ಬಿಗ್‌ಬಾಸ್‌ ರಾಜ-ಪ್ರಜೆಗಳ ಆಟದಲ್ಲಿ ರದ್ದಾದ ಟಾಸ್ಕ್‌, ಉಗ್ರಂ ಮಂಜು ಅಣಕಿಸಿದ್ದಕ್ಕೆ ಮೋಕ್ಷಿತಾ ಕಣ್ಣೀರು!

By Gowthami K  |  First Published Nov 28, 2024, 11:48 PM IST

ಬಿಗ್‌ ಬಾಸ್‌ ಕನ್ನಡ 11 ರ 8ನೇ ವಾರದಲ್ಲಿ ರಾಜ ಮತ್ತು ಪ್ರಜೆಗಳ ಆಟದಲ್ಲಿ ಉಗ್ರಂ ಮಂಜು ಮತ್ತು ಮೋಕ್ಷಿತಾ ನಡುವಿನ ವೈಮನಸ್ಸು ಎದ್ದು ಕಾಣುತ್ತಿತ್ತು. ಟಾಸ್ಕ್‌ಗಳಲ್ಲಿ ಪಕ್ಷಪಾತ, ವೈಯಕ್ತಿಕ ದ್ವೇಷ, ನಿಯಮ ಉಲ್ಲಂಘನೆಗಳು ಮನೆಯಲ್ಲಿ ಗಲಾಟೆಗೆ ಕಾರಣವಾಯಿತು. ಮೋಕ್ಷಿತಾ ಭಾವುಕರಾಗಿ ಕ್ಯಾಮರಾ ಮುಂದೆ ಅತ್ತರು.


ಬಿಗ್‌ ಬಾಸ್‌ ಕನ್ನಡ 11 ರಲ್ಲಿ 8ನೇ ವಾರ ರಾಜ ಮತ್ತು ಪ್ರಜೆಗಳ ಆಟ ನೀಡಲಾಗಿದೆ.  ಮನೆಯಲ್ಲಿ ಮಹಾರಾಜನಾಗಿ ಉಗ್ರಂ ಮಂಜು ಮತ್ತು ಯುವರಾಣಿಯಾಗಿ ಮೋಕ್ಷಿತಾ ಇದ್ದಾರೆ. ವೈಯಕ್ತಿಕವಾಗಿ ಇಬ್ಬರ ಮಧ್ಯೆ ವೈಮನಸ್ಸು ಇರುವುದರಿಂದ ಇಂದಿನ ಟಾಸ್ಕ್‌ ನಲ್ಲಿ ವೈಯಕ್ತಿಕ ದ್ವೇಷ ಎದ್ದು ಕಾಣುತ್ತಿತ್ತು. ಮೋಕ್ಷಿತಾ ಹಾಗೂ ಉಗ್ರಂ ಮಂಜು, ಗೌತಮಿ ನಡುವೆ ಒಳ್ಳೆಯ ಸ್ನೇಹವಿತ್ತು. ಈಗ ಮಂಜು ಮತ್ತು ಗೌತಮಿ ಮಾತ್ರ ಒಟ್ಟಿಗಿದ್ದು, ಮೋಕ್ಷಿತಾ ಹೊರಬಂದಿದ್ದಾರೆ.

59ನೇ ಮನೆಯಲ್ಲಿ ಮಣ್ಣಿನ ಅಸ್ತ್ರ ಎಂಬ ಟಾಸ್ಕ್‌ ನೀಡಲಾಗಿತ್ತು. ಜೇಡಿ ಮಣ್ಣು ಸಂಗ್ರಹಿಸಿ ಆಯುಧ ಮಾಡು ಟಾಸ್ಕ್ ಇದಾಗಿತ್ತು.  ಈ ಟಾಸ್ಕ್‌ ನಲ್ಲಿ ಮಹಾರಾಜ ಮತ್ತು ಯುವರಾಣಿ ಉಸ್ತುವಾರಿಯಾಗಿದ್ದರು. ಆದರೆ ಎರಡೂ ತಂಡದವರು ಗಲಾಟೆ ಮಾಡಿಕೊಂಡು ಕೊನೆಗೆ ಬಿಗ್‌ಬಾಸ್‌ ಟಾಸ್ಕ್‌ ರದ್ದು ಮಾಡಿದರು. ಇದು ರಾಜ,ಯುವರಾಣಿ ಮತ್ತು ಪ್ರಜೆಗಳ ಮಧ್ಯೆ ಅಸಮಾಧಾನಕ್ಕೆ ಕಾರಣವಾಯ್ತು. ಮಂಜು ಮತ್ತು ಮೋಕ್ಷಿತಾ ಆಟವನ್ನು ತೀರಾ ವೈಯಕ್ತಿಕ ದ್ವೇಷದಂತೆ ಕಂಡರು.

Tap to resize

Latest Videos

ಬಿಗ್‌ಬಾಸ್‌ ಮನೆಯಲ್ಲಿ ಮಂಜು ಪಕ್ಷಪಾತ, ಪಾಸಿಟಿವ್ ಗೌತಮಿ ಪರ ನಿಂತು ನಾಮಿನೇಷನ್‌ನಿಂದ ಸೇವ್‌ ಮಾಡಿದ್ರಾ?

ಟಾಸ್ಕ್‌ ಆರಂಭವಾದ ದಿನದಿಂದ ಗೌತಮಿ ಹೇಳಿದಂತೆ ಮಹಾರಾಜ ಮಂಜು ಕೇಳುತ್ತಿದ್ದಾರೆ. ಮಾತ್ರವಲ್ಲ ನಾಮಿನೇಷನ್‌ ನಲ್ಲೂ ನ್ಯಾಯಯುತವಾಗಿ ಮಂಜು ಡಿಸಿಷನ್‌ ತೆಗೆದುಕೊಳ್ಳದೆ ಗೌತಮಿ ಅವರನ್ನು ಸೇವ್‌ ಮಾಡಿದ್ದಾರೆ. ಒದು ವೀಕ್ಷಕರಲ್ಲಿ ಚರ್ಚೆ ಹುಟ್ಟುಹಾಕಿತ್ತು. 

ಮೋಕ್ಷಿತಾ ಈ ಹಿಂದಿನ ಎಪಿಸೋಡ್​ನಲ್ಲಿ ಕಣ್ಣೀರು ಹಾಕಿಕೊಂಡು ಮಂಜಣ್ಣನಿಗಾಗಿ ಹಾಡು ಹೇಳಿದ್ದರು. ಇದು ನಾಟಕ ಎಂಬುದು ಗೌತಮಿ ಮತ್ತು ಮಂಜು ಅವರು ಮಾತನಾಡಿಕೊಂಡಿದ್ದಾರೆ. ಇಂದಿನ ಟಾಸ್ಕ್‌ ರದ್ದಾದ ಬಳಿಕ ಅದೇ ಹಾಡನ್ನು ಮತ್ತೆ ಹಾಡಿಕೊಂಡು ಅಣಕಿಸಿದ್ದಾರೆ. ಇದು ಮೋಕ್ಷಿತಾ ಅವರಿಗೆ ಸಿಕ್ಕಾಪಟ್ಟೆ ಕೋಪ ತರಿಸಿದೆ. 

ಇಷ್ಟೆಲ್ಲ ಟಾಸ್ಕ್‌ ಆಗಿ ಚರ್ಚೆಗಳಾದ ಬಳಿಕ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಒಬ್ಬರನ್ನು ಹೊರಗೆ ಇಡಬೇಕು ಎಂದು ಮಹಾರಾಜ  ಮಂಜಣ್ಣ ಮತ್ತು ಯುವರಾಣಿ ಮೋಕ್ಷಿತಾ ಅವರಿಗೆ ಬಿಗ್ಬಾಸ್‌ ಗೆ ನೀಡಿದರು. ಮಂಜು ಅವರು ರಜತ್ ಮತ್ತು ಮೋಕ್ಷಿತಾ ಅವರು ತ್ರಿವಿಕ್ರಮ್‌ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ ಆಡುವಂತಿಲ್ಲ ಎಂದು ಹೊರಗಿಟ್ಟರು. ರಜತ್‌ ಗೆ ಇದು ಕೋಪ ತರಿಸಿದ್ದು,  ಮಹಾರಾಜನ ಪಟ್ಟ ನೀಡಲಾಗಿದೆ ಎಂಬುದನ್ನೂ ಕೂಡ ಲೆಕ್ಕಿಸದೇ ‘ರೋಗಿಷ್ಟ ರಾಜ’ ಎಂದು ರಜತ್ ಹೇಳಿದರು.

ಸ್ವಂತ ಮಗ ಅಖಿಲ್‌ಗಾಗಿ ನಾಗಚೈತನ್ಯನಿಗೆ ಬೇಧಭಾವ ಮಾಡಿದ್ರಾ ಮಲತಾಯಿ ಅಮಲಾ ಅಕ್ಕಿನೇನಿ!

ಮೋಕ್ಷಿತಾ ಕೆಲವು ನಿಯಮಗಳನ್ನು ಈ ಮನೆಯಲ್ಲಿ ಮಾಡಿರುತ್ತಾರೆ. ಆ ನಿಯಮಕ್ಕೆ ತಕ್ಕಂತೆ ಎಲ್ಲರೂ ನಡೆದುಕೊಳ್ಳಬೇಕು. ಆದರೆ ಗೌತಮಿ ಮಾತ್ರ ಫಾಲೋ ಮಾಡಲ್ಲ ಎಂದು ಹೇಳುತ್ತಾರೆ. ಸುರೇಶ್‌ ಅವರು ಆಟದ ನಿಯಮವನ್ನು ಹೇಳಿದರೂ ಸಹ ಗೌತಮಿ ಮಾತ್ರ ಇದಕ್ಕೆಲ್ಲ ಒಪ್ಪಿಕೊಂಡಿಲ್ಲ. ಇದು ಅವರ ಆತ್ಮೀಯ ಗೆಳೆಯ ಉಗ್ರಂ ಮಂಜು ಅವರು ಮಹರಾಜನಾಗಿರುವುದಕ್ಕೆ ಗೌತಮಿಯ ದುರಹಂಕಾರ ಎಂದು ಸೋಷಿಯಲ್  ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ. 

ಟಾಸ್ಕ್‌ ಎಲ್ಲಾ ಮುಗಿದ ಬಳಿಕ ಮೋಕ್ಷಿತಾ ಅವರು  ಅತ್ತರು. ಮನೆಯೆಲ್ಲ ಮಲಗಿದ್ದ ಸಮಯ, ಬೆಳಗ್ಗಿನ ಜಾವ 3 ಗಂಟೆಯ ಸಮಯದಲ್ಲಿ ಕ್ಯಾಮಾರಾದ ಮುಂದೆ ಬಂದು ಅತ್ತ ಮೋಕ್ಷಿತಾ ಅವರು ಇದರಲ್ಲಿ ನನ್ನ ತಪ್ಪಿದೆಯಾ? ನಾನ್ಯಾಕೆ ಇಷ್ಟೆಲ್ಲ ಮಾತು ಕೇಳಬೇಕು. ಮಂಜು ಅವರು ಇದನ್ನು ಆಟದ ತರ ನೋಡಲೇ ಇಲ್ಲ. ಎಲ್ಲಾ ವೈಯಕ್ತಿಕವಾಗಿ ತೆಗೆದುಕೊಂಡರು.  ಇಷ್ಟು ದಿನದಿಂದ ಅವರು ಹೀಗೆ ಆಟ ಆಡಿದ್ದಾರೆ. ಬರೇ ಮೋಸದಿಂದ ಗೆದ್ದಿದ್ದಾರೆ. ಇವತ್ತು ನಾನು ಅವರು ಎದುರಾಳಿಯಾಗಿದ್ದಕ್ಕೆ ಬಾಯಲ್ಲಿ ಏನೇನೋ ಮಾತುಗಳು. ಬಿಗ್‌ಬಾಸ್‌ ಮನೆಯಲ್ಲಿ ಇರುವವರೆಗೂ ನಾನು ಆ ಹಾಡು ಹೇಳಲ್ಲ (ಇನ್ನೂನು ಬೇಕಾಗಿದೆ ಒಲವು  ಇನ್ನೂನು ಬೇಕಾಗಿದೆ). ನನ್ನ ಎಮೋಷನ್‌  ಅನ್ನು ಫೇಕ್ ಅಂತಾರೆ. ನನ್ನ ಎಮೋಷನ್‌  ಇಟ್ಟುಕೊಂಡು ತಮಾಷೆ ಮಾಡ್ತಾರೆ ಎಂದು ಬಿಬಿಕೆ ಕ್ಯಾಮಾರಾ ಮುಂದೆ ಅತ್ತರು. 

click me!