ಮೈದುನನ ಜೊತೆ ಅತ್ತಿಗೆ ಜೂಟ್; ಆತ ಗಂಡನಿಗಿಂತ ಹ್ಯಾಂಡ್‌ಸಮ್, ನನಗೆ ಗುಡ್‌ ಲುಕ್ಕಿಂಗ್ ಮಗು ಬೇಕೆಂದ ಮಹಿಳೆ

By Mahmad Rafik  |  First Published Oct 3, 2024, 10:57 AM IST

ಸುಂದರ ಮಗುವಿನ ಆಸೆಗಾಗಿ ಮಹಿಳೆಯೊಬ್ಬಳು ಗಂಡನಿಗೆ ಮೋಸ ಮಾಡಿ, ಮೈದುನನೊಂದಿಗೆ ಓಡಿ ಹೋಗಿರುವ ಘಟನೆ ನಡೆದಿದೆ. ಮಹಿಳೆ ತನ್ನ ಗಂಡನನ್ನು ಹ್ಯಾಂಡ್ಸಮ್ ಅಲ್ಲ ಎಂದು ಭಾವಿಸಿ ಆಕರ್ಷಕ ಮೈದುನನಿಂದ ಮಗುವನ್ನು ಬಯಸಿದ್ದಳು.


ಭೋಪಾಲ್: ಸುಂದರ ಮಗುವಿನ ಆಸೆಗಾಗಿ ಗಂಡನಿಗೆ ಮೋಸ ಮಾಡಿ, ಆತನ ಸೋದರನ ಜೊತೆಯಲ್ಲಿ ಓಡಿ ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮೈದುನ ಜೊತೆ ಕಾಲ್ಕಿತ್ತ ಬಳಿಕ ಈ ವಿಷಯವನ್ನು ಗಂಡನಿಗೆ ತಲುಪಿಸಿದ್ದಾಳೆ. ಪತಿ ಹಾಗೂ ಆತನ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಜೋಡಿಯನ್ನು ಪತ್ತೆ ಮಾಡಿದಾಗ ಮಹಿಳೆ ಹಿಂದಿರುಗಲು ನಿರಾಕರಿಸಿದ್ದಾಳೆ. ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ಪತಿ, ಆಕೆಗೆ ಸುಂದರವಾದ ಮಗು ಬೇಕು. ಹಾಗಾಗಿ ಹ್ಯಾಂಡ್‌ಸಮ್ ಆಗಿರುವ ನನ್ನ ಸೋದರನ ಜೊತೆ ಹೋಗಿದ್ದಾಳೆ. ಒಂದು ವೇಳೆ ವಾಪಸ್ ಕರೆದುಕೊಂಡು ಬಂದ್ರೆ ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳುವದಾಗಿ ಬೆದರಿಕೆ ಹಾಕಿದ್ದಾಳೆ. ಪತ್ನಿಯಿಂದ ನಮ್ಮನ್ನು ರಕ್ಷಿಸುವಂತೆ ಮನವಿ ಸಲ್ಲಿಸಲು ಎಸ್‌ಪಿ ಅವರ ಬಳಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಮದುವೆಯಾಗಿ 10 ವರ್ಷವಾದ್ರೂ ಮಹಿಳೆ ಮಕ್ಕಳು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಳು. ಗಂಡ ನೋಡಲು ಚೆನ್ನಾಗಿರದ ಕಾರಣ ಮಗು ಮಾಡಿಕೊಳ್ಳಲು ಪತ್ನಿ ಒಪ್ಪಿಕೊಳ್ಳುತ್ತಿರಲಿಲ್ಲ. ತನ್ನ ಪತಿ ಹ್ಯಾಂಡ್‌ಸಮ್ ಮತ್ತು ಗುಡ್ ಲುಕ್ಕಿಂಗ್ ಹೊಂದಿಲ್ಲ ಎಂಬ ಭಾವನೆ ಮಹಿಳೆಯಲ್ಲಿ ಬೇರೂರಿತ್ತು. 

Tap to resize

Latest Videos

undefined

ಆದ್ರೆ ಮೈದುನ ನೋಡಲು ತುಂಬಾ ಆಕರ್ಷಕವಾಗಿರುವ ಕಾರಣ ಆತನಿಂದ ಮಗು ಮಾಡಿಕೊಳ್ಳುವ ಆಸೆಯನ್ನು ಮಹಿಳೆ ಹೊಂದಿದ್ದಳು. ಹೀಗಾಗಿಯೇ ಮೈದುನ ಜೊತೆಯಲ್ಲಿ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯ ಅತ್ತೆಗೆ ತಿಳಿಯುತ್ತಲೇ ಮೈದುನನ ಜೊತೆ ಮಹಿಳೆ ಮನೆಯಿಂದ ಕಾಲ್ಕಿತ್ತಿದ್ದಳು. ಅತ್ತೆ ಇಬ್ಬರ ಸಂಬಂಧಕ್ಕೆ ತಡೆಗೋಡೆಯಾಗಿ ನಿಂತಿದ್ದರು. ಇದೀಗ ಪತಿಯ ಇಡೀ ಕುಟುಂಬ ಎಸ್‌ಪಿ ಅವರ ಬಳಿ ಬಂದು ಮನವಿ ಮಾಡಿಕೊಂಡಿದೆ.

ಸಂಗಾತಿ ಸಮ್ಮತಿ ಇಲ್ಲದೇ ಲೈಂಗಿಕ ಕ್ರಿಯೆಯಲ್ಲಿ ಕಾಂಡೋಮ್ ತೆಗೆದ ಪೊಲೀಸ್ ಪೇದೆಗೆ ಜೈಲು ಶಿಕ್ಷೆ ಪ್ರಕಟ

ಮಧ್ಯಪ್ರದೇಶದ ಛತ್‌ಪುರ್ ನಗರದ ಸೀತಾರಾಮ ಕಾಲೋನಿಯ ನಿವಾಸಿ ರಾಜೇಂದ್ರ ಕುಶ್ವಾಹ ಪತ್ನಿ ಮೀನಾ ಓಡಿ ಹೋಗಿದ್ದಾಳೆ. 10 ವರ್ಷಗಳ ಹಿಂದೆ ರಾಜೇಂದ್ರ ಮತ್ತು ಮೀನಾ ಮದುವೆಯಾಗಿತ್ತು. ಆದ್ರೆ ಇದೀಗ ರಾಜೇಂದ್ರ ಕಿರಿಯ ಸೋದರನ ಜೊತೆಯಲ್ಲಿ ಮೀನಾ ಪರಾರಿಯಾಗಿದ್ದಾಳೆ. ಇದೀಗ ಮೆಸೇಜ್ ಮಾಡುತ್ತಿರುವ ಮೀನಾ, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಿದ್ದಾಳೆ. ಈ ಹಿನ್ನೆಲೆ ರಾಜೇಂದ್ರ ಕುಟುಂಬ ಸಮೇತರಾಗಿ ಎಸ್‌ಪಿ ಅವರನ್ನು ಭೇಟಿಯಾಗಿ ದೂರು ದಾಖಲಿಸಲು ಬಂದಿದ್ದಾರೆ. ಮನೆಯಿಂದ ದೂರ ಹೋದರು ಪದೇ ಪದೇ ಬೆದರಿಕೆ ಹಾಕಿ ತೊಂದರೆಯನ್ನುಂಟು ಮಾಡುತ್ತಿದ್ದಾಳೆ. ಒಂದು ವೇಳೆ ಆಕೆ ತನ್ನ ಪ್ರಾಣಕ್ಕೆ ಏನಾದರೂ ಮಾಡಿಕೊಂಡ ನಮ್ಮ ಮೇಲೆಯೇ ಅಪಾದನೆ ಬರಲಿದೆ ಎಂದು ರಾಜೇಂದ್ರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮೀನಾ ಯಾರ ಜೊತೆಯಲ್ಲಾದರೂ ಇರಲಿ, ಹೇಗಾದರೂ ಇರಲಿ. ಅದರ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ. ನಮಗೆ ತೊಂದರೆ ಕೊಡುವುದನ್ನು ಆಕೆ ಮೊದಲು ನಿಲ್ಲಿಸಲಿ. ಈಗಾಗಲೇ ಆಕೆಯಿಂದ ನಮ್ಮ ಕುಟುಂಬ ಸಾಕಷ್ಟು ಅವಮಾನಕ್ಕೊಳಗಾಗಿದೆ. ಇದೀಗ ಮತ್ತಷ್ಟು ಅವಮಾನ ಮತ್ತು ಆಕೆಯ  ನೀಡುತ್ತಿರುವ ಮಾನಸಿಕ ಕಿರುಕುಳವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆಕೆಯಿಂದ ನಮಗೆ ಬಿಡುಗಡೆ ಕೊಡಿಸಿ ಎಂದು ರಾಜೇಂದ್ರ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. 

ಎಷ್ಟೇ ಕೆಲಸ ಮಾಡಿದ್ರೂ ನಗುತ್ತಲೇ ಇರಬೇಕಂತೆ, ಒಳ್ಳೆ ಪತ್ನಿ ಆಗುವುದು ಹೇಗೆ ಅಂತ ಪಟ್ಟಿ ಕೊಟ್ಟ ಅತ್ತೆಗೆ ನೆಟ್ಟಿಗರಿಂದ ತರಾಟೆ

click me!