40,000 ಕೋಟಿ ರೂ.ಗಳ ಒಟ್ಟಾರೆ ಮಿತಿಯೊಳಗೆ ಮರುಖರೀದಿಯಲ್ಲಿ ಇಂಡಿವಿಜುವಲ್ ಸೆಕ್ಯುರಿಟಿಗಳಿಗೆ ಯಾವುದೇ ಅಧಿಸೂಚಿತ ಮೊತ್ತವಿಲ್ಲ. ಸೆಕ್ಯೂರಿಟಿಗಳ ಹರಾಜನ್ನು ಬಹು ಬೆಲೆ ವಿಧಾನಗಳನ್ನು ಬಳಸಿ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ನವದೆಹಲಿ (ಮೇ.4): 40 ಸಾವಿರ ಕೋಟಿ ಮೌಲ್ಯದ ಸೆಕ್ಯುರಿಟಿಗಳನ್ನು ಸರ್ಕಾರ ಮರುಖರೀದಿ ಮಾಡಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ. ಅಂದರೆ 40 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಸರ್ಕಾರ ಬೈ ಬ್ಯಾಕ್ ಮಾಡಲಿದೆ. GS 2024ನ 6.18 ಶೇಕಡಾ 9.15 ಶೇಕಡಾ GS 2024 ಮತ್ತು 6.89 ಶೇಕಡಾ GS 2025 ರ ಮರುಖರೀದಿಗಾಗಿ ನೀಡಲಾಗುವ ಸೆಕ್ಯೂರಿಟಿಗಳಾಗಿವೆ. ನವೆಂಬರ್ 4, ನವೆಂಬರ್ 14 ಮತ್ತು ಜನವರಿ 16 ರಂದು ಇದರ ಮೆಚ್ಯುರಿಟಿ ಇದೆ ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ. ಒಟ್ಟು ರೂ 40,000 ಕೋಟಿಗಳ ಮಿತಿಯೊಳಗೆ ಇಂಡಿವಿಜುವಲ್ ಸೆಕ್ಯುರಿಟಿಗಳಿಗೆ ಯಾವುದೇ ಅಧಿಸೂಚಿತ ಮೊತ್ತವಿಲ್ಲ ಎಂದು ತಿಳಿಸಲಾಗಿದೆ. ಸೆಕ್ಯೂರಿಟಿಗಳ ಹರಾಜನ್ನು ಬಹು ಬೆಲೆ ವಿಧಾನಗಳನ್ನು ಬಳಸಿ ನಡೆಸಲಾಗುವುದು ಎನ್ನಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ (ಇ-ಕುಬರ್) ವ್ಯವಸ್ಥೆಯಲ್ಲಿ ಮೇ 9, 2024 ರಂದು ಬೆಳಿಗ್ಗೆ 10:30 ರಿಂದ 11:30 ರವರೆಗೆ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಹರಾಜು ನಡೆಸಲಾಗುವುದು. ಹರಾಜಿನ ಫಲಿತಾಂಶವನ್ನು ಅದೇ ದಿನ ಪ್ರಕಟಿಸಲಾಗುವುದು ಮತ್ತು ಮೇ 10 ರಂದು ಸೆಟ್ಲ್‌ಮೆಂಟ್ ಮಾಡಲಾಗುತ್ತದೆ ಎಂದು ತಿಳಿಸಿದೆ.
ಕೇಂದ್ರವು ತನ್ನ ಬಾಂಡ್‌ಗಳ ನಿಜವಾದ ಮುಕ್ತಾಯ ದಿನಾಂಕಗಳ ಮೊದಲು ಬಾಕಿ ಇರುವ ಸಾಲದ ಒಂದು ಭಾಗವನ್ನು ಮರುಪಾವತಿಸಲು ಆಯ್ಕೆ ಮಾಡಿದೆ. ಬೈಬ್ಯಾಕ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಲಿಕ್ವಿಡಿಟಿಯನ್ನು ಬಿಡುಗಡೆ ಮಾಡುತ್ತದೆ. ಮೇ 2 ರ ವೇಳೆಗೆ, 78,481 ಕೋಟಿ ರೂಪಾಯಿಗಳಷ್ಟು ಲಿಕ್ವಿಡಿಟಿ ಕೊರತೆ ಕಾಣುತ್ತಿದೆ.
ಕ್ವಾಂಟಿಕೋ ರಿಸರ್ಚ್‌ನ ಅರ್ಥಶಾಸ್ತ್ರಜ್ಞ ವಿವೇಕ್ ಕುಮಾರ್, ಸೆಕ್ಯುರಿಟಿಗಳ ಆಯ್ಕೆಯು ಈ ಮರುಖರೀದಿಯು ಸರ್ಕಾರವು ತಮ್ಮ ಅಲ್ಪಾವಧಿಯ ನಿಧಿಗಳ ಮೇಲೆ ಸ್ಪಷ್ಟವಾದ ಗೋಚರತೆಯನ್ನು ಹೊಂದಿರುವುದರಿಂದ ಲಿಕ್ವಿಡಿಟಿ ರಿಡಿಸ್ಟ್ರುಬ್ಯುಷನ್ ಕಾರ್ಯಕ್ರಮ ಎಂದು ತೋರಿಸುತ್ತದೆ ಎಂದು ಹೇಳಿದರು. ಇದನ್ನು ನಿರ್ವಹಣಾ ಅಭ್ಯಾಸವಾಗಿಯೂ ಅರ್ಥಮಾಡಿಕೊಳ್ಳಬಹುದು ಎಂದು ಕುಮಾರ್ ಹೇಳಿದರು. ಆದಾಗ್ಯೂ, ಆರ್‌ಬಿಐ ನೇರ ಮತ್ತು ಪರೋಕ್ಷ ಸಾಮರ್ಥ್ಯಗಳೊಂದಿಗೆ ಪರ್ಯಾಯ ಆಯ್ಕೆಗಳನ್ನು ಹೊಂದಿದೆ ಎಂದೂ ಹೇಳಿದ್ದಾರೆ.
RBI ನಿರ್ಬಂಧ, ಕುಸಿದ ಕೋಟಕ್ ಮಹೀಂದ್ರ ಬ್ಯಾಂಕ್ ಷೇರು; ಆಕ್ಸಿಸ್ ಈಗ ದೇಶದ ನಾಲ್ಕನೇ ಅತೀದೊಡ್ಡ ಬ್ಯಾಂಕ್
ಹಣದ ಹರಿವಿನಲ್ಲಿ ಸುಧಾರಣೆ: ಸಿಎಸ್‌ಬಿ ಬ್ಯಾಂಕ್‌ನ ಗ್ರೂಪ್ ಟ್ರೆಷರಿ ಮುಖ್ಯಸ್ಥ ಅಲೋಕ್ ಸಿಂಗ್ ಮಾತನಾಡಿದ್ದು, ಹೊಸ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನಗದು ಕೊರತೆ ಇದ್ದು, ಸರ್ಕಾರದ ವೆಚ್ಚದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇಲ್ಲ. ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಬರುತ್ತದೆ. ಕೇಂದ್ರ ಬ್ಯಾಂಕ್ ಮೇ ತಿಂಗಳಲ್ಲಿ ಸರ್ಕಾರಕ್ಕೆ ವಾರ್ಷಿಕ ಲಾಭಾಂಶವನ್ನು ಪಾವತಿಸಬೇಕಾಗುತ್ತದೆ, ಇದು ಸರ್ಕಾರದ ನಗದು ಸ್ಥಿತಿಯನ್ನು ಇನ್ನಷ್ಟು ಸುಧಾರಿಸುತ್ತದೆ.
ಕೋಟಕ್ ಮಹೀಂದ್ರ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ; ಆನ್ ಲೈನ್ ಅಥವಾ ಮೊಬೈಲ್ ಮುಖಾಂತರ ಹೊಸ ಗ್ರಾಹಕರ ಸೇರ್ಪಡೆಗೆ ತಡೆ