ಬೆಲೆ ಏರಿಕೆಯಿಂದ ಕಂಗಾಲಾದ ಜನತೆ, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಪ್ರಿಯಾಂಕಾ ಗಾಂಧಿ

By Girish GoudarFirst Published May 4, 2024, 7:12 PM IST
Highlights

ಕಳೆದ 10 ವರ್ಷಗಳಲ್ಲಿ ಜನರ ಬದುಕು ಬದಲಾಗಿಲ್ಲ. ಈ ದೇಶದ ರೈತರು ಕೂಲಿ ಕಾರ್ಮಿಕರು ಬಡತನದಿಂದ ಹೊರಬಂದಿಲ್ಲ. ಶ್ರೀಮಂತರ ಹಣ ದುಪ್ಪಟ್ಟಾಗಿದೆ. ವಿಶ್ವದಲ್ಲಿಯೇ ಬಿಜೆಪಿ ಅತ್ಯಂತ ಸಾಹುಕಾರ ಪಾರ್ಟಿಯಾಗಿದೆ. 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಬಿಜೆಪಿಯವರು. ಬೆಲೆ ಏರಿಕೆಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ರೈತರ ಸಾಲ ಮನ್ನಾ ಆಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ 
 

ದಾವಣಗೆರೆ(ಮೇ.04): ಈ‌ ದೇಶಕ್ಕೆ ಮಾದರಿಯಾದ ರಾಜ್ಯ ಕರ್ನಾಟಕ. ನಮ್ಮ ಕುಟುಂಬದ ಜೊತೆ ಕರ್ನಾಟಕ ನಿಂತಿದೆ. ಇಂದಿರಾ ಗಾಂಧಿ ಯಾವ್ಯಾಗ ತೊಂದರೆಯಲ್ಲಿದ್ದರು ಅವಾಗ ನೀವು ಅವರ ಜೊತೆ ಇದ್ದಿರಿ. ವಿಧಾನಸಭೆ ಚುನಾವಣೆ ಬಂದಾಗ ನಾನು ಮಾತನಾಡಿಸಿದ್ದೇನೆ. ಇವತ್ತು ಸರಿಯಾದ ನಿರ್ಧಾರವನ್ನು ಕರ್ನಾಟಕದಲ್ಲಿ ತೆಗೆದುಕೊಂಡು ಬದಲಾವಣೆ ನೋಡುತ್ತಿದ್ದೀರಿ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ನಡೆದ  ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಅವರು, ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮೀಯಿಂದ‌ ಅನುಕೂಲ ಆಗುತ್ತಿದೆ. ಇವತ್ತು ನೀವು ಹಾಕೋ ಮತದಲ್ಲಿ ದೇಶದ ದಿಕ್ಕು ನಿರ್ಧರಿಸುತ್ತದೆ. ದೇಶದಲ್ಲಿ ಸರ್ಕಾರ ಸಾಮಾನ್ಯ ಪ್ರಜೆಗಳಿಗೆ ಕೆಲಸ ಮಾಡುತ್ತಿಲ್ಲ. ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ 45 ವರ್ಷಗಳಲ್ಲಿ ಕಾಣದಿದ್ದ ನಿರುದ್ಯೋಗ ಕಾಣುತ್ತಿದ್ದೇವೆ. 70 ಕೋಟಿ ಯುವಕರ ನಿರುದ್ಯೋಗದಲ್ಲಿದ್ದಾರೆ. ಕೇಂದ್ರ ಸರ್ಕಾರದಲ್ಲಿ 3.50 ಲಕ್ಷ ಉದ್ಯೋಗ ಖಾಲಿ‌ ಇದೆ. ಕಡುಬಡವರು ಉತ್ತಮ ಶಿಕ್ಷಣಕ್ಕೆ ಹಂಬಲಿಸುತ್ತಿದೆ. ರೈತರು ಕಾಸು ಕೂಡಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೆಣಗುತ್ತಿದ್ದಾರೆ ಎಂದು ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

Breaking : HD Revanna Arrest ದೇವೇಗೌಡರ ನಿವಾಸದಲ್ಲೇ ರೇವಣ್ಣ ಬಂಧಿಸಿದ SIT

ಪ್ರತಿಯೊಂದು ವಸ್ತುವಿನ ಮೇಲೆ ಜಿಎಸ್‌ಟಿ ಹೊರೆ 

ಇವತ್ತು ದೇಶದ ಪರಿಸ್ಥಿತಿಗೆ ಯಾವುದೇ ಗ್ಯಾರಂಟಿ ಇಲ್ಲ . ಓದಿಸಿದ್ರು ಉದ್ಯೋಗ ಸಿಗುತ್ತೇ ಅನ್ನೋ ಗ್ಯಾರಂಟಿ ಇಲ್ಲ . ಎಲ್ಲೆಲ್ಲಿ ಉದ್ಯೋಗಗಳ ಸಿಗೋ ಅವಕಾಶ ಇತ್ತೋ ಅಲ್ಲೆಲ್ಲಿ ಮುಚ್ಚಿಹೋಗಿವೆ. ಪ್ರತಿಯೊಂದು ವಸ್ತುವಿನ ಮೇಲೆ ಜಿಎಸ್‌ಟಿ ಹೊರೆ ಇದೆ. ಮೊದಲು ರೈತರಾಗಿದ್ದವನು ಜೀವನ‌ ನೆಮ್ಮದಿಯಿಂದ‌ ಇದ್ದ. ಇಂದು ರೈತರು ಆದಾಯವಿಲ್ಲದೆ  ಸಂಕಟದಲ್ಲಿದ್ದಾರೆ. ಬಡವರ ಸೊಂಟವನ್ನು, ಮದ್ಯಮ ವರ್ಗವನ್ನು ಹಾಳು ಮಾಡಿದ್ದಾರೆ. ಸರ್ಕಾರದ ದೊಡ್ಡ ದೊಡ್ಡ ಕಾರ್ಖಾನೆ ಉದ್ಯಮಗಳನ್ನು ಮುರಿದು ಖಾಸಗಿಯವರಿಗೆ ಕೊಟ್ಡಿದ್ದೀರಿ. ಬೆಲೆ ಏರಿಕೆ ಜೊತೆಗೆ ಸಣ್ಣ ಪುಟ್ಟ ತೊಂದರೆ ಗಳನ್ನು ಗ್ಯಾರಂಟಿ ಯೋಜನೆಯಿಂದ ಪರಿಹಾರ ಆಗುತ್ತಿವೆ. ನರೇಂದ್ರ ಮೋದಿ ಸರ್ಕಾರ ಯಾವ ಧಿಕ್ಕಿನಲ್ಲಿ ಸಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. 

ನರೇಂದ್ರ ‌ಮೋದಿಯವರು ದೊಡ್ಡ ದೊಡ್ಡ ಕಾರ್ಯಕ್ರಮ ಮಾಡುತ್ತಾರೆ. ಒಬ್ಬ ಹಿಂದುಳಿದವರು ಬಡವರ ಜೊತೆ ಮೋದಿಯವರನ್ನು ನೋಡಿಲ್ಲ. ನರೇಂದ್ರ ‌ಮೋದಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ಸಾರ್ವಜನಿಕರನ್ನು ವಿಕಾಸ ಮಾಡದೇ ಕೆಲವು ಸ್ನೇಹಿತರನ್ನು ಉದ್ದಾರ ಮಾಡಿದ್ದಾರೆ. ಈ ದೇಶದ ಬ್ರಿಡ್ಜ್ ಗಳು ಉದ್ದಿಮೆಗಳು ಮೋದಿಯವ ಸ್ನೇಹಿತರ ಕೈಗೆ ಕೊಟ್ಟಿದ್ದಾರೆ. ನರೇಂದ್ರ ಮೋದಿಯವರು ದೊಡ್ಡ ದೊಡ್ಡ ಉದ್ದಿಮೆಗಳನ್ನು ಖಾಸಗಿಯವರಿಗೆ ನೀಡಿದಂತೆ ಮೀಸಲಾತಿ ರದ್ದು ಆಗುತ್ತದೆ. ಇವತ್ತು ಆಸ್ತಿ ಸಂಪತ್ತು ಸಾರ್ವಜನಿಕರಿಗೆ ಸೇರಿದ್ದು . ನರೇಂದ್ರ ಮೋದಿಯವರು ಸಂಪತ್ತನ್ನು ವಾಪಸ್ಸು ಕೊಡುವ ಕೆಲಸ ಮಾಡುತ್ತಿಲ್ಲ. ಆ ಸಂಪತ್ತನ್ನು ಕಾಂಗ್ರೆಸ್ ಸರ್ಕಾರ ಜನರಿಗೆ ವಾಪಸ್ಸು ಕೊಡುತ್ತಿದೆ ಎಂದು ಹೇಳಿದ್ದಾರೆ. 

ಕಳೆದ 10 ವರ್ಷಗಳಲ್ಲಿ ಜನರ ಬದುಕು ಬದಲಾಗಿಲ್ಲ

ಕಳೆದ 10 ವರ್ಷಗಳಲ್ಲಿ ಜನರ ಬದುಕು ಬದಲಾಗಿಲ್ಲ. ಈ ದೇಶದ ರೈತರು ಕೂಲಿ ಕಾರ್ಮಿಕರು ಬಡತನದಿಂದ ಹೊರಬಂದಿಲ್ಲ. ಶ್ರೀಮಂತರ ಹಣ ದುಪ್ಪಟ್ಟಾಗಿದೆ. ವಿಶ್ವದಲ್ಲಿಯೇ ಬಿಜೆಪಿ ಅತ್ಯಂತ ಸಾಹುಕಾರ ಪಾರ್ಟಿಯಾಗಿದೆ. 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಬಿಜೆಪಿಯವರು. ಬೆಲೆ ಏರಿಕೆಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ರೈತರ ಸಾಲ ಮನ್ನಾ ಆಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ . ಈ ಕಾಸು ಸಂಪತ್ತು ಬಂಡವಾಳ ಶ್ರೀಮಂತರಿಗೆ ಕೊಡುತ್ತಿದ್ದಾರೆ. ನರೇಂದ್ರ ಮೋದಿಯವರು ಎಲೆಕ್ಟ್ರೋಲ್ ಬಾಂಡ್ ನ‌ ಮುಖಾಂತರ ಗುಜರಾತ್ ನ ಕಾಂಟ್ರಾಕ್ಟರ್ ಕಡೆಯಿಂದ ದೇಣಿಗೆ ಪಡೆದುಕೊಂಡದ್ರು. ಕೋವಿಡ್ ವ್ಯಾಕ್ಸಿನ್ ಹಾಕಿದವರ ಕೈಯಿಂದ ಚಂದಾ ಪಡೆದುಕೊಂಡಿದ್ದಾರೆ. ಲಸಿಕೆ ಸರ್ಟಿಫಿಕೇಟ್ ಮೇಲೆ ಮೋದಿಯವರ ಚಿತ್ರ ಇತ್ತು. ಆ ವ್ಯಾಕ್ಸಿನ್ ಮೇಲೆ ಮೋದಿ ಚಿತ್ರ ಇತ್ತು. ಅಂತಹ ವ್ಯಾಕ್ಸಿನ್ ಪಡೆದವರು ಕುಸಿದು ಬಿದ್ದು ಸಾಯುತ್ತಿದ್ದಾರೆ . ಅಂತಹ ವ್ಯಾಕ್ಸಿನ್ ಕಂಪನಿ 51 ಕೋಟಿ ರೂಪಾಯಿ ಚೆಂದಾ ಕೊಟ್ಟಿದೆ. ಈ ಸರ್ಕಾರ ಪಡೆದುಕೊಂಡಿರುವ ದೇಣಿಗೆಯನ್ನು ನೋಡಿದ್ರೆ ಇದರಲ್ಲಿ ಭ್ರಷ್ಟಾಚಾರ ಎದ್ದು ಕಾಣುತ್ತಿದೆ ಎಂದು ದೂರಿದ್ದಾರೆ. 

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌, ನಾಗರಿಕ ಸಮಾಜ ತಲೆತೆಗ್ಗಿಸುವಂತಾಗಿದೆ: ಪುಷ್ಪಾ ಅಮರನಾಥ

ಮೋದಿಯವರ ಕೋಟ್ಯಾಧಿಪತಿಗಳ ಮೂಲಕ ಮಾಧ್ಯಮದವರನ್ನು ಖರೀದಿಸಿದ್ದಾರೆ. ಈ ದೇಶದ ಇತಿಹಾಸದಲ್ಲಿ ಎರಡು ಮುಖ್ಯಮಂತ್ರಿಗಳನ್ನು  ಜೈಲಿಗೆ ಹಾಕಿದ ಉದಾಹರಣೆ ಇಲ್ಲ. ದೇಶದ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ನಿರುದ್ಯೋಗ ಬೆಲೆ ಏರಿಕೆ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲ. ಈ ದೇಶದಲ್ಲಿ ಒಳ್ಳೊಳ್ಳೆ ಪ್ರಧಾನಿಮಂತ್ರಿಗಳನ್ನು ಆಯ್ಕೆ ಮಾಡಿದ ಇತಿಹಾಸ ಇದೆ. ನೂರಾರು ಹೆಣ್ಣು ಮಕ್ಕಳನ್ನು ಬಲತ್ಕಾರ ಮಾಡಿದ ಅಭ್ಯರ್ಥಿ ಪರವಾಗಿ ಮೋದಿ ಬೆಂಬಲಿಸುತ್ತಾರೆ. ಎಲ್ಲಾ ವಿಷಯಗಳು ಗೊತ್ತಿದ್ದರು ದೇಶ ಬಿಟ್ಟು ಹೋಗುವುದಕ್ಕು ಅವಕಾಶ ಕೊಟ್ಟಿದ್ದಾರೆ. ಎಲ್ಲಾ ರಾಜಕಾರಣಿಗಳ ಬಗ್ಗೆ ಮಾಹಿತಿ ಇದ್ದರೂ ಈ ರಾಜಕಾರಣಿ ಬಗ್ಗೆ ಮಾಹಿತಿ ಇಲ್ವಾ? ಎಂದು ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. 

ಚುನಾವಣೆ ಸಂದರ್ಭ ಬಂದಿರುವುದರಿಂದ ಹುಚ್ಚುಚ್ಚು ಮಾತನಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾದಾಗ ಅವರ ಪರವಾಗಿರೋಲ್ಲ. ಚುನಾವಣೆ ಸಂದರ್ಭದಲ್ಲಿ ಪಾಕ್ ಬಗ್ಗೆ ಮಾತನಾಡುತ್ತಾರೆ. ಎರಡು ಮೂರು ದಿನದ ಹಿಂದೆ ಎಕ್ಸ ರೇ ಮಿಷನ್ ಬಗ್ಗೆ ಮಾತನಾಡಿ ಸಂಪತ್ತು ಕಿತ್ತುಕೊಂಡು ಹೋಗ್ತಾರೆ. ರಾಸುಗಳನ್ನು ಸಾಕಿದ್ರೆ ಒಂದನ್ನು ಕಾಂಗ್ರೆಸ್ ಕಿತ್ತುಕೊಂಡು ಹೋಗುತ್ತದೆ ಎಂದು  ಕೀಳುಮಟ್ಟಕ್ಕೆ ಇಳಿದಿದ್ದಾರೆ. 10 ವರ್ಷಗಳ ನಂತರ ಸಾಧನೆಗಳನ್ನು ಹೇಳಬೇಕಿತ್ತು ಅವರ ಬಾಯಿಂದ ಆ ಮಾತುಗಳು ಬರುತ್ತಿಲ್ಲ. ದೇಶದ ರಾಜನೀತಿ ರೂಪಿಸಲು ಸುವರ್ಣಾವಕಾಶ ಬಂದಿದೆ. ಈ ದೇಶ ನಿಮ್ಮದು ಈ ಚುನಾವಣೆಯಲ್ಲಿ ಭವಿಷ್ಯ ನಿರ್ಧರಿಸಲು. ಮಾಧ್ಯಮಗಳನ್ನು ನೋಡಿ ಮತ ಹಾಕದೇ ನಿಮ್ಮ ಭವಿಷ್ಯ ನಿರ್ಧರಿಸಿ ಎಂದ ಪ್ರಿಯಾಂಕಾ ಗಾಂಧಿ ಮನವಿ ಮಾಡಿಕೊಂಡಿದ್ದಾರೆ. 

click me!