ಏನಿದು ಬ್ಲ್ಯೂ ಕಾರ್ನರ್‌ ನೋಟಿಸ್‌, ಇಂಟರ್‌ಪೋಲ್‌ನ ಕಲರ್‌ ಕೋಡ್‌ ನೋಟಿಸ್‌ನ ಅರ್ಥವೇನು?

Published : May 04, 2024, 06:41 PM IST
ಏನಿದು ಬ್ಲ್ಯೂ ಕಾರ್ನರ್‌ ನೋಟಿಸ್‌, ಇಂಟರ್‌ಪೋಲ್‌ನ ಕಲರ್‌ ಕೋಡ್‌ ನೋಟಿಸ್‌ನ ಅರ್ಥವೇನು?

ಸಾರಾಂಶ

ಲೈಂಗಿಕ ದೌರ್ಜನ್ಯದ ಆರೋಪ ಬೆಳಕಿಗೆ ಬಂದ ನಂತರ ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ಪಲಾಯನ ಮಾಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಹಾಗಾದರೆ, ಬ್ಲ್ಯೂ ಕಾರ್ನರ್‌ ನೋಟಿಸ್‌ ಅಂದ್ರೆ ಏನು?

ಬೆಂಗಳೂರು (ಮೇ.4):  ಪರಾರಿಯಾಗಿರುವ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಪ್ರಜ್ವಲ್ ಅವರು ಏಪ್ರಿಲ್ 28 ರಂದು ಪಕ್ಷದ ಕಾರ್ಯಕರ್ತರು ಮತ್ತು ಇತರ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತೋರಿರುವ ಸುಮಾರು 3,000 ವೀಡಿಯೊಗಳು ವೈರಲ್ ಆದ ನಂತರ ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ಪರಾರಿಯಾಗಿದ್ದಾರೆ. ಇದರ ನಡುವೆ ಸಿಬಿಐ ಜಾರಿ ಮಾಡಲಿರುವ ಬ್ಲೂ ಕಾರ್ನರ್ ನೋಟಿಸ್ ಅವರನ್ನು ಮರಳಿ ಕರೆತರುತ್ತದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.  ಅಂತರಾಷ್ಟ್ರೀಯ ಕ್ರಿಮಿನಲ್ ಪೋಲೀಸ್ ಸಂಸ್ಥೆ (ದಿ ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಪೊಲೀಸ್‌ ಆರ್ಗನೈಜೇಷನ್‌) ಅರ್ಥಾತ್‌ ಇಂಟರ್‌ಪೋಲ್‌ನ ಕಲರ್ ಕೋಡೆಡ್‌ ನೋಟಿಸ್‌ಗಳಲ್ಲಿ ಬ್ಲ್ಯೂ ಕೂಡ ಒಂದು. ಅಪರಾಧ ನಿಯಂತ್ರಣ ಹಾಗೂ ಪೊಲೀಸ್‌ ಸಹಕಾರದ ಅಂತಾರಾಷ್ಟ್ರೀಯ ಸಂಸ್ಥೆ ಇದಾಗಿದ್ದು, ಫ್ರಾನ್‌ನ ಲಿಯೋನ್‌ನಲ್ಲಿ ಇದರ ಕೇಂದ್ರ ಕಚೇರಿ ಇದೆ. ಕೇಂದ್ರ ಕಚೇರಿಯೊಂದಿಗೆ ಏಳು ಪ್ರಾದೇಶಿಕ ಕಚೇರಿ ಹೊಂದಿದ್ದು, ಬ್ಯಾಂಕಾಕ್‌ ಕಚೇರಿ ಭಾರತಕ್ಕೆ ಸನಿಹವಾಗಿದೆ.

ನಿಮಗೆ ಗೊತ್ತಿರಲಿ ಇಂಟರ್‌ಪೋಲ್‌ ಒಟ್ಟು ಏಳು ನೋಟಿಸ್‌ಗಳನ್ನು ಜಾರಿ ಮಾಡುತ್ತದೆ. ಆಯಾ ದೇಶಗಳ ಕೇಂದ್ರೀಯ ತನಿಖಾ ಏಜೆನ್ಸಿಯ ಮನವಿಯ ಮೇರೆಗೆ ಇದನ್ನು ನೀಡುತ್ತದೆ. ಇದರಲ್ಲಿ ಪ್ರಮುಖವಾಗಿ ರೆಡ್‌, ಯೆಲ್ಲೋ, ಬ್ಲ್ಯೂ, ಬ್ಲ್ಯಾಕ್‌, ಗ್ರೀನ್‌, ಆರೆಂಜ್‌ ಮತ್ತು ಪರ್ಪಲ್‌ ಕಾರ್ನರ್‌ ನೋಟಿಸ್‌ಗಳಿವೆ. ಪ್ರತಿ ನೋಟಿಸ್‌ಗೂ ಅದರದ್ದೇ ಆದ ಸೂಚನೆಗಳು ಇರುತ್ತದೆ.

ರೆಡ್‌ ಕಾರ್ನರ್‌ ನೋಟಿಸ್‌ (Red Corner notice): ವಿಚಾರಣೆ ಅಥವಾ ಶಿಕ್ಷೆಯನ್ನು ಪೂರೈಸಲು ಈ ವ್ಯಕ್ತಿ ದೇಶಕ್ಕೆ ಬೇಕಾಗಿದ್ದಾರೆ. ಹಾಗಾಗಿ ಈತನ ಸ್ಥಳ ಹಾಗೂ ಬಂಧನವನ್ನು ಕೋರಿ ಮಾಡುವಂಥ ನೋಟಿಸ್‌.

ಬ್ಲ್ಯೂ ಕಾರ್ನರ್‌ ನೋಟಿಸ್‌ (Blue Corner notice): ಅಪರಾಧ ತನಿಖೆಗೆ ಸಂಬಂಧಿಸಿದಂತೆ ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಕೋರುವ ನೋಟಿಸ್‌.

ಬ್ಲ್ಯಾಕ್‌ ಕಾರ್ನರ್‌ ನೋಟಿಸ್‌ (Black Corner notice): ಅಪರಿಚಿತ ದೇಹಗಳ ಬಗ್ಗೆ ಮಾಹಿತಿ ಪಡೆಯಲು ನೀಡುವಂಥ ನೋಟಿಸ್‌

ಗ್ರೀನ್‌ ಕಾರ್ನರ್‌ ನೋಟಿಸ್‌ (Green Corner notice):  ವ್ಯಕ್ತಿಯ ಅಪರಾಧ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಲು, ಅಲ್ಲಿ ವ್ಯಕ್ತಿಯನ್ನು ಸಾರ್ವಜನಿಕ ಸುರಕ್ಷತೆಗೆ ಸಂಭವನೀಯ ಬೆದರಿಕೆ ಎಂದು ಪರಿಗಣಿಸಿ ಈ ನೋಟಿಸ್‌ ನೀಡಲಾಗುತ್ತದೆ.

ಆರೆಂಜ್‌ ಕಾರ್ನರ್‌ ನೋಟಿಸ್‌ (Orange Corner notice):  ಸಾರ್ವಜನಿಕ ಸುರಕ್ಷತೆಗೆ ಗಂಭೀರ ಮತ್ತು ಸನ್ನಿಹಿತ ಬೆದರಿಕೆಯನ್ನು ಪ್ರತಿನಿಧಿಸುವ ಈವೆಂಟ್, ವ್ಯಕ್ತಿ, ವಸ್ತು ಅಥವಾ ಪ್ರಕ್ರಿಯೆಯ ಬಗ್ಗೆ ಎಚ್ಚರಿಸಲು ನೀಡುವಂಥ ನೋಟಿಸ್‌.

ಪರ್ಪಲ್‌ ಕಾರ್ನರ್‌ ನೋಟಿಸ್ (Purple Corner Notice): ಅಪರಾಧಿಗಳು ಬಳಸುವ ವಿಧಾನ, ವಸ್ತುಗಳು, ಸಾಧನಗಳು ಮತ್ತು ಮರೆಮಾಚುವ ವಿಧಾನಗಳ ಕುರಿತು ಮಾಹಿತಿಯನ್ನು ಹುಡುಕುವುದು ಅಥವಾ ಒದಗಿಸುವ ಕುರಿತಾಗಿ ಜಾರಿ ಮಾಡುವ ನೋಟಿಸ್‌.

ಯೆಲ್ಲೋ ಕಾರ್ನರ್‌ ನೋಟಿಸ್ (Yellow Corner Notice): ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಸಹಾಯ ಮಾಡಲು, ಸಾಮಾನ್ಯವಾಗಿ ಅಪ್ರಾಪ್ತ ವಯಸ್ಕರು, ಅಥವಾ ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಗಳನ್ನು ಗುರುತಿಸಲು ಸಹಾಯ ಮಾಡಲು ಈ ನೋಟಿಸ್‌ ಜಾರಿ ಮಾಡಲಾಗುತ್ತದೆ.

ಪ್ರಜ್ವಲ್‌ ರೇವಣ್ಣಗೆ ಬ್ಲ್ಯೂ ಕಾರ್ನರ್‌ ನೋಟಿಸ್‌ ಇಶ್ಯು ಮಾಡಲಿರುವ ಸಿಬಿಐ?

ಸದಸ್ಯ ರಾಷ್ಟ್ರದ ಇಂಟರ್‌ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋದ ಕೋರಿಕೆಯ ಮೇರೆಗೆ ಇಂಟರ್‌ಪೋಲ್‌ನ ಜನರಲ್ ಸೆಕ್ರೆಟರಿಯೇಟ್‌ನಿಂದ ಈ ನೋಟಿಸ್‌ ನೀಡಲಾಗುತ್ತದೆ ಮತ್ತು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಇಂಟರ್‌ಪೋಲ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಇಂಟರ್‌ನ್ಯಾಶನಲ್ ಕ್ರಿಮಿನಲ್ ಪೋಲೀಸ್ ಸಂಸ್ಥೆಯು ವಿಶ್ವಾದ್ಯಂತ ಪೊಲೀಸ್ ಸಹಕಾರ ಮತ್ತು ಅಪರಾಧ ನಿಯಂತ್ರಣವನ್ನು ಸುಗಮಗೊಳಿಸುತ್ತದೆ. ಇದು ವಿಶ್ವದ ಅತಿದೊಡ್ಡ ಅಂತರಾಷ್ಟ್ರೀಯ ಪೊಲೀಸ್ ಸಂಸ್ಥೆಯಾಗಿದೆ.

ನಿತ್ಯಾನಂದ ವಿರುದ್ಧ ಶೀಘ್ರ ಬ್ಲೂಕಾರ್ನರ್‌ ನೋಟಿಸ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ