ಕನ್ನಡಿಗರ ಮನ ಗೆದ್ದ ಸೂರ್ಯಕಾಂತ್‌, ಕೊಹ್ಲಿ ಸೈನ್ಯದಲ್ಲಿ ಬದಲಾವಣೆ; ಆ.23ರ ಟಾಪ್ 10 ಸುದ್ದಿ!

By Suvarna NewsFirst Published Aug 23, 2021, 5:17 PM IST
Highlights

ಎದೆತುಂಬಿ ಹಾಡುವೆನು ರಿಯಾಲಿಟೋ ಕಾರ್ಯಕ್ರಮದಲ್ಲಿ ಹಲವು ಅಡೆತಟ್ಟಿ ಮೆಟ್ಟಿ ನಿಂತ ಸೂರ್ಯಕಾಂತ್ ಕನ್ನಡಿಗರ ಮನಗೆದ್ದಿದ್ದಾರೆ. ಒಂದೂವರೆ ವರ್ಷದ ಬಳಿಕ ಶಾಲಾ ಕಾಲೇಜು ಆರಂಭಗೊಂಡಿದೆ. ಬಿಗ್ ಬಾಸ್‌ ಮನೆಯಲ್ಲಿ ಅಕ್ಕ ಶಿಲ್ಪಾ ಶೆಟ್ಟಿ ಧ್ವನಿ ಕೇಳಿ ಶಮಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 3ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ, ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯ ಸೇರಿದಂತೆ ಆಗಸ್ಟ್ 23ರ ಟಾಪ್ 10 ಸುದ್ದಿ ವಿವರ.

ಅಪ್ಘಾನ್‌ನಿಂದ ಸುರಕ್ಷಿತವಾಗಿ ಮರಳಿದ ಕನ್ನಡಿಗ ಪ್ರಸಾದ್ ಆನಂದ್ ಮಾತು

ಅಫ್ಘಾನಿಸ್ತಾನದಿಂದ ಬಚಾವಾಗಿ ಬಂದಿದ್ದಾರೆ ಕನ್ನಡಿಗ ಪ್ರಸಾದ್ ಆನಂದ್. ತಾಲಿಬಾನಿಗಳ ಆಕ್ರಮಣದ ಬಳಿಕ ಅಫ್ಘಾನಿಸ್ತಾಣದಲ್ಲಿ ಆತಂಕದ ವಾತಾವರಣ ಮನೆ ಮಾಡಿದ್ದು, ಅಲ್ಲಿನ ನಾಗರಿಕರು ಸೇರಿದಂತೆ ವಿದೇಶಿಗರು ತಮ್ಮ ಪ್ರಾಣ ಕಾಪಾಡಲು ಹರಸಾಹಸ ಪಡುತ್ತಿದ್ದಾರೆ. ಹೀಗಿರುವಾಗ ಭಾರತೀಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಏರ್‌ಲಿಫ್ಟ್‌ ಮಾಡಲಾರಂಭಿಸಿದೆ. ಹೀಗಿರುವಾಗ ಏಳು ಮಂದಿ ಕನ್ನಡಿಗರ ರಕ್ಷಣೆ ಮಾಡಲಾಗಿದೆ.

ಕಾಶ್ಮೀರ ಭಾರತದ್ದಲ್ಲ ಎಂದ ಸಿಧು ಸಲಹೆಗಾರನಿಗೆ ಕ್ಯಾಪ್ಟನ್‌ ಕ್ಲಾಸ್‌!

ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಸಲಹೆಗಾರರಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧುರವರ ಸಲಹೆಗಾರನ ವಿವಾದಾತ್ಮಕ ಹೇಳಿಕೆ ಭಾರೀ ಗದ್ದಲ ಸೃಷ್ಟಿಸಿದ ಬರನ್ನಲ್ಲೇ, ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇನ್ಮುಂದೆ ಅಂತಹ ಹೇಳಿಕೆ ಬರೆಯದಂತೆ ಎಚ್ಚರಿಕೆ ನೀಡಿದ್ದಾರೆ.

Ind vs Eng 3ನೇ ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ..?

ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಟೆಸ್ಟ್‌ಗಳಲ್ಲಿ ಬೌಲಿಂಗ್‌ನಲ್ಲಿ ನಿರಾಸೆ ಮೂಡಿಸಿರುವ ರವೀಂದ್ರ ಜಡೇಜಾ 3ನೇ ಟೆಸ್ಟ್‌ ಪಂದ್ಯದಿಂದ ಹೊರಬೀಳುವ ಸಾಧ್ಯತೆಯಿದ್ದು, ಅವರ ಬದಲಿಗೆ ಆಲ್‌ರೌಂಡರ್‌ ರವಿಚಂದ್ರನ್‌ ಆಶ್ವಿನ್‌ ಆಡಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. 

ಎದೆತುಂಬಿ ಹಾಡುವೆನು: ಉಗ್ಗು ಸಮಸ್ಯೆ ಮೆಟ್ಟಿ ಕನ್ನಡಿಗರ ಹೃದಯ ಗೆದ್ದ ಸೂರ್ಯಕಾಂತ್‌

ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಕನ್ನಡಿಗರ ಹೃದಯ ಗೆದ್ದದ್ದು ಸೂರ್ಯಕಾಂತ್‌ ಎಂಬ ಗಾಯಕ. ಉಗ್ಗಿನ ಸಮಸ್ಯೆಯಿಂದ ಒದ್ದಾಡುವ ಇವರ ಅಮೋಘ ಗಾಯನಕ್ಕೆ ಕನ್ನಡಿಗರು ಹೃದಯ ತುಂಬಿ ಹರಸಿದ್ದಾರೆ.

ಬಿಗ್ ಬಾಸ್‌ ಮನೆಯಲ್ಲಿ ಅಕ್ಕ ಶಿಲ್ಪಾ ಶೆಟ್ಟಿ ಧ್ವನಿ ಕೇಳಿ ಬಿಕ್ಕಿಬಿಕ್ಕಿ ಅತ್ತ ಶಮಿತಾ ಶೆಟ್ಟಿ!

ಸಹೋದರಿ ಇಲ್ಲದೇ ರಕ್ಷಾ ಬಂಧನ ಆಚರಿಸಿದ ಶಿಲ್ಪಾ ಶೆಟ್ಟಿ. ವಿಡಿಯೋ ಕಾಲ್‌ ನೋಡಿ ಭಾವುಕರಾದ ಶಮಿತಾ, ಕುಟುಂಬದ ಸಮಸ್ಯೆಗಳನ್ನು ನೆನಪಿಸಿಕೊಂಡ ಕಣ್ಣೀರಿಟ್ಟ ನಟಿ. 

ಒಂದೂವರೆ ವರ್ಷದ ಬಳಿಕ ಶಾಲೆ ಓಪನ್‌: ಭಯಬಿಡಿ, ಕೊರೋನಾ ರೂಲ್ಸ್‌ ಫಾಲೋ ಮಾಡಿ..!

ರಾಜ್ಯದಲ್ಲಿ ಬರೋಬ್ಬರಿ 18 ತಿಂಗಳ ಬಳಿಕ ಶಾಲೆಗಳು ತೆರೆಯುತ್ತಿವೆ. ಕೊರೋನಾ ಭಯದ ನಡುವೆಯೇ ಶಾಲೆಗಳು ಓಪನ್‌ ಆಗುತ್ತಿವೆ. ಆದರೆ, ಕೋವಿಡ್‌ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. 26 ಜಿಲ್ಲೆಗಳಲ್ಲಿ ಶಾಲೆಗಳು ತೆರೆಯುತ್ತಿದ್ದು, 5 ಜಿಲ್ಲೆಗಳಲ್ಲಿ ಶಾಲೆಗಳು ಬಂದ್‌ ಇರಲಿವೆ. ರಾಜ್ಯದ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

ಶ್ರೀನಗರದ ದಾಲ್‌ ಸರೋವರದಲ್ಲಿ ‘ತೇಲುವ ಎಟಿಎಂ’!

ಪ್ರವಾಸಿಗರನ್ನು ಸೆಳೆಯಲು ವಿಶಿಷ್ಟಪ್ರಯತ್ನಕ್ಕೆ ಕೈ ಹಾಕಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಶ್ರೀನಗರದ ದಾಲ್‌ ಸರೋವರದಲ್ಲಿ ‘ತೇಲುವ ಎಟಿಎಂ’ ಯಂತ್ರವನ್ನು ಸ್ಥಾಪಿಸಿದೆ.

'ಗುಂಡಿಟ್ಟು ಮಹಿಳೆಯರ ಕೊಂದು ಶವದೊಂದಿಗೆ ತಾಲೀಬಾನಿಗಳ ಸೆಕ್ಸ್'

ತಾಲೀಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಅಟ್ಟಹಾಸ ಮೆರೆಯುತ್ತಲೇ ಇದ್ದಾರೆ. ಅನೇಕ ದೇಶಗಳು ಹರಸಹಾಸ ಮಾಡಿ ತಮ್ಮ ದೇಶದ ನಾಗರಿಕರನ್ನು  ಕರೆಸಿಕೊಂಡಿವೆ.

ಚೀನಾದಲ್ಲಿ ನೀಲಿ ತಿಮಿಂಗಿಲದಷ್ಟು ದೊಡ್ಡ ಎರಡು ಹೊಸ ಡೈನೋಸಾರ್ ಪಳಿಯುಳಿಕೆ ಪತ್ತೆ

ಸಾವಿರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಬದುಕಿ ನಶಸಿ ಹೋಗಿರುವ ಡೈನೋಸಾರ್‌ಗಳ ಬಗ್ಗೆ ಈಗಲೂ ನಮ್ಮಲ್ಲಿ ಸಂಶೋಧನಗೆಳು ನಡೆಯುತ್ತಿವೆ. ಅವುಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರ ಬೀಳುತ್ತಲೇ ಇವೆ.

click me!