ಕನ್ನಡ ಕೆಣಕಿದ ಗೂಗಲ್‌ಗೆ ಶಾಸ್ತಿ, 3 ದಿನ ಭಾರೀ ಮಳೆ ಭೀತಿ; ಜೂ.03ರ ಟಾಪ್ 10 ಸುದ್ದಿ!

By Suvarna News  |  First Published Jun 3, 2021, 4:53 PM IST

ಕನ್ನಡವನ್ನು ಕೊಳಕು ಭಾಷೆ ಎಂದ ಗೂಗಲ್‌ಗೆ ತಕ್ಕ ಶಾಸ್ತಿಯಾಗಿದೆ. ಔಷಧಿ ಅಕ್ರಮ ದಾಸ್ತಾನು ವಿಚಾರದಲ್ಲಿ ಶಾಸಕ ಗೌತಮಮ್ ಗಂಭೀರ್ ದೋಷಿ ಎಂದಿದೆ ಕೋರ್ಟ್. ಬೆಂಗಳೂರಿಗೆ 1,500 ಫಡ್ ಕಿಟ್ ನೆರವು ನೀಡಿದ ಸೋನು ಸೂದ್. ಇತ್ತ ರಾಜ್ಯದಲ್ಲಿ ಇನ್ನು 3 ದಿನ ಭಾರಿ ಮಳೆಯಾಗಲಿದೆ ಎಂದು ವರದಿ ಹೇಳುತ್ತಿದೆ. ಕೋಟ್ಯಧೀಶರಾದ ಬಡ ಮೀನುಗಾರರು, ಟೈಟ್ ಪ್ಯಾಂಟ್ ಧರಿಸಿದ ಸಂಸದೆ ಸಂಸತ್ತಿನಿಂದ ಹೊರಕ್ಕೆ ಸೇರಿದಂತೆ ಜೂನ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 


ಭದ್ರತಾ ಸಿಬ್ಬಂದಿಯನ್ನು ಬಿಟ್ಟು ಹೋದ BJP ಕೌನ್ಸಿಲರ್‌ ಉಗ್ರರ ಗುಂಡಿನಿಂದ ಸಾವು...

Latest Videos

undefined

ದಕ್ಷಿಣ ಕಾಶ್ಮೀರದ ಟ್ರಾಲ್ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಬಿಜೆಪಿ ಕೌನ್ಸಿಲರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಉಗ್ರರು ಗುಂಡಿಕ್ಕಿ ಕೌನ್ಸಿಲರ್‌ನ್ನು ಸಾಯಿಸಿದ್ದು ಮಹಿಳೆ ಗಾಯಗೊಂಡಿದ್ದಾರೆ.

ಸತ್ತ ತಿಮಿಂಗಿಲ ದೇಹದೊಳಗಿತ್ತು 10 ಕೋಟಿ ನಿಧಿ : ಕೋಟ್ಯಧೀಶರಾದ ಬಡ ಮೀನುಗಾರರು...

ಕೆಲ ದಿನಗಳ ಹಿಂದಷ್ಟೇ ಮುರುಡೇಶ್ವರ ಕಡಲ ತೀರದಲ್ಲಿ ತಿಮಿಂಗಿಲ ವಾಂತಿ ಪತ್ತೆಯಾಗಿತ್ತು. ಇದೀಗ ಮತ್ತೊಂದು ಕಡೆ  ಕಡಲ ತೀರದಲ್ಲಿಯೂ ಸಿಕ್ಕಿದ್ದು, ಬಡ ಮೀನುಗಾರರ ಜೀವನವನ್ನೇ ಬದಲಾಯಿಸಿದೆ. 

ಕೊರೋನಾಗೆ ಬಳಸುವ Fabiflu ಅಕ್ರಮ ದಾಸ್ತಾನು: ಗೌತಮ್‌ ಗಂಭೀರ್‌, AAP ಶಾಸಕ ದೋಷಿ!...

ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಬಳಸಲಾಗುವ ಅತ್ಯಾವಶ್ಯಕ ಔಷಧಿಗಳಲ್ಲೊಂದಾದ Fabiflu ಮಾತ್ರೆಗಳ ಅನಧಿಕೃತ ದಾಸ್ತಾನು ಹಾಗೂ ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್ ಗಂಭೀರ್ ಫೌಂಡೇಷನ್‌  ಅಪರಾಧ ಸಾಬೀತಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಆಮ್‌ ಆದ್ಮಿ ಪಕ್ಷದ ಶಾಸಕ ಪ್ರವೀಣ್‌ ಕುಮಾರ್‌ರನ್ನೂ ದೋಷಿ ಎಂದು ಕೋರ್ಟ್‌ ಘೋಷಿಸಿದೆ.

ಕನ್ನಡಿಗರ ಸ್ವಾಭಿಮಾನದ ಶಕ್ತಿ, ಕೊಳಕು ಭಾಷೆ ಎಂದಿದ್ದ ಗೂಗಲ್‌ಗೆ ಶಾಸ್ತಿ...

ದೇಶದಲ್ಲಿ ಅತ್ಯಂತ ಕೆಟ್, ಕೊಳಕು  ಭಾಷೆ ಯಾವುದು? ಇದಕ್ಕೆ ಉತ್ತರ ಕನ್ನಡ! ಏನ್ ಹೀಗ್ ಹೇಳ್ತಾ ಇದ್ದಾರೆ.. ಇವರಿಗೆ ಏನ್ ತಲೆ ಸರಿ ಇದ್ಯಾ..ಇಲ್ವಾ ಅಂತಾ  ಪ್ರಶ್ನೆ ಬರೋದಲ್ಲದೆ ಸಿಟ್ಟು ಬರ್ತಿದೇಯಾ? ನಾವ್ ಹೇಳ್ತಾ ಇರೋದಲ್ಲ.. ಗೂಗಲ್ ಮಾಡಿದ ಕೆಲಸ.. ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದು ಗೂಗಲ್ ಲಿಂಕ್ ತೆಗೆದಿದೆ.

ಬೆಂಗಳೂರಿಗೆ 1,500 ಫುಟ್‌ ಕಿಟ್‌ ಕಳುಹಿಸಿಕೊಟ್ಟ ಸೋನು ಸೂದ್!...

ಆಪ್ತ ರಕ್ಷಕ ಸೋನು ಸೂದ್ ಬೆಂಗಳೂರಿನ ಮಾಧ್ಯಮ ಮಿತ್ರರಿಗೆ, ಪೊಲೀಸರಿಗೆ ಹಾಗೂ ಜನ ಸಾಮಾನ್ಯರಿಗೆಂದು 1500 ಪುಡ್‌ ಕಿಡ್ ಕಳುಹಿಸಿ ಕೊಟ್ಟಿದ್ದಾರೆ. ಅದರಲ್ಲಿ 300 ಕಿಟ್‌ಗಳನ್ನು ಮಾಧ್ಯಮದವರಿಗೆ ನೀಡಲಾಗಿದೆ. ಟೋಕನ್ ಮೂಲಕ ಜನ ಸಾಮಾನ್ಯರಿಗೆ ವಿತರಣೆ ಮಾಡಲಾಗುತ್ತದೆ. ಸೋನು ತಂಡ ಹಸ್ಮತ್ ರಾಜ್ ಈ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ 3 ದಿನ ಭಾರೀ ಮಳೆ ಮುನ್ಸೂಚನೆ: 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್...

ರಾಜ್ಯದಲ್ಲಿ ಮೂರು ದಿನ ಗುಡುಗು, ಸಿಡಿಲಿನೊಂದಿಗೆ ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಾಡಿಗೆ ಮನೆಗೆ ಎರಡು ತಿಂಗಳಷ್ಟೇ ಅಡ್ವಾನ್ಸ್, ಕೇಂದ್ರದ ಹೊಸ ಕಾಯ್ದೆ!...

ಬಾಡಿಗೆದಾರರು ಹಾಗೂ ಬಾಡಿಗೆ ಮನೆ ಮಾಲೀಕರಿಗಿಬ್ಬರೂ ನೆರವಾಗುವ ಹೊಸ ಕಾಯ್ದೆಯೊಂದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ. ಇದಲ್ಲದೆ, ಹೊಸ ಕಾಯ್ದೆಯಲ್ಲಿ ಬಾಡಿಗೆ ಪ್ರಾಧಿಕಾರ, ಬಾಡಿಗೆ ನ್ಯಾಯಾಧಿಕರಣಗಳು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸುವ ಅವಕಾಶ ಲಭಿಸಲಿದ್ದು, ವ್ಯಾಜ್ಯಗಳಿದ್ದರೆ ಜಿಲ್ಲಾ ಮಟ್ಟದಲ್ಲೇ ಇತ್ಯರ್ಥವಾಗಲಿವೆ.

ಗಂಡನ ಉದ್ಯೋಗ, ಹೆಂಡತಿಗೆ ಸಂಬಳ: ಹೊಸ ಯೋಜನೆಯಿಂದ ಮನೆಗೆ ಬಂತು ದುಬಾರಿ ಕಾರು!...

ಪತಿಯ ಉದ್ಯೋಗ, ಪತ್ನಿಗೆ ವೇತನ. ಇದು ಸುಳ್ಳಲ್ಲ. ಆದರೆ ಪೂರ್ತಿ ತಿಳಿಯದೇ ಈಗಲೇ ಊಹಿಸಿಕೊಳ್ಳಬೇಡಿ. ಕಾರಣ ಶಾರ್ಜಾ ಏರೈಸ್ ಗ್ರೂಪ್ ಕಳೆದ ಮಾರ್ಚ್ ತಿಂಗಳಲ್ಲಿ ತಮ್ಮ ಕಂಪನಿಯ ಉದ್ಯೋಗಿಗಳ ಪತ್ನಿಯರನ್ನು ಆರ್ಥಿಕ ಸಶಕ್ತರನ್ನಾಗಿ ಮಾಡಲು ಹೊಸ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಲಾಭ ಪಡೆದ ಕೇರಳ ಮೂಲದ ಸುದೀರ್ ಬಾದರ್ ಪತ್ನಿ ಫಿಜಿ ದುಬಾರಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ 

ಹೋಗಿ ಸರಿ ಡ್ರೆಸ್ ಮಾಡ್ಕೊಂಡ್ ಬನ್ನಿ: ಟೈಟ್ ಪ್ಯಾಂಟ್ ಧರಿಸಿದ ಸಂಸದೆ ಸಂಸತ್ತಿನಿಂದ ಹೊರಕ್ಕೆ...

ಮಹಿಳಾ ಸಂಸದೆ ಟೈಟ್ ಪ್ಯಾಂಟ್ ಧರಿಸಿ ಬಂದಿದ್ದಕ್ಕೆ ಅವರನ್ನು ಮನೆಗೆ ಕಳುಹಿಸಿದ ಘಟನೆ ನಡೆದಿದೆ. ಟಾಂಜಾನಿಯಾದ ಮಹಿಳಾ ಸಂಸದೆಗೆ ಸಂಸತ್ ಸದಸ್ಯರೊಬ್ಬರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲಾಗಿದೆ.

ಔಷಧ ಕೊಳ್ಳಲು ಬಂದವ ಮೆಡಿಕಲ್‌ಗೆ ನುಗ್ಗಿ ಯುವತಿ ನೋಡಿ ಅತ್ಯಾಚಾರಕ್ಕೆ ಯತ್ನಿಸಿದ...

ಗಡಿಭಾಗವಾದ ಈಶ್ವರಮಂಗಲದಲ್ಲಿ ವ್ಯಕ್ತಿಯೊಬ್ಬ ಮೆಡಿಕಲ್ ಒಳಗೆ ನುಗ್ಗಿ ಮಹಿಳಾ ಸಿಬ್ಬಂದಿ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ. 
 

click me!