮಾತನಾಡುತ್ತಿದ್ದಾರೆ. ಇದಕ್ಕೆ ಜಾಹ್ನವಿ ಪ್ರತಿಕ್ರಿಯೆ ಏನು..?

ರಾಂಗ್ಲರ್ 80 ನೇ ವಾರ್ಷಿಕೋತ್ಸವ; ಭಾರತದಲ್ಲಿ ತಯಾರಾದ ಜೀಪ್ ರಾಂಗ್ಲರ್ ಬಿಡುಗಡೆ!...

ಸ್ಥಳೀಯವಾಗಿ ಜೋಡಿಸಲಾದ ಜೀಪ್ ರಾಂಗ್ಲರ್ ಇದೀಗ ಭಾರತದಲ್ಲಿ ಬಿಡುಗಡೆಯಾಗಿದೆ. ಜೀಪ್ ಅನ್‌ಲಿಮಿಟೆಡ್ ಹಾಗೂ ರುಬಿಕಾನ್ ಅನ್ನೋ ಎರಡು ವೇರಿಯೆಂಟ್ ಲಾಂಚ್ ಆಗಿದೆ. ನೂತನ ಜೀಪ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. 

ಸಿದ್ದು ಸವಾಲ್, ಬಿಎಸ್‌ವೈ ಜಬರ್ದಸ್ತ್ ಜವಾಬ್, ಜಗಳ್ಬಂದಿಗೆ ಸಾಕ್ಷಿಯಾಯ್ತು ಸದನ.!...

ರಾಜಾಹುಲಿ ಬಿಎಸ್‌ವೈ, ಟಗರು ಸಿದ್ದರಾಮಯ್ಯ ನಡುವೆ ರಾಜಕೀಯವನ್ನೂ ಮೀರಿದ ಸ್ನೇಹವಿದೆ ಎನ್ನುವುದಕ್ಕೆ ಇತ್ತೀಚಿಗೆ ನಡೆದ ಶಾಸಕರ ಮಗಳ ಮದುವೆ ಸಾಕ್ಷಿಯಾಯಿತು. ಅದೇ ರೀತಿ ಇಬ್ಬರ ಕುಸ್ತಿಗೆ ವಿಧಾನ ಮಂಡಲ ಅಧಿವೇಶನ ಸಾಕ್ಷಿಯಾಯಿತು. 

ಒಂದು ವಾರ ನಮ್ಮ ಮೆಟ್ರೋ ಸಂಚಾರ ಬಂದ್ !...

ಎಂಟು ದಿನಗಳ‌ ಕಾಲ  ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಮೈಸೂರು ರಸ್ತೆಯವರೆಗೂ ಮೆಟ್ರೋ ಸಂಚಾರ ಬಂದ್ ಆಗಲಿದೆ.

ಮಾ.23ಕ್ಕೆ ಒನ್‌ಪ್ಲಸ್9 ಸೀರೀಸ್ ಫೋನ್ ಜತೆಗೆ ಸ್ಮಾರ್ಟ್ ವಾಚ್ ಬಿಡುಗಡೆ...

ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮನೆಮಾತಾಗಿರುವ ಒನ್‌ಪ್ಲಸ್ ಕಂಪನಿ ಮಾರ್ಚ್ 23ರಂದು ಒನ್‌ಪ್ಲಸ್ 9 ಸೀರೀಸ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇನ್ನೊಂದು ವಿಶೇಷ ಎಂದರೆ, ಕಂಪನಿಯ ಇದೇ ಮೊದಲ ಬಾರಿಗೆ ಸ್ಮಾರ್ಟ್‌ವಾಚ್ ಕೂಡ ಬಿಡುಗಡೆ ಮಾಡುತ್ತಿದೆ. ಈ ಹಿಂದೆ ಕಂಪನಿ ಫಿಟ್ನೆಸ್ ಬ್ಯಾಂಡ್ ಅನ್ನು ಬಿಡುಗಡೆ ಮಾಡಿತ್ತು.

ಮಾರ್ಚ್ 31ರಿಂದ ಸ್ಪೆಷಲ್ ಟ್ರೈನ್ಗಳು ಕ್ಯಾನ್ಸಲ್? ರೈಲ್ವೇ ಇಲಾಖೆ ಹೇಳಿದ್ದಿಷ್ಟು...

ವಿಶೇಷ ರೈಲು ಸೇವೆ ಮಾರ್ಚ್ 31ರಿಂದ ರದ್ದಾಗಲಿದೆ ಎಂಬ ಸುದ್ದಿಯ ನಡುವೆ ಭಾರತೀಯ ರೈಲ್ವೇ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕೊರೋನಾ ಹೆಚ್ಚಾಗಿರುವುದರಿಂದ ಮತ್ತೆ ರೈಲ್ವೇ ಸೇವೆ ರದ್ದಾಗುತ್ತದೆ ಎಂಬ ವಿಚಾರ ಸುದ್ದಿಯಾಗಿದೆ.

ಈ ಕಾರ್ಟೂನ್‌ ಸಿನಿಮಾನೇ 'ಸಾರಥಿ', ಕಾಪಿ ಮಾಡಿದ್ವಿ, ಯಾರು ಕೇಳಿದ್ರು: ದರ್ಶನ್...

'ರಾಬರ್ಟ್‌' ಸಕ್ಸಸ್‌ ಮೀಟ್‌ನಲ್ಲಿ ಸಾರಥಿ ಚಿತ್ರದ ಬಗ್ಗೆ ಮಾತನಾಡಿದ ನಟ ದರ್ಶನ್. ಲಯನ್‌ ಕಿಂಗ್‌ಗೂ ಸಾರಥಿಗಿರುವ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

click me!