IPL ಸ್ಟೇಡಿಯಂಗೆ ಫ್ಯಾನ್ಸ್‌ಗೆ ಅವಕಾಶ, ರಮ್ಯಾಗೆ ಬಂತು ಹೊಸ ಸಂದೇಶ: ಜೂ.1ರ ಟಾಪ್ 10 ಸುದ್ದಿ!

By Suvarna NewsFirst Published Jun 1, 2021, 5:20 PM IST
Highlights

ಕೊರೋನಾ ಆಧುನಿಕ ಜಗತ್ತಿನಲ್ಲಿ ನಡೆದ ನ್ಯೂಕ್ಲೀಯರ್‌ ದಾಳಿಗಿಂತ ಭೀಕರವಾಗಿದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ. ವಾರಾಣಸಿಯಲ್ಲಿ ಕಟ್ಟಡ ಕುಸಿತದಲ್ಲಿ ಮೃತರಾದವರಿಗೆ ಪ್ರಧಾನಿ ಸಂತಾಪ ಸೂಚಿಸಿದ್ದಾರೆ. ಲಸಿಕೆ, ಅಂಗಾಂಗ ಸುರಕ್ಷಿತ ಸಾಗಾಣೆಗೆ ಆ್ಯಂಬಿಟ್ಯಾಗ್ ಅಭಿವೃದ್ಧಿ ಮಾಡಲಾಗಿದೆ. ನಟಿ ರಮ್ಯಾಗೆ ಅಭಿಮಾನಿಗಳ ಸಂದೇಶ, ಐಪಿಎಲ್ ವೀಕ್ಷಿಸಲು ಫ್ಯಾನ್ಸ್‌ಗೆ ಅವಕಾಶ ಸೇರಿದಂತೆ ಜೂನ್ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಭರದಿಂದ ಸಾಗಿದೆ ರಾಮಮಂದಿರ ನಿರ್ಮಾಣ, ಅಡಿಪಾಯದ ಚಿತ್ರಗಳು...

ರಾಮಮಂದಿರ ನಿರ್ಮಾಣ ಕಾರ್ಯ ಯಾವುದೆ ಅಡೆತಡೆ ಇಲ್ಲದೆ ಸಾಗಿದೆ. ದೇವಾಲಯದ ಅಡಿಪಾಯ ನಿರ್ಮಾಣ ಕಾರ್ಯನಡೆಯುತ್ತಿದ್ದು ಅಕ್ಟೋಬರ್  ವೇಳೆಗೆ ಅಂತ್ಯವಾಗಲಿದೆ ಎಂದು ಶ್ರಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಕೊರೋನಾ ಹುಟ್ಟಿನ ಸತ್ಯ ಗೊತ್ತಿಲ್ಲ, ಆದರೆ ನ್ಯೂಕ್ಲೀಯರ್ ದಾಳಿಗಿಂತ ಭೀಕರ; ಆನಂದ್ ಮಹೀಂದ್ರ!...

ವೈರಸ್ ಹಿಂದೆ ಚೀನಾ ಕೈವಾಡ ಮತ್ತೆ ಚರ್ಚೆಯಾಗುತ್ತಿದೆ. ಈ ಚರ್ಚೆ ಬೆನ್ನಲ್ಲೇ ಉದ್ಯಮಿ ಆನಂದ್ ಮಹೀಂದ್ರ ಹೇಳಿಕೆ ವಿಶ್ವವನ್ನೇ ಹೊಸದಿಕ್ಕಿನಲ್ಲಿ ಚಿಂತಿಸುವಂತೆ ಮಾಡಿದೆ.

ಏಕಾಏಕಿ ಕುಸಿದ ಕಟ್ಟಡ, ಇಬ್ಬರು ಸಾವು: ಸಂತಾಪ ಸೂಚಿಸಿದ ಪಿಎಂ ಮೋದಿ!...

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮಂಗಳವಾರ ಬೆಳ್ಳಂ ಬೆಳಗ್ಗೆ ಹಳೇ ಕಟ್ಟಡವೊಂದು ಏಕಾಏಕಿ ಕುಸಿದಿದೆ. ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಇನ್ನು ಈ ಹಳೇ ಕಟ್ಟಡ ಕಾಶಿ ವಿಶ್ವನಾಥ ಧಾಮದ ಸಮೀಪದಲ್ಲಿತ್ತು ಎಂಬುವುದು ಉಲ್ಲೇನೀಯ. ಘಟನೆ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ,ಮೋದಿ ಈ ಬಗ್ಗೆ ಮಾಹಿತಿ ಪಡೆದಿದ್ದು, ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ವಾರಾಣಸಿಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಗಲ್ವಾನ್ ಕಣಿವೆಯಲ್ಲಿ 40 ಚೀನಾ ಯೋಧರು ಹತ: ಮಾಹಿತಿ ಬಿಚ್ಚಿಟ್ಟಾತನಿಗೆ 8 ತಿಂಗಳು ಜೈಲು!...

ಚೀನಾ ಸರ್ಕಾರ ಈ ಬಗ್ಗೆ ಕ್ರಮ ವಹಿಸಿದ ಬಳಿಕ ಆತನಿಗೆ ಜೈಲು ಶಿಕ್ಷೆಯಾಗಿದೆ. ಈ ಬ್ಲಾಗರ್, ಉಭಯ ದೇಶಗಳ ನಡುವಿನ ಸಂಘರ್ಷದಲ್ಲಿ ಚೀನಾದ ಸುಮಾರು 40 ಸೈನಿಕರು ನಿಧನರಾಗಿದ್ದರೆಂಬ ವಿಚಾರ ಬಹಿರಂಗಪಡಿಸಿದ್ದರು.

ಕೇಂದ್ರ ಸೇವೆಗೆ ನಿಯೋಜಿತರಾಗಿದ್ದ ಆಲಾಪನ್‌ ನಿವೃತ್ತಿ, ಮಮತಾ ಸಲಹೆಗಾರರಾಗಿ ನೇಮಕ!...

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಸೋಮವಾರ ಹೊಸ ಮಜಲು ಮುಟ್ಟಿದೆ. ಕೇಂದ್ರ ಸೇವೆಗೆ ಸೇರಬೇಕು ಎಂಬ ಮೋದಿ ಸರ್ಕಾರದ ಸೂಚನೆ ಧಿಕ್ಕರಿಸಿದ್ದ ಮಮತಾ ಅವರ ನೆಚ್ಚಿನ ಅಧಿಕಾರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಲಾಪನ್‌ ಬಂಡೋಪಾಧ್ಯಾಯ ಅವರು ತಮ್ಮ ಸೇವಾ ನಿವೃತ್ತಿ ಘೋಷಿಸಿದ್ದಾರೆ.

ಐಪಿಎಲ್ 2021‌: ಸ್ಟೇಡಿಯಂಗೆ ಪ್ರೇಕ್ಷಕರಿಗೆ ಪ್ರವೇಶ? ...

ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಯುಎಇನಲ್ಲಿ ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್‌ ಭಾಗ-2ಕ್ಕೆ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲು ಯುಎಇ ಕ್ರಿಕೆಟ್‌ ಮಂಡಳಿ ಚಿಂತನೆ ನಡೆಸಿದೆ. ಬಿಸಿಸಿಐ ಸಹ ಈ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ. ಕ್ರೀಡಾಂಗಣಗಳ ಸಾಮರ್ಥ್ಯದ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ಸಿಗಬಹುದು ಎನ್ನಲಾಗಿದೆ. 

Pranitha Wedding: ವಿಶ್ ಮಾಡಿದ ರಮ್ಯಾಗೆ ಬಂತು ಸಾವಿರಾರು ಮೆಸೇಜ್‌; ಏನಂತ?...

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಅಗಿರುವ ರಮ್ಯಾಗೆ ಅಭಿಮಾನಿಗಳು ಪದೇ ಪದೇ ಕೇಳುತ್ತಿರುವುದು ಇದೊಂದೆ ಪ್ರಶ್ನೆ....

ಲಸಿಕೆ, ಅಂಗಾಂಗ ಸುರಕ್ಷಿತ ಸಾಗಾಣೆಗೆ ಆ್ಯಂಬಿಟ್ಯಾಗ್: IIT ರೋಪರ್ ಸಾಧನೆ! ...

ಭಾರತದಲ್ಲಿ ವೈದ್ಯಕೀಯ ಸಲಕರಣೆ ಸಾಗಾಣೆ, ತುರ್ತು ಅಗತ್ಯ ಪೂರೈಕೆ ಅತೀ ದೊಡ್ಡ ಸವಾಲು. ಸಾರಿಗೆ ಮೂಲಕ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪೂರೈಕೆ ಮಾಡಲು ಅತೀ ಹೆಚ್ಚು ಸಮಯವೂ ತೆಗೆದುಕೊಳ್ಳುತ್ತದೆ. ಹೀಗಾಗಿ ಲಸಿಕೆ, ಅಂಗಾಂಗ, ರಕ್ತ ಸಾಗಾಣಿಕೆ ವಿಳಂಬವಾದಲ್ಲಿ ಹಾಳಾಗಲಿದೆ. ಹೀಗಾಗಿ ಈ ವಸ್ತುಗಳ ಸುರಕ್ಷಿತ ಸಾಗಾಣೆಗೆ IIT ರೋಪರ್ ಆ್ಯಂಬಿಟ್ಯಾಗ್ ಅನ್ನೋ ಹೊಸ ಸಾಧನ ಅಭಿವೃದ್ಧಿ ಪಡಿಸಿದೆ.

ಲಾಕ್‌ಡೌನ್ ವಿಸ್ತರಣೆಯೋ, ಅನ್‌ಲಾಕ್‌ ಆಗುತ್ತೋ? ಜೂ. 4 ಅಥವಾ 5 ಕ್ಕೆ ನಿರ್ಧಾರ...

ಪ್ರಸ್ತುತ ರಾಜ್ಯದಲ್ಲಿನ ಪಾಸಿಟಿವಿಟಿ ದರ ಸರಾಸರಿ ಶೇ.15 ಹಾಗೂ ನಿತ್ಯದ ಪ್ರಕರಣ 15 ಸಾವಿರಕ್ಕೂ ಹೆಚ್ಚಿವೆ. ಸಾವಿನ ದರ ಶೇ.2.50ರ ಆಸುಪಾಸಿನಲ್ಲಿದೆ. 

ಅನಾಥ ವೃದ್ಧೆಗೆ 'ಮಗ'ನಾಗಿ ಕೈತುತ್ತು ತಿನ್ನಿಸಿದ ಪೊಲೀಸ್ ಅಧಿಕಾರಿ!...

ಫೋಟೋ ಒಂದು ವೈರಲ್ ಆಗಿದೆ. ಆದರೆ ಫೋಟೋದಲ್ಲಿರುವ ಪೊಲೀಸ್ ಅಧಿಕಾರಿ ಯಾರು? ಯಾವ ಠಾಣೆಯಲ್ಲೊ ಕರ್ತವ್ಯ ನಿರ್ವಹಿಸುತ್ತಾರೆಂಬ ವಿಚಾರ ಮಾತ್ರ ತಿಳಿದು ಬಂದಿಲ್ಲ. ಆದರೆ ನೆಟ್ಟಿಗರು ಮಾತ್ರ ಈ ಪೊಲಿಸ್ ಅಧಿಕಾರಿಯ ಹೃದಯವಂತಿಕೆಗೆ ಮನಸೋತಿದ್ದಾರೆ

click me!