
ಬೆಂಗಳೂರು/ಹಾಸbhನ(ಮೇ.04): ಪ್ರಕರಣವನ್ನು ಮುಚ್ಚಿ ಹಾಕಲು ಸಂತ್ರಸ್ಥೆಯ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಚ್.ಡಿ ರೇವಣ್ಣಗೆ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಮಾಜಿ ಸಚಿವ, ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರನ್ನ ಎಸ್‌ಐಟಿ ಅಧಿಕಾರಿಗಳೂ ಬಂಧಿಸಿದ್ದಾರೆ.
ಬಂಧನದ ಬಳಿಕ ಮೆಡಿಕಲ್ ಟೆಸ್ಟ್‌ಗೆಂದು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ಮೆಡಿಕಲ್ ಟೆಸ್ಟ್ ಮುಗಿದಿದ್ದು ಎಸ್‌ಐಟಿ ಕಚೇರಿಗೆ ಎಚ್.ಡಿ. ರೇವಣ್ಣ ಅವರನ್ನ ವಾಪಸ್ ಕರೆತಂದಿದ್ದಾರೆ. ಇಂದು ರಾತ್ರಿ ಎಸ್‌ಐಟಿ ಕಚೇರಿಯಲ್ಲೇ ರೇವಣ್ಣ ಅವರ ವಿಚಾರಣೆ ನಡೆಯಲಿದೆ. ನಾಳೆ ಜನಪ್ರದಿನಿಧಿಗಳ ನಾಯ್ಯಾಧೀಶ ಮುಂದೆ ಹಾಜರ್ ಪಡಿಸುವ ಸಾಧ್ಯತೆ ಇದೆ.
ಹೆಚ್.ಡಿ ರೇವಣ್ಣ- ಪ್ರಜ್ವಲ್ ಪ್ರಕರಣದಲ್ಲಿ ಅಂತರ ಕಾಪಾಡಿಕೊಂಡ ಅಮಿತ್ ಶಾ..!
ಹಾಸನದ ಸಂಸದರ ನಿವಾಸದಲ್ಲಿ ಎಸ್‌ಐಟಿ ತನಿಖೆ
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರ ನಿವಾಸದಲ್ಲಿ ಎಸ್‌ಐಟಿಯಿಂದ ತನಿಖೆ ನಡೆಯುತ್ತಿದೆ. ಕಳೆದ ಎರಡೂವರೆ ಗಂಟೆಯಿಂದಯಿಂದ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸಿದೆ.
ದೂರುದಾರ ಸಂತ್ರಸ್ತೆ ಜೊತೆ ಸ್ಥಳ ಅಧಿಕಾರಿಗಳು ಮಹಜರ್ ನಡೆಸುತ್ತಿದ್ದಾರೆ. ಸಂತ್ರಸ್ತ ಮಹಿಳೆ ಸಂಸದರ ನಿವಾಸದಲ್ಲೇ ಲೈಂಗಿಕ ದೌರ್ಜನ್ಯ ಎಂದು ದೂರು ನೀಡಿದ್ದರು. ಹಾಸನದ ಆರ್‌ಸಿ ನಗರದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ನಿವಾಸವಿದೆ.
ದೇವೇಗೌಡರ ಮನೆಯಲ್ಲೇ ರೇವಣ್ಣ ಬಂಧನ, ಶರಣಾಗತಿಗೆ ಮುಂದಾದ್ರಾ ಪ್ರಜ್ವಲ್ ರೇವಣ್ಣ?
ಎಚ್.ಡಿ.ರೇವಣ್ಣ ಬಂಧನ ಬಳಿಕ ಸಿಎಂ ಪ್ರತಿಕ್ರಿಯೆ
ಎಚ್.ಡಿ. ರೇವಣ್ಣ ಬಂಧನ ಬಳಿಕ ಚಿಕ್ಕೋಡಿಯಲ್ಕಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣದಲ್ಲಿ ಇಂಟರಫೇರ್ ಆಗಲ್ಲ. ಏಕೆಂದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು. ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಜಾಮೀನು ಅರ್ಜಿ ವಜಾ ಆಗಿದ್ದಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿಡ್ನಾಪ್ ಆದ ಮಹಿಳೆ ಪತ್ತೆ ವಿಚಾರ ಬಗ್ಗೆ ಮಾಹಿತಿ ಇಲ್ಲ ಪೊಲೀಸರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ನಾವು ಯಾವುದಕ್ಕೂ ಭಾಗಿಯಾಗಲ್ಲ, ನಮಗೆ ಅವಶ್ಯಕಥೆ ಇಲ್ಲ: ಡಿಕೆಶಿ
ಗದಗ: ರೇವಣ್ಣ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನ್ಯಾಯಾಲಯ ಉಂಟು, ಕಾನೂನುಂಟು. ನಾವು ಯಾವುದಕ್ಕೂ ಭಾಗಿಯಾಗಲ್ಲ, ನಮಗೆ ಅವಶ್ಯಕಥೆ ಇಲ್ಲ. ಕೋರ್ಟ್ ಕಾನೂನಲ್ಲಿ ಏನಾದ್ರೂ ರಕ್ಷಣೆ ಪಡೆದುಕೊಳ್ಳಲಿ. ಅವ್ರು ಏನಾದ್ರೂ ಮಾಡ್ಕೊಳ್ಳಲಿ. ಕುಮಾರಣ್ಣ ಏನೋ ಹೇಳಿದ್ದಾರೆ.. ಹಾಗೇ ಆಗುತ್ತೆ. ಉಪ್ಪು ತಿಂದವರು ನೀರು ಕುಡೀಬೇಕು ಎಂಬ ಹೇಳಿಕೆಯನ್ನ ಡಿಕೆಶಿ ನೆನಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ