ಬಹುತೇಕ ಭಾರತ ಲಾಕ್‌ಡೌನ್, ಆಕ್ಸಿಜನ್ ಆದೇಶ ಎತ್ತಿ ಹಿಡಿದ ಸುಪ್ರೀಂ; ಮೇ.7ರ ಟಾಪ್ 10 ಸುದ್ದಿ!

By Suvarna NewsFirst Published May 7, 2021, 4:53 PM IST
Highlights

ಕೊರೋನಾ ಆರ್ಭಟಕ್ಕೆ ಭಾರತದ ಬಹುತೇಕ ರಾಜ್ಯಗಳು ಲಾಕ್‌ಡೌನ್ ಆಗುತ್ತಿವೆ. ಇತ್ತ ಕರ್ನಾಟಕ ಹೈಕೋರ್ಟ್ ಆಕ್ಸಿಜನ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇತ್ತ ಸೆಂಟ್ರಲ್ ವಿಸ್ಟಾ ಯೋಜನೆ ಕುರಿತು ಪಾಠ ಮಾಡಿದ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ.ರೈನಾ ಕುಟುಂಬಕ್ಕೆ 10 ನಿಮಿಷದೊಳಗೆ ಆಕ್ಸಿಜನ್ ಒದಗಿಸಿದ ಸೋನು ಸೂದ್, ಸ್ಪಷ್ಟನೆ ನೀಡಿದ ತೇಜಸ್ವಿ ಸೂರ್ಯ ಸೇರಿದಂತೆ ಮೇ.07ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಸೆಂಟ್ರಲ್ ವಿಸ್ಟಾ ಯೋಜನೆ-ಕೊರೋನಾ; ರಾಹುಲ್ ಗಾಂಧಿ ಆದ್ಯತೆ ಪಾಠಕ್ಕೆ ಬಿಜೆಪಿ ತಿರುಗೇಟು!...

ಕೇಂದ್ರ ಸರ್ಕಾರದ ಸರ್ಕಾರ ಮಹತ್ವದ ಯೋಜನೆ ಸೆಂಟ್ರಲ್ ವಿಸ್ಟಾಗೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ರಾಹುಲ್ ಗಾಂಧಿ ಹೊಸ ಪಾರ್ಲಿಮೆಂಟ್‌ಗಿಂತ ಸೋಂಕಿತರ ಜೀವ ಉಳಿಸಿ ಎಂದಿದ್ದಾರೆ. ಆದರೆ ರಾಹುಲ್ ಟ್ವೀಟ್ ಇದೀಗ ತಿರುಗುಬಾಣವಾಗಿದೆ. ಕಾರಣ ಬಿಜೆಪಿ ಅಂಕಿ ಅಂಶದ ಜೊತೆ ರಾಹುಲ್ ಗಾಂಧಿಗೆ ತಿರುಗೇಟು ನೀಡಿದೆ.

ಮತ್ತೆ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಬದಲಾವಣೆ...

ಐದು ದಿನಗಳ ಹಿಂದಷ್ಟೇ  6 ಜಿಲ್ಲೆಗಳಿಗೆ ಉಸ್ತುವಾರಿ ಬದಲಾಯಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಮ್ಮೆ ಉಸ್ತುವಾರಿಗಳ ಬದಲಾವಣೆ ಮಾಡಿದೆ. 3 ಜಿಲ್ಲೆಗಳಿಗೆ ನೂತನ ಉಸ್ತುವಾರಿ ಸಚಿವರ ಬದಲಾಯಿಸಿದೆ. 

ಕೇಂದ್ರಕ್ಕೆ ತೀವ್ರ ಮುಖಭಂಗ: ಆಕ್ಸಿಜನ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ...

 ಕರ್ನಾಟಕಕ್ಕೆ ಆಮ್ಲಜನಕ ಕೊಡಲ್ಲ ಎಂದಿದ್ದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಹೈಕೋರ್ಟ್ ಆದೇಶಕ್ಕೆ ತಡೆ ನೀಡಲ್ಲ ಎಂದ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶ ನೀಡಿರುವ ಬಗ್ಗೆ  ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದೆ

ಸೋಂಕು ಭಾರಿ ಏರಿಕೆ : ಬಹುತೇಕ ಭಾರತದಲ್ಲಿ ಲಾಕ್ಡೌನ್‌...

 ದೇಶದಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಆರ್ಭಟ ತೀವ್ರಗೊಂಡಿದ್ದು,  ಸೋಂಕು ಮತ್ತು ಸಾವು ಎರಡರಲ್ಲೂ ಭಾರೀ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ಲಾಕ್‌ಡೌನ್ ಹಾಗೂ ಕಠಿಣ ಕ್ರಮಗಳನ್ನು ಜಾರಿ ಮಾಡಿವೆ. 

ರೈನಾ ಕುಟುಂಬಕ್ಕೆ 10 ನಿಮಿಷದೊಳಗೆ ಆಕ್ಸಿಜನ್ ಸಿಲಿಂಡರ್ ಒದಗಿಸಿದ ಸೋನು ಸೂದ್...

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ಕೇವಲ 10 ನಿಮಿಷದೊಳಗಾಗಿ ಆಕ್ಸಿಜನ್‌ ಸಿಲಿಂಡರ್ ಪೂರೈಸುವ ಮೂಲಕ ಸೋನು ಸೂದ್‌ ಮತ್ತೊಮ್ಮೆ ಹೀರೋ ಆಗಿ ಹೊರಹೊಮ್ಮಿದ್ದಾರೆ. 

ವೈಷ್ಣವಿ ಗಂಡ ಒಂದೇ ದಿನಕ್ಕೆ ಓಡಿ ಹೋಗುತ್ತಾನೆ; ಶುಭಾ ಟಾಂಗ್‌ಗೆ ಕ್ಲಾರಿಟಿ ಕೊಟ್ಟ ಸನ್ನಿಧಿ!...

ಸದಾ ಶಾಂತತೆಯಿಂದ ಇರುವ ವೈಷ್ಣವಿ, ತಮ್ಮ ಮದುವೆ ವಿಚಾರ ಪ್ರಸ್ತಾಪ ಆದ ತಕ್ಷಣ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಶುಭಾ ಪೂಂಜಾ ಹೇಳಿದ ರೀತಿ ಇರ್ತಾರಾ ವೈಷ್ಣವಿ ಗಂಡ? 

'ವಾರ್ ರೂಂಗೆ ತೆರಳಿ ತೇಜಸ್ವಿ ಕ್ಷಮೆ' ಸುದ್ದಿ ಇಲ್ಲದವರು ಮಾಡಿದ ಕೆಲಸ!...

ವಾರ್ ರೂಂಗೆ ತೆರಳಿ ಕ್ಷಮೆ ಕೋರಿದ ತೇಜಸ್ವಿ ಸೂರ್ಯ ಸುದ್ದಿ ವೈರಲ್/ ಇದೊಂದು ಸತ್ಯಕ್ಕೆ ದೂರವಾದ ಮಾಹಿತಿ/ ಸುದ್ದಿ ಇಲ್ಲದವರು ಸುಳ್ಳು ಸುದ್ದಿ ಕ್ರಿಯೆಟ್ ಮಾಡುತ್ತಿದ್ದಾರೆ/ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ  ಬೆಂಗಳೂರು ದಕ್ಷಿಣ ಸಂಸದ

ಆನ್‌ಲೈನ್‌ ಖರೀದಿಗೂ ಲೈನ್‌: ತಡವಾಗುತ್ತಿರೋದೇಕೆ? ಆರ್ಡರ್‌ ಮಾಡುವಾಗ ಹೀಗ್ಮಾಡಿ...

ಕೊರೋನಾ ಹಾವಳಿ ಮಧ್ಯೆ ಹೆಚ್ಚುತ್ತಿದೆ ಆನ್‌ಲೈನ್ ಖರೀದಿ| ಆನ್‌ಲೈನ್ ಖರೀದಿ ಇಷ್ಟೊಂದು ತಡೆವಾಗ್ತಿರೋದೇಕೆ?| ಆರ್ಡರ್‌ ಮಾಡುವ ವೇಳೆ ಈ ವಿಚಾರ ಗಮನದಲ್ಲಿಡಿ

ಮೇ 10ರಿಂದ ಎಲ್‌ಐಸಿ ನೌಕರರಿಗೆ ವಾರಕ್ಕೆ 5 ದಿನ ಮಾತ್ರ ಕೆಲಸ...

ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಸೋಂಕಿನ ಪ್ರಮಾಣ ಎರುಗತಿಯಲ್ಲೇ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಮೇ 10 ರಿಂದ ಎಲ್‌ಐಸಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರವೇ ಕೆಲಸ ನಡೆಯಲಿದೆ. 

ಕೊರೋನಾ ಗೆದ್ದವರ ಮೇಲೆ ಈಗ ಡೆಡ್ಲಿ ಬ್ಲ್ಯಾಕ್ ಫಂಗಸ್ ಅಟ್ಯಾಕ್!...

ಕೋವಿಡ್ ವೈರಸ್‌ ಜೊತೆ ಹೋರಾಡಿ ಗೆದ್ದು ಗುಣಮುಖರಾದವರನ್ನು ಇನ್ನೊಂದು ಮಾರಕ ಕಾಯಿಲೆ ಅಟಕಾಯಿಸಿಕೊಳ್ಳುತ್ತಿದೆ. ಅದರ ಬಗ್ಗೆ ತಿಳಿಯೋಣ ಬನ್ನಿ.

click me!