ರಾಹುಲ್ ಗಾಂಧಿ ಬೆಂಕಿ ಭಾಷಣ: ಪಾಕಿಸ್ತಾನ ಮಾಜಿ ಸಚಿವ ಮೆಚ್ಚುಗೆ

By Kannadaprabha News  |  First Published May 3, 2024, 4:38 AM IST

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಇತ್ತೀಚಿನ ಭಾಷಣವನ್ನು ಮೆಚ್ಚಿ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸ್ಸೇನ್‌ ನೀಡಿದ ಹೇಳಿಕೆಯೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 


ನವದೆಹಲಿ (ಮೇ.03): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಇತ್ತೀಚಿನ ಭಾಷಣವನ್ನು ಮೆಚ್ಚಿ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸ್ಸೇನ್‌ ನೀಡಿದ ಹೇಳಿಕೆಯೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ರಾಹುಲ್‌ ಗಾಂಧಿ, ಬಿಜೆಪಿ ಮತ್ತು ಪ್ರಧಾನಿ ಮೋದಿ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದರು. ಜೊತೆಗೆ ರಾಮಮಂದಿರ ಉದ್ಘಾಟನೆ, ಬಿಜೆಪಿಯಿಂದ ದಮನಿತ ಸಮುದಾಯದ ಕಡೆಗಣನೆ ವಿಷಯವನ್ನು ಪ್ರಸ್ತಾಪಿಸಿದ್ದಸರು. ಈ ಭಾಷಣದ ಕ್ಲಿಪ್‌ ಒಂದನ್ನು ಜಾಲತಾಣದಲ್ಲಿ ಹಾಕಿರುವ ಪಾಕಿಸ್ತಾನದ ಮಾಜಿ ಸಚಿವ ಫವಾದ್‌ ಹುಸ್ಸೇನ್‌, ‘ರಾಹುಲ್‌ ಬೆಂಕಿ ಭಾಷಣ’ ಎಂದು ಹೊಗಳಿದ್ದರು.

ಈ ವಿಷಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಅಮಿತ್‌ ಮಾಳವೀಯ, ಪಾಕಿಸ್ತಾನದ ಜೊತೆಗಿನ ತನ್ನ ಸಂಬಂಧವನ್ನು ಕಾಂಗ್ರೆಸ್‌ ಬಹಿರಂಗಪಡಿಸಬೇಕು. ರಾಹುಲ್‌ ಗಾಂಧಿಯನ್ನು ಪಾಕಿಸ್ತಾನದ ಮಾಜಿ ಸಚಿವರು ಹೊಗಳುತ್ತಿದ್ದಾರೆ. ಕಾಂಗ್ರೆಸ್‌ ಪಾಕಿಸ್ತಾನದಿಂದ ಚುನಾವಣೆಗೆ ಸ್ಪರ್ಧಿಸುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಮುಸ್ಲಿಂ ಲೀಗ್‌ನ ಛಾಯೆ ಇದ್ದ ಪ್ರಣಾಳಿಕೆಯಿಂದ ಹಿಡಿದು, ಗಡಿಯಾಚೆಗಿಂದ ಬೆಂಬಲದವರೆಗಿನ ಘಟನೆ ನೋಡಿದರೆ, ಪಾಕಿಸ್ತಾನದ ಜೊತೆಗಿನ ಕಾಂಗ್ರೆಸ್‌ ನಂಟು ಮತ್ತಷ್ಟು ಖಚಿತಪಡುತ್ತಿದೆ ಎಂದು ಆರೋಪಿಸಿದ್ದಾರೆ.

Tap to resize

Latest Videos

ರಾಕ್ಷಸ ಪರಾರಿಯಾದ ಬಗ್ಗೆ ಪ್ರಧಾನಿ ಮೋದಿ ಹೇಳಲಿ: ರಾಹುಲ್ ಗಾಂಧಿ

ಬಿಜೆಪಿ ಮತ್ತೊಬ್ಬ ನಾಯಕ ಶೆಹಜಾದ್‌ ಪೂನಾವಾಲಾ, ‘ಕಾಂಗ್ರೆಸ್‌ ಕೇ ಹಾಥ್‌ ಪಾಕಿಸ್ತಾನ್‌ ಕೇ ಸಾಥ್‌’ ಎಂದು ಕಿಡಿಕಾರಿದ್ದಾರೆ. ಈ ಮೊದಲು ಲಷ್ಕರ್‌ ಉಗ್ರ ಹಫೀಜ್‌ ಸಯೀದ್‌ ಕಾಂಗ್ರೆಸ್‌ ನನ್ನ ಅತ್ಯಂತ ನೆಚ್ಚಿನ ಪಕ್ಷ ಎಂದಿದ್ದರು. ಮಣಿಶಂಕರ್‌ ಅಯ್ಯರ್‌ ಮೋದಿ ಟೀಕಿಸುತ್ತಾ ಪಾಕಿಸ್ತಾನವನ್ನು ಬೆಂಬಲಿಸಿದ್ದರು. ಅದರ ಜೊತೆಗೆ ಇತ್ತೀಚೆಗೆ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ್ದೂ ನೋಡಿದ್ದೆವು; ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್‌ ಬಹಿರಂಗವಾಗಿಯೇ ಪಾಕಿಸ್ತಾನದ ಪರ ಬ್ಯಾಟಿಂಗ್‌ ಮಾಡಿದ್ದರು. ಜೊತೆಗೆ ಪದೇ ಪದೇ ಕಾಂಗ್ರೆಸ್‌ ನಾಯಕರು ಪಾಕ್‌ ಉಗ್ರರನ್ನು ಬೆಂಬಲಿಸಿದ್ದನ್ನು ನಾವು ಮರೆಯುವಂತಿಲ್ಲ ಎಂದು ಕಿಡಿಕಾರಿದ್ದಾರೆ.

click me!