ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌, ನಾಗರಿಕ ಸಮಾಜ ತಲೆತೆಗ್ಗಿಸುವಂತಾಗಿದೆ: ಪುಷ್ಪಾ ಅಮರನಾಥ

By Girish Goudar  |  First Published May 4, 2024, 6:41 PM IST

ದೌರ್ಜನ್ಯಕ್ಕೊಳಗಾದವರ ಜತೆ ಸಂಪರ್ಕದಲ್ಲಿದ್ದೇವೆ. ತಾವು ಬಂದು ಹೇಳಿಕೆ ನೀಡಿ. ಸಾಕ್ಷ್ಯಾಧಾರವಿಲ್ಲದೆ ಏನು ಮಾಡೋಕೆ ಆಗೋದಿಲ್ಲ. ಗೌಪ್ಯವಾಗಿ ಬಂದು ಹೇಳಿಕೆ ನೀಡಿ ಎಂದ ಪುಷ್ಪಾ ಅಮರನಾಥ 
 


ಕೊಪ್ಪಳ(ಮೇ.04):  ಹಾಸನ ಪೆನ್ ಡ್ರೈವ್ ಕೇಸ್‌ ನಾಗರಿಕ ಸಮಾಜ ತಲೆತೆಗ್ಗಿಸುವಂತಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಒಂದಾಗಿ ಈ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕು ಎಂದು ಕರ್ನಾಟಕ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಆಹ್ರಹಿಸಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪುಷ್ಪಾ ಅಮರನಾಥ ಅವರು, ಎಸ್ಐಟಿ ರಚನೆಯಾಗಿ ತನಿಖೆ ನಡೆಯುತ್ತಿದೆ, ಪ್ರಜ್ವಲ್‌ ರೇವಣ್ ಅವರಿಗೆ ನೀಡಿದ ಡಿಪ್ಲೋಮ್ಯಾಟಿಕ್‌ ಪಾಸ್ ಪೋರ್ಟ್ ಮುಟ್ಟುಗೊಲು ಹಾಕಲು ಕೇಂದ್ರ ಸರಕಾರ ಮನಸ್ಸು ಮಾಡುತ್ತಿಲ್ಲ. ಒಬ್ಬ ಕಾಮ ಪಿಸಾಚಿಯನ್ನ ಗೆಲ್ಲಿಸಿ ಎಂದು ಪ್ರಧಾನಿ ಜನರು ಮನವಿ ಮಾಡುತ್ತಾರೆ. ಪ್ರಭಾವಿಗಳಿಗೆ ಗೌರವವು ಸಾಮಾನ್ಯರಿಗೆ ಸಿಗುತ್ತಿಲ್ಲ. ಬ್ರೀಜ್ ಭೂಷಣ ಕೇಸ್, ಮಣಿಪುರ ಮಹಿಳೆಯರ ಬೆತ್ತಲೆ ಮಾಡಿದರೂ ಪ್ರಧಾನಿ ಮೌನಿಯಾಗಿದ್ದಾರೆ. ಪ್ರಧಾನಿ ಸುಮ್ಮನೆ ಇರುವುದೇ ಅನುಮಾನ ಮೂಡಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ. 

Latest Videos

undefined

ಹಾಸನ ರಾಸಲೀಲೆ ಪ್ರಕರಣ: ಕಿಡ್ನಾಪ್ ಕೇಸಲ್ಲಿ ಹೆಚ್.ಡಿ. ರೇವಣ್ಣಗೆ ಜಾಮೀನು ನಿರಾಕರಿಸಿದ ಕೋರ್ಟ್; ಬಂಧನ ಭೀತಿ

ಉಮೇಶ ರಡ್ಡಿಯಂತ ವಿಕೃತಕಾಮಿ ಇದ್ದ ಅವರಿಗಿಂತ ನೂರು ಪಟ್ಟು ವಿಕೃತವಾಗಿದ್ದು ಪ್ರಜ್ವಲ್‌ ರೇವಣ್ಣ. ಈ ಕೇಸ್ಇ ಬಗ್ಗೆ ತ್ವರಿತವಾಗಿ ತನಿಖೆಯಾಗಬೇಕು. ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.  

ಬಿಜೆಪಿ ಹಠಾವೋ ಬೇಟಿ ಬಚಾವೊ ಎಂಬ ಅಭಿಯಾನ ಆರಂಭವಾಗುತ್ತದೆ. ನೇಹಾ ಪ್ರಕರಣದಲ್ಲಿ ಒಂದು ಗಂಟೆಯಲ್ಲಿ ಆರೋಪಿ ಬಂಧನವಾಗಿದೆ. ಮೇ.7 ರೊಳಗಾಗಿ ಕರ್ನಾಟಕದ ಮಹಿಳೆಯರಿಗೆ ನ್ಯಾಯ ಕೊಡಿಸುವ ಸೌಜನ್ಯ ತೋರಿಸುತ್ತಾರೆ. ಪುಲ್ವಾಮಾ ದಾಳಿಯಲ್ಲಿ ತಾಳಿ ಕಳೆದುಕೊಂಡ ಮಹಿಳೆಯರ ಬಗ್ಗೆ, ಲಾಕ್‌ಡೌನ್‌ನಲ್ಲಿ ಜೀವ ಕಳೆದುಕೊಂಡು ಮಹಿಳೆಯರ ತಾಳಿಯ ಬಗ್ಗೆ ಮೋದಿ ಮಾತನಾಡುತ್ತಿಲ್ಲ. ಹಾಸನದ ಮಹಿಳೆಯರ ತಾಳಿ ಕಳೆದುಕೊಳ್ಳುವ ಆಂತಕವಾಗಿದೆ ಎಂದು ಹೇಳಿದ್ದಾರೆ. 

ಬೆಲೆಯೇರಿಕೆ ಹಾಗೂ ನಿರುದ್ಯೋಗ ದೇಶದಲ್ಲಿ ಜನರ ನಿದ್ದೆಗೆಡಿಸಿದೆ. ದೌರ್ಜನ್ಯಕ್ಕೊಳಗಾದವರ ಜತೆ ಸಂಪರ್ಕದಲ್ಲಿದ್ದೇವೆ. ತಾವು ಬಂದು ಹೇಳಿಕೆ ನೀಡಿ. ಸಾಕ್ಷ್ಯಾಧಾರವಿಲ್ಲದೆ ಏನು ಮಾಡೋಕೆ ಆಗೋದಿಲ್ಲ. ಗೌಪ್ಯವಾಗಿ ಬಂದು ಹೇಳಿಕೆ ನೀಡಿ ಎಂದು ಪುಷ್ಪಾ ಅಮರನಾಥ ಹೇಳಿದ್ದಾರೆ. 

click me!