ಪ್ರಜ್ವಲ್ ರೇವಣ್ಣ ನನಗೆ ಆತ್ಮೀಯ ಸ್ನೇಹಿತ, ಆ ನೇಚರ್ ಇರುವಂತಹ ಹುಡುಗ ಅಲ್ಲ: ಸಂಸದ ಬಸವರಾಜು

By Girish Goudar  |  First Published May 4, 2024, 9:48 PM IST

ಜಾರಕಿಹೊಳಿಗೂ ಕೂಡ ಪಿತೂರಿ ಮಾಡಿ ಮನೆ ಹಾಳು ಮಾಡಿ ಮಾನ -ಮರ್ಯಾದೆ ಹರಾಜು ಹಾಕಿದ್ದಾರೆ. ಜಾರಕಿಹೊಳಿಗೆ ವಿರೋಧ ಪಕ್ಷದವರೇ ಪಿತೂರಿ ಮಾಡಿದ್ದರು ಎಂದ ಸಂಸದ ಜಿ.ಎಸ್. ಬಸವರಾಜು 


ತುಮಕೂರು(ಮೇ.04): ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಸತ್ಯನೋ- ಸುಳ್ಳೋ ಸಾಬೀತು ಆಗಲಿ. ಪ್ರಜ್ವಲ್ ರೇವಣ್ಣ ನನಗೆ ಆತ್ಮೀಯ ಸ್ನೇಹಿತ. ಆ ನೇಚರ್ ಇರುವಂತಹ ಹುಡುಗ ಅಲ್ಲ ಆತ. ಏನು ಗ್ರಹಚಾರವೋ, ಯಾರ ಕೈವಾಡವೋ ಗೊತ್ತಿಲ್ಲ. ಇತ್ತೀಚೆಗೆ ಈ ರೀತಿ ತೇಜೋವಧೆ ಮಾಡುವುದು ಹೆಚ್ಚಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.

ಇಂದು(ಶನಿವಾ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿ.ಎಸ್ ಬಸವರಾಜು ಅವರು, ಜಾರಕಿಹೊಳಿಗೂ ಕೂಡ ಪಿತೂರಿ ಮಾಡಿ ಮನೆ ಹಾಳು ಮಾಡಿ ಮಾನ -ಮರ್ಯಾದೆ ಹರಾಜು ಹಾಕಿದ್ದಾರೆ. ಜಾರಕಿಹೊಳಿಗೆ ವಿರೋಧ ಪಕ್ಷದವರೇ ಪಿತೂರಿ ಮಾಡಿದ್ದರು ಎಂದು ಹೇಳಿದ್ದಾರೆ. 

Tap to resize

Latest Videos

undefined

ಹಾಸನ ಕಾಮಕಾಂಡ; ಸಂತ್ರಸ್ತೆ ಕಿಡ್ನಾಪ್ ಮಾಡಿ ತಗ್ಲಾಕೊಂಡ ಹೆಚ್.ಡಿ. ರೇವಣ್ಣ ಅರೆಸ್ಟ್, ಇನ್ಮುಂದೆ ಜೈಲೇ ಗತಿ!

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿಯೂ ವಿರೋಧ ಪಕ್ಷದವರೇ ಪಿತೂರಿ ಮಾಡಿರಬಹುದು ಎಂಬ ಅನುಮಾನ ಹೊರ ಹಾಕಿದ್ದಾರೆ ಜಿ.ಎಸ್ ಬಸವರಾಜು. ಈಗಲೂ ಕೂಡ ವಿರೋಧ ಪಕ್ಷದವರೇ ಪಿತೂರಿ ಮಾಡಿರಬಹುದು. ಒಂದು ವೇಳೆ ಮಹಿಳೆಯರಿಗೆ ಅನ್ಯಾಯ ಆಗಿದ್ದರೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ. 

click me!