75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾರತ, ರಾಜೀನಾಮೆಗೆ ಸಜ್ಜಾದ ಬಿಜೆಪಿ ನಾಯಕ; ಆ.15ರ ಟಾಪ್ 10 ಸುದ್ದಿ!

By Suvarna NewsFirst Published Aug 15, 2021, 4:53 PM IST
Highlights

ದೇಶದಲ್ಲಿಂದು 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತ್ರಿವರ್ಣ ಧ್ವಜ ಹಾರಾಡಿದೆ. ಪ್ರಧಾನಿ ಮೋದಿ ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಗಿಂತ ಸಂಪುಟ, ಸಚಿವ ಸ್ಥಾನದ ಅಸಮಾಧಾನವೇ ಹೆಚ್ಚಾಗಿದೆ. ಅಯೋಧ್ಯೆ ಮೇಲೆ ದಾಳಿಗೆ ಸಂಚು, ಪೃಥ್ವಿ ಜೊತೆ ಈಜುಕೊಳದಲ್ಲಿ ಕಂಗನಾ ಸೇರಿದಂತೆ ಆಗಸ್ಟ್ 15ರ ಟಾಪ್ 10 ಸುದ್ದಿ ಇಲ್ಲಿವೆ.

ಸೇನೆಯಿಂದ ಜನಸಾಮಾನ್ಯರವರೆಗೆ, 75ನೇ ಸ್ವಾತಂತ್ರ್ಯ ದಿನದಂದು ಬಾನೆತ್ತರಕ್ಕೆ ಹಾರಿದ ತ್ರಿವರ್ಣ ಧ್ವಜ!

ಇಂದು ಇಡೀ ದೇಶ 75ನೇ ಸ್ವಾತಂತ್ರ್ಯ ದಿನ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ಪ್ರತಿ ನಗರದ ಪ್ರತಿಯೊಂದು ಬೀದಿಯಲ್ಲೂ ತ್ರಿವರ್ಣ ಧ್ವಜ ಹಾರಿಸಲಾಯಿತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಯೊಬ್ಬ ಭಾರತೀಯ ಸ್ವಾತಂತ್ರ್ಯದ ಸಂಭ್ರಮದಲ್ಲಿ ಮುಳುಗಿರುತ್ತಾರೆ. ಒಂದು ಕಡೆ, ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ಧ್ವಜವನ್ನು ಹಾರಿಸಿದ್ದರೆ, ಇತ್ತ ನಮ್ಮ ಹೆಮ್ಮೆಯ ಸೇನೆಯ ಸೈನಿಕರು ದೇಶದ ಗಡಿಯಲ್ಲಿ ಧ್ವಜವನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.

ದೇಶದ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶ, ಮಿಜೋರಾಂನಲ್ಲಿ ಪ್ರಾಯೋಗಿಕ ಆರಂಭ

ರಾಷ್ಟ್ರ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಇಡೀ ದೇಶ ಇಂದು ಸಡಗರ ಸಂಭ್ರಮದಿಂದ ಆಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ 8 ನೇ ಬಾರಿ ಕೆಂಪುಕೋಟೆಯಲ್ಲಿಂದು ಧ್ವಜಾರೋಹಣ ಮಾಡಿದ್ದಾರೆ. ಬಳಿಕ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.

ಅಯೋಧ್ಯೆ ಮೇಲೆ ದಾಳಿ ಸಂಚು: 4 ಜೈಷ್‌ ಉಗ್ರರ ಸೆರೆ!

ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಿರ್ಮಾಣ ಆಗುತ್ತಿರವ ಮಂದಿರದ ಮೇಲಿನ ದಾಳಿಗೆ ಸಂಚು ರೂಪಿಸಿದ್ದ ಪಾಕ್‌ ಮೂಲದ ಜೈಷ್‌- ಎ- ಮೊಹಮ್ಮದ್‌ ಉಗ್ರಗಾಮಿ ಸಂಘಟನೆಗೆ ಸೇರಿದ ನಾಲ್ವರು ಭಯೋತ್ಪಾದಕರನ್ನು ಬಂಧಿಸುವಲ್ಲಿ ಜಮ್ಮು- ಕಾಶ್ಮೀರ ಪೊಲೀಸರು ಯಶಸ್ವಿ ಆಗಿದ್ದಾರೆ.

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ: ಇಲ್ಲಿದೆ ಆರೋಪಿಗಳ ಇಂಟ್ರಸ್ಟಿಂಗ್ ಕಹಾನಿ

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ. 

ಪೃಥ್ವಿ ಜೊತೆ ಪೂಲ್ ಡೇ..! ಕಂಗನಾ ಫೋಟೋಸ್ ವೈರಲ್

ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಅಕ್ಕನ ಮಗ ಪೃಥ್ವಿ ಜೊತೆ ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ಇದು ಇವರ ಸೋಷಿಯಲ್ ಮೀಡಿಯಾದಲ್ಲಿ ನಾವು ಕಾಣಬಹುದು. ಪೃಥ್ವಿ-ಕಂಗನಾ ಬಾಂಡ್ ಸಖತ್ ಸ್ಪೆಷಲ್.

ಸ್ವಾತಂತ್ರ್ಯ ದಿನಾಚರಣೆಗೆ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್; ಆರಂಭಿಕ ಬೆಲೆ 99,999 ರೂಪಾಯಿ!

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡಬಲ್ಲ ಸ್ಕೂಟರ್ ಇದಾಗಿದೆ.

ಖಾತೆ ಕ್ಯಾತೆ: 'ಅಭಿ ಪಿಕ್ಚರ್ ಬಾಕಿ ಹೈ' ಎಂದ ಆನಂದ್ ಸಿಂಗ್

ಸಚಿವ ಸಂಪುಟ ಅಸಮಾಧಾನ ಇನ್ನೂ ಮುಗಿದಿಲ್ಲ. 'ನಾನು ಅಧಿಕಾರ ತೆಗೆದುಕೊಳ್ಳದಿದ್ದರೂ ಕೆಲಸ ಕಾರ್ಯಗಳು ನಡೆಯುತ್ತದೆ. ಅಧಿಕಾರಿಗಳಿದಾರೆ ಅವರೇ ಕೆಲಸ ಮಾಡುತ್ತಾರೆ. ಯಾರಿಲ್ಲದಿದ್ದರೂ ಕೆಲಸ ನಡೆಯುತ್ತದೆ. ಅಭಿ ಪಿಕ್ಚರ್ ಬಾಕಿ ಎಂದು ಮಾಧ್ಯಮಗಳೆದುರು ಹೇಳಿ ಹೊರಟು ಹೋದರು. ಅಂದರೆ ಖಾತೆ ಹಂಚಿಕೆ ಅಸಮಾಧಾನ ಇನ್ನೂ ಬಗೆಹರಿದಂತೆ ಕಾಣಿಸಿಲ್ಲ. 

ಪುಲ್ವಾಮಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರನ ತಂದೆ!

ಹಿಜ್ಬುಲ್​ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್, ಬುರ್ಹಾನ್​​ ವಾನಿಯ ತಂದೆ ಪುಲ್ವಾಮಾದ ಟ್ರಾಲ್​ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿರುವ ಫೋಟೋ ಭಾರೀ ವೈರಲ್ ಆಗಿದೆ.

click me!