3ನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್, ಗುರುದ್ವಾರಕ್ಕೆ ಮೋದಿ ವಿಸಿಟ್; ಮೇ.1ರ ಟಾಪ್ 10 ಸುದ್ದಿ!

By Suvarna NewsFirst Published May 1, 2021, 4:44 PM IST
Highlights

ಕೊರೋನಾ ವೈರಸ್ 2ನೇ ಅಲೆ ತಾಳಲಾರದ ಭಾರತಕ್ಕೆ ಇದೀಗ 3ನೇ ಅಲೆ ಸೂಚನೆ ಸಿಕ್ಕಿದೆ. ಇದರಲ್ಲಿ ಮಕ್ಕಳೇ ಟಾರ್ಗೆಟ್ ಹೇಳಲಾಗಿದೆ. ಒಂದೇ ದಿನ ದೇಶದಲ್ಲಿ 4 ಲಕ್ಷಕ್ಕೂ ಅಧಿಕ ಕೇಸ್ ದಾಖಲಾಗಿದೆ. ಮಾಸ್ಕ್ ಯಾಕೆ ಎಂದಿದ್ದ ಶಾಸಕ ಕೋವಿಡ್‌ಗೆ ಬಲಿಯಾಗಿದ್ದಾರೆ. ಭದ್ರತೆ ಇಲ್ಲದೆ ಗುರುದ್ವಾರಕ್ಕೆ ಪ್ರಧಾನಿ ಮೋದಿ ಭೇಟಿ, ಕೊರೋನಾಗೆ ಕ್ರಿಕೆಟಿಗರ ನೆರವು ಸೇರಿದಂತೆ ಮೇ.01ರ ಟಾಪ್ 10 ಸುದ್ದಿ ಇಲ್ಲಿವೆ. 

ಭಾರತದಲ್ಲಿ ಒಂದೇ ದಿನ 4 ಲಕ್ಷ ಕೊರೋನಾ ಕೇಸ್; ವಿಶ್ವದಲ್ಲೇ ಗರಿಷ್ಠ ಪ್ರಕರಣ!...

Latest Videos

ಕೊರೋನಾ ವೈರಸ್ ನಿಯಂತ್ರಣಕ್ಕೆ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಆಯಾ ರಾಜ್ಯಗಳಲ್ಲಿ ಕರ್ಫ್ಯೂ, ಸೆಮಿ ಲಾಕ್‌ಡೌನ್, ಲಾಕ್‌ಡೌನ್, ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಲ್ಲಿದೆ. ಆದರೆ ಕೊರೋನಾ ಕೇಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಒಂದೇ ದಿನ ಅತೀ ಹಚ್ಚು ಕೇಸ್ ದಾಖಲಾಗದ ಕುಖ್ಯಾತಿಗೆ ಭಾರತ ಗುರಿಯಾಗಿದೆ

ಕೊರೋನಾ 2 ಅಲೆ ನಡುವೆ ಮೂರನೇ ಅಲೆ ಅಪ್ಪಳಿಸುವ ಸೂಚನೆ: ಮಕ್ಕಳೇ ಟಾರ್ಗೆಟ್‌?...

ಕೊರೋನಾ ಎರಡನೇ ಅಲೆಯನ್ನೇ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಹಹಾಮಾರಿ ಅಬ್ಬರ ಎಲ್ಲರನ್ನೂ ಕಂಗಾಲುಗೊಳಿಸಿದೆ. ಹೀಗಿರುವಾಗಲೇ ದೇಶದಲ್ಲಿ ಸದದ್ಯದಲ್ಲೇಏ ಮೂರನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಭಾರತದ ಕೊರೋನಾ ನಿಯಂತ್ರಣಕ್ಕೆ US ಮೆಡಿಕಲ್ ಮಹತ್ವದ ಸಲಹೆ!...

ಕೊರೋನಾ ವೈರಸ್ ಭಾರತದಲ್ಲಿ ಎಬ್ಬಿಸಿರುವ ಸುಂಟರಗಾಳಿಗೆ ಸಂಪೂರ್ಣ ವ್ಯವಸ್ಥೆ ಬುಡಮೇಲಾಗಿದೆ. ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದೀಗ ಅಮೆರಿಕ ಮೆಡಿಕಲ್ ಸಲಹೆಗಾರ ಭಾರತದ ಕೊರೋನಾ ನಿಯಂತ್ರಣಕ್ಕೆ ಮಹತ್ವದ ಸಲಹೆ ನೀಡಿದ್ದಾರೆ. 

ಮಹಾಮಾರಿ ಕೊರೋನಾಗೆ ಬೆಂಗಳೂರು ಟಾರ್ಗೆಟ್: ಬಯಲಾಯ್ತು ಆಘಾತಕಾರಿ ವಿಚಾರ!...

ಮಹಾಮಾರಿ ಕೊರೊನಾಗೆ ಬೆಂಗಳೂರು ಟಾರ್ಗೆಟ್..!| ಬೆಂಗಳೂರೊಂದ್ರಲ್ಲೇ ಇಲ್ಲೀವರೆಗೆ ಕೋವಿಡ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 6378| ದಿನದಿಂದ ದಿನಕ್ಕೆ ಬೆಂಗಳೂರಿನ ಮರಣ ಪ್ರಮಾಣ ಏರಿಕೆ

ಗುರು ತೇಜ್ ಬಹದ್ದೂರ್ ಜನ್ಮ ಜಯಂತಿ: ಭದ್ರತೆ ಬದಿಗಿಟ್ಟು ಗುರುದ್ವಾರಕ್ಕೆ ಮೋದಿ ಭೇಟಿ!...

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ಸಿಖ್ ಧರ್ಮದ ಒಂಬತ್ತನೇ ಗುರು ತೇಜ್ ಬಹದ್ದೂರ್ ಅವರ 400 ನೇ ಜನ್ಮ ಜಯಂತಿ ಸಂದರ್ಭದಲ್ಲಿ ದೆಹಲಿಯ ಶಿಶ್ ಗಂಜ್ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿ ಪಿಎಂ ಮೋದಿ ದೇಶದ ಅಭಿವೃದ್ಧಿಗಾಗಿ ಪ್ರಾರ್ಥಿಸಿದ್ದಾರೆ. ಯಾವುದೇ ಭದ್ರತಾ ಮಾರ್ಗ ಮತ್ತು ವಿಶೇಷ ಭದ್ರತಾ ವ್ಯವಸ್ಥೆಗಳಿಲ್ಲದೆ ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ನೀಡಿದ್ದರೆಂಬುವುದು ಉಲ್ಲೇಖನೀಯ.

ಕೊರೋನಾ ಇನ್ನಿಲ್ಲ, ಮಾಸ್ಕ್‌ ಏಕೆ ಹಾಕಬೇಕು?’ ಎಂದಿದ್ದ ಶಾಸಕ ಕೋವಿಡ್‌ಗೆ ಬಲಿ!...

ಇದು ಕೊರೋನಾ ನಿಯಮ ಪಾಲಿಸದೇ ಇದ್ದವರಿಗೆ ಪಾಠ| ಮಾಸ್ಕ್‌ ಸೇರಿ ಮಾರ್ಗಸೂಚಿಗಳ ಬಗ್ಗೆ ಉಡಾಫೆಯೇ ಬೇಡ| ಸ್ವಲ್ಪ ಎಚ್ಚರ ತಪ್ಪಿದರೂ ಭಾರೀ ಬೆಲೆ ತೆರಬೇಕಾಗುತ್ತೆ: ತಜ್ಞರು

ಕೋವಿಡ್ ಹೋರಾಟಕ್ಕೆ ಕೈಜೋಡಿಸಿದ ಪೂರನ್‌, ಉನಾದ್ಕತ್, ಧವನ್‌...

ಇಡೀ ದೇಶವೇ ಕೋವಿಡ್ ವಿರುದ್ದ ಹೋರಡುತ್ತಿರುವ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಕೆಲವು ಕ್ರಿಕೆಟಿಗರು ತಮ್ಮ ನೆರವಿನ ಹಸ್ತವನ್ನು ಚಾಚಿದ್ದಾರೆ. ವಿಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್ ಸೇರಿದಂತೆ ಭಾರತದ ಧವನ್, ಉನಾದ್ಕತ್ ತಮ್ಮ ಸಂಭಾವನೆಯ ಒಂದು ಭಾಗವನ್ನು ಕೋವಿಡ್ ವಿರುದ್ದದ ಹೋರಾಟಕ್ಕೆ ನೀಡಿದ್ದಾರೆ

ಬ್ಯಾಂಕಲ್ಲಿ ಒಂದು ರೂಪಾಯಿ ಇರಲಿಲ್ಲ, ಚೌಡೇಶ್ವರಿ ದೇವಿ ಕಾಪಾಡಿದಳು: ಶುಭಾ ಪೂಂಜಾ...

ಸಿನಿ ಜರ್ನಿಯಲ್ಲಿ ಎದುರಿಸಿದ ಕಷ್ಟದ ದಿನಗಳ ಬಗ್ಗೆ ನಟಿ ಶುಭಾ ಪೂಂಜಾ ಬಿಗ್ ಬಾಸ್‌ ಮನೆಯಲ್ಲಿ ಹಂಚಿಕೊಂಡಿದ್ದಾರೆ. 

ಕೊರೋನಾ ತಡೆಗೆ ಲಾಕ್​ಡೌನ್​​ ಅಗತ್ಯ: ಹಾಗಾದ್ರೆ ಲಾಕ್ ಆಗುತ್ತಾ ಕರ್ನಾಟಕ?...

ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಲಾಕ್‌ಡೌನ್ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ ಎಂದು ಉಪಮುಖ್ಯಮಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್‍ಗೆ ಬಿಜೆಪಿ MLC ಬಲಿ...

ಮಹಾಮಾರಿ ಕೊರೋನಾ ಎರಡನೇ ಅಲೆ ಭೀಕರವಾಗಿದ್ದು, ಸಾವಿನ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ದೊಡ್ಡ-ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜಕಾರಣಿಗಳನ್ನೂ ಸಹ ಬಲಿ ಪಡೆಯುತ್ತಿದೆ.

click me!