ಪ್ರಧಾನಿ ನರೇಂದ್ರ ಮೋದಿಯವರು ನೀರಜ್ ಚೋಪ್ರಾ ತಾಯಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ನೀವು ಮಾಡಿಕೊಟ್ಟ ಚುರ್ಮಾ(ಖಾದ್ಯ) ನನ್ನ ತಾಯಿಯನ್ನು ನೆನಪಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾರ ತಾಯಿ ಸರೋಜ್ ದೇವಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಮಂಗಳವಾರ ಜಮೈಕಾ ಪ್ರಧಾನಿ ಆ್ಯಂಡ್ರ್ಯೂ ಹಾಲ್ನೆಸ್ ಜೊತೆ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಮೋದಿಯನ್ನು ಭೇಟಿಯಾಗಿದ್ದ ನೀರಜ್, ತಮ್ಮ ತಾಯಿ ತಯಾರಿಸಿದ್ದ ಚುರ್ಮಾ ನೀಡಿದ್ದರು. ಬುಧವಾರ ನೀರಜ್ ತಾಯಿಗೆ ಪತ್ರ ಬರೆದಿರುವ ಮೋದಿ, ‘ಸಹೋದರ ನೀರಜ್ ನನ್ನೊಂದಿಗೆ ಈ ಚುರ್ಮಾದ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದರೂ ಇಂದು ನಾನು ಅದನ್ನು ತಿಂದು ಭಾವುಕನಾದೆ. ನಿಮ್ಮ ಅಪಾರ ಪ್ರೀತಿ ಮತ್ತು ವಾತ್ಸಲ್ಯದ ಈ ಉಡುಗೊರೆ ನನಗೆ ನನ್ನ ತಾಯಿಯನ್ನು ನೆನಪಿಸಿತು. ನೀವು ತಯಾರಿಸಿದ ಆಹಾರ ನೀರಜ್‌ಗೆ ದೇಶಕ್ಕಾಗಿ ಪದಕ ಗೆಲ್ಲಲು ಶಕ್ತಿ ನೀಡುತ್ತದೆ. ಅದೇ ರೀತಿ ನವರಾತ್ರಿ ವೇಳೆ ದೇಶ ಸೇವೆ ಮಾಡಲು ಈ ಚುರ್ಮಾ ನನಗೆ ಶಕ್ತಿ ನೀಡಲಿದೆ’ ಎಂದಿದ್ದಾರೆ.
ನೀರಜ್ ಚೋಪ್ರಾ ಕೆಲ ತಿಂಗಳ ಹಿಂದಷ್ಟೇ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ವೈಯುಕ್ತಿಕ ವಿಭಾಗದಲ್ಲಿ ಎರಡು ಪದಕ ಗೆದ್ದ ದೇಶದ ಮೊದಲ ಅಥ್ಲೀಟ್ ಎನ್ನುವ ಹಿರಿಮೆಗೆ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಪಾತ್ರರಾಗಿದ್ದರು. ಇದಾದ ಬಳಿಕ ಡೈಮಂಡ್ ಲೀಗ್ ಫೈನಲ್ಸ್‌ನಲ್ಲೂ ನೀರಜ್ ಚೋಪ್ರಾ ಕೂದಲೆಳೆ ಅಂತರದಲ್ಲಿ ಚಾಂಪಿಯನ್ ಪಟ್ಟ ಕೈಚೆಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಸರ್ಫರಾಜ್ ಖಾನ್ ದ್ವಿಶತಕದ ಅಬ್ಬರ: ಇರಾನಿ ಕಪ್‌ನಲ್ಲಿ ಮುಂಬೈ ಬರೋಬ್ಬರಿ 536 ರನ್
ಪ್ರಧಾನಿಯ ಕರೆ ಸ್ವೀಕರಿಸಲು ನಿರಾಕರಿಸಿದ್ದ ರೆಸ್ಲರ್ ವಿನೇಶ್
ಜಿಂದ್(ಹರ್ಯಾಣ): ತೂಕ ಹೆಚ್ಚಳ ಕಾರಣಕ್ಕೆ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅಮಾನತುಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಕರೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾಗಿ ಮಾಜಿ ಕುಸ್ತಿಪಟು, ಹರ್ಯಾಣ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಹೇಳಿದ್ದಾರೆ. ತಮ್ಮ ನೋವು ಹಾಗೂ ಪ್ರಯತ್ನ ರಾಜಕೀಯ ದುರುದ್ದೇಶಕ್ಕೆ ಬಳಸುವುದು ಇಷ್ಟವಿರಲಿಲ್ಲ ಎಂದು ವಿನೇಶ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್: ಸಚಿನ್ ರೆಕಾರ್ಡ್ ಮುರಿಯಲು ಕೊಹ್ಲಿಗೆ ಇನ್ನೆಷ್ಟು ರನ್ ಬೇಕು?
ಬುಧವಾರ ಹರ್ಯಾಣ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ವಿನೇಶ್, ‘ಪ್ರಧಾನಿ ಕರೆ ಮಾಡುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಆದರೆ ನಾನು ಕರೆ ಸ್ವೀಕರಿಸಲಿಲ್ಲ. ಪ್ರಧಾನಿ ಜೊತೆ ನಾನು ಮಾತನಾಡುವ ವಿಡಿಯೋವನ್ನು ರೆಕಾರ್ಡ್ ಮಾಡುತ್ತೇವೆ ಎಂದು ಷರತ್ತು ಹಾಕಲಾಗಿತ್ತು. ಮಾತನಾಡುವ ವೇಳೆ ನಮ್ಮ ತಂಡದ ಯಾರೂ ಜೊತೆಗಿರಬಾರದು ಎಂದಿದ್ದರು. ಮೋದಿಗೆ ನಿಜವಾಗಿಯೂ ಕ್ರೀಡಾಪಟುಗಳ ಬಗ್ಗೆ ಕಾಳಜಿ ಇದ್ದಿದ್ದರೆ ರೆಕಾರ್ಡ್ ಇಲ್ಲದೆ ಮಾತನಾಡುತ್ತಿದ್ದರು’ ಎಂದು ವಿನೇಶ್ ಹೇಳಿದ್ದಾರೆ. ‘ನನ್ನ ಜೊತೆ ಮಾತನಾಡಿದರೆ ಕಳೆದೆರಡು ವರ್ಷಗಳ ಘಟನೆ ಬಗ್ಗೆ ನಾನು ಉಲ್ಲೇಖಿಸುತ್ತೇನೆಂದು ಮೋದಿಗೆ ಗೊತ್ತಾಗಿರಬಹುದು. ಹೀಗಾಗಿಯೇ ರೆಕಾರ್ಡ್ ಮಾಡಲು ನಮ್ಮ ತಂಡದ ಯಾರಲ್ಲೂ ಮೊಬೈಲ್ ಇರಬಾರದೆಂದು ನಿರ್ದೇಶಿಸಿದ್ದರು’ ಎಂದು ತಿಳಿಸಿದ್ದಾರೆ.